ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಗಂಗೊಳ್ಳಿ ಸುಗ್ಗಿಬೈಲು ಸಂಪೆಕಟ್ಟೆ ನಿವಾಸಿ ರಾಧಾ ಅವರ ಶಸ್ತ್ರ ಚಿಕಿತ್ಸೆಗಾಗಿ ಗಂಗೊಳ್ಳಿಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ ಸಂಘದ ಸದಸ್ಯರು ೨೫ ಸಾವಿರ ರೂ.ಗಳನ್ನು ನೀಡಿದ್ದಾರೆ. ಗಂಗೊಳ್ಳಿಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಹಕಾರಿ ಸಂಘದ ವಠಾರದಲ್ಲಿ ಗುರುವಾರ ಜರಗಿದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ ಸಂಘದ ಸದಸ್ಯರು ಸಂಗ್ರಹಿಸಿ ೨೫ ಸಾವಿರ ರೂ.ಗಳ ಚೆಕ್‌ನ್ನು ಸಂಘದ ಅಧ್ಯಕ್ಷೆ ಲಲಿತಾ ದುರ್ಗರಾಜ್ ಪೂಜಾರಿ ಅವರು ರಾಧಾ ಅವರ ಸಂಬಂಧಿ ಗಿರಿಜಾ ಅವರಿಗೆ ಗುರುವಾರ ಹಸ್ತಾಂತರಿಸಿದರು. ಸಂಘದ ಉಪಾಧ್ಯಕ್ಷೆ ಗೌರಿ ಅಣ್ಣಪ್ಪ ಬಿಲ್ಲವ, ಕಾರ್ಯದರ್ಶಿ ಸುಶೀಲಾ ನಾರಾಯಣ ಪೂಜಾರಿ, ಸದಸ್ಯರಾದ ಲೀಲಾವತಿ ಎಸ್.ಜತ್ತನ್, ಲಲಿತಾ ವಿಶ್ವೇಶ್ವರ, ಶೋಭಾ ಕೃಷ್ಣ, ವಸಂತಿ ಎಂ.ಕುಂದರ್, ರತ್ನಾವತಿ ಪೂಜಾರಿ, ಶಾರದಾ ಪೂಜಾರಿ, ಉಷಾ ಪೂಜಾರಿ, ಸುಜಾತಾ ವಿಶ್ವಕಿರಣ್, ಗಂಗೊಳ್ಳಿ ಗ್ರಾಪಂ ಸದಸ್ಯ ದುರ್ಗರಾಜ್ ಪೂಜಾರಿ, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಬೈಂದೂರಿನ ಪ್ರತಿಷ್ಠಿತ ಕಲಾ ತಂಡ ‘ಲಾವಣ್ಯ ರಿ. ಬೈಂದೂರು’ ಪ್ರಸ್ತುತಿಯ ಹಾಸ್ಯಮಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನವೆಂಬರ್ 4 ಶನಿವಾರ ಸಂಜೆ 5 .೦೦ ಗಂಟೆಗೆ ಬೆಂಗಳೂರು ಬಸವನಗುಡಿಯ ‘ಬೆಂಗಳೂರು ಗಾಯನ ಸಮಾಜ’ದಲ್ಲಿ ಪ್ರದರ್ಶನಗೊಳ್ಳಲಿದೆ. ಬೆಂಗಳೂರು ದೇವಾಡಿಗ ನವೋದಯ ಸಂಘವು ವಿದ್ಯಾನಿಧಿ ಸಹಾಯಾರ್ಥ ನಾಟಕ ಪ್ರದರ್ಶನ ಆಯೋಜಿಸಿದೆ. ದೇವಾಡಿಗ ಸಮುದಾಯದ ಅರ್ಹ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ “ವಿದ್ಯಾ ನಿಧಿ” ಸಂಗ್ರಹಿಸಲು ಸಂಕಲ್ಪ ಮಾಡಿದ್ದು ಈ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುವಂತೆ ವಿದ್ಯಾನಿಧಿಯನ್ನು ಕಲಾಸಕ್ತರಿಂದ ಸಂಗ್ರಹಿಸಲಾಗುತ್ತಿದೆ. ಟಿಕೆಟ್ ಧರ: ಸಾಮಾನ್ಯ ಪ್ರವೇಶ: 250 ರೂಪಾಯಿ (ಒಬ್ಬರಿಗೆ ಪ್ರವೇಶ ) ಗೌರವ ಪ್ರವೇಶ: 1000 ರೂಪಾಯಿ (ಇಬ್ಬರಿಗೆ ಪ್ರವೇಶ )
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಐಪಿಲ್ ಕ್ರಿಕೆಟ್ ಪಂದ್ಯಾಟದ ಮಾದರಿಯಲ್ಲಿ ಕೋಟೇಶ್ವರ ಜಿಎಸ್‌ಬಿ ಸಮಾಜದ ೧೯ ವರ್ಷದ ಒಳಗಿನ ಯುವಕರಿಗಾಗಿ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆದಿತ್ಯವಾರ ಅ ೮ ರಂದು ನಡೆಯಿತು. ಪ್ರಥಮ ಸ್ಥಾನವನ್ನು ಕೊಂಕಣ್ ಸ್ಮಾಶರ್ಸ್ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಮಹಾಮ್ಮಾಯ ಕ್ರಿಕೆಟರ್ಸ್ ಗಳಿಸಿತು. ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕಾರ್ತಿಕ್ ಕಾಮತ್, ಉತ್ತಮ ದಾಂಡಿಗ ಸಂದೀಪ ನಾಯಕ್, ಸೂಪರ್ ಸಿಕ್ಸ್ ಸಂದೀಪ ನಾಯಕ್, ಉತ್ತಮ ಎಸೆತಗಾರ ಕಾರ್ತಿಕ್ ಕಾಮತ್, ಸರಣಿ ಶ್ರೇಷ್ಟ ಶ್ರೀಶ ಕಾಮತ್ ಹಾಗೂ ಉದಯೋನ್ಮುಕ ಕಿರಿಯ ಆಟಗಾರ ಪ್ರಶಸ್ತಿಯನ್ನು ಶೇಷಗಿರಿ ಕಾಮತ್ ಪಡೆದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷರಾದ ಶಂಕರ ಕಾಮತ್ ವಿಜೇತ ತಂಡಕ್ಕೆ ಪ್ರಶಸ್ತಿ ನೀಡಿದರು. ನಂತರ ಮಾತನಾಡುತ್ತಾ ಕ್ರಿಕಟ್‌ನ ಮೈದಾನದಲ್ಲಿ ತೋರಿದ ಉತ್ಸಾಹವನ್ನು ಶಿಕ್ಷಣದಲ್ಲಿಯೂ ತೋರ್ಪಡಿಸಿ ಉತ್ತಮ ಅಂಕಗಳನ್ನು ಗಳಿಸಿ ಪೋಷಕರಿಗೆ, ಸಮಾಜಕ್ಕೆ ಕೀರ್ತಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ಜಂಟಿ ಆಶ್ರಯದಲ್ಲಿ ಉಪ್ಪುಂದ ಮತ್ತು ಬಿಜೂರು ಗ್ರಾಮಗಳ ಬಡನಿವೇಶನ ರಹಿತರಿಂದ – ನಿವೇಶನ ಸ್ಥಳ ಮಂಜೂರು ಮಾಡುವುದಕ್ಕೆ ಒತ್ತಾಯಿಸಿ ಸಾಮೂಹಿಕವಾಗಿ ಅರ್ಜಿ ಸ್ವೀಕಾರ ಕಾರ್ಯಕ್ರಮ ಕಾಸನಾಡಿ ಜಟ್ಟಿಗೇಶ್ವರ ದೈವಸ್ಥಾನದ ವಠಾರದಲ್ಲಿ ಜರಗಿತು. ಉಪ್ಪುಂದ ಮತ್ತು ಬಿಜೂರು ಗ್ರಾಮಗಳ ಬಡನಿವೇಶನ ರಹಿತರಿಂದ ಅರ್ಜಿಗಳನ್ನು ಹೋರಾಟ ಸಮಿತಿಗಳ ಮುಖಂಡರಾದ ಮಾಧವ ದೇವಾಡಿಗ, ಶ್ರೀಧರ ಉಪ್ಪುಂದ ಇವರು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಪ್ರಸ್ತಾವಿಕರಾಗಿ ಮಾತನಾಡುತ್ತಾ ಅರ್ಜಿದಾರರನ್ನು ಸ್ವಾಗತಿಸಿದರು. ಹೋರಾಟ ಸಮಿತಿಯ ಮುಖಂಡರಾದ ಚಂದ್ರ ಉಪ್ಪುಂದ, ಅಮ್ಮಯ್ಯ ಪೂಜಾರಿ ಬಿಜೂರು, ಮಂಜುನಾಥ ಶೇರುಗಾರ ಮುಡೂರ ಪೂಜಾರಿ, ಸತೀಶ ಬಿಜೂರು, ಬಾಬು ಕೆ. ದೇವಾಡಿಗ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೀನು ಕ್ಷಾಮದಿಂದ ಮೀನುಗಾರಿಕಾ ವೃತ್ತ್ತಿ ಮಾಡುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದು, ಮೀನಿನ ಮರಿ-ಮೊಟ್ಟೆಗಳ ಸಂತತಿ ನಾಶ, ಮೀನುಗಾರಿಕಾ ನೀತಿ ಕಟ್ಟುನಿಟ್ಟಾಗಿ ಅನುಸರಿಸದೇ ಇರುವುದು ಮೀನು ಕ್ಷಾಮಕ್ಕೆ ಕಾರಣ. ಮೀನುಗಾರರು ಸರ್ಕಾರದ ನಿಯಮ ಸ್ಪಷ್ಟ ಪಾಲಿಸಬೇಕು. ದೇಶದಲ್ಲಿ ಏಕರೂಪ ಮೀನುಗಾರಿಕಾ ನೀತಿಯಿಂದ ಸಮಸ್ಯೆ ಪರಿಹಾರ ಸಾಧ್ಯವಿದ್ದು, ಒಂದೇ ನೀತಿ ಜಾರಿಗೆ ಬರಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕಾ ಇಲಾಖೆ ಆಶ್ರಯದಲ್ಲಿ ಕುಂದಾಪುರ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಮೀನುಗಾರಿಕಾ ನೀಲಿ ಕ್ರಾಂತಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದಲ್ಲಿ ಒಂದೇ ಮೀನುಗಾರಿಕಾ ನೀತಿ ಅಳವಡಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಅಹವಾಲು ಸಲ್ಲಿಸಿದೆ ಎಂದ ಅವರು, ಮೀನುಗಾರಿಕಾ ಸಮಸ್ಯೆ ಬಗ್ಗೆ ಮುಕ್ತ ಚರ್ಚೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ವಿಚಾರ ಸಂಕಿರಣಗಳು ವೇದಿಕೆ ಆಗಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯತು ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಹೊಳಪು ಕಾರ್ಯಕ್ರಮದ ಅಡಿ ಬರಹವೇ ಸಬಲೀಕರಣದತ್ತ ದಿಟ್ಟ ಹೆಜ್ಜೆ ಎನ್ನುವುದಾಗಿದೆ. ಕಾರ್ಯಕ್ರಮದ ಒಟ್ಟು ಉದ್ದೇಶ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವವರಿಗೆ ಒಗ್ಗಟ್ಟಿನಲ್ಲಿರುವ ಶಕ್ತಿ ತಿಳಿಸಿಕೊಡುವುದಾಗಿದೆ. ಪ್ರತಿ ಗ್ರಾಮ ಪಂಚಾಯತ್‌ಗಳಿಗೂ ಮುಂದಿನ ದಿನಗಳಲ್ಲಿ ಇನ್ನಷು ಪೂರಕ ವ್ಯವಸ್ಥೆಗಳು ಸಿಗಬೇಕು ಗ್ರಾಮ ಪಂಚಾಯತ್ ಅನುದಾನದ ಕೊರತೆಗೆ ಬೀಳಬಾರದು ಎನ್ನುವುದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಸಾಂಸ್ಕೃತಿಕ ಸ್ಪರ್ಧೆ ಹೊಳಪು ೨೦೧೭ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ, ಗ್ರಾಮ ಪಂಚಾಯತ್ ಕುರಿತು ಅತೀ ಹೆಚ್ಚು ಒತ್ತು ನೀಡಿದ ಹಿಂದಿನ ಮಂತ್ರಿ ಅಬ್ದಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಕ್ತ ಸಾಲಿನಲ್ಲಿ ಎಸ್‌ಸಿಬಿಎ ಸಂಸ್ಥೆಯಿಂದ ಪ್ರತಿಷ್ಠಿತ ಬೆಸ್ಟ್ ಚೇರ್‌ಮೆನ್ ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಕುಂದಾಪುರ ತಾಲೂಕು ಸಹಕಾರಿ ಸಂಘಗಳ ಪರವಾಗಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಇಲ್ಲಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮಾಜಿ ಶಾಸಕ ಎ. ಜಿ. ಕೊಡ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ಧನ ಮರವಂತೆ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರುಗಳಾದ ಎಸ್. ರಾಜು ಪೂಜಾರಿ, ಬಿ. ರಘುರಾಮ ಶೆಟ್ಟಿ, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಸ್. ದಿನಕರ ಶೆಟ್ಟಿ, ಕುಂದಾಪುರ ತಾಲೂಕು ಸಹಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎಚ್. ರಾಜೀವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಕಳೆದ ವರ್ಷ ಸುರಿದ ಭೀಕರ ಮಳೆಗೆ ಉಪ್ಪುಂದ ಬಾಯಂಹಿತ್ಲು ನಿವಾಸಿ ನಾಗಮ್ಮ ಪೂಜಾರಿ ಇವರ ಮನೆ ಸಂಪೂರ್ಣ ಕುಸಿದಿದ್ದು, ಈ ನೆಲೆಯಲ್ಲಿ ಮನೆ ಕಳೆದುಕೊಂಡ ಇವರಿಗೆ ಜಿಲ್ಲಾ ಪಂಚಾಯತ್ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ದೊರೆತ ರೂ.೧೦,೦೦೦ ಮೊತ್ತದ ಚೆಕ್‌ನ್ನು ಸ್ಥಳೀಯ ಜಿಪಂ ಸುರೇಶ ಬಟ್ವಾಡಿ ಸಂತ್ರಸ್ಥೆಗೆ ಹಸ್ತಾಂತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖಾರ್ವಿ ಸಮಾಜದ ಆರಾಧ್ಯ ದೇವರು ಶ್ರೀ ಮಹಾಕಾಳಿ. ಸಂಕೀರ್ತನೆ, ಪೂಜೆ, ಆರಾಧನೆಯ ಮೂಲಕ ಭಕ್ತಿ ಜ್ಞಾನವನ್ನು ತುಂಬಿದ ಕೀರ್ತಿ ಇಲ್ಲಿಯದು. ಈ ಕೀರ್ತಿಗೆ ಇನ್ನೊಂದು ಗರಿ ಎಂಬಂತೆ ದೇವಳದ ಆವರಣದಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗವೊಂದು ಇಲ್ಲಿ ಸಂಘಟಿತಗೊಂಡು ಸಮಾಜಮುಖಿ ಕಾರ್ಯಗಳ ಮೂಲಕ ಒಗ್ಗಟ್ಟಿನ ಹಾದಿಯಲ್ಲಿ ದಾಪುಗಾಲಿಕ್ಕುತ್ತಾ ಮುನ್ನಡೆಯುತ್ತಿದೆ. ಭಕ್ತಿ ಜ್ಞಾನವನ್ನು ತುಂಬಿ ಖಾರ್ವಿ ಸಮಾಜವನ್ನು ಧಾರ್ಮಿಕವಾಗಿ ಉನ್ನತಿಯೆಡೆಗೆ ಕೊಂಡೊಯ್ಯುವುತ್ತಿರುವ ಕುಂದಾಪುರ ಖಾರ್ವಿಕೇರಿಯಲ್ಲಿನ ಶ್ರೀಮಹಾಕಾಳಿ ದೇಗುಲವು ತನ್ನ ಅಂಗಳದಲ್ಲಿ ಜ್ಞಾನ ಭಂಡಾರವನ್ನು ಹೊತ್ತಿರುವ ಜ್ಞಾನ ದೇಗುಲವನ್ನು ತೆರೆದು ಓದಿನ ಮೂಲಕ ಸುಜ್ಞಾನದ ಬೆಳಕನ್ನು ಪಸರಿಸುವ ಕಾರ್ಯದಲ್ಲಿ ಇದೀಗ ನಿರತವಾಗಿದೆ. ಇವರ ಇಂಗಿತಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ, ಸರ್ವಸುಸಜ್ಜಿತವಾದ ಗ್ರಂಥಾಲಯವನ್ನು ನಿರ್ಮಿಸಿಕೊಟ್ಟವರು ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್. ರೋಟರಿ ಸನ್‌ರೈಸ್‌ನ ಅಧ್ಯಕ್ಷರಾದ ಅಜಿತ್ ಕೆ ಅವರು ಸುಮಾರು ೧ ಲಕ್ಷ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ದೀರ್ಘಕಾಲ ಬಾಳಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮೂಹಿಕವಾದ ಮೃತ್ಯುಂಜಯ ಹೋಮ ಸೇರಿದಂತೆ ದೇವರ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಕೈಗೊಂಡಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಭಗವಂತನ ಪೂಜೆ ಫಲಪ್ರದವಾಗುತ್ತದೆ ಎಂಬುದಾಗಿ ಮಂಗಳೂರಿನ ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧೀಶೆ ಬ್ರಹ್ಮಚಾರಿಣಿ ಶ್ರೀ ಮಂಗಳಾಮೃತ ಚೈತನ್ಯ ನುಡಿದರು. ಅವರು ಹಂಗಳೂರಿನ ಅನಂತಪದ್ಮನಾಭ ಸಭಾಭವನದಲ್ಲಿ ನಡೆದ ಮಹಾ ಮೃತ್ಯುಂಜಯ ಹೋಮ ಸರ್ವೇಶ್ವರಿ ಪೂಜೆ ಇನ್ನಿತರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು. ಶ್ರೀ ಮಾತಾ ಅಮೃತಾನಂದಮಯಿ ಅಮ್ಮನವರ ೬೪ನೇ ಅವತರಣೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಮತಾಮಯಿಯಾದ ಅಮ್ಮನವರ ಅನುಗ್ರಹ ಸಮಾಜಕ್ಕೆ ದಾರಿದೀಪವಾಗಲೆಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಮಾತಾ ಅಮೃತಾನಂದಮಯಿ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದು “ದಿವ್ಯ ಶಕ್ತಿ”ಯಾದ ಅಮ್ಮನ ಕರುಣೆ ನಮಗೆಲ್ಲರಿಗು ಸದಾ ಬೇಕಾಗಿದೆ ಎಂಬುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಮಾತಾಮೃತಾನಂದಮಯಿ ಸಮಿತಿಯ ಮಾಜಿ ಅಧ್ಯಕ್ಷ ಡಾ ಸನತ್ ಹೆಗ್ಡೆ ಮಾತನಾಡಿ ಅಮ್ಮನ ಅವತರಣ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು…
