ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕೊಡ್ಲಾಡಿ, ಅಂಪಾರು, ಗುಲ್ವಾಡಿ, ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 41 ಕಡೆ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಶಾಸಕ ಗೋಪಾಲ ಪೂಜಾರಿ ನೆರವೇರಿಸಿದರು.
ಕೊಡ್ಲಾಡಿ ಹೊಲದಮನೆ ಸೇತುವೆ, ಅಂಪಾರು ಗ್ರಾ.ಪಂ ಮೂಡುಬಗೆ ಹೊಸಿಮನೆ ರಸ್ತೆ, ವಾಲ್ತೂರು ಕುಣಿಗದ್ದೆ ರಸ್ತೆ, ಶಾನ್ಕಟ್ಟು ಮೇಲ್‌ಬೆಟ್ಟು ರಸ್ತೆ, ಗೊರಟೆ ರಸ್ತೆ, ಜಿಗಾರು ರಸ್ತೆ, ಜಿಗಾರುಗುಡ್ಡೆ ರಸ್ತೆ, ಗುಡಿಬೆಟ್ಟು ನಂದಿಕೇಶ್ವರ ದೇವಸ್ಥಾನ ರಸ್ತೆ, ಮೇಲ್‌ಬೈಲು ರಸ್ತೆ, ಬಂಗ್ಲೆಗುಡ್ಡೆ ಮತ್ತು ಕಂಸಾಡಿ ರಸ್ತೆ, ತೆಂಕಬೆಟ್ಟು ಕುಂಬಾರಬೆಟ್ಟು ರಸ್ತೆ, ಗುಲ್ವಾಡಿ ಗ್ರಾ.ಪಂ ಸೌಕೂರು ಚಿಕ್ಕಪೇಟೆ ರಸ್ತೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ, ಕಂಬಳಗದ್ದೆ ರಸ್ತೆ, ಕಾವ್ರಾಡಿ ಗ್ರಾ.ಪಂ ನೆಲ್ಲಿಕಟ್ಟೆ ಕೂಡು ರಸ್ತೆ, ಸಾರ್ಕಲ್ ರಸ್ತೆ, ಬ್ರಹ್ಮಲಿಂಗೇಶ್ವರ ದೇವಸ್ಥಾನ ರಸ್ತೆ, ಕಲ್ಲರಬೈಲು ರಸ್ತೆ, ಮುಳ್ಳುಗುಡ್ಡೆ ಪ.ಜಾತಿ ಕಾಲನಿ ರಸ್ತೆ, ಕಂಡ್ಲೂರು ಸೌಕೂರು ರಸ್ತೆ, ಕರ್ಕುಂಜೆ ಗ್ರಾಮದ ಕೊಲ್ಲೂರು ಮುಖ್ಯರಸ್ತೆಯಿಂದ ಕೊರಬೈಲು ಮೂಲಕ ಆಜ್ರಿ ರಸ್ತೆಗೆ ಸಂಪರ್ಕ ರಸ್ತೆ, ಮಾವಿನಕಟ್ಟೆ ರಸ್ತೆ, ಜೆಡ್ಡಿನಕೊಡ್ಲು ರಸ್ತೆ, ಕೌಜೂರು ರಸ್ತೆ, ಹಿಲ್ಕೋಡು ರಸ್ತೆ, ಹಳ್ನಾಡು ಗ್ರಾ.ಪಂ ಮಹಾಗಣಪತಿ ದೇವಸ್ಥಾನ ರಸ್ತೆ, ಮುಳ್ಳುಗುಡ್ಡೆ ಹಳ್ನಾಡು ರಸ್ತೆ, ಮೇರ್ಡರ ಮನೆಗೆ ತೆರಳುವ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಕೆ. ಗೋಪಾಲ ಪೂಜಾರಿ ಅವರು ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಆದ್ಯತೆಗನುಸಾರ ರಸ್ತೆ ಹಾಗೂ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆತಿದ್ದು, ನೂರಾರು ಕಾಮಗಾರಿಗಳು ನಡೆದಿವೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮಿಸಿದ್ದು, ಜನರು ಇದನ್ನು ನೆನಪಿಡುತ್ತಾರೆ ಎಂಬ ಭರವಸೆ ಇದೆ ಎಂದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಜ್ಯೋತಿ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯರಾದ ಅಂಬಿಕಾ, ಸತೀಶ್, ಮಾಜಿ ತಾಪಂ ಸದಸ್ಯ ಪ್ರದೀಪ್‌ಕುಮಾರ್ ಶೆಟ್ಟಿ ಹಾಗೂ ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.