Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲ್ಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೆ ನಂ 180, 157, 189 ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174. 56ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ SAND APPನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದ್ದರಿಂದ ಸದರಿ ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು UDUPI E-SAND APP ಮುಖಾಂತರ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ , ರಜತಾದ್ರಿ, A ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ಜಿಲ್ಲೆ, ಉಡುಪಿ, ದೂರವಾಣಿ ಸಂಖ್ಯೆ: 0820-2572333, UDUPI E-SAND APP ದೂರವಾಣಿ ಸಂಖ್ಯೆ – 6366248666, 6366743888, 6366871888 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂವಿಜ್ಞಾನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲೆಗಳ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಹರ್ಷಾ ಆಚಾರ್ ಕೋಟೇಶ್ವರ ಇವರು ವಿದ್ಯಾರ್ಥಿಗಳನ್ನು ಸಮ್ಮೇಳಿಸಿ ಟ್ರೆಡ್ ಆರ್ಟ್, ಏಕಪಾತ್ರಾಭಿನಯ, ಕರೋಕೆ ಗಾಯನ, ಜಾನಪದ ಗೀತೆ, ಉಭಯತಿಟ್ಟು ಯಕ್ಷಗಾನದ ಹೆಜ್ಜೆಯೊಂದಿಗೆ ಅಪೂರ್ವ ಸಂಭಾಷಣೆಯ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಮ್. ಅಬ್ದುಲ್ ರೆಹಮಾನ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಹಾಗೂ ಲಲಿತ ಕಲಾರಂಗದ ಸಂಯೋಜಕರಾದ ಡಾ. ಸಂದೀಪ ಕುಮಾರ ಶೆಟ್ಟಿ ಮತ್ತು ಲಲಿತ ಕಲಾರಂಗದ ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ ಕಾವ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿ ವಿಜಯ್ ಕುಮಾರ ಅತಿಥಿ ಪರಿಚಯಿಸಿ, ವಿದ್ಯಾರ್ಥಿ ಯಲ್ಲಪ್ಪ ಸ್ವಾಗತಿಸಿ, ವಿದ್ಯಾರ್ಥಿನಿ ನಮಿತಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್‌ನಲ್ಲಿ ಈಚೆಗೆ ಮಹಿಳಾ ದಿನದ ಅಂಗವಾಗಿ ಹದಿಹರೆಯದವರಿಗೆ ಗ್ರೆಸ್‌ಪುಲ್ ಗ್ರೋಯಿಂಗ್ ಎಂಬ ಬ್ಯಾನರ್ ಅಡಿಯಲ್ಲಿ 6 ಹಾಗೂ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಆಯುರ್ವೇದ ತಜ್ಞೆ ಡಾ.ಸ್ವಾತಿ ಶೇಟ್ ಮಾತನಾಡಿ, ಮಗುವಿನ ಜೀವನದ ಪ್ರಮುಖ ಹಂತದ ಬಗ್ಗೆ ಹಾಗೂ ವಯಸ್ಸಿನಲ್ಲಿ ಮಗುವಿನ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಕುರಿತು ವಿವರಿಸಿದರು. ಕಾರ್ಯಾಗಾರವನ್ನು ಸಾಮಾನ್ಯ ಹಾಗೂ ಹುಡುಗಿಯರ ಆರೋಗ್ಯ ನೈರ್ಮಲ್ಯದ ಕುರಿತಾಗಿ ವಿಂಗಡಿಸಲಾಗಿತ್ತು. ಕಾರ್ಯಾಗಾರದಲ್ಲಿ ವಿದ್ಯಾಥಿ೯ಗಳು ಹಾಗೂ ಸಂಪನ್ಮೂಲ ವ್ಯಕ್ತಿ ಜತೆಗೆ ಪ್ರಶ್ನೋತ್ತರ ಸಂವಾದ ನಡೆಯಿತು. ಪೋರ್ಟ್‌ಗೇಟ್ ಎಜುಕೇಷನ್ ಕಾರ್ಯದರ್ಶಿ ನೀತಾ ಎ.ಶೆಟ್ಟಿ ಸ್ವಾಗತಿಸಿದರು, ವಿಜೇತ ಪರಿಚಯಿಸಿದರು, ಸ್ನೇಹಾ ನಿರೂಪಿಸಿದರು, ಪ್ರಜ್ಞಾ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಾವುದೇ ಸಮ ಸ್ಯೆಯೂ ಪರಿಹಾರವಾಗದೇ ಇರು ವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ವಕೀಲರು ಪರಸ್ಪರ ಸಮನ್ವಯ ಸಾಧಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಭಿಪ್ರಾಯಪಟ್ಟರು. ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ, ವಕೀಲರ ಸಂಘದ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪ್ರಕರಣವನ್ನು ದೀರ್ಘಾವಧಿ ಮುಂದುವರಿಸುವ ಬದಲು ಕಕ್ಷಿದಾರ ಸ್ನೇಹಿಯಾಗಿ ಅದನ್ನು ಬೇಗನೆ ಇತ್ಯರ್ಥ ಪಡಿಸಲು ಪ್ರಯತ್ನಿಸಬೇಕು. ಪ್ರತಿಯೊಬ್ಬ ಕಕ್ಷಿದಾರರಿಗೂ ತೀರ್ಪು ಏನಾಗುತ್ತದೆ ಎನ್ನುವುದಕ್ಕಿಂತ ಸಮಸ್ಯೆ ಪರಿಹಾರ ಆಗಬೇಕು ಎನ್ನುವ ನಿರೀಕ್ಷೆ ಇರುತ್ತದೆ. ಕಕ್ಷಿದಾರರಲ್ಲಿ ವಿಶ್ವಾಸ ಮೂಡಿಸುವುದರಿಂದ ಪರಿಹಾರದ ದಾರಿ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು. ಕಳೆದ ಬಾರಿ ರಾಜ್ಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ 10 ಲಕ್ಷ ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಈ ಬಾರಿ ಇದೇ 27 ರಂದು ಲೋಕ ಅದಾಲತ್ ನಡೆಯಲ್ಲಿದೆ. ಕುಂದಾಪುರದಲ್ಲಿ 900 ಪ್ರಕರಣ ಇತ್ಯರ್ಥ ಮಾಡಲು ಬೇಡಿಕೆ ಬಂದಿದೆ, ಇದನ್ನು 2,000 ಕ್ಕೆ ಹೆಚ್ಚಿಸಲು ಪ್ರಯತ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಲ್ಲರೂ ಪ್ರೀತಿಯಿಂದ ಮೂಕಜ್ಜಿ ಎಂದು ಕರೆಯುವ ಉಳ್ಳೂರು ಮೂಕಾಂಬಿಕಾ ಐತಾಳ್ ಕುಂದಗನ್ನಡದಲ್ಲಿ ಆಶು ಸಾಹಿತ್ಯ ರಚಿಸಿದ ಮೊದಲಿಗರು. ಅವರ ಕವನ ಮತ್ತು ಕತೆಗಳಲ್ಲಿ ಕುಂದಗನ್ನಡದ ಪದಗಳು, ನುಡಿಗಟ್ಟುಗಳು ಸಮೃದ್ಧವಾಗಿವೆ ಎಂದು ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ಹೇಳಿದರು. ನಾಗೂರಿನಲ್ಲಿ ಖ್ಯಾತ ಆಶು ಕವಯತ್ರಿ ಉಳ್ಳೂರು ಮೂಕಾಂಬಿಕಾ ಐತಾಳ್ ಅವರ ಬದುಕು ಮತ್ತು ಸಮಗ್ರ ಸಾಹಿತ್ಯ ಕುರಿತ ಸುಬ್ರಹ್ಮಣ್ಯ ಐತಾಳ್ ಅವರ ಕೃತಿ ‘ಮೂಕಜ್ಜಿ’ ಅನಾವರಣಗೊಳಿಸಿ ಮಾತನಾಡಿದರು. ಯಾವುದೇ ಸಾಂಪ್ರದಾಯಿಕ ಶಿಕ್ಷಣ ವಿಲ್ಲದೆ, ಬಾಲ ವಿಧವೆಯಾಗಿ ಸಂಪ್ರದಾ ಯದ ಕಟ್ಟುಪಾಡುಗಳಿಗೆ ಒಳಗಾಗಿ ಬಾಹ್ಯ ಪ್ರಪಂಚದೊಂದಿಗೆ ಅಷ್ಟಾಗಿ ಬೆರೆಯದೆ ಬೆಳೆದ ಮೂಕಾಂಬಿಕಾ ಅಮ್ಮ ವಿವಿಧ ಛಂದಸ್ಸು ಗಳಲ್ಲಿ, ವೈವಿಧ್ಯಮಯ ವಿಚಾರಗಳ ಮೇಲೆ ಕವನ ರಚಿಸಿದುದು. ಕತೆಗಳನ್ನು ಕಟ್ಟಿರುವುದು ಅಚ್ಚರಿಯ ವಿಷಯ. ಅವರ ಹಲವು ಕೃತಿಗಳು ಬೆಳಕಿಗೆ ಬಂದಿಲ್ಲ. ಅವರ ಅಳಿದುಳಿದ ಕೃತಿಗಳನ್ನು ದಾಖಲಿಸುವ ಮಹತ್ವದ ಕೆಲಸ’ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ನೀಲಾವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಿ. ವತಿಯಿಂದ ಪ್ರತಿವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ‘ಸೇವಾ ಭೂಷಣ ಪ್ರಶಸ್ತಿ’ಗೆ ರಂಗಭೂಮಿ ಕಲಾವಿದೆ ರೇವತಿರಾಂ ಕುಂದನಾಡು ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್. ಎಲ್.ಯಮುನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ಯಾನ ಗುಡ್ಡೆಯಂಗಡಿ ಮೂಲದವರಾದ ಅವರು ಕುಂದಾಪುರ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕ ಡಿಪ್ಲೋಮಾ ಪದವಿ ಪಡೆದಿರುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಧುನಿಕ ರಂಗಭೂಮಿಯಲ್ಲಿ ಶಿವಮೊಗ್ಗ ರಂಗಾಯಣ ಸೇರಿದಂತೆ, ರಾಜ್ಯದ ಹಲವು ರಂಗತಂಡದಲ್ಲಿ ನಟನೆ, ನಿರ್ದೇಶನದ ಜೊತೆಗೆ ರಂಗ ಹಿನ್ನಲೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸಾಹಿತ್ಯದಲ್ಲೂ ಆಸಕ್ತಿ ಇರುವ ಇವರು ಹಲವಾರು ಕಥೆ – ಕವಿತೆ – ನಾಟಕಗಳನ್ನು ಬರೆದಿರುತ್ತಾರೆ. ಮಕ್ಕಳ ನಾಟಕಗಳನ್ನು ಬರೆದು ಸ್ವತಃ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜ್ ನ್ಯಾಷನಲ್ ಸ್ಪೆಲ್ ಬೀ ನಡೆಸಿದ ನ್ಯಾಷನಲ್ ಮೆಗಾ ಫೈನಲ್ ಸ್ಪೇಲ್ ಬೀ ಸ್ಪರ್ಧೆಯಲ್ಲಿ ಇಲ್ಲಿನ ಓಕ್ ವುಡ್ ಇಂಡಿಯನ್ ಸ್ಕೂಲ್‌ನ 5ನೇ ತರಗತಿಯ ವಿದ್ಯಾರ್ಥಿನಿ ಚೈತನ್ಯಶ್ರೀ ಉಡುಪ 27ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಸ್ಕೂಲ್‌ನ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದನೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಹುಪಾಲು ಮುಖ್ಯವಾಹಿನಿ ಮಾಧ್ಯಮಗಳು ಪಕ್ಷಪಾತದ ವರದಿಯ ಮೂಲಕ ಜನರ ದಾರಿತಪ್ಪಿಸುತ್ತಿರುವ ಈ ಸಂಧರ್ಭದಲ್ಲಿ ಪರ್ಯಾಯ ಪತ್ರಿಕೋದ್ಯಮದ ಅಗತ್ಯವಿದ್ದು, ಸಣ್ಣ ಪತ್ರಿಕೆಗಳು ಹಾಗೂ ವೆಬ್ ಪೋರ್ಟೆಲ್‌ಗಳು ಜನರಿಗೆ ಸತ್ಯ ಹೇಳುವ ಕಾರ್ಯವನ್ನು ನಿರ್ಭೀತವಾಗಿ ಮಾಡುತ್ತಿವೆ. ಅವುಗಳೇ ಭವಿಷ್ಯದ ಭರವಸೆ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು. ಅವರು ಇಲ್ಲಿನ ಕಲಾ ಮಂದಿರದಲ್ಲಿ  ನಡೆದ ಕನ್ನಡ ಮೀಡಿಯಾ ಡಾಟ್ ಕಾಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಾಂಚನ ಬಿಡುಗಡೆಗೊಳಿಸಿ ಮಾತನಾಡಿ ದೆಹಲಿಯ ರೈತ ಚಳುವಳಿ ಜೀವಂತವಾಗಿರಲು ಈ ಪರ್ಯಾಯ ಪತ್ರಿಕೋದ್ಯಮವೇ ಪ್ರಮುಖ ಕಾರಣ. ಹಾಗಾಗಿಯೇ ರೈತ ಚಳುವಳಿ ಜನಸಾಮಾನ್ಯರನ್ನೂ ತಲುಪುವಂತಾಯಿತು ಎಂದರು. ಜನರೇ ಮಾಧ್ಯಮವಾಗಿರುವ ಸಂದರ್ಭದಲ್ಲಿ ಸತ್ಯ ಹೇಳುವ ಪರ್ಯಾಯ ಮಾಧ್ಯಮಗಳ ಬಗ್ಗೆ ಭರವಸೆ ಇಟ್ಟು ಬೆಂಬಲಿಸುವ ಕೆಲಸವನ್ನು ಮಾಡಬೇಕಿದೆ ಎಂದರು. ಖ್ಯಾತ ನ್ಯಾಯವಾದಿ, ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ, ಹೋರಾಟಗಾರ, ವಾಗ್ಮಿ ನಿಕೇತ್ ರಾಜ್ ಮೌರ್ಯ ಉಪಸ್ಥಿತರಿದ್ದರು. ಕನ್ನಡ ಮೀಡಿಯಾ ಡಾಟ್ ಕಾಮ್‌ನ ಪ್ರಧಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ರಾಮಕೃಷ್ಣ ಪರಮಹಂಸರ 186ನೇ ಜನ್ಮ ಜಯಂತಿ ಅಂಗವಾಗಿ ಸೋಮವಾರ ಏಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರಾತಃಪೂಜೆ, ಭಜನೆ, ಉಪನಿಷತ್ ಪಠಣ, ಚಂಡಿಕಾ ಪಾರಾಯಣ, ಪೂಜೆ ಹಾಗೂ ಪ್ರಸಾದ ವಿತರಣೆ, ಏಳಜಿತ ಶಾಲಾ ವಿದ್ಯಾರ್ಥಿಗಳಿಂದ ಶ್ರೀ ಭಗವದ್ಗೀತೆ ಹಾಗೂ ಶ್ರೀ ವಿಷ್ಣುಸಹಸ್ರನಾಮ ಪಠಣ, ಮಧ್ಯಾಹ್ನ ಸ್ಥಳೀಯ ಶಾಲೆಗಳಲ್ಲಿ ಶ್ರೀ ರಾಮಕೃಷ್ಣರ ಜನ್ಮ ಜಯಂತಿ ಆಚರಣೆ ನಡೆಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕಾವ್ರಾಡಿಯ ಮುಕ್ಕನಾಡಿ ಮನೆ ಸಂಪತ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಸ್ಥಾಪಕ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಶಿಕ್ಷಕ ಪ್ರದೀಪ್ ಶೆಟ್ಟಿ ಕಾವ್ರಾಡಿ, ಚೇತನ್ ಶೆಟ್ಟಿ ಕೋವಾಡಿ, ಅಕ್ಷಯ್ ಶೆಟ್ಟಿ ಮುಂಬಾರು, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ಚೋರಮಕ್ಕಿ, ಸಂದೇಶ್ ಶೆಟ್ಟಿ ಮುಂಬಾರು, ಸಚಿನ್ ಶೆಟ್ಟಿ ವಕ್ವಾಡಿ, ಮಹೇಂದ್ರ ಶೆಟ್ಟಿ ಹಾಗೂ ಸಿ.ಎ ಸಾಧಕ ಸಂಪತ್ ಶೆಟ್ಟಿಯವರ ತಂದೆ ಶೇಖರ ಶೆಟ್ಟಿ, ತಾಯಿ ಪ್ರೇಮಲತಾ ಶೆಟ್ಟಿ, ಕುಟುಂಬಸ್ಥರು ಉಪಸ್ಥಿತರಿದ್ದರು.

Read More