Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯ ಅಂಗವಾಗಿ ಅಕ್ಟೋಬರ್ ೧೦ರಂದು ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರೈ ಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ವಿತರಣೆ ಮಾಡಲಿದ್ದೇವೆ. ೧೩ ವರ್ಷದ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 1ರಿಂದ 10ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಈ ಬಾರಿ ವಿಶೇಷವಾಗಿ ಕಾರಂತರಿಗೆ ಪಂಚನಮನ ಸಲ್ಲಿಸು ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ.ಕುಂದರ್ ಹೇಳಿದರು. ಅವರು ಕೋಟ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಅಕ್ಟೋಬರ್ ೧ ರಿಂದ ೧೦ರ ವರೆಗೆ ನಡೆಯಲಿರುವ ಕಾರಂತೋತ್ಸವ ತಂಬೆಲರು 2017ರ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಕಾರ್ಯಕ್ರಮ ಕಾರ್ಯ ಸ್ವರೂಪಗಳ ಬಗ್ಗೆ ನಡೆದ ಸಭೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಅಕ್ಟೋಬರ್ ೧ರಂದು ಮಕ್ಕಳ ಹಬ್ಬದ ಮೂಲಕ ತಂಬೆಲರು ಕಾರ್ಯಕ್ರಮ ಉದ್ಘಾಟನೆಗೊಳ್ಳಿದ್ದು, ಪ್ರತಿದಿನ ಸಂಜೆ ೫.೩೦ರಿಂದ ಪ್ರಾದೇಶಿಕ ಮತ್ತು ಪ್ರಶಸ್ತಿ ವಿಜೇತ ಚಲನಚಿತ್ರಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪ್ರತಿಯೊಂದು ಸಂಬಂಧಗಳು ಉಳಿದುಕೊಳ್ಳುವುದು ಪರಸ್ಪರ ನಂಬಿಕೆಯ ಆಧಾರದ ಮೇಲೆ. ವಿಮರ್ಶೆಗೆ ಅವಕಾಶ ನೀಡುವಂತಹ ನಂಬಿಕೆಗಳನ್ನು ಪ್ರತಿಯೊಬ್ಬರೂ ಹೊಂದಿರಬೇಕು ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಕೋಟೇಶ್ವರದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಕೋಟೇಶ್ವರ ಮತ್ತು ಆನ್ಸ್ ಕ್ಲಬ್ ಕೋಟೇಶ್ವರ ವತಿಯಿಂದ ನಡೆದ ಕುಟುಂಬ ಸಮ್ಮಿಲನ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಮನಸ್ಸಿನಲ್ಲಿ ಸಂಬಂಧಗಳ ಬಗೆಗೆ ಅಸಹ್ಯವನ್ನು ತುಂಬುವ ಟಿವಿ ಧಾರಾವಾಹಿಗಳನ್ನು ಬದಿಗಿಟ್ಟು ಮನೆಗಳಲ್ಲಿ ನಮ್ಮ ನಡುವೆಯೇ ಪ್ರೀತಿಯ ಮಾತುಕತೆ ಕುಶಲೋಪರಿಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ದಂಪತಿಗಳು ಪರಸ್ಪರರ ವೈಯಕ್ತಿಕ ಬದುಕುಗಳನ್ನು ಗೌರವಿಸುವ ವಿಶಾಲ ಮನೋಭಾವನೆಯನ್ನು ಹೊಂದಬೇಕು.ಪ್ರೀತಿಯ ಮಾತು ಸಂಬಂಧಗಳ ಬೆಳವಣಿಗೆಗೆ ಸಹಕಾರಿ ಎಂದು ಅವರು ಹೇಳಿದರು. ರೋಟರಿ ಅಧ್ಯಕ್ಷ ಎನ್ ಪ್ರಕಾಶ್ ಆಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆನ್ಸ್ ಅಧ್ಯಕ್ಷೆ ಶ್ರೀಮತಿ ಪ್ರಕಾಶ್ ಆಚಾರ್, ಆನ್ಸ್ ಕಾರ‍್ಯದರ್ಶಿ ಅಕ್ಷತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ವಿಭಾಗದ ಟೆನ್ನಿ ಕಾಯ್ಟ್ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾವು ಪಡೆದ ಟ್ರೋಫಿಯೊಂದಿಗೆ. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ, ಆಂಗ್ಲ ಬಾಷಾ ಉಪನ್ಯಾಸಕ ಥಾಮಸ್ ಕೆ.ಪಿ ಉಪಸ್ಥಿತರಿದ್ದಾರೆ.ಗಣೇಶ್ ಖಾರ್ವಿ, ಅಭಿಷೇಕ್ ಮತ್ತು ರೋಶನ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿಜೇತರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶುಕ್ರವಾರ ಶರನ್ನವರಾತ್ರಿಯ ಮಹಾ ನವಮಿಯಂದು ಸುಹೂಮೂರ್ತದಲ್ಲಿ ಪುಷ್ಪರಥೋತ್ಸವ ನಡೆಯಿತು. ಪ್ರಾರಂಬಿಕ ಹಂತದಲ್ಲಿ ದೇವಿಯ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೆವಾಲಯದ ಒಳಪ್ರಾಂಗಣದಲ್ಲಿ ಒಂದುಸುತ್ತು ಬರುತ್ತಿದ್ದಂತೆ ಶ್ರೀ ಮೂಕಾಂಬಿಕೆಯ ಸ್ತೋತ್ರಪಠಿಸಿ ದೇವಿಯ ದರ್ಶನ ಪಡೆದು ಕಣ್ತುಂಬಿಕೊಂಡು ಪುಳಕಿತರಾದರು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತವೃಂದ ’ಅಮ್ಮಾ, ದೇವಿ, ನಾರಾಯಣಿ’ ಎಂಬಿತ್ಯಾದಿ ಉದ್ಘೋಷದಿಂದ ಮೈಮರೆತು ಭಕ್ತಿಪರವಶರಾದರು. ನವರಾತ್ರಿಯ ಮಹಾನವಮಿಯಂದು ಪ್ರಸಾದ ರೂಪವಾಗಿ ದೊರಕುವ ಈ ನಾಣ್ಯ ಭಾಗ್ಯವನ್ನು ದಯಪಾಲಿಸುತ್ತದೆ ಹಗೂ ಆರ್ಥಿಕ ಸ್ಥಿತಿ-ಗತಿಗಳನ್ನು ಭದ್ರಪಡಿಸುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇಂದಿಗೂ ಅಚಲವಾಗಿದ್ದು, ಇದಕ್ಕಾಗಿ ಮಹಾನವಮಿಯ ರಥೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಪೌಳಿಯ ಒಳ ಪ್ರಾಂಗಾಣದಲ್ಲಿ ಲಕ್ಷಾಂತರ ಜನರು ಮಹಾನವಮಿಯಂದು ನಡೆಯುವ ಶ್ರೀದೇವಿಯ ರಥೋತ್ಸವಕ್ಕಾಗಿ ಕಾಯುತ್ತಾರೆ. ಇದರಲ್ಲಿ ಕೇರಳಿಗರೆ ಹೆಚ್ಚು ಎನ್ನುವುದು ವಿಶೇಷ. ಈ ಸಂದರ್ಭ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೇವಳದ ವ್ಯವಸ್ಥಾಪನಾ ಸಮಿತಿ, ಆಡಳಿತ ಮಂಡಳಿ, ಅರ್ಚಕವೃಂದ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸಹಕರಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಡಿಗರ ಕಾವ್ಯ ಸಾಂದ್ರ ಅನುಭವ ಮತ್ತು ವಿಚಾರಗಳನ್ನು ಹೊಂದಿದ್ದು. ನಮ್ಮ ಪ್ರಾದೇಶಿಕ ನುಡಿಗಟ್ಟು, ಪುರಾಣ, ಸಾಹಿತ್ಯ, ಯಕ್ಷಗಾನ-ತಾಳ ಮದ್ದಳೆಗಳ ಹಿನ್ನೆಲೆಯಿಲ್ಲದೆ, ಸುಲಭವಾಗಿ ಆಸ್ವಾಧಿಸುವುದು ಕಷ್ಟ. ಅಡಿಗರ ಕಾವ್ಯಾ ಸ್ವಾಹನೆಗೆ ಇಲ್ಲಿನ ಸ್ವಂತಃ ಕವಿಗಳೂ, ವಿಚಾರವಂತರೂ ಆದ ಉಪ್ಪುಂದ ಚಂದ್ರ ಶೇಖರ ಹೊಳ್ಳರ ಕಾವ್ಯ ಪ್ರವೇಶಿಕೆ ಅಡಿಗರ ಶತಾಬ್ದಿ ವರ್ಷಕ್ಕೆ ಪ್ರಮುಖ ಕಾಣೆಕೆ ಎಂದು ಡಾ. ಪ್ರೋ. ಕನರಾಡಿ ವಾದಿರಾಜ ಭಟ್ ಹೇಳಿದರು. ಖಂಬದಕೋಣೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಪ್ತಾಹ ಕಾರ್ಯಕ್ರಮದಲ್ಲಿ ಅಡಿಗರ ಕಾವ್ಯ ಪ್ರವೇಶಿಕೆ ಅಡಿಗರ ಕಾವ್ಯದ ಆಸ್ವಾದನೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರಾಂಶುಪಾಲೆ ಜಯಲಕ್ಮ್ಷೀ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಕವಿ ಅಡಿಗರ ವಿದ್ಯಾರ್ಥಿ ಪ್ರೋ ಕನರಾಡಿಯವರಿಗೆ ಅಡಿಗ ಜನ್ನ ಶತಾಬ್ಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಧ್ಯಮ ಭಾರತಿ ಬೆಂಗಳೂರಿನ ನಿರ್ದೇಶಕ ಎಂ. ಜಯರಾಮ ಅಡಿಗರು ಪ್ರಾಸ್ತಾವಿಸಿದರು. ಸಾಹಿತಿ ಯು. ರಮೇಶ ವೈದ್ಯ, ಪ್ರಸಾರ ಭಾರತಿ ನಿರ್ದೇಶಕ ಎಂ. ಜಯರಾಮ ಅಡಿಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರೀಕೃತ ಬ್ಯಾಂಕುಗಳಂತೆ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಸಕಾಲದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಕೊಡುವ ಉದ್ದೇಶದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರಂಭಗೊಂಡ ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಸೌಲಭ್ಯಗಳ ಜತೆಗೆ ಬ್ಯಾಂಕಿಂಗ್ ಸೇವೆ ನೀಡುತ್ತಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ನಾವುಂದದಿಂದ ಕುಂದಾಪುರ ಶಾಸ್ತ್ರಿಸರ್ಕಲ್ ಬಳಿಯ ಗೋವಿಂದ್ರಾಯ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡ ಗೋಪಾಲಕೃಷ್ಣ ವಿವಿಧೋದ್ಧೇಶ ಸೇವಾ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿ ಉದ್ಘಾಟಿಸಿ ಮಾತನಾಡಿದರು. ಸೇವೆಗೆ ಇನ್ನೊಂದು ಹೆಸರು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ, ಕೃಷಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಭಾಗದ ಸಹಕಾರಿ ಸಂಸ್ಥೆಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ. ಎಲ್ಲಾ ವರ್ಗದ ಜನರನ್ನು ಉತ್ತಮ ರೀತಿಯಲ್ಲಿ ಸ್ಪಂದಿಸುವ ಜತೆಗೆ ಉದ್ಯೋಗಾವಕಾಶಗಳು ಕೂಡಾ ಹೆಚ್ಚಲು ಸಹಕಾರಿಯಾಗುತ್ತಿದೆ. ಕೇವಲ ಲಾಭದ ದೃಷ್ಠಿಗಿಂತ ಮುಖ್ಯವಾಗಿ ಸಹಕಾರಿ ತತ್ವಗಳನ್ನು ಅಳವಡಿಸಿಕೊಂಡು ಸೇವೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕುಂದಾಪುರ ತಾಲೂಕು ಸಮಿತಿ ಮತ್ತು ಬೈಂದೂರು ತಗ್ಗರ್ಸೆ ಹಾಗೂ ಯಡ್ತರೆ ಗ್ರಾಮಗಳ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಬೈಂದೂರು ತಗ್ಗರ್ಸೆ ಹಾಗೂ ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡನಿವೇಶನ ರಹಿತರಿಂದ ಮನೆ ನಿವೇಶನ ಮಂಜೂರಾತಿ ಕೋರಿ ಅರ್ಜಿಗಳನ್ನು ಸ್ವೀಕರಿಸಲಾಯಿತು. ಬೈಂದೂರು ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕ ಗಣೇಶ ತೊಂಡೆಮಕ್ಕಿ ಅರ್ಜಿ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿದರು. ಈ ಅರ್ಜಿಗಳನ್ನು ಯಡ್ತರೆ ಗ್ರಾಮ ಪಂಚಾಯತ್ ಕಛೇರಿಗೆ ಸೆ.೨೮ರಂದು ಬೆಳಿಗ್ಗೆ ೧೧ ಗಂಟೆಗೆ, ಹಾಗೂ ಬೈಂದೂರು, ತಗ್ಗರ್ಸೆ ಗ್ರಾಮ ಪಂಚಾಯತ್ ಕಛೇರಿಗೆ ಮಧ್ಯಾಹ್ನ ೩ ಗಂಟೆಗೆ ಸಾಮೂಹಿಕವಾಗಿ ಹಸ್ತಾಂತರಿಸಲಾಗುತ್ತದೆ. ಈ ಸಂದರ್ಭ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕುಂದಾಪುರ ತಾಲೂಕು ಸಮಿತಿ ಕಾರ್ಯದರ್ಶಿ ನಾಗರತ್ನ ನಾಡ, ಮುಖಂಡರಾದ ರಾಜೀವ ಪಡುಕೋಣೆ, ಪದ್ಮಾವತಿ ಶೆಟ್ಟಿ, ಗಣೇಶ ಮೊಗವೀರ, ಸಮ್ಮದ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉಪ್ಪುಂದ ಶಂಕರನಾರಾಯಣ ಪುರಾಣಿಕ ಇವರ ಪ್ರಾಯೋಜಕತ್ವದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸುಪ್ರಭಾತ ಮತ್ತು ಭಕ್ತಿಗೀತೆಗಳನ್ನೊಳಗೊಂಡ ಧ್ವನಿಮುದ್ರಿಕೆ (ಸಿಡಿ) ಯನ್ನು ಶಾಸಕ ಕೆ. ಗೋಪಾಲ ಪೂಜಾರಿ ಲೋಕಾರ್ಪಣೆ ಮಾಡಿದರು. ಯುವ ಸಂಗೀತ ನಿರ್ದೇಶಕ ಚಂದ್ರ ಬೈಂದೂರು ಇವರು ಈ ಧ್ವನಿಮುದ್ರಿಕೆಗೆ ಸಾಹಿತ್ಯ ಮತ್ತು ಸಂಗೀತವನ್ನು ಸಂಯೋಜಿಸಿ ಭಕ್ತಿಗೀತೆಗಳ ಗಾಯನವನ್ನೂ ಮಾಡಿದ್ದಾರೆ. ಶ್ರೀದೇವರ ಸುಪ್ರಭಾತವನ್ನು ಉಡುಪಿ ಕೃಷ್ಣ ಕಾರಂತ್ ಹಾಡಿದ್ದಾರೆ. ಈ ಸಂದರ್ಭ ದೇವಳದ ತಂತ್ರಿ ಕೆ. ಮಂಜುನಾಥ ಅಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಜಿಪಂ ಸದಸ್ಯರಾದ ಸುರೇಶ ಬಟ್ವಾಡಿ, ಗೌರಿ ದೇವಾಡಿಗ, ತಾಪಂ ಸದಸ್ಯೆ ಪ್ರಮೀಳಾ ದೇವಾಡಿಗ ಮತ್ತಿತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಮಂಗಳೂರು ಎ. ಜೆ. ಹಾಸ್ಪಿಟಲ್ ಮತ್ತು ಎ. ಜೆ. ವೈದ್ಯಕೀಯ ಮಹಾವಿದ್ಯಾಲಯ ಇವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಹಯೋಗದಲ್ಲಿ ಇಲ್ಲಿನ ಜಗದಾಂಬಿಕಾ ಸಂಕೀರ್ಣದಲ್ಲಿ ಕೊಲ್ಲೂರು ಶರನ್ನವರಾತ್ರಿ ಪ್ರಯುಕ್ತ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ತೆರೆದ ವೈದ್ಯಕೀಯ ತಪಾಸಣೆ ಮತ್ತು ತುರ್ತುಚಿಕಿತ್ಸಾ ಘಟಕವು ಸೆ.೩೦ರ ತನಕ ಉಚಿತವಾಗಿ ಕಾರ್ಯನಿರ್ವಹಿಸುತ್ತದೆ. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ಅಭಿಲಾಷ್ ಪಿ. ವಿ. ಇವರು ಈ ವ್ಯವಸ್ಥೆಯ ಉಸ್ತುವಾರಿವಹಿಸಿದ್ದು, ಕಾರ್ಯನಿರ್ವಹಣಾಧಿಕಾರಿ ಜನಾರ್ದನ್ ಜಿ. ಸಿ., ಎಇಒ ಎಚ್. ಕೃಷ್ಣಮೂರ್ತಿ, ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ ಸಹಕರಿಸುತ್ತಿದ್ದಾರೆ. ನುರಿತ ಹಾಗೂ ತಜ್ಞ ವೈದ್ಯರ ತಂಡ ಕೊಲ್ಲೂರಿನಲ್ಲಿ ಮೊಕ್ಕಾಂ ಹೂಡಿದ್ದು, ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಕೊಲ್ಲೂರು ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಬಾಲಕ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ಹಾಗೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ, ನಾಗರಾಜ್ ಅಡಿಗ ಮತ್ತು ಮೊದಲಾದವರು ಉಪಸ್ಥಿರಿದ್ದರು.

Read More