ಸಾಮೂಹಿಕ ಪೂಜೆಯಿಂದ ಫಲ ಪ್ರಾಪ್ತಿ: ಶ್ರೀ ಮಂಗಳಾಮೃತ ಚೈತನ್ಯ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮೂಹಿಕವಾದ ಮೃತ್ಯುಂಜಯ ಹೋಮ ಸೇರಿದಂತೆ ದೇವರ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಕೈಗೊಂಡಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಭಗವಂತನ ಪೂಜೆ ಫಲಪ್ರದವಾಗುತ್ತದೆ ಎಂಬುದಾಗಿ ಮಂಗಳೂರಿನ ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧೀಶೆ ಬ್ರಹ್ಮಚಾರಿಣಿ ಶ್ರೀ ಮಂಗಳಾಮೃತ ಚೈತನ್ಯ ನುಡಿದರು. ಅವರು ಹಂಗಳೂರಿನ ಅನಂತಪದ್ಮನಾಭ ಸಭಾಭವನದಲ್ಲಿ ನಡೆದ ಮಹಾ ಮೃತ್ಯುಂಜಯ ಹೋಮ ಸರ್ವೇಶ್ವರಿ ಪೂಜೆ ಇನ್ನಿತರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶೀವಚನ ನೀಡಿದರು. ಶ್ರೀ ಮಾತಾ ಅಮೃತಾನಂದಮಯಿ ಅಮ್ಮನವರ ೬೪ನೇ ಅವತರಣೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಮತಾಮಯಿಯಾದ ಅಮ್ಮನವರ ಅನುಗ್ರಹ ಸಮಾಜಕ್ಕೆ ದಾರಿದೀಪವಾಗಲೆಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಮಾತಾ ಅಮೃತಾನಂದಮಯಿ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದು “ದಿವ್ಯ ಶಕ್ತಿ”ಯಾದ ಅಮ್ಮನ ಕರುಣೆ ನಮಗೆಲ್ಲರಿಗು ಸದಾ ಬೇಕಾಗಿದೆ ಎಂಬುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಮಾತಾಮೃತಾನಂದಮಯಿ ಸಮಿತಿಯ ಮಾಜಿ ಅಧ್ಯಕ್ಷ ಡಾ ಸನತ್ ಹೆಗ್ಡೆ ಮಾತನಾಡಿ ಅಮ್ಮನ ಅವತರಣ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಸಂಕ್ಷಿಪ್ತವಾಗಿ ಸಭೆಗೆ ಪರಿಚಯಿಸಿದರು. ಮಾತಾ ಅಮೃತಾನಂದಮಯಿ ಸಮಿತಿಯ ಉಡುಪಿಯ ಅಧ್ಯಕ್ಷರಾದ ಡಾ ನಾಗರಾಜ ಪೂಜಾರಿ ಸಹನಾ ಸಮೂಹ ಸಂಸ್ಥೆಗಳ ಮಾಲಕ ಸುರೇಂದ್ರ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕಲ್ಪನಾ ಭಾಸ್ಕರ ಸ್ವಾಗತಿಸಿದರು. ಗೋಪಾಡಿ ಗ್ರ

Call us

Click Here

ಪಂ ಅಧ್ಯಕ್ಷೆ ಸರಸ್ವತಿ ಪುತ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ಮೊಗವೀರ ಹೆಮ್ಮಾಡಿ ವಂದಿಸಿದರು. ಪತ್ರಕರ್ತ ಡಾ ಸುಧಾಕರ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು. ಸಾಮೂಹಿಕ ಮೃತ್ಯುಂಜಯ ಹೋಮದಲ್ಲಿ ಸುಮಾರು ೮೦೦ಕ್ಕೂ ಅಧಿಕ ಮಂದಿ ಭಾಗವಹಿಸಿದರು

Leave a Reply