Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಹೆದ್ದಾರಿ ಜಾಗೃತ ಸಮಿತಿ ನೇತೃತ್ವದಲ್ಲಿ ಶನಿವಾರ ಕುಂದಾಪುರದ ನಾಗರಿಕರು ಸಭೆ ನಡೆಸಿದ್ದು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯ ಆಗರವಾಗಿರುವ ನಗ್ಗೆ ಅಸಮಾಧಾನ ವ್ಯಕ್ತಪಡಿದ್ದಲ್ಲದೇ, ಸಂಘಟಿತ ಹೋರಾಟದ ಮೂಲಕ ಜನಪ್ರತಿನಿಧಿಗಳು, ಗುತ್ತಿಗೆದಾರರು ಹಾಗೂ ಸರಕಾರದ ಗಮನ ಸೆಳೆಯುವುದು, ಕಾಮಗಾರಿಯ ಅವ್ಯವಸ್ಥೆ ಹಾಗೂ ವಿಳಂಬ ನೀತಿಯನ್ನು ತೀವ್ರವಾಗಿ ಖಂಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. Video ಸಭೆಯಲ್ಲಿ ಹೆದ್ದಾರಿ ಜಾಗೃತ ಸಮಿತಿಯ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಗೊಂಡ ಕಳೆದ 10 ವರ್ಷಗಳಲ್ಲಿ ಓರ್ವ ಅಧಿಕಾರಿಯೂ ಈ ಭಾಗಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿಲ್ಲ. ಸುರತ್ಕಲ್‌ನಿಂದ ಕುಂದಾಪುರದ ತನಕ 76ಕಿ.ಮೀ ಉದ್ದದ ಹೆದ್ದಾರಿ ಚತುಷ್ಪಥ ಕಾಮಗಾರಿ ಶೇ.90ರಷ್ಟು ಮುಗಿದೆದೆ ಎಂದು ಹೇಳುತ್ತಾರೆ ಆದರೆ ಕಾಮಗಾರಿಯ ಸಮರ್ಪಕ ಬ್ಲೂಪ್ರಿಂಟ್ ಯಾರ ಬಳಿಯೂ ಇಲ್ಲ. ಈ ಭಾಗದ ಯಾವೊಬ್ಬ ಜನಪ್ರನಿಧಿಗಳಿಗೂ ಇದರ ಸಮರ್ಪಕ ಮಾಹಿತಿ ಇಲ್ಲ. ರಸ್ತೆ ಮಧ್ಯದಲ್ಲಿ ನೀರು ನಿಲ್ಲುವುದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಕಾಲ್ತೋಡು ಗ್ರಾಮದ ಚಪ್ಪರಿಕೆ ಪಾಯಪ್ಪ ಶೆಟ್ಟಿ(80) ಕೆಲಕಾಲದ ಅಸ್ವಾಸ್ಥ್ಯದ ಕಾರಣ ಬೆಂಗಳೂರಿನ ಮಗನ ಮನೆಯಲ್ಲಿ ಸೋಮವಾರ ನಿಧನರಾದರು. ನಾಗೂರಿನಲ್ಲಿ ದೀರ್ಘಕಾಲ ಹೋಟೆಲ್ ಉದ್ಯಮ ನಡೆಸಿ ಜನಾನುರಾಗಿ ಆಗಿದ್ದ ಅವರು 30ವರ್ಷ ಚಪ್ಪರಿಕೆಯ ಹೊಸಾಡು ಎಂಬಲ್ಲಿನ ಶ್ರೀ ನಂದಿಕೇಶ್ವರ ದೈವಸ್ಥಾನದ ನೇತೃತ್ವ ವಹಿಸಿ, ಅದರ ಜೀರ್ಣೋದ್ಧಾರ ನಡೆಸಿದ್ದರು. ಅವರು ಪತ್ನಿ, ಖ್ಯಾತ ಪತ್ರಕರ್ತ ಹಾಗೂ ಲೇಖಕ ಆಗಿರುವ ಪುತ್ರ ಸತೀಶ ಚಪ್ಪರಿಕೆ ಅವರನ್ನು ಅಗಲಿದ್ದಾರೆ. ಪಾಯಪ್ಪ ಶೆಟ್ಟಿ ಅವರ ಅಪೇಕ್ಷೆಯಂತೆ ದೇಹವನ್ನು ಶಿಕ್ಷಣ ಹಾಗೂ ಸಂಶೋಧನೆಗೆ ಬಳಸಿಕೊಳ್ಳಲು ಬೆಂಗಳೂರು ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಧ್ಯಮ ಕ್ಷೇತ್ರವನ್ನು ವೃತ್ತಿಯಾಗಿ ನೋಡಿದರೆ ಅದು ಓದುಗನ ಋಣದಲ್ಲಿಯೂ ಇಲ್ಲ. ಉದ್ಯಮವಾಗಿ ಪರಿಗಣಿಸಿದರೆ ಅದು ಬಳಕೆದಾರನ ಋಣದಲ್ಲಿಯೂ ಇಲ್ಲ. ಬಂಡವಾಳ ಹೂಡಿ ಲಾಭ ತೆಗೆಯುವ ಮಾಧ್ಯಮ ಕ್ಷೇತ್ರದಲ್ಲಿ ಒಡೆಯ ಮತ್ತು ಓದುಗನ ನಡುವೆ ಪತ್ರಕರ್ತ ದಿಕ್ಕೆಟ್ಟು ನಿಂತಿದ್ದಾನೆ ಎಂದು ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು. ಅವರು ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಕವಲು ದಾರಿಯಲ್ಲಿ ಪತ್ರಕರ್ತ ವಿಷಯದ ಕುರಿತು ಅವರು ಮಾತನಾಡಿದರು. ಜಗತ್ತಿನಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಏಕೈಕ ವಸ್ತು ಪತ್ರಿಕೆ ಮಾತ್ರ. ಆದರೆ ಓದುಗ ಕೊಡುವ ಹಣದಿಂದ ಪತ್ರಿಕೆಯೂ ನಡೆಯುತ್ತಿಲ್ಲ. ಬಂಡವಾಳವಿಲ್ಲದೇ ಏನು ನಡೆಯುವುದೂ ಇಲ್ಲ. ಇಂತಹ ವ್ಯವಹಾರ ಮಾದರಿಯನ್ನು ಬದಲಾವಣೆ ಮಾಡುವವರೆಗೆ ಈ ಮಾಧ್ಯಮ ಕವಲು ದಾರಿಯಲ್ಲಿರುತ್ತದೆ. ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಪತ್ರಿಕೆಗಳಿಗೆ ಹತ್ತರಿಂದ ಹದಿನೈದು ರೂಪಾಯಿ ಇದೆ. ಭಾರತದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣ ತಜ್ನ, ರಾಷ್ಟೀಯ ಶಿಕ್ಷಕ ಪ್ರಸ್ತಿ ಪುರಸ್ಕೃತ, ಯಕ್ಷಗಾನ ಸವ್ಯಸಾಚಿ, ಯಕ್ಷಗಾನ ಕಲಾಕೇಂದ್ರ ಸಂಸ್ಥಾಪಕ ದಿವಂಗತ ಐರೋಡಿ ಸದಾನಂದ ಹೆಬ್ಬಾರರ ಪುಣ್ಯ ಸ್ಮರಣಾರ್ತ ಕಲಾಕೇಂದ್ರವು ಅವರ ಹೆಸರಿನಲ್ಲಿ ಪ್ರತೀ ವರ್ಷವೂ ಸದಾನಂದ ಪ್ರಶಸ್ಥಿಯನ್ನು ನೀಡುತ್ತಾ ಬಂದಿದ್ದು ಶಿಕ್ಷಣ, ಸಮುದಾಯಾಭಿವೃದ್ದಿ, ಸ್ಥಳಿಯಾಡಳಿತ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ನಿವೃತ್ತ ಉಪನ್ಯಾಸಕರಾದ ಮರವಂತೆಯ ಎಸ್ ಜನಾರ್ದನ ಇವರನ್ನು 2019 ರ ಸದಾನಂದ ಶಶಸ್ಥಿಗೆ ಆಯ್ಕೆ ಮಾಡಲಾಗಿದೆ. ಬೈಂದೂರು ವಲಯದ ಪತ್ರಕರ್ತ ಸಂಘದ ಅಧ್ಯಕ್ಷರಾಗಿರುವ ಮರವಂತೆ ಜನಾರ್ದನರವರು ರಾಜ್ಯದ ಪಂಚಾಯತ್‌ರಾಜ್ ವಿಷಯದಲ್ಲಿ ಪರಿಣತಲ್ಲೊಬ್ಬರು. ದೇಶದ ಯೋಜನಾ ಆಯೋಗ ನಡೆಸಿದ ವಿವಿಧ ಅಧ್ಯಯನ, ಬೋಧನೆ, ತರಬೇತಿ ಮತ್ತು ಸಂವಹನ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತರಬೇತಿದಾರರಾಗಿ ಪಠ್ಯಕ್ರಮ ಮತ್ತು ಪಠ್ಯ ಸಿದ್ದತೆಯಲ್ಲಿ ದುಡಿದಿದ್ದಾರೆ. ಮರವಂತೆಯ ಪಂಚಾಯತ್ನ ಅಧ್ಯಕ್ಷರಾಗಿ,ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆಯ ಸ್ಥಾಪಕರಾಗಿ ಊರಿನ ಆರೋಗ್ಯ, ಶೈಕ್ಷಣಿಕ, ಸಾಮಾಜಿಕ, ಸಾಸ್ಕೃತಿಕ ಅಭಿವೃದ್ದಿಯ ಹರಿಕಾರರಾಗಿದ್ದಾರೆ. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎನ್‌ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್, ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ರಾಜ್ಯಮಟ್ಟದ ಉತ್ತಮ ಎನ್‌ಸಿಸಿ ಕೆಡೆಟ್- ಚಿನ್ನದ ಪದಕವನ್ನು ಪಡೆದಿರುತ್ತಾರೆ. ದೆಹಲಿಯಲ್ಲಿ 2020ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರದ ಹಿರಿಯ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಮೂಡುಬಿದಿರೆಯಲ್ಲಿ ನಡೆದ ಮೂರು ಹಂತದ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಈಕೆ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಈಕೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಎನ್‌ಸಿಸಿ ಅಧಿಕಾರಿ ಕ್ಯಾ.ಡಾ.ರಾಜೇಶ್ ಆಭಿನಂದಿಸಿದ್ದಾರೆ. ಕುಂದಾಪುರ ತಾಲೂಕು ಗಂಗೊಳ್ಳಿಯವರಾದ ವೈಷ್ಣವಿ ಗೋಪಾಲ್ ಅವರು ಕಲಾವಿದ ಗೋಪಾಲ ಚಂದನ್ ಹಾಗೂ ವೈದ್ಯೆ ಡಾ. ವೀಣಾ ಕಾರಂತ್ ಅವರ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ತಿಳಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ನೂತನ ಅಧಿಕೃತ ದರಪಟ್ಟಿಯನ್ನೂ ಬಿಡುಗಡೆಗೊಳಿಸಿದ್ದಾರೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿಗಧಿಪಡಿಸಿದ ದರಕ್ಕಿಂತ ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ಮರಳು ಪರವಾನಿಗೆದಾರರು/ ವಾಹನ ಮಾಲೀಕರ ವಿವರ ಸಾರ್ವಜನಿಕರು ನೀಡಿದ್ದಲ್ಲಿ, ಅಂತಹ ಪರವಾನಿಗೆದಾರರ ಹಾಗೂ ಮರಳು ಸಾಗಾಟ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಮರಳು ಪಡೆಯುವವರು ಮರಳಿನ ಸಾಗಾಟ ಪರವಾನಿಗೆಯನ್ನು (MDP) ಸಾಗಾಣಿಕೆದಾರರಿಂದ ಕಡ್ಡಾಯವಾಗಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಸದರಿ ಮರಳನ್ನು ಅನಧಿಕೃತ ಮರಳು ಎಂದು ಪರಿಗಣಿಸಿ ನಿಯಮಾನುಸಾರವಾಗಿ ಮುಂದಿನ ಕ್ರಮ ಜರುಗಿಸಲಾಗುವುದು. ಜಿಲ್ಲಾ ಮರಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮಾಂತರ ಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳ ಅಭಿರುಚಿ, ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ನಾಗೂರಿನಲ್ಲಿ ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯನ್ನು ನಡೆಸಲಾಗುತ್ತಿದೆ. ಅದರ ಆಶ್ರಯದಲ್ಲಿ ಪ್ರತಿ ತಿಂಗಳು ’ಗಾನಯಾನ’ ಎಂಬ ಶಾಸ್ತ್ರೀಯ ಸಂಗೀತ ಕಚೇರಿ ನಡೆಯುತ್ತದೆ ಎಂದು ಕುಸುಮ ಫೌಂಡೇಶನ್ ಅಧ್ಯಕ್ಷ ನಳಿನ್‌ಕುಮಾರ ಶೆಟ್ಟಿ ಹೇಳಿದರು. ನಾಗೂರಿನ ಎಕೆಎಸ್ ಆಡಿಟೋರಿಯಮ್‌ನಲ್ಲಿ ಭಾನುವಾರ ನಡೆದ ಎರಡನೆ ತಿಂಗಳ ಗಾನಯಾನ ಕಾರ್ಯಕ್ರಮದ ಆರಂಭದಲ್ಲಿ ಅವರು ಮಾತನಾಡಿದರು. ಕಚೇರಿಯನ್ನು ಪ್ರತಿ ತಿಂಗಳು ನಡೆಸುವುದರಿಂದ ಸಂಗೀತಾಸಕ್ತರು ಅವುಗಳ ಪ್ರಾಯೋಜಕತ್ವ ವಹಿಸುವ ಮೂಲಕ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ವಿನಂತಿಸಿದರು. ಆ ಬಳಿಕ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಗೀತ ಶಿಕ್ಷಕರಾಗಿರುವ ಬಿಜೂರು ಬವುಳಾಡಿಯ ವಿದ್ವಾನ್ ರಾಘವೇಂದ್ರ ಉಪಾಧ್ಯಾಯರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಇಡಗುಂಜಿಯ ಮಾರುತಿ ನಾಯ್ಕ್ ಹಾರ್ಮೋನಿಯಂ ನುಡಿಸಿದರು. ಹೊನ್ನಾವರದ ಗಣಪತಿ ಹೆಗಡೆ ಹೆರಿಕೇರಿ ತಬ್ಲಾ ಸಾಥ್ ನೀಡಿದರು. ಕಲಾವಿದರನ್ನು ಹಾಗೂ ಕಚೇರಿಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾನ್ಯ ಸಭೆಯಲ್ಲಿ ಪಾಲನಾ ವರದಿಗೆ ಉತ್ತರ ದೊರೆತಿಲ್ಲ ಹಾಗೂ ಹಲವು ಅಧಿಕಾರಿಗಳು ಗೈರಾಗಿರುವ ಕಾರಣವನ್ನು ಮುಂದಿಟ್ಟುಕೊಂಡು ಸೋಮವಾರ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿದ ಪ್ರಸಂಗ ನಡೆದಿದೆ. ಸದಸ್ಯ ಕರಣ ಪೂಜಾರಿ ಮಾತನಾಡಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಪಾಲನ ವರದಿಯಲ್ಲಿ ಉತ್ತರವೇ ನೀಡದಿದ್ದರೇ ಸಾಮಾನ್ಯ ಸಭೆ ನಡೆಸುವುದರ ಅಗತ್ಯವೇನಿದೆ. ಸಭೆಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯುವ ತನಕ ಸಭೆಯನ್ನು ಮುಂದೆ ಹಾಕಿ ಎಂದು ಆಗ್ರಹಿಸಿದರು. ಸದಸ್ಯ ಮಹೇಂದ್ರ ಪೂಜಾರಿ ಮಾತನಾಡಿ ಆರ್‌ಆರ್‌ಟಿ ವಿಲೆ ಮಾಡಿ ಮತ್ತು ವಿಲೇವಾರಿ ಮಾಡಿದ ಫೈಲುಗಳ ಬಗ್ಗೆ ಮಾಹಿತಿ ಕೇಳಿದ್ದೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳೆದ ಮೂರು ವರ್ಷಗಳಿಂದ ಜನರು ಹಣ ಕಟ್ಟಿ ಕಾಯುತ್ತಿದ್ದಾರೆ. ಆದರೆ ಇಲ್ಲಿ ಉತ್ತರಿಸಬೇಕಾದ ಕುಂದಾಪುರ ತಹಶೀಲ್ದಾರರೇ ಗೈರಾಗಿದ್ದಾರೆ. ನಾವು ಬೇರೆ ಬೇರೆ ಇಲಾಖೆಗೆ ಕೇಳಿದ ಯಾವುದೇ ಪ್ರಶ್ನೆಗೂ ಉತ್ತರವಿಲ್ಲ ಎಂದು ಆರೋಪಿಸಿದರು. ಸದಸ್ಯ ಉಮೇಶ್ ಕಲ್ಗದ್ದೆ ಮಾತನಾಡಿ ಹಿಂದಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕಮಲಶಿಲೆ: ಇಲ್ಲಿನ ಪ್ರಸಿದ್ದ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಸಿದ್ಧ ಅರೆಕಾ ಟೀ ಸಂಸ್ಥೆಯ ಸಂಸ್ಥಾಪಕ ನಿವೇದನ್ ನೆಂಪೆ ಭೇಟಿ ನೀಡಿ ಶ್ರೀ ದೇವಿಗೆ ಪೂಜೆ ಸಲ್ಲಿಸಿದರು. ತಮ್ಮ ತಾಯಿಯೊಂದಿಗೆ ದೇವಳಕ್ಕೆ ಭೇಟಿ ನೀಡಿದ ನಿವೇದನ್ ಅವರನ್ನು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಅನುವಂಶಿಯ ಮೊಕ್ತೇಸರರಾದ ಸಚ್ಚಿದಾನಂದ ಚಾತ್ರ ಅವರು ಗೌರವಿಸಿದರು. ಈ ಸಂದರ್ಭ ಗುರು ಭಟ್, ಮಂಜುನಾಥ ಪೂಜಾರಿ, ರಾಘವೇಂದ್ರ ಪೂಜಾರಿ ಮೊದಲಾದವರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾರ್ವಜನಿಕರ ಅಗತ್ಯವನ್ನು ಅರಿತುಕೊಂಡು ಅವರಿಗೆ ಸರಕಾರದ ಪರ್ಯಾಯವಾಗಿ ನೆರವಾಗುವುದೇ ರೆಡ್‌ಕ್ರಾಸ್ ಸಂಸ್ಥೆಯ ಗುರಿಯಾಗಿದ್ದು, ಇಲ್ಲಿ ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೇ ಎಲ್ಲರೂ ಸಮಾನವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ ಹೇಳಿದರು ಅವರು ಯಡ್ತರೆ ಬಂಟರ ಭವನದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಇದರ ಬೈಂದೂರು ತಾಲೂಕು ಘಟಕವನ್ನು ಉದ್ಘಾಟಿಸಿ, ಸಂಸ್ಥಾಪಕರ ಪೋಟೋಗೆ ಮಾಲಾರ್ಪಣೆಗೈದು ಬಳಿಕ ಮಾತನಾಡಿದರು. ಪ್ರಪಂಚದಾದ್ಯಂತ ರೆಡ್‌ಕ್ರಾಸ್‌ನ 700ಕ್ಕೂ ಅಧಿಕ ಶಾಖೆಗಳಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಶೆ.10ರಷ್ಟು ಜನಸಂಖ್ಯೆಯನ್ನು ಸರಕಾರದ ಕಾರ್ಯಕ್ರಮಗಳ ಮೂಲಕ ತಲುಪುವುದು, ಶೆ.2ರಷ್ಟು ಸದಸ್ಯರನ್ನು ಹೊಂದುವುದು, ಶೆ.1ರಷ್ಟು ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಪಡೆಯನ್ನು ರಚಿಸಿಕೊಳ್ಳುವ ಗುರಿಯನ್ನು ರೆಡ್‌ಕ್ರಾಸ್ ಹೊಂದಿದೆ ಎಂದರು. ವೇದಿಕೆಯಲ್ಲಿ ಬೈಂದೂರು ತಹಶೀಲ್ದಾರ್ ಬಿ. ಪಿ. ಪೂಜಾರ್, ಬೈಂದೂರು ತಾಲೂಕು ಹೋರಾಟ ಹಾಗೂ ಪುನರ್‌ರಚನಾ ಸಮಿತಿ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ, ಕುಂದಾಪುರ…

Read More