Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೊಲ್ಲೂರು ಮೂಕಾಂಬಿಕಾ ದೇವಿಗೆ 106 ಕೆಜಿಯ ಬೆಳ್ಳಿ ರಥ ಸಮರ್ಪಣೆ
    ಊರ್ಮನೆ ಸಮಾಚಾರ

    ಕೊಲ್ಲೂರು ಮೂಕಾಂಬಿಕಾ ದೇವಿಗೆ 106 ಕೆಜಿಯ ಬೆಳ್ಳಿ ರಥ ಸಮರ್ಪಣೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೊಲ್ಲೂರು:
     ಬೆಂಗಳೂರಿನ ಪದ್ಮಶ್ರೀ ಆರ್‌ಎಂ‌ಬಿ ಆರಾಧ್ಯ ಟ್ರಸ್ಟ್ ಸೇವಾ ರೂಪದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ನೀಡಲಾದ ನೂತನ ಬೆಳ್ಳಿ ರಥ ಸಮರ್ಪಣೆ ಹಾಗೂ ರಥೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.

    Click Here

    Call us

    Click Here

    ಬೆಳಿಗ್ಗೆಯಿಂದಲೇ ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ರಥ ಶುದ್ದಿ, ಬಲಿ ಸೇರಿದಂತೆ ರಥೋತ್ಸವ ಹಾಗೂ ಸಮರ್ಪಣಾ ಕಾರ್ಯಕ್ರಮಕ್ಕೆ ಪೂರಕವಾಗಿ ಅನೇಕ ಧಾರ್ಮಿಕ ಪೂಜಾ ವಿಧಿಗಳನ್ನು ನಡೆಸಲಾಗಿತ್ತು.

    11 ಗಂಟೆಯ ಸುಮಾರಿಗೆ ಬಲಿ ವಿಧಿಗಳನ್ನು ನಡೆಸಿ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಉತ್ಸವಗಳನ್ನು ವಿದ್ಯುಕ್ತವಾಗಿ ನಡೆಸಿದ ಬಳಿಕ ಮೂರ್ತಿಧಾರಕ ಶ್ರೀಶಾ ಭಟ್ ಅವರು ಶ್ರೀ ದೇವಿಯನ್ನು ನೂತನ ರಥದಲ್ಲಿ ಕುಳ್ಳಿರಿಸಿದ್ದರು. ಅಲಂಕಾರ, ಹಣ್ಣು ಕಾಯಿ ಹಾಗೂ ಮಂಗಳಾರತಿ ಸೇವೆ ನಡೆದ ಬಳಿಕ, ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದ ಬಳಿಕ ವೈಭವದಿಂದ ರಥೋತ್ಸವ ನಡೆಯಿತು.

    ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಭಕ್ತರೊಂದಿಗೆ ಸೇವಾಕರ್ತ ಕುಟುಂಬದವರು ಜೊತೆಯಾಗಿ ಜಯಘೋಷವನ್ನು ಹಾಕುತ್ತಾ. ದೇವಸ್ಥಾನದ ಒಳ ಆವರಣದಲ್ಲಿ ರಥವನ್ನು ಎಳೆದು ಸಂಭ್ರಮಿಸಿದರು.

    ಆಕರ್ಷಕ ಬೆಳ್ಳಿ ರಥ:
    ಬೆಂಗಳೂರಿನ ಪದ್ಮಶ್ರೀ ಆರ್‌ಎಂ‌ಬಿ ಆರಾಧ್ಯ ಟ್ರಸ್ಟ್‌ನವರು ಸೇವಾ ರೂಪದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೀಡಲಾದ ನೂತನ ಬೆಳ್ಳಿ ರಥಕ್ಕೆ 106 ಕೆಜಿ ಬೆಳ್ಳಿ ಬಳಸಲಾಗಿದೆ. ಅಂದಾಜು ₹3 ಕೋಟಿ ವೆಚ್ಚವಾಗಿದೆ. ತಾಲ್ಲೂಕಿನ ಗೋಪಾಡಿಯ ಪ್ರಭಾಕರ ಆಚಾರ್ ಹಾಗೂ ಸಹೋದರರು ರಥ ನಿರ್ಮಾಣದ ಕೆಲಸವನ್ನು ನಿರ್ವಹಿಸಿದ್ದರು.

    Click here

    Click here

    Click here

    Click Here

    Call us

    Call us

    ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿಮುತ್ತುರಾಜ್ ತುಂಬಿಗೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ರಾಜೇಶ್ ಕಾರಂತ, ಆಲೂರು ರಘುರಾಮ ದೇವಾಡಿಗ, ಧನಾಕ್ಷೀ ವಿಶ್ವನಾಥ ಪೂಜಾರಿ, ಮಹಾಲಿಂಗ ನಾಯ್ಕ, ಸುಧಾ ಬೈಂದೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್, ಅರ್ಚಕ ಸುರೇಶ್ ಭಟ್, ಕೊಲ್ಲೂರು ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಇದ್ದರು.

    ಬೆಳ್ಳಿ ರಥ ಸಮರ್ಪಣೆ ಮಾಡಿದ ದಾನಿಗಳನ್ನು ಹಾಗೂ ರಥ ನಿರ್ಮಾಣ ಮಾಡಿದ ಶಿಲ್ಪಿಗಳನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

    22/06/2026

    ಯಡ್ತರೆ: ಮೀನು ಹಿಡಿಯಲು ಹೋದ ವ್ಯಕ್ತಿ ಸಾವು

    22/06/2026

    ಕೋಟ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಸಾವು

    22/06/2026
    Leave A Reply Cancel Reply

    13 − 5 =

    Call us

    Click Here

    Call us

    Call us

    Call us
    Highest Viewed Recently
    • ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
    • ಯಡ್ತರೆ: ಮೀನು ಹಿಡಿಯಲು ಹೋದ ವ್ಯಕ್ತಿ ಸಾವು
    • ಕೋಟ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಸಾವು
    • ಕೊಲ್ಲೂರು ಮೂಕಾಂಬಿಕಾ ದೇವಿಗೆ 106 ಕೆಜಿಯ ಬೆಳ್ಳಿ ರಥ ಸಮರ್ಪಣೆ
    • ಬೈಂದೂರು ಸೈಂಟ್ ಥಾಮಸ್ ಶಾಲೆಯಲ್ಲಿ ʼಮಕ್ಕಳ ದೈಹಿಕ ಮತ್ತು ಭಾವನಾತ್ಮಕ ಪರಿಪಕ್ವತೆಯಲ್ಲಿ ಪೋಷಕರ ಪಾತ್ರʼ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.