ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು/ಗಂಗೊಳ್ಳಿ : ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ರೋಟರಿ ಕ್ಲಬ್ ಬೈಂದೂರು ಸಹಕಾರದೊಂದಿಗೆ ಆಯೋಜಿಸಲಾದ ಪಲ್ಸ್ ಪೊಲೀಯೋ ಅಭಿಯಾನಕ್ಕೆ ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್. ರಾಜು ಪೂಜಾರಿ ಮಗುವಿಗೆ ಪೊಲೀಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಸಹಕಾರದೊಂದಿಗೆ ಜರಗಿದ ಪಲ್ಸ್ ಪೊಲೀಯೋ ಅಭಿಯಾನಕ್ಕೆ ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಚಾಲನೆ ನೀಡಿ ಮಾತನಾಡಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ನಾರಾಯಣ ಇ.ನಾಯ್ಕ್ ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನಾವುಂದ ಪಂಚಾಯತ್ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ನಾವುಂದ ಅಂಡರ್ಪಾಸ್ ಪರ ಮತ್ತು ವಿರೋಧದಿಂದ ಸಾಕಷ್ಟು ಗೊಂದಲ ಉಂಟಾಯಿತು.ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪನಿರೀಕ್ಷಕ ಬಿರ್ತಿರಾಜ್ 1 ಎಕರೆಗೆ 400 ಗಿಡಗಳನ್ನು ಅರಣ್ಯ ಇಲಾಖೆಯಿಂದ ನೀಡುವುದಾಗಿ ತಿಳಿಸಿದರು. ನಾವುಂದದಲ್ಲಿ ಡಿಪೋ ಮಾಡ ಬೇಕೆಂದು ಸಾರ್ವಜನಿಕರು ಆಗ್ರಹಿಸಿ ದರು. ಕಾರ್ಯಕ್ರಮದಲ್ಲಿ ಅರೆಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಹೇಮಲತಾ ಸಮಯೋಚಿತವಾಗಿ ಮಾತನಾಡಿದರು.ಮತ್ತು ನೋಡೆಲ್ ಅಧಿಕಾರಿ ಇಬ್ರಾಹಿಂ ಅವರು ಪ್ರಶ್ನೆಗಳಿಗೆ ಉತ್ತರಿಸಿದರು.ಗ್ರಾ.ಪಂ. ಅಧ್ಯಕ್ಷ ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ.ಡಿ, ತಾ.ಪಂ. ಸದಸ್ಯರಾದ ಮಹೇಂದ್ರ ಪೂಜಾರಿ, ಜಗದೀಶ ಪೂಜಾರಿ, ಪಶು ವೈದ್ಯ ಅರುಣ ಕುಮಾರ್, ಪಂ. ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಸ್ವಾಗತಿಸಿ, ರಾಜು ಪೂಜಾರಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ತಾಲೂಕು ಬಿದ್ಕಲ್ಕಟ್ಟೆ ಸಮೀಪದ ಮಂಡಳ್ಳಿ ಗರಡಿಮನೆಯ ಮೂಲ ನಾಗಬನದಲ್ಲಿ ಎ. 16ರಂದು ನಡೆಯುವ ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮವು ಪ್ರಧಾನ ಅರ್ಚಕ ಕಲ್ಕಟ್ಟೆ ಗೋಪಾಲಕೃಷ್ಣ ಅಡಿಗ ಅವರ ಮಾರ್ಗದರ್ಶನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಸುರೇಶ ಬಿ. ಶೆಟ್ಟಿ ಹೊಟೇಲ್ ಮರಾಠ ಥಾಣೆ, ಗರಡಿಮನೆ ಎಚ್. ಭಾಸ್ಕರ ಶೆಟ್ಟಿ, ಕುಟುಂಬದ ಹಿರಿಯರಾದ ಗರಡಿಮನೆ ನಾರಾಯಣ ಶೆಟ್ಟಿ ದಂಪತಿ, ಎಂ. ಗಣೇಶ ಶೆಟ್ಟಿ ಗರಡಿಮನೆ, ವೈ. ಮಂಜುನಾಥ ಶೆಟ್ಟಿ ಯಡಾಡಿ, ನ್ಯಾಯವಾದಿ ಭುಜಂಗ ಶೆಟ್ಟಿ ಗಾವಳಿ, ಶಂಕರ ಶೆಟ್ಟಿ ಬೆರ್ಮಕ್ಕಿ, ಚಂದ್ರಶೇಖರ ಶೆಟ್ಟಿ ಹೆಂಗವಳ್ಳಿ, ಸುಭಾಷ ಶೆಟ್ಟಿ ಗಿಳಿಯಾರು, ಸೀತಾರಾಮ ಶೆಟ್ಟಿ ಮಂಡಳ್ಳಿ, ವಿಶ್ವನಾಥ ಶೆಟ್ಟಿ ಮಂಡಳ್ಳಿ, ಶಿಕ್ಷಕ ರಾಜೀವ ಶೆಟ್ಟಿ ಹಾಡಿಮನೆ, ಚಂದ್ರಶೇಖರ ಶೆಟ್ಟಿ ಚೆನ್ನೆಜಡ್ಡು, ಗ್ರಾಮೀಣ ಬ್ಯಾಂಕ್ ಹಳ್ಳಾಡಿಯ ರಾಜೀವ ಶೆಟ್ಟಿ, ವಿಶ್ವನಾಥ ಶೆಟ್ಟಿ ಗರಡಿಮನೆ, ಬಾಲಚಂದ್ರ ಶೆಟ್ಟಿ ಬಸ್ರೂರು, ನರಸಿಂಹ ಶೆಟ್ಟಿ ಯಡಾಡಿ, ದೀನಪಾಲ್ ಶೆಟ್ಟಿ ಮೊಳಹಳ್ಳಿ, ಮೇರ್ಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಬಂದಿರುವ ನೂರಾರು ವಲಸೆ ಕಾರ್ಮಿಕರಿಗೆ ರಾತ್ರಿ ವೇಳೆಯಲ್ಲಿ ತಂಗಲು ಸೂಕ್ತ ವಸತಿ ಸೌಕರ್ಯ ಇಲ್ಲದೇ ಇರುವುದನ್ನು ಮನಗಂಡ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲಾಡಳಿತದ ನಿರ್ದೇಶನದಂತೆ ಕುಂದಾಪುರ ಪುರಸಭೆಯ ನೆರವಿನೊಂದಿಗೆ ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯವನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿದ್ದು, ಅಧಿಕಾರಿಗಳೊಂದಿಗೆ ಕುಂದಾಪುರದಲ್ಲಿ ಸೂಕ್ತ ಸ್ಥಳಪರಿಶೀಲನೆ ನಡೆಸಿದರು. ಹೊಸ ಬಸ್ಸು ನಿಲ್ದಾಣದಲ್ಲಿ ಪುರಸಭೆ ವಾಣಿಜ್ಯ ಸಂಕೀರ್ಣದ ಎರಡನೇ ಮಹಡಿಯಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕವಾಗಿ ರಾತ್ರಿ ಹೊತ್ತು ತಂಗಲು ವಸತಿ ನೀಡುವ ಬಗ್ಗೆ ವಿಶೇಷ ನೈಟ್ ಶಲ್ಟರ್ ನಿರ್ಮಿಸಲು ನಿರ್ಣಯಿಸದ ಬೆನ್ನಲ್ಲೇ ಕುಂದಾಪುರ ಉಪವಿಭಾಗಾಧಿಕಾರಗಳು ಇಲಾಖಾ ಅಧಿಕಾರಿಗಳೊಂದಿಗೆ ಈ ಸ್ಥಳವನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಇಲ್ಲಿ ಕಾರ್ಮಿಕರಿಗೆ ತಂಗಲು ಅವಕಾಶ ಮಾಡಿಕೊಡುವ ಬಗ್ಗೆ ಹಾಗೂ ಅವರಿಗೆ ಬೇಕಾಗುವ ಶೌಚಾಲಯ, ವಿದ್ಯುತ್ ಮೊದಲಾದ ಮೂಲ ಸೌಕರ್ಯವನ್ನು ಕಲ್ಪಿಸುವ ಕುರಿತು ಮಾತುಕತೆ ನಡೆಸಿದರು. ರಾತ್ರಿ ನೆಹರೂ ಮೈದಾನದ ಸಾಲಾ ಪರಿಸರದಲ್ಲಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಹಿಳಾ ಕೃಷಿ ಕೂಲಿಕಾರರ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಂದಾಪುರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಕುಂದಾಪುರ ಮಿನಿ ವಿಧಾನಸೌಧದ ಎದುರು ಪ್ರತಿಭಟನೆಯನ್ನು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಕುಂದಾಪುರ ಘಟಕದ ಅಧ್ಯಕ್ಷ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ಕೂಲಿ ಮತ್ತು ಲಿಂಗ ಅಮಾನತೆಯನ್ನು ಹೋಗ ಲಾಡಿಸಲು ಕ್ರಮ ತೆಗೆದುಕೊಳ್ಳಬೇಕು, ಕೃಷಿ ಕೂಲಿಕಾರರಿಗೆ ಪಿಂಚಣಿ ಮತ್ತು ಕಲ್ಯಾಣ ಮಂಡಳಿ ರಚನೆಯಾಗಬೇಕು, ಬ್ಯಾಂಕ್ ಸಾಲ ಮತ್ತು ಮಹಿಳಾ ಸಬಲೀಕರಣದ ಎಲ್ಲ ಸವಲತ್ತುಗಳನ್ನು ಮಹಿಳಾ ಕೂಲಿಕಾರರಿಗೆ ತಲುಪಿಸಲು ಕ್ರಮ ವಹಿಸಬೇಕು ಹೀಗೆ ಸುಮಾರು 33 ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಇಂದು ಬೇಡಿಕಾ ದಿನಾಚರಣೆಯನ್ನು ನಡೆ ಸುತ್ತಿದ್ದು ಈ ಬೇಡಿಕೆಗಳನ್ನು ತತ್ಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರತ್ನಾ ನಾಡ, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಅಖೀಲ ಭಾರತ…
ಕುಂದಾಪ್ರ ಡಾಟ್ ಕಾಂ ಸುದ್ದಿ ತೆಕ್ಕಟ್ಟೆ : ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಮೀಪ ಆ್ಯಂಬುಲೆನ್ಸ್ ಢಿಕ್ಕಿಯಾಗಿ ಪಾಏಚಾರಿ ಸಾವಿಗೀಡಾದ ಘಟನೆ ಶನಿವಾರ ರಾತ್ರಿ ಗಂಟೆ 7.20ರ ಸುಮಾರಿಗೆ ಸಂಭವಿಸಿದೆ. ಗುಳ್ವಾಡಿ ಹಂಚಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ಗುಳ್ವಾಡಿಯ ನಿವಾಸಿ ಬಾಬು ನಾಯ್ಕ (52) ಮೃತಪಟ್ಟವರು. ಗುಳ್ವಾಡಿ ಹಂಚಿನ ಕಾರ್ಖಾನೆಯಿಂದ ಕೆಲಸ ಮುಗಿಸಿ ತೆಕ್ಕಟ್ಟೆ ಪಟೇಲರ ಬೆಟ್ಟಿನಲ್ಲಿರುವ ಪತ್ನಿಯ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮಂಗಳೂರಿನಿಂದ ಕುಂದಾಪುರದ ಕಡೆಗೆ ಅತೀ ವೇಗದಿಂದ ತೆರಳುತ್ತಿದ್ದ 407 ಆ್ಯಂಬುಲೆನ್ಸ್ ವಾಹನ ನೇರವಾಗಿ ಬಂದು ಪಾದಚಾರಿಗೆ ಢಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಪಾದಚಾರಿಯ ತಲೆಯ ಭಾಗ ಸಂಪೂರ್ಣ ಛಿದ್ರಗೊಂಡಿದ್ದು ರಕ್ತದ ಮಡುವಿನಲ್ಲಿ ಆತ ಸ್ಥಳದಲ್ಲೇ ಸಾವಿಗೀಡಾದರು. ಹಲವು ವರ್ಷಗಳಿಂದಲೂ ಗುಳ್ವಾಡಿ ಹಂಚಿನ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಗುಳ್ವಾಡಿಯ ನಿವಾಸಿ ಬಾಬು ನಾಯ್ಕ ಅವರು ವಾರದ ಕೊನೆಯ ದಿನವಾದ ಶನಿವಾರ ಪತ್ನಿಯ ಮನೆಗೆ ತೆರಳುತ್ತಿದ್ದರು. ಅವರು ತನ್ನ ಹಿರಿಯ ಮಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸವದ ರಜೆಯ ಮೇಲೆ ತೆರಳಿದ್ದ ಕುಂದಾಪುರ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸೌಮ್ಯಾ ಹೆರಿಕುದ್ರು ಅವರನ್ನು ಗೈರು ಹಾಜರಿಯ ಕಾರಣಕ್ಕೆ ಸೇವೆಯಿಂದ ಅಮಾನತುಗೊಳಿಸಿದ ಘಟನೆ ನಡೆದಿದ್ದು, ತನಗೆ ನ್ಯಾಯ ಒದಗಿಸಿಕೊಡುವಂತೆ ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಿದ್ದಾರೆ. ಘಟನೆಯ ವಿವರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜುಲೈ 2016ರರಿಂದ 11 ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೌಮ್ಯ, ಏಳು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಜನವರಿ 31ರಂದು ಅವರಿಗೆ ಪೂರ್ವ ಪ್ರಸವ ವೇದನೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆ.6ರಂದು ಸಿಸೆರಿಯನ್ ಮೂಲಕ ಮಗುವಿಗೆ ಜನನ ನೀಡಿದ್ದರು. ಅವಧಿಪೂರ್ವ ಪ್ರಸವವಾಗಿದ್ದ ಕಾರಣ ಮಾಚ್ 2ರ ವರೆಗೂ ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಈತನ್ಮಧ್ಯೆ ಪತ್ನಿಯ ಅನಾರೋಗ್ಯದ ಬಗ್ಗೆ ಒಂದು ವಾರದ ಬಳಿಕ ಕಾಲೇಜು ಪ್ರಾಂಶುಪಾಲರಿಗೆ ದೂರವಾಣಿಯ ಮೂಲಕ ಅವರ ಪತಿ ಪ್ರದೀಪ್ ಶೆಟ್ಟಿ ಅವರು…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಐದು ತಲೆಮಾರು ಕಂಡ ಹಿರಿಯ ಜೀವಿ. ಶತಾಯುಷಿ ಅಜ್ಜಿ ಸವೆಸಿದ ಬದುಕಿನ ಹಾದಿಯಲ್ಲಿ ಸಿಹಿಗಿಂತ ಕಹಿಯೇ ಹೆಚ್ಚು. ಬ್ರಿಟಿಷರ ದರ್ಬಾರ್ ಹಾಗೂ ಪ್ರಜಾಪ್ರಭುತ್ವ ಆಡಳಿತದ ಪರಿಕಂಡಿದ್ದ ಪಣಿಯಜ್ಜಿ ವಯಸ್ಸು ನೂರೂ.. ಮತ್ತೆಂಟು ಒಟ್ಟಿಗೆ ನೂರಾಎಂಟು! ಕುಂದಾಪುರ ತಾಲೂಕು, ತೆಕ್ಕಟ್ಟೆ ಗ್ರಾಮ ಕಣ್ಣುಕೆರೆ ಸಮೀಪ ಕಾಡ್ತಿಮನೆ ನಿವಾಸಿ ಪಣಿಯಾ ಹೆಂಗಸಿಗೆ ಈಗ ಬರೋಬ್ಬರಿ ೧೦೮ ವರ್ಷ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಮಿಮ್ಮಕ್ಕಳ ಕೂಡಾ ಕಂಡಿದ್ದಾರೆ. ಮಿಮ್ಮಕ್ಕ ಮದುವೆಯನ್ನೂ ಕಂಡಿದ್ದಾರೆ. ಆದರೆ ಅವರ ಕನಸಿನ ಮನೆ ನೋಡುವ ಭಾಗ್ಯ ಅಜ್ಜಿಗೆ ಸಿಕ್ಕಿಲ್ಲ ಎಂಬುದು ಮಾತ್ರ ಜೆಡ್ಡುಗಟ್ಟಿದ ನಮ್ಮ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ವಯಸ್ಸಿನ ಲೆಕ್ಕಾಚಾರ ಹೇಗೆ : ಪಣಿಯ ಹೆಂಗಸಿನ ವಯಸ್ಸಿನ ಲೆಕ್ಕಾಚಾರಕ್ಕೆ ಜಾತಕ ಇಲ್ಲ. ಆದರೆ ವಯಸ್ಸಿನ ಲೆಕ್ಕಾಚಾರದಲ್ಲಿ ಮತ್ತೊಬ್ಬ ಮಹಿಳೆ ಜಾತಕ ಬರುತ್ತದೆ. ಪಣಿಯ ಹೆಂಗಸು ಹಾಗೂ ಚಾತ್ರಮನೆ ಸೀತಮ್ಮ ಸಮ ವಯಸ್ಕರು. ಪಣಿಯ ಹೆಂಗಸಿಗಿಂತ ಸೀತಮ್ಮ ಒಂದು ವರ್ಷದೊಡ್ಡವರಾಗಿದ್ದು, ಅವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜಮ್ಮುವಿನಲ್ಲಿ ಮಾರ್ಚ್ ೨೦ರಿಂದ ೨೪ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎಂ-೨ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಜಿ.ವಿ.ಅಶೋಕ್ ಅವರು ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಇವರು ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯ ಉದ್ಯೋಗಿಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಘ್ ಇದರ ಉದ್ಘಾಟನಾ ಸಮಾರಂಭ ಹಾಗೂ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶವು ಯುಎಐ ಬರ್ದುಬಾಯಿ ರೀಜೆಂಟ್ ಪ್ಯಾಲೇಸ್ ಹೋಟೆಲ್ನಲ್ಲಿ ಜರುಗಿತು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ನಮ್ಮ ಕುಂದಾಪ್ರ ಕನ್ನಡ ಬಳಗ ಸಂಘಟನೆಯನ್ನು ದೀಪ ಬೆಳಗಿ ಉದ್ಘಾಟಿಸಿದರು. ರಾಮೀ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ವರದರಾಜ ಶೆಟ್ಟಿ, ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಕ್ವಾಡಿ, ಚಿತ್ತಾರಿ ಗ್ರೂಫ್ ಆಫ್ ಕಂಪೆನಿ ಆಡಳಿತ ಪಾಲುದಾರ ಪಿ. ಸುಖಾನಂದ ಶೆಟ್ಟಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಉದ್ಯಮಿ ಹಮೀದ್, ಮುಂಬೈ ಉದ್ಯಮಿ ವೆಂಕಟೇಶ ಕಿಣಿ, ಮಂಜುನಾಥ ಬಿಲ್ಲವ, ಉದ್ಯಮಿ ಇಬ್ರಾಹಿಂ ಗಂಗೊಳ್ಳಿ, ಬಾಸುಮ ಕೊಡಗು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಸಾಧನಾ ದಾಸ್ ಸ್ವಾಗತಿಸಿ ಪ್ರಸಾವಿಕ ನುಡಿಗಳನ್ನಾಡಿದರು. ವಾಗ್ಮಿ ಪತ್ರಕರ್ತ ಅರುಣ್ಕುಮಾರ್…
