ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತವನ್ನು ಜಾರಿಗೆ ತರುವ ಘೋಷಿಸಿದ್ದು, ಅಧಿಕಾರಿಗಳು ತೊಡಗಿಸಿಕೊಳ್ಳುವಿಕೆಯಿಂದ ಇದು ಯಶಸ್ವಿಯಾಗಲಿದೆ. ಭೂಮಿಯಲ್ಲಿ ಬದುಕುವ ಯಾರೊಬ್ಬರೂ ತಮ್ಮ ಹಕ್ಕಿನಿಂದ ವಂಚಿತರಾಗಬಾರದು. ಅಧಿಕಾರಿಗಳು ಉದಾಸಿನ ಮಾಡುವ ಪ್ರವೃತ್ತಿ ಬಿಡಿ, ಸರಕಾರದ ಆದೇಶದಂತೆ ಕೆಲಸ ಮಾಡಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಅವರು ನೂತನ ಬೈಂದೂರು ತಾಲೂಕು ಲೋಕಾರ್ಪಣೆ ಮಾಡಿ ಮಾತನಾಡಿ ರಾಜ್ಯದಲ್ಲಿ ಅಕ್ರಮ ಸಕ್ರಮ, ಡೀಮ್ಡ್ ಫಾರೆಸ್ಟ್, ಕುಮ್ಕಿ ಭೂಮಿ ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನ ಮಾಡಲಾಗಿದ್ದು, ಭೂಮಿಯ ಹಕ್ಕಿನಿಂದ ವಂಚತರಿಗೆ ಭೂಮಿ ನೀಡಲು ಸರಕಾರ ಬದ್ಧವಾಗಿದೆ ಎಂದರು. ರಾಜ್ಯದಲ್ಲಿ ನೂತನ ತಾಲೂಕು ರಚನೆಗೆ ಚಾಲನೆ ನೀಡಿದ ಬಳಿಕ ಉದ್ಘಾಟಿಸಲಾಗುತ್ತಿರುವ ಮೊದಲ ತಾಲೂಕು ಬೈಂದೂರು ಆಗಿದೆ ಎಂದ ಅವರು ಶಾಸಕರ ಬೇಡಿಕೆಯಂತೆ ಮಿನಿವಿಧಾನಸೌಧ ಮಂಜೂರು ಮಾಡಿಸುವ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಬೈಂದೂರು ನಾಗಕರಿಕರ ಬಹುಕಾಲದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಭಾಗದ ನಾಗರಿಕರ ಬಹುಕಾಲದ ಬೇಡಿಕೆ ನನಸಾಗುತ್ತಿದ್ದು ಫೆ.14ರಿಂದ ಬೈಂದೂರು ನೂತನ ತಾಲೂಕಾಗಿ ಕಾರ್ಯಾರಂಭಗೊಳ್ಳಲಿದೆ. ರಾಜ್ಯ ಸರಕಾರ ಬಜೆಟ್ನಲ್ಲಿ ಘೋಷಿಸಿದಂತೆ ನೂತನ ತಾಲೂಕು ರಚನೆ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಿದ್ದು ನೂತನ ಬೈಂದೂರು ತಾಲೂಕು ರಚನೆಗೆ ಸಿದ್ಧತೆಗಳು ನಡೆದಿವೆ. ಫೆಬ್ರವರಿ 14ರಂದು ತಾಲೂಕು ಕೇಂದ್ರ ಅಧಿಕೃತವಾಗಿ ಕಾರ್ಯಾರಂಭಗೊಳ್ಳಲಿದ್ದು, ನಾಗರಿಕರಲ್ಲಿ ಸಂತಸ ಮೂಡಿಸಿದೆ. ಬಹುಕಾಲದ ಬೇಡಿಕೆ ನನಸು: ತಾಲೂಕು ರಚಿಸಬೇಕೆಂಬ ಆಗ್ರಹ ಎಪ್ಪತ್ತರ ದಶಕದಲ್ಲಿ ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ರಚನೆಗೊಂಡ ವಾಸುದೇವ ರಾವ್ ಆಯೋಗ ಹಾಗೂ ಟಿ.ಎಂ ಹುಂಡೇಕರ ಆಯೋಗ, ಗದ್ದಿಗೌಡರ್ ಸಮಿತಿ, ಎಂ.ಬಿ. ಪ್ರಕಾಶ್ ರಾವ್ ಸಮಿತಿ ಮುಂತಾದವುಗಳು ಬೈಂದೂರು ತಾಲೂಕು ರಚನೆಯ ಅಗತ್ಯತೆಯನ್ನು ಪುಷ್ಠಿಕರಿಸಿದ್ದವು. ಈ ಭಾಗದ ನಾಗರಿಕರು ನಿರಂತರವಾಗಿ ತಾಲೂಕು ರಚನೆಯ ಬಗ್ಗೆ ಮನವಿ ಸಲ್ಲಿಸುತ್ತಾ, ಹೋರಾಡುತ್ತಾ ಬಂದವರು. ಬೈಂದೂರು ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ. ಜಗನ್ನಾಥ ಶೆಟ್ಟಿ ಅವರು ತಾಲೂಕು ರಚನೆಯ ಹಂತ ಹಂತವನ್ನೂ ಮನಗಂಡವರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಿವಿಧ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆಗೆ ಭಕ್ತಿ ಭಾವದಿಂದ ನಡೆಯಿತು. ಸಹಸ್ರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಶ್ರೀ ದೇವರಿಗೆ ನವಿಸಿ ಶಿವಸ್ತುತಿ, ಶಿವನಾಮ ಪಾರಾಯಣದಿಂದ ಪುನಿತರಾದರು. ಶಿವರಾತ್ರಿ ಉಪವಾಸವನ್ನು ಕೈಗೊಂಡು ಕೃತಾರ್ಥರಾದರು. ಶಿವರಾತ್ರಿಯ ಅಂಗವಾಗಿ ಬೈಂದೂರು ವಣಕೊಡ್ಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಅಪೂರ್ವ ಅವಕಾಶವಿದ್ದರೇ ಗುಜ್ಜಾಡಿಯ ಗುಹೇಶ್ವರ ದೇವಾಲಯದಲ್ಲಿ ಗುಹೆಯ ಒಳಗೆ ದೇವರ ದರ್ಶನ ಪಡೆಯವ ಅವಕಾಶ ಭಕ್ತರದ್ದಾಗಿತ್ತು. ಐತಿಹಾಸಿಕ ಹಾಗೂ ಐತಿಹ್ಯವಿರುವ ಶಿವಾಲಯಗಳಿಗೆ ಭಕ್ತ ದಂಡು ಹರಿದು ಬಂದಿತ್ತು. ವಣಕೊಡ್ಲುವಿನಲ್ಲಿ ಶಿವರಾತ್ರಿಯಂದು ಮಾತ್ರ ಸ್ವರ್ಶಪೂಜೆ ಮಾಡುವ ಸರತಿ ಸಾಲಿನಲ್ಲಿ ನಿಂತ ಬಳಿಕ ದರ್ಶನ ಪಡೆಯುವಂತಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಪಂಚ ಶಂಕರನಾರಾಯಣ ಕ್ಷೇತ್ರಗಳಾದ ಬೆಳ್ವೆ ಶ್ರೀ ಶಂಕರನಾರಾಯಣ, ಆವರ್ಸೆ ಶ್ರೀ ಶಂಕರನಾರಾಯಣ, ಮಾಂಡವಿ ಶ್ರೀ ಶಂಕರನಾರಾಯಣ, ಶ್ರೀ ಕ್ರೋಢ ಶಂಕರನಾರಾಯಣ, ಶ್ರೀ ಹೊಳೆ ಶಂಕರನಾರಾಯಣ ದೇವಾಲಯಗಳು, ಆಜ್ರಿ ಶ್ರೀ ತ್ರೈಂಬಕೇಶ್ವರ ದೇವಾಲಯ, ಬೈಂದೂರು…
ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಒಬ್ಬರು ಮಾತ್ರ ಅಂಬೆಗಾಲಿಟ್ಟು ನಡೆಯಬಹುದಾದ ಹಾದಿ, ಅದರ ಅಂತ್ಯದಲ್ಲೇ ಒಂದಿಷ್ಟು ಮಂದಿ ಕುಳಿತುಕೊಳ್ಳಬಹುದಾದ ಜಾಗ. ಅಲ್ಲಿಂದ ಬಲಕ್ಕೆ ಸಾಗಿದರೆ ಎದಿರುಗೊಳ್ಳುವ ಶಿವಲಿಂಗ. ಶಿವರಾತ್ರಿಯಂದು ಗುಹಾಂತರನಾದ ಈಶ್ವರನ್ನು ಕಾಣುವ ಕೊಡಪಾಡಿಯ ಗುಹೇಶ್ವರ ದೇವಾಲಯದಲ್ಲೊಂದು ಅಪೂರ್ವ ಅವಕಾಶವಿದೆ. ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. ೨೦ ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ. ಕುಂದಾಪ್ರ ಡಾಟ್ ಕಾಂ ವರದಿ ದೇವರ ದರ್ಶನಕ್ಕೆ ಸಹಸ್ರ ಜನ: ಶಿವರಾತ್ರಿ ದಿನದಂದು ಮಾತ್ರ ಗುಹೆಯೊಳಗಿನ ಶ್ರೀ ಗುಹೇಶ್ವರನ ದರ್ಶನ ಭಾಗ್ಯವಿರುವುದರಿಂದ ಕರಾವಳಿ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭೇದ ಭಾವವಿಲ್ಲದೇ ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿಯೇ ಗುಹೆಯೊಳಕ್ಕೆ ಪ್ರವೇಶಿಸಿ ದೇವರಿಗೆ ನಮಿಸುತ್ತಾರೆ. ವರ್ಷಕ್ಕೊಮ್ಮೆ ಒದಗಿ ಬರುವ ಅವಕಾಶದಿಂದ ಪುನೀತರಾಗುತ್ತಾರೆ. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಲೇಖನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಜರುತ್ತಲಿದೆ. ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಮಾರ್ಚ್ 7ರಂದು ಬೆಳಿಗ್ಗೆ 8 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮಾರ್ಚ್ 8ರಂದು ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಯಕ್ಷಗಾನ ಬಯಲಾಟ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪ್ರ ಡಾಟ್ ಕಾಂ ಲೇಖನ ಹಲವು ಗಣ್ಯ ಮಹನೀಯರು ಮಹಾಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಅಣ್ಣಪ್ಪ ಶೆಟ್ಟಿ ಯಡ್ತರೆ, ಡಾ. ಮಿಥುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ ಮೊದಲಾದವರು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಬೈಂದೂರು ಪೋಲಿಸರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮುದ್ರವೇ ದೇವರು ಎಂಬ ನಂಬಿಕೆ ಹಾಗೂ ವಿಶ್ವಾಸದೊಂದಿಗೆ ನಿತ್ಯ ಹೋರಾಟ ನಡೆಸುವ ಮೀನುಗಾರರ ಅಗತ್ಯತೆಗಳನ್ನು ಪೂರೈಸುವುದು ಸರಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಮೀನುಗಾರಿಕೆಗೆ ತೊಡಕಾಗುತ್ತಿರವ ಸೀಮೆಎಣ್ಣೆ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಸಂಸದರ ಮೂಲಕ ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು ಎಂದು ಶಿಕಾರಿಪುರ ಕ್ಷೇತ್ರದ ಶಾಸಕ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಬಿ. ವೈ ರಾಘವೇಂದ್ರ ಹೇಳಿದರು. ಅವರು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಕೊಡೇರಿ ಬಂದರು ಬಳಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಮೀನುಗಾರರ ಧ್ವನಿಯಾಗಿ, ಶಕ್ತಿಯಾಗಿ ೨೫ ವರ್ಷಗಳನ್ನು ಪೂರೈಸಿದೆ. ಸಂಘದ ಕಾರ್ಯವ್ಯಾಪ್ತಿಯನ್ನು ಒಂದು ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸದೇ ರಾಜ್ಯದ ಮೀನುಗಾರರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದವರು ಶ್ಲಾಫಿಸಿದರು. ಜೀವರಕ್ಷಕ ಪ್ರಶಸ್ತಿ ವಿತರಿಸಿದ ಬೈಂದೂರು ಕ್ಷೇತ್ರದ ಶಾಸಕ, ಕೆಎಸ್ಆರ್ಟಿಸಿ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಕಿಂಡರ್ ಗಾರ್ಟನ್ನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಯ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಸುನೀತ ಉದಯ ಕುಮಾರ ಪುಟಾಣಿಗಳಗೆ ಬಹುಮಾನ ವಿತರಿಸಿ ಮಾತನಾಡಿ ನಿಜಕ್ಕೂ ಇಂತಹ ಕಾರ್ಯಕ್ರಮ ಪ್ರಶಂಸನೀಯ ಈ ಎಳೆವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು, ಆ ಮೂಲಕ ತಮ್ಮ ಪ್ರತಿಭೆಯನ್ನು ಹೊರಸೂಸಿ ಬಹುಮಾನ ಪಡೆಯುತ್ತಿರುವುದರ ಹಿಂದೆ ಶಾಲಾ ಶಿಕ್ಷಕರ ಮತ್ತು ಹೆತ್ತವರ ಪರಿಶ್ರಮ ಕಾಣಬಹುದು. ಶಾಲೆ ಎಂದರೆ ಕೇವಲ ಪಠ್ಯವನ್ನು ಬೋಧಿಸುವುದಲ್ಲ. ಜೊತೆಜೊತೆಗೆ ಮಗುವಿನ ಸರ್ವಾಂಗೀಣ ಅಭಿವೃದ್ದಿಗೆ ಬೇಕಾದ ಪಠ್ಯೇತರ ಚಟುವಟಿಕೆಗಳನ್ನು ಪ್ರತಿ ಹಂತದಲ್ಲೂ ಆಯೋಜಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಗುರುಕುಲ ಶಾಲೆ ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲಾ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಸಹಕಾರಿಯಾಗುತ್ತಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ. ವಿಜೇತರಿಗೆ ಬಹುಮಾನ ನೀಡುವುದರ ಜೊತೆಗೆ ಭಾಗವಹಿಸಿದ ಪ್ರತಿ ಮಗುವನ್ನು ಗುರುತಿಸಿ ಬಹುಮಾನ ನೀಡುತ್ತಿರುವುದು ಶ್ಲಾಘನೀಯವಾದುದು ಎಂದು ತಮ್ಮ ಅತಿಥಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೃಹತ್ ಸಮಾವೇಶ ಫೆ. 10 ರಂದು ಬೆಳಗ್ಗೆ 10 ಗಂಟೆಗೆ ಉಪ್ಪುಂದ ಕೊಡೇರಿ ಬಂದರು ಬಳಿ ನಡೆಯಲಿದೆ ಎಂದು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಶೋಮಶೇಖರ ಕೆ. ಎಂ ತಿಳಿಸಿದ್ದಾರೆ. ಉಪ್ಪುಂದದ ನಾಡದೋಣಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಸಂಸದ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಪರಿಹಾರ ನಿಧಿ ಯೋಜನೆಯನ್ನು, ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್ ಮೀನುಗಾರಿಕಾ ಮಾಹಿತಿ ಕೇಂದ್ರವನ್ನು, ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ ಸಂಘದ ಸದಸ್ಯರ ವೈಬ್ಸೈಟ್ನ್ನು ಅನಾವರಣಗೊಳಿಸಲಿದ್ದು, ಶಾಸಕ ಕೆ. ಗೋಪಾಲ ಪೂಜಾರಿ ಜೀವರಕ್ಷಕ ಪ್ರಶಸ್ತಿ ವಿತರಿಸಲಿದ್ದಾರೆ. ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ಕುಮಾರ ಶೆಟ್ಟಿ, ಆಸ್ಕರ ಫೆರ್ನಾಂಡಿಸ್, ಶಾಸಕರಾದ ಹಾಲಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೊಂಬತ್ತರ ದಶಕದಲ್ಲಿ ಕುಂದಾಪುರದ ನಾಗರಿಕರು ಮೊದಲ ಭಾರಿಗೆ ಕಂಡಲ್ಲಿ ಗುಂಡು, ಕರ್ಪ್ಯೂನಂತಹ ಸನ್ನಿವೇಶವನ್ನು ಎದುರಿಸಲು ಕಾರಣವಾಗಿದ್ದ ಭಿನ್ನಕೋಮಿನ ಜೋಡಿಗಳ ಪ್ರೇಮ ಪ್ರಕರಣದ ಪ್ರೀಯತಮ, ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆಯ ನಿವಾಸಿ ಭಾಸ್ಕರ್ ಕೊಠಾರಿ (47) ಇಂದು ಆತ್ಮಹತ್ಯೆಗೆ ಶರಣಾದ ಖೇದಕರ ಘಟನೆ ನಡೆದಿದೆ. ಮೃತ ಭಾಸ್ಕರ್ ಕೊಠಾರಿ ಅವರ ಸಹೋದರನ ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಬಳಿಕ ಮನೆಯ ಬಳಿ ಹುಡುಕಾಟ ನಡೆಸುತ್ತಿದ್ದಾಗ, ಬಾವಿಯ ನೀರೆತ್ತುವ ಪೈಪ್ನ ಹಗ್ಗ ತುಂಡಾಗಿರುವುದನ್ನು ಗಮನಿಸಿ ಅನುಮಾನಗೊಂಡು ಪರಿಶೀಲಿಸಿದಾಗ ಭಾಸ್ಕರ್ ಕೊಠಾರಿಯ ಶವ ಬಾವಿಯೊಳಕ್ಕೆ ಪತ್ತೆಯಾಗಿತ್ತು. ವಿಪರಿತ ಕುಡಿತದ ಚಟ ಹೊಂದಿದ್ದ ಅವರು ಇತ್ತಿಚಿಗಷ್ಟೇ ಕುಡಿತ ನಿಲ್ಲಿಸಿದ್ದರು. ಆ ಕಾರಣಕ್ಕೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ತಮ್ಮನ ಮನೆಯ ಗೃಹ ಪ್ರವೇಶದ ಬಳಿಕ ಮೃತರ ಮಡದಿ ಹಾಗೂ ಕುಟುಂಬಿಕರಿಗೆ ವಿಷಯ ತಿಳಿಸಲಾಗಿತ್ತು. ಶಂಕರನಾರಾಯಣ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಸುದ್ದಿಯಾಗಿದ್ದ…
ಕುಂದಾಪ್ರ ಡಾಟ್ ಕಾಂ ಲೇಖನ. ಮೊರೆತು ನಿಲುವೆ ಏಕ ಮಾವ ಅಳಿಯನಲ್ಲವೇ.. ಉರಿವುದೊಂದೇ ದೀಪವಾದರೂ.. ಎರಡಾಗುತ..ಮೂರಾಗುತ.. ಕರೆಸಿ ಕೊಲುವೆ ಏಕೆ ಮಾವ ಅಳಿಯನಲ್ಲವೇ ಎಂಬ ಪದ್ಯಗಳಿಗೆ ಹಾಲುಗಲ್ಲದ ಮಕ್ಕಳ ನೃತ್ಯಾಭಿನಯಕ್ಕೆ ತಲೆ ದೂಗದವರಿಲ್ಲ.. ಕಂಡೆನೊಂದು ಕನಸಿನ ಪದ್ಯಕ್ಕೆ ಕಂಸ ವೇಷಧಾರಿ ಅಭಿನಯ ಅಲ್ಲಲ್ಲಿ ಚಿಟ್ಟಾಣಿ ನೆನಪು ಮೂಡಿಸಿದ್ದು ಸುಳ್ಳಲ್ಲ.. ಧೂರ್ವಾಸ ಮುನಿಯ ಶಾಪಕ್ಕೆ ಒಳಗಾಗುವ ಗಂಧರ್ವನ ಪಾತ್ರ ನಿರ್ವಹಸಿದ ಪುಣಾಣಿ ಬಾಲಕಿಯ ನೃತ್ಯ ಕೌಶಲ್ಯ ತರಬೇತುದಾರರ ಪರಿಶ್ರಮಕ್ಕೆ ಸಿಕ್ಕ ಫಲ. ರಾಜಾರಜಕ, ಆಸ್ತಿ ಪಾಸ್ತಿ ಹೀಗೆ ಪಾತ್ರಗಳಲ್ಲಿ ಕಾಣಿಸಿಕೊಂಡವರೆಲ್ಲಾ.. ನಾಲ್ಕನೇ ತರಗತಿ ಒಳಗಿನ ಮಕ್ಕಳು..! ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಾಗಿ ರಂಗದಲ್ಲಿ ಮೂರು ಗಂಟೆ ಕಾಲ ವೀಕ್ಷಕರ ಸೆರೆ ಹಿಡಿದು ಕೂರಿಸಿದ ಮಕ್ಕಳ ಯಕ್ಷಗಾನ ಕಸರತ್ತು.. ಯಾಕ್ಷಗಾನಕ್ಕೆ ಉಳಿಗಾಲವಿಲ್ಲ ಎಂದು ಬೊಬ್ಬೆಯಿಡುವವರಿಗೆ ಉತ್ತರವೂ ಹೌದು. ೩೦ಕ್ಕೂ ಮಿಕ್ಕ ಮಕ್ಕಳ ಸಿದ್ದ ಪಡಿಸಿ, ಮಕ್ಕಳ ರಂಗದಲ್ಲಿ ತರುವ ಕೆಲಸ ಸುಲಭ ಸಾಧ್ಯವೂ ಅಲ್ಲ. ಎಲ್ಲವೂ ಸಾಧ್ಯವಾಗಿದ್ದು ಮರವಂತೆ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ…
