ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಲನಚಿತ್ರ ತಯಾರಿಯಲ್ಲಿ ಆಸಕ್ತಿಯಿರುವ ಯುವ ಸಮೂಹಕ್ಕೆ ಚಿತ್ರ ನಿರ್ಮಾಣ ಅರಿವು ಮೂಡಿಸುವ ಹಿನ್ನಲೆಯಲ್ಲಿ ಕಾಣಿ ಸ್ಟುಡಿಯೋ ಬೆಂಗಳೂರು-ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪಿಚ್ಚರ್ ಡೈರೀಸ್ ಎಂಬ ಚಲನಚಿತ್ರ ತಯಾರಿ ಕಾರ್ಯಾಗಾರವನ್ನು ನ.12ರಂದು ಬೆಳಿಗ್ಗೆ 9ರಿಂದ ಕೋಟೇಶ್ವರದ ಸಹನ ಕನ್ವೇಶನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಚಲನಚಿತ್ರದ ನಿರ್ದೇಶನ ಆಧಾರಿತ ಚಟುವಟಿಕೆಗಳು, ಚಲನಚಿತ್ರ ವಿಮರ್ಶೆ, ಚರ್ಚೆ, ಚಲನಚಿತ್ರ ಮಾತುಕತೆ ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಒಂದು ಮೊಟ್ಟೆಯ ಕಥೆ ಖ್ಯಾತಿಯ ನಟ ಮತ್ತು ನಿರ್ದೇಶಕ ರಾಜ್ ಬಿ.ಶೆಟ್ಟಿ, ರಾಮಾ ರಾಮಾ ರೇ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ರೈಲ್ವೆ ಚಿಲ್ಡ್ರನ್ ಚಿತ್ರ ನಿರ್ದೇಶಕ ಪೃಥ್ವಿ ಕೊನನೂರ್ ಭಾಗವಹಿಸಲಿದ್ದಾರೆ. ಆಸಕ್ತರು ಕಾರ‍್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, 8867888600, 8867888700 ಕರೆ ಮಾಡಿ ಆಸನಗಳನ್ನು ಮೀಸಲಿರಿಸಬಹುದು ಎಂದು ಕಾಣಿ ಸ್ಟುಡಿಯೋ ಪ್ರಕಟನೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬಿದ್ಕಲ್ಕಟ್ಟೆ ಗಾವಳಿ ತಿರುವಿನಲ್ಲಿ ಶನಿವಾರ ಬೆಳಗ್ಗೆ ಟ್ರಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾನೆ. ಹೋಟೆಲ್ ಮ್ಯಾನೇಜ್ಮೆಂಟ್ ಪೂರೈಸಿ, ಮಣಿಪಾಲ ಖಾಸಗಿ ಹೋಟೆಲ್ ಉದ್ಯೋಗಿ ಹಾಲಾಡಿ ನಿವಾಸಿ ಶಂಕರ ಕುಲಾಲ್ ಎಂಬವರ ಪುತ್ರ ಶಬರೀಶ್ (20) ಮೃತಪಟ್ಟ ಯುವಕ. ಟ್ರಕ್ ಬೈಕ್‌ಗೆ ಢಿಕ್ಕಿ ಹೊಡೆದು, ಗಂಭೀರ ಗಾಯಗೊಂಡ ವ್ಯಕ್ತಿಯ ಸ್ಥಳೀಯರು ಮಣಿಪಾಲ ಆಸ್ಪ್ರತ್ರೆಗೆ ಸಾಗಿಸಲು ಪ್ರಯತ್ನ ನಡೆಸಿದ್ದು, ಶಬರೀಶ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಶಬರೀಶ್ ಮಣಿಪಾಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಈ ಅಪಘಾತ ನಡೆದಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕೊಡ್ಲಾಡಿ, ಅಂಪಾರು, ಗುಲ್ವಾಡಿ, ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 41 ಕಡೆ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಶಾಸಕ ಗೋಪಾಲ ಪೂಜಾರಿ ನೆರವೇರಿಸಿದರು. ಕೊಡ್ಲಾಡಿ ಹೊಲದಮನೆ ಸೇತುವೆ, ಅಂಪಾರು ಗ್ರಾ.ಪಂ ಮೂಡುಬಗೆ ಹೊಸಿಮನೆ ರಸ್ತೆ, ವಾಲ್ತೂರು ಕುಣಿಗದ್ದೆ ರಸ್ತೆ, ಶಾನ್ಕಟ್ಟು ಮೇಲ್‌ಬೆಟ್ಟು ರಸ್ತೆ, ಗೊರಟೆ ರಸ್ತೆ, ಜಿಗಾರು ರಸ್ತೆ, ಜಿಗಾರುಗುಡ್ಡೆ ರಸ್ತೆ, ಗುಡಿಬೆಟ್ಟು ನಂದಿಕೇಶ್ವರ ದೇವಸ್ಥಾನ ರಸ್ತೆ, ಮೇಲ್‌ಬೈಲು ರಸ್ತೆ, ಬಂಗ್ಲೆಗುಡ್ಡೆ ಮತ್ತು ಕಂಸಾಡಿ ರಸ್ತೆ, ತೆಂಕಬೆಟ್ಟು ಕುಂಬಾರಬೆಟ್ಟು ರಸ್ತೆ, ಗುಲ್ವಾಡಿ ಗ್ರಾ.ಪಂ ಸೌಕೂರು ಚಿಕ್ಕಪೇಟೆ ರಸ್ತೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ, ಕಂಬಳಗದ್ದೆ ರಸ್ತೆ, ಕಾವ್ರಾಡಿ ಗ್ರಾ.ಪಂ ನೆಲ್ಲಿಕಟ್ಟೆ ಕೂಡು ರಸ್ತೆ, ಸಾರ್ಕಲ್ ರಸ್ತೆ, ಬ್ರಹ್ಮಲಿಂಗೇಶ್ವರ ದೇವಸ್ಥಾನ ರಸ್ತೆ, ಕಲ್ಲರಬೈಲು ರಸ್ತೆ, ಮುಳ್ಳುಗುಡ್ಡೆ ಪ.ಜಾತಿ ಕಾಲನಿ ರಸ್ತೆ, ಕಂಡ್ಲೂರು ಸೌಕೂರು ರಸ್ತೆ, ಕರ್ಕುಂಜೆ ಗ್ರಾಮದ ಕೊಲ್ಲೂರು ಮುಖ್ಯರಸ್ತೆಯಿಂದ ಕೊರಬೈಲು ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮರ್ಥ್ಯವಿದ್ದರೆ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಇದನ್ನು ಮೈಗೂಡಿಸಿಕೊಂಡರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಸಮಾಜ ಭ್ರಷ್ಟಾಚಾರದಿಂದ ಕೂಡಿದೆ ಎಂದು ದೂಷಿಸುವ ಮೊದಲು ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ತಮ್ಮ ತಮ್ಮ ಕೊಡುಗೆ ಅಗತ್ಯ ಇದೆ ಎಂದು ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಉಪಾಧೀಕ್ಷಕ ದಿನಕರ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು, ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಉಡುಪಿ, ಸರಕಾರಿ ಪದವಿಪೂರ್ವ ಕಾಲೇಜು ಬೈಂದೂರು ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜರುಗಿದ ’ನನ್ನ ನೋಟ ಭ್ರಷ್ಟಾಚಾರ ಮುಕ್ತ ಭಾರತದತ್ತ’ ಭೃಷ್ಟಾಚಾರ ಜಾಗೃತಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾನೂನುಬದ್ಧ ಹಾಗೂ ನ್ಯಾಯಬದ್ಧವಾಗಿ ಸರಕಾರಿ ನೌಕರರು ಪಡೆಯುವ ಸಂಬಳದ ಹೊರತಾಗಿ ಬೇರೆ ಯಾವುದೇ ಸ್ವರೂಪದಲ್ಲಿ ಗಳಿಸುವ ಪ್ರತಿಯೊಂದೂ ಭ್ರಷ್ಟಾಚಾರದ ಭಾಗವೇ ಆಗಿದೆ. ಭ್ರಷ್ಟಾಚಾರದಿಂದ ಜನಸಾಮಾನ್ಯರಿಗೆ ಅನ್ಯಾಯವಾದರೆ ಅದನ್ನು ವಿರೋಧಿಸುವ, ಪ್ರತಿಭಟಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನ.೩ ರಿಂದ ೫ರ ತನಕ ನಡೆಯಲಿರುವ ಪ್ರಸಿದ್ಧ ಹಂಪಿ ರಾಷ್ಟ್ರೀಯ ಉತ್ಸವ ೨೦೧೭ರಲ್ಲಿ ಬೈಂದೂರಿನ ಹೆಮ್ಮೆಯ ರಂಗ ಕಲಾಸಂಸ್ಥೆ ’ರಂಗ ಸುರಭಿ’ ತಂಡದ ನಾಟಕ ಪ್ರದರ್ಶನಗೊಳ್ಳಲಿದೆ. ನ.೫ರ ಭಾನುವಾರ ಸಂಜೆ ಹಂಪಿ ಸಾಂಸ್ಕೃತಿಕ ಉತ್ಸವದಲ್ಲಿ ಕಡಲೆಕಾಳು ಗಣಪ ವೇದಿಕೆಯಲ್ಲಿ ಖ್ಯಾತ ನಾಟಕಕಾರ ರಾಜೇಂದ್ರ ಕಾರಂತ್ ಅವರು ರಚಿಸಿ, ಯೋಗೀಶ್ ಬಂಕೇಶ್ವರ ಅವರು ನಿರ್ದೇಶಿಸಿರುವ ’ಪಿಸುಣಾರಿ ಪ್ರೇಮ ಪ್ರಕರಣ’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ನಾಗೇಂದ್ರ ಬಂಕೇಶ್ವರ್ ನೃತ್ಯ ಸಂಯೋಜನೆ, ಚಂದ್ರ ಬಂಕೇಶ್ವರ ಅವರ ಸಂಗೀತ ಸಂಯೋಜನೆ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯ ವಸತಿ ಸಚಿವ ಕೃಷ್ಣಪ್ಪ ಪತ್ನಿ ಸಹಿತಿ ಮದ್ಯಾಹ್ನ ಕೊಲ್ಲೂರು ಶ್ರೀ ಮಾಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು, ವಿಶೇಷ ಪೂಜೆಸಲ್ಲಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಸಹಾಯಕ ಕಾರ‍್ಯನಿರ್ವಹಣಾಧಿಕಾರಿ ಕೃಷ್ಣ ಮೂರ್ತಿ ಹಾಗೂ ಕೊಲ್ಲೂರು ದೇವಸ್ಥಾನ ವ್ಯಸವ್ಥಾಪನಾ ಸಮಿತಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು ಸಚಿವರ ಸ್ವಾಗತಿಸಿ, ದೇವಸ್ಥಾನ ವಿತಿಯಿಂದ ಗೌರವಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಪೊಲೀಸ್ ಸಾರ್ವಜನಕರೊಡಗೂಡಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಮಂಗಳವಾರ ’ಏಕತೆಗಾಗಿ ಓಟ’ ಹಮ್ಮಿಕೊಂಡಿದ್ದರು. ಓಟದ ಆರಂಭದಲ್ಲಿ ಮಾತನಾಡಿದ ಎಸ್‌ಐ ಬಿ. ಸುಬ್ಬಣ್ಣ ಅಕ್ಟೋಬರ್ ೩೧ ಸ್ವತಂತ್ರ ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನ. ನೂರಾರು ಆಳರಸರ ನಡುವೆ ಹರಿಹಂಚಿಹೋಗಿದ್ದ ಭಾರತವನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದ ಹೈದರಾಬಾದ್ ನಿಜಾಮರ ವಿರುದ್ಧ ಪೊಲೀಸ್ ಕಾರ್ಯಾಚರಣೆ ಆದೇಶಿಸಿ ಹೈದರಾಬಾದ್ ಸಂಸ್ಥಾನವನ್ನೂ ಅವರು ಮಣಿಸಿದ್ದರು. ದೇಶದ ಸಮಗ್ರತೆ ಮತ್ತು ಏಕತೆಗೆ ಅವರ ಸಮಯೋಚಿತ ಮತ್ತು ದಿಟ್ಟ ನಿರ್ಧಾರಗಳು ನಿರ್ಣಾಯಕವೆನಿಸಿದ್ದುವು. ಜಿಲ್ಲಾ ಪೊಲೀಸ್ ವರಿಷ್ಠ ಡಾ. ಸಂಜೀವ್ ಪಾಟೀಲ್ ಅವರ ನಿರ್ದೇಶನದಂತೆ ಪಟೇಲರ ಜನ್ಮದಿನದಂದು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದರ ಜತೆಗೆ ಇಂದಿನ ಜನ ಸಮುದಾಯಕ್ಕೆ ಅದರ ಮಹತ್ವವನ್ನು ಸಾರುವ ಉದ್ದೇಶದಿಂದ ಏಕತೆಗಾಗಿ ಓಟ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಚ್ಚು ಓದಿಕೊಂಡಿಲ್ಲ.. ಕುಲಕಸಬು ಮರಗೆಲಸ.. ಮಾಡುತ್ತಿರುವುದು ಸೆಂಟರಿಂಗ್ ಕೆಲಸ. ಇಷ್ಟೆಲ್ಲಾ ಇದ್ದರೂ ಯುವಕನ ಹೃದಯ ಕನ್ನಡ ಮನಸ್ಸು. ಸಾಹಿತ್ಯ! ಕನ್ನಡ ರಾಜ್ಯೋತ್ಸವದಂದು ಯುವಕ ನಾಡು ನಡಿಯ ಸಂದೇಶ ಹೊತ್ತು ಪಾದಯಾತ್ರೆ ಮೂಲಕ ಹೊರಟಿದ್ದು ಕುಂದಾಪುರದ ಕಡೆ. ಬೆಳಗ್ಗೆ ೭.೩೦ಕ್ಕೆ ಆರಂಭವಾದ ಕಾಲು ನಡಿಗೆ ಸಂಜೆ ೫ಕ್ಕೆ ಕುಂದಾಪುರಕ್ಕೆ ಬರುವ ಮೂಲಕ ಮುಕ್ತಾಯ. ಉಡುಪಿ ಕುಂದಾಪುರ ನಡುವಿನ ಕನ್ನಡ ಮನಸ್ಸುಗಳು ಮಾತನಾಡಿಸಿದ್ದಾರೆ. ಬೆನ್ನುತಟ್ಟಿ, ಪ್ರೋತ್ಸಾಹಿಸಿ ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಯುವಕನ ಹೆಸರು ಶಿರೂರು ತಾರಾನಾಥ ಮೇಸ್ತ. ಬೈಂದೂರು ವಿಧಾನ ಸಭಾ ಕ್ಷೇತ್ರ ಶಿರೂರು ನಿತ್ಯಾನಂದ ನಗರ ನಿವಾಸಿ ಜನಾರ್ದನ ಮೇಸ್ತ ಹಾಗೂ ಶಾರದಾ ಮೇಸ್ತ ಮೂವರು ಮಕ್ಕಳಲ್ಲಿ ತಾರಾನಾಥ ಮೇಸ್ತ ಮೊದಲಿಗರು. ಒಬ್ಬ ತಮ್ಮ ಮತ್ತೊಬ್ಬಳಿ ತಂಗಿ ಇದ್ದು, ಮರಗೆಲಸ ಕುಲ ಕಸುಬಾಗಿದ್ದು, ಉಡುಪಿ ಪರಿಸರದಲ್ಲಿ ತಾರಾನಾಥ ಮೇಸ್ತ ಸೆಂಟರಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದರೂ, ಇವರ ಆಸಕ್ತಿ ಕನ್ನಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನುಷ್ಯ ಒಬ್ಬ ಸಾಮಾಜಿಕ ಪ್ರಾಣಿ. ಆತನಿಗೆ ಸಮಾಜದೊಂದಿಗೆ ಅವಿನಾಭಾವ ಸಂಬಂಧವಿದೆ. ಆತನ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಅಗತ್ಯ. ಶಿಕ್ಷಣ ಪದ್ಧತಿ ಕಾಲದಿಂದ ಕಾಲಕ್ಕೆ ಬದಲಾಗಬೇಕಿದೆ. ಇಂತಹ ಬದಲಾವಣಿಯಲ್ಲಿ ಪೋಷಕರ ಪಾತ್ರ ಹಿರಿದು ಎಂದು ಕುಂದಾಪುರ ಶಿಕ್ಷಣ ಇಲಾಖೆಯ ಪ್ರಭಾರ ಕ್ಷೇತ್ರ ಸಮನ್ವ್ಯಾಧಿಕಾರಿ ಸದಾನಂದ ಬೈಂದೂರ್ ಹೇಳಿದರು.ಅವರು ಕೋಟೇಶ್ವರ ರೋಟರಿ ಕ್ಲಬ್ ಆಯೋಜಿಸಿದ್ದ ‘ಶಿಕ್ಷಣ ಏಕೆ?’ ಎಂಬ ವಿಷಯದ ಮೇಲೆ ಮಾತನ್ನಾಡಿದರು.ರೋಟರಿ ಅಧ್ಯಕ್ಷ ಪ್ರಕಾಶ್ ಆಚಾರ್ ಅಧ್ಯಕ್ಷೆತವಹಿಸಿದ್ದರು.ಕಾರ್ಯದರ್ಶಿ ಸತಿಹೀಶ್ ಆಚಾರ್ ಸ್ವಾಗತಿಸಿದರು,ಪ್ರಾದ್ಯಾಪಕ ಕೃಷಮೂರ್ತಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕದಂ ರೂವಾರಿ ಎಲಿಗೆಂಟ್ ಗ್ರೂಪ್ ಕಂಪೆನಿಯ ಆಡಳಿತ ನಿರ್ಧೇಶಕರಾದ ದಿನೇಶ್ ದೇವಾಡಿಗ ನಾಗೂರೂ ಇವರ ನೇತ್ರತ್ವದಲ್ಲಿ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು. ರಾಮಚಂದ್ರ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.ಕದಂ ದುಬೈ ಮಹಿಳಾ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರವಿ ದೇವಾಡಿಗ ನಾಗೂರೂ ಸಂದೇಶ ವಾಚನಗೈದರು. ಸಭೆಯಲ್ಲಿ ದೇವಾಡಿಗ ಸಂಘ ಮುಂಬೈನ ಅಧ್ಯಕ್ಷರಾದ ರವಿ ಎಸ್ ದೇವಾಡಿಗ,ವಿಮರ್ಶಕ ಶ್ರಮಿಕ ಸಂಘಟಕ ವಾಗ್ಮಿಯಾದ ಹಿರಿಯಡ್ಕ ಮೋಹನ್ ದಾಸ್,ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಂಬಿಕಾ ರಾಜು ದೇವಾಡಿಗ ತ್ರಾಸಿ,ಮೊದಲಾದವರನ್ನು ಅಬಿನಂದಿಸಲಾಯಿತು.ಮನುಕುಲದ ಶ್ರೇಷ್ಠ ದೇವಾಡಿಗ ಸಾಧಕ ಪ್ರಶಸ್ತಿಯನ್ನು ಜಿಲ್ಲಾಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಇವರಿಗೆ ನೀಡಲಾಯಿತು.ಕದಂ ವಾರ್ಷಿಕ ವರದಿಯನ್ನು ಕದಂ ಸದಸ್ಯ ವಾಸು ದೇವಾಡಿಗ ಮಂಡಿಸಿದರು.ಸಭೆಗೆ ಆಗಮಿಸಿದ ಸಭಿಕರಿಗೆ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರವನ್ನು ಸದಸ್ಯ ಶ್ರೀಧರ್ ದೇವಾಡಿಗ ಮತ್ತು…
