ಕೊಲ್ಲೂರು: ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂಬ ನೆಲೆಯಲ್ಲಿ ಸರಕಾರವು ಹಲವಾರು ಯೋಜನೆಗಳು, ಹೆಚ್ಚಿನ ಅನುದಾನ, ಪ್ರೇರಕ ವಿಷಯಗಳನ್ನು ಅಳವಡಿಸಿ ಕಾರ್ಯತಂತ್ರ ರೂಪಿಸಿದೆ. ಸಮಾಜದಲ್ಲಿ ಸಾಮರಸ್ಯದ ಬದುಕು ಕಾಣಬೇಕಾದರೆ ಶಿಕ್ಷಣದ ಅಗತ್ಯತೆಯಿದೆ ಎಂದು ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದರು. ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಆಂಗ್ಲ ಮಾಧ್ಯಮದ ಭರಾಟೆಯಿಂದ ಆಕರ್ಷಿತರಾಗಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಿಗೆ ಕೀಳರಿಮೆ ಸಲ್ಲದು. ಮಾತೃಭಾಷೆ ಪ್ರಧಾನವಾಗಿದ್ದು, ವಿದ್ಯಾ ಸಂಸ್ಥೆಗಳಲ್ಲಿ ರೂಪುಗೊಂಡ ವಿದ್ಯಾರ್ಥಿಗಳನ್ನು ನಮ್ಮ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಅಲ್ಲದೇ ಸತ್ಯವನ್ನು ವಿಮರ್ಶೆ ಮಾಡುವ ಮನಸ್ಥಿತಿಯ ಮೂಲಕ ಮಕ್ಕಳು ಬೆಳೆಯಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಪ್ರತೀ ತರಗತಿಯಲ್ಲಿ ಶೇ.೧೦೦ ಹಾಜರಾತಿ ಹೊಂದಿದ ವಿದ್ಯಾರ್ಥಿಗಳಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.…
Author: ನ್ಯೂಸ್ ಬ್ಯೂರೋ
ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ ಸಡಗರದೊಂದಿಗೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ಗಣಪತಿ ಸುವರ್ಣ, ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಹೇರಿಕುದ್ರು ಇನ್ನಿತರರು ಉಪಸ್ಥಿತರಿದ್ದರು
ಗಂಗೊಳ್ಳಿ: ವಿದ್ಯಾರ್ಥಿ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅವಶ್ಯಕ. ವಿದ್ಯಾರ್ಥಿಗಳು ಯಾವುದನ್ನು ಕಷ್ಟ ಎಂದು ತಿಳಿಯದೆ ಮನಸ್ಸಿಟ್ಟು ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ನಾವು ಒಳ್ಳೆಯವರಾಗಿದ್ದರೆ ಕೆಟ್ಟವರು ಕೂಡ ನಮ್ಮಲ್ಲಿನ ಒಳ್ಳೆಯ ಗುಣಗಳಿಂದ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಗಂಗೊಳ್ಳಿಯ ಎಂ.ಮಾಧವ ವಿ. ಪೈ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಕಳೆದ ಏಳು ದಶಕಗಳಿಂದ ಗ್ರಾಮೀಣ ಪ್ರದೇಶದ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಾರ್ಯವೈಖರಿ ಶ್ಲಾಘನೀಯ. ಉತ್ತಮ ಇತಿಹಾಸ ಹೊಂದಿರುವ ಗಂಗೊಳ್ಳಿಯ ಎಸ್.ವಿ.ವಿದ್ಯಾಸಂಸ್ಥೆಗಳು ಈ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದೆ ಎಂದರು.…
ಬೈಂದೂರು: ಅಶಕ್ತರಿಗೆ, ಶೋಷಿತರಿಗೆ ನೀಡುವ ಆರ್ಥಿಕ ಸಹಕಾರ ಕೇವಲ ಅರ್ಹರಿಗೆ ಮಾತ್ರವಲ್ಲದೆ ಭಗವಂತನಿಗೂ ತಲುಪಲಿದೆ, ತನ್ಮೂಲಕ ಭಗವಂತನೂ ತೃಪ್ತಿಪಟ್ಟು ದಾನಿಯ ಕುಟುಂಬಕ್ಕೆ ಒಳಿತನ್ನು ಮಾಡಲಿದ್ದಾನೆ ಎಂದು ಶ್ರೀಮದ್ ಆನೆಗುಂದಿ ಸರಸ್ವತೀ ಪೀಠ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು. ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನ ರಂಗಪೂಜೆ, ದೀಪೋತ್ಸವದ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಉಪ್ರಳ್ಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಡಾಕೆರೆ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಸದಾನಂದ ಮಂಜಯ್ಯ ಆಚಾರ್ಯ, ಮುಂಬಯಿಯ ಉದ್ಯಮಿ ಸುರೇಶ್ ಆಚಾರ್ಯ ಗೋಳಿಅಡಿ ಕೂರ್ಸಿ, ಕಂದಾಪುರ ತಾಲೂಕ್ ವಿಶ್ವಕರ್ಮ ಕಾರ್ಪೆಂಟರ‍್ಸ್ ಯೂನಿಯನ್ ಅಧ್ಯಕ್ಷ ಕೆ. ರುದ್ರಯ್ಯ ಆಚಾರ್ಯ, ಕುಂದಾಪುರ ತಾಲೂಕ್ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಶ್ರೀಧರ ಆಚಾರ್ಯ, ದೇವಸ್ಥಾನ 2ನೇ ಮೊಕ್ತೇಸರ ಬಾಬು ಆಚಾರ್ಯ, ೩ನೇ ಮೊಕ್ತೇಸರ ಚಿತ್ತೂರು ಪ್ರಭಾಕರ ಆಚಾರ್ಯ, ಆಡಳಿತ ಸಮಿತಿ ಸಲಹೆಗಾರರಾದ ಆತ್ರಾಡಿ ರುದ್ರಯ್ಯ ಆಚಾರ್ಯ, ಸಿ.ನಾರಾಯಣ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಳಿ…
ಕುಂದಾಪುರ : ದಾನಗಳಲ್ಲಿ ಅತೀ ಶ್ರೇಷ್ಠದಾನ ರಕ್ತದಾನ. ಒಬ್ಬನ ಜೀವ ಉಳಿಸುವಲ್ಲಿ ಸಹಾಯವಾಗುವ ಈ ದಾನ ದೇವರಿಗೂ ಪ್ರಿಯ. ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಅಶೋಕ್ ಬೆಟ್ಟಿನ್ ಹೇಳಿದರು. ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಸುವರ್ಣ ಸಂಭ್ರಮದ ಅಂಗವಾಗಿ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಕುಂದಾಪುರ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ, ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಹಕ್ಲಾಡಿ ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿg ಉದ್ಘಾಟಿಸಿ ಅವರು ಮಾತನಾಡಿದರು. ಸಂತೋಷಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಚೇಯರ್‌ಮನ್ ಎಸ್. ಜಯಕರ್ ಶೆಟ್ಟಿ, ಮುತ್ತಯ್ಯ ಶೆಟ್ಟಿ, ರವಿರಾಮ್ ಶೆಟ್ಟಿ, ವೈದ್ಯಾಧಿಕಾರಿ ಡಾ. ಸುಭೋದ್ ಮಲ್ಲಿ, ನಾಗರಾಜ್ ಶೇಟ್, ರಾಜೀವ ಮಾಸ್ತರ್, ಸ್ಥಳದಾನಿ ಗಣಪಯ್ಯ ಶೆಟ್ಟಿ, ಹಕ್ಲಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ ಶೆಟ್ಟಿ ಹೊಳ್ಮಗೆ, ಶಾಲೆಯ ಮುಖ್ಯೋಪಾಧ್ಯಾಂi ಡಾ. ಕಿಶೋರ್‌ಕುಮಾರ್ ಶೆಟ್ಟಿ, ಲಯನ್ ಕಾರ್ಯದರ್ಶಿ ಕಿರಣ್‌ಕುಮಾರ್ ಉಪಸ್ಥಿತರಿದ್ದರು.
ಕುಂದಾಪುರ: ಕಾರ್ಟೂನು ಕೇವಲ ಒಂದು ಕಲೆಯಾಗಿ ಮಾತ್ರ ಉಳಿಯದೇ ಸಮಾಜವನ್ನು ರಚನಾತ್ಮಕವಾಗಿ ಕಟ್ಟುವ ಮಾಧ್ಯಮವಾಗಿ ಬೆಳೆದುನಿಂತಿದೆ. ವ್ಯಂಗ್ಯಚಿತ್ರಕಾರರು ಚಿತ್ರ ಕಲಾವಿದರಾಗಿ ಮಾತ್ರವೇ ಉಳಿಯದೇ ಸಮಾಜವನ್ನು ಭಿನ್ನ ದೃಷ್ಠಿಯಿಂದ ಗಮನಿಸುವ ಕಲಾಕಾರರಾಗಿ ಕಾಣಿಸಿಕೊಳ್ಳುತ್ತಾರೆ ಎಂದು ರೋಟರಿ ಇಂಟರ್‌ನ್ಯಾಷನಲ್ 2018-19ರ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಹೇಳಿದರು. ಭಾನುವಾರು ಇಲ್ಲಿನ ಕಲಾಮಂದಿರದಲ್ಲಿ ಕಾರ್ಟೂನು ಕುಂದಾಪುರ ಆಯೋಜಿಸಿದ ’ಕಾರ್ಟೂನು ಹಬ್ಬ’ ಸಮಾರೋಪದಲ್ಲಿ ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಚಿನ್ಮಯ ಆಸ್ವತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್, ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ಶಾಲೆ ಪ್ರಾಂಶುಪಾಲ ಶರಣ್‌ಕುಮಾರ್, ಹೋಟೆಲ್ ಪಾರಿಜಾತದ ಆಡಳಿತ ನಿರ್ದೇಶಕ ಗಣೇಶ್ ಭಟ್, ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ರೋಟರಿ ಕುಂದಾಪುರ ಮಾಜಿ ಅಧ್ಯಕ್ಷ ಮನೋಜ್ ನಾಯರ್ ಉಪಸ್ಥಿತರಿದ್ದರು. ಕಾರ್ಟೂನಿಷ್ಠ ಸತೀಶ್ ಆಚಾರ‍್ಯ ಸ್ವಾಗತಿಸಿದರು. ಶಿಕ್ಷಕಿ ಜಯಶೀಲ ಪೈ ನಿರೂಪಿಸಿದರು. ಕೇಶವ ಸಸಿಹಿತ್ಲು, ರವಿಕುಮಾರ್ ಗಂಗೊಳ್ಳಿ ಸಹಕರಿಸಿದರು.
ಕುಂದಾಪುರ: ಕಾರ್ಟೂನಿನಲ್ಲಿ ಸಮಾಜಕ್ಕೊಂದು ಮಸೇಜ್ ಇರಬೇಕು. ಮಹಿಳೆಯರಿಗೆ ಕಾರ್ಟೂನ್ ರಂಗದಲ್ಲಿ ಪ್ರೋತ್ಸಾಹ ನೀಡಿದರೆ ಮಾಯಾ ಕಾಮತ್ ಅವರಂತಾ ಪ್ರಸಿದ್ಧ ವ್ಯಂಗ್ಯಚಿತ್ರಗಾರರ ಬರಲು ಸಾಧ್ಯ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಹೇಳಿದ್ದಾರೆ. ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಮಾಯಾ ಕಾಮತ್ ಕುಟುಂಬ ಸಹಭಾಗಿತ್ವದಲ್ಲಿ ಕುಂದಾಪುರ ಜೂನಿಯರ್ ಕಾಲೇಜ್‌ನಲ್ಲಿ ನಡೆದ ಮಾಯಾ ಕಾಮತ್ ಕಾರ್ಟೂನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಕಾರ್ಟೂನ್ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ, ಸ್ಪರ್ಧಾಳುಗಳು ಕಡಿಮೆಯಿದ್ದರೂ, ಹನಿ ಹನಿ ಸೇರಿ ಹಳ್ಳವಾಗುವ ಹಾಗೆ ಮುಂದೊಂದು ದಿನ ಮಹಿಳಾ ಕಾರ್ಟೂನಿಷ್ಟ್‌ಗಳು ರಂಗ ಪ್ರವೇಶ ಮಾಡಲಿದ್ದಾರೆ ಎಂದ ಅವರು, ಕಾರ್ಟೂನ್‌ಗಳು ನೋಡಿ ಅರ್ಥ ಮಾಡಿಕೊಳ್ಳುವ ಹಾಗಿರಬೇಕು ಎಂದರು. ಗುರುಕುಲ ಪಬ್ಲಿಕ್ ಸ್ಕೂಲ್ ಜಂಟಿ ಆಡಳಿತ ನಿರ್ದೇಶಕ ಅನುಪಮಾ ಬಾಂಡ್ಯಾ ಮಾತನಾಡಿ, ಕಾರ್ಟೂನಿಗೆ ನೋವು ದುಃಖ್ಖ ಮರೆಸುವ ಶಕ್ತಿಯಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರ್ಟೂನ್ ಪೂರಕ. ನರಂತರ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದರು. ಚೈತನ್ಯ ವಿಶೇಷ ಮಕ್ಕಳ ಶಾಲೆ ಕಾರ‍್ಯದರ್ಶಿ…
ಕುಂದಾಪುರ: ನಮ್ಮ ಪೂರ್ವಿಕರು ಈ ನೆಲದಲ್ಲಿ ಬಾಳಿ ಬದುಕಿದರು. ನಾವು ಇಲ್ಲಿ ಜೀವನ ಕಟ್ಟಿಕೊಂಡಿದ್ದೇವೆ. ನಮ್ಮ ಮುಂದಿನ ಪೀಳಿಗೆ ಊರು ಬಿಡಬೇಕಾ. ಗ್ರಾಮಸ್ಥರ ಗಮನಕ್ಕೂ ತಾರದೆ, ಗ್ರಾಪಂ ಸದಸ್ಯರ ಮಾಹಿತಿ ಮುಚ್ಚಿಟ್ಟು ಮೀನು ಸಂಸ್ಕರಣಾ ಘಟಕಕ್ಕೆ ಪರವಾನಿಕಗೆ ಕೊಟ್ಟು ನಮ್ಮನ್ನು ಒಕ್ಕಲೆಬ್ಬಿಸೋ ಸಂಚಿ ನಡೆತಿದೆ. [quote font_size=”13″ bgcolor=”#ffffff” arrow=”yes” align=”right”]25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಲಾಗುತ್ತಿರುವ ಬೃಹತ್ ಮೀನುಗಾರಿಕಾ ಘಟಕ ಪರವಾನಿಗೆ ಕೊಡುವ ಮೊದಲು ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯದ ಹಿನ್ನೆಲೆಯಲ್ಲಿ ಪರವಾನಿಗೆ ನೀಡಿದ್ದ ಅಕ್ಷಮ್ಯ ಅಪರಾಧ. ಶಾಲೆ, ದೇವಸ್ಥಾನ, ಜನ ವಸತಿ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆ ಪರವಾನಿಗೆ ನೀಡಿದ್ದು ಅನುಮಾನಕ್ಕೆ ಕಾರಣ. ಅತಕ್ಷಣ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಕ್ರೋಢೀಕರಿ ಮುಂದಿನ ತೀರ್ಮಾನ ತೆಗೆದುಕೊಳ್ಳುವತನಕ ಕಾಮಗಾರಿ ನಿಲ್ಲಿಸಬೇಕು. ರೈತರ ಜಮೀನು ರೈತರಿಗೆ ತೊಂದರೆ ಕೊಟ್ಟರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ. ಜನರ ಹಿತ ಬಲಿ ಕೊಟ್ಟು ಘಟಕ ಸ್ಥಾಪನೆಗೆ ಅವಕಾಶ ನೀಡೋದಿಲ್ಲ. – ದೀಪಕ್ ಕುಮಾರ್…
ಬೈಂದೂರು: ಇಲ್ಲಿನ ರೋಟರಿ ಸಭಾಭವದಲ್ಲಿ ಯಡ್ತರೆ, ಬೈಂದೂರು, ಪಡುವರಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆ ಜರುಗಿತು. ವಿಧಾನ ಪರಿಷತ್ ಅಭ್ಯರ್ಥಿ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ ಬೇರೆಯವರಿಗೂ ಅವಕಾಶ ನೀಡಬೇಕೆಂಬ ಉದ್ದೇಶದಿಂದ ತಾನು ಸ್ವರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಈಗ ಪಕ್ಷದ ಕಾರ್ಯಕರ್ತರು, ವರಿಷ್ಠರು ಮತ್ತೆ ಸ್ವರ್ಧಿಸಬೇಕೆಂಬ ತೀರ್ಮಾನ ಕೈಗೊಂಡಿದ್ದಾರೆ. ಅವರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದ ಅವರು ಜಯಪ್ರಕಾಶ್ ಹೆಗ್ಡೆಯವರಿಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಎರಡು ಭಾರಿ ಸೋತವರಿಗೆ ಮತ್ತೆ ಅವಕಾಶ ಮಾಡಿಕೊಡಬಾರದೆಂಬ ನಿಯಮವನ್ನೂ ಮೀರಿ ಸ್ವರ್ಧಿಸಲು ಅನುವು ಮಾಡಿಕೊಟ್ಟಿತ್ತು. ಇನ್ನೂ ಅವರಿಗೇ ಮಾನ್ಯತೆ ನೀಡಬೇಕು ಎನ್ನುವುದಲ್ಲಿ ಅರ್ಥವಿಲ್ಲ. ಜಯಪ್ರಕಾಶ್ ಹೆಗ್ಡೆಯವರದ್ದು ಬಂಡಾಯವಲ್ಲ. ಅಧಿಕಾರ ದಾಹದ ನಡೆಯಷ್ಟೇ. ಇವರು ಯಾವ ಪಕ್ಷದಲ್ಲೂ ಶಾಶ್ವತವಾಗಿ ಇರಲಾರರು. ನಾವು ಜಯಪ್ರಕಾಶ್ ಹೆಗ್ಡೆಯವರನ್ನು ಟೀಕಿಸುತ್ತಿಲ್ಲ. ಬದಲಿಗೆ ಅವರ ನಡೆಯನ್ನು ಖಂಡಿಸುತ್ತಿದ್ದೇವೆ ಎಂದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಶಾಸಕ ಗೋಪಾಲ ಪೂಜಾರಿ ಮಾತನಾಡಿ ಕಾಂಗ್ರೆಸ್ ಪ್ರತಾಪ್‌ಚಂದ್ರ ಶೆಟ್ಟಿ ಪಕ್ಷದ ಇತರ…
ಕುಂದಾಪುರ: ನಮ್ಮ ಸುತ್ತಮುತ್ತಲಿನ ಅಂಕುಡೊಂಕು ಜನಸಾಮಾನ್ಯರಿಗೆ ಮುಟ್ಟಿಸುವ ಮತ್ತು ಸಮಾಜವನ್ನು ಸದಾ ಎಚ್ಚರದಲ್ಲಿರಿಸುವ ಶಕ್ತಿ ಕಾರ್ಟೂನಿಗಿದೆ ಎಂದು ಉಡುಪಿ ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ. ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಕುಂದಾಪುರ ಐಎಂಎ ಸಹಭಾಗಿತ್ವದಲ್ಲಿ ಕುಂದಾಪುರ ಜೂನಿಯರ್ ಕಾಲೇಜ್ ಕಲಾ ಮಂದಿರದಲ್ಲಿ ನಡೆದ ಕಾರ್ಟೂನ್ ಹಬ್ಬದಲ್ಲಿ ಡೂಡ್ಲಿಂಗ್ ವಿದ್ ಡಾಕ್ಟರ್’ ವಿಶಿಷ್ಟ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಸಾಮಾನ್ಯರಿಗಿಂತ ಹೆಚ್ಚು ಒತ್ತಡದಲ್ಲಿ ವೈದ್ಯರು ಕೆಲಸ ಮಾಡಬೇಕಿದ್ದು, ಅವರ ಒತ್ತಡ ನಿವಾರಕ ಶಕ್ತಿ ಕಾರ್ಟೂನಿಗಿದೆ. ನಿತ್ಯದ ಬದುಕು, ಹತ್ತಾರು ಸಮಸ್ಯೆಗಳ, ಸಮಾಜದ ಅಪಸೌವ್ಯಗಳ ಬಗ್ಗೆ ಬೆಳಕು ಚೆಲ್ಲುವ ನಿಷ್ಪಕ್ಷಪಾತ ಮಾಧ್ಯಮವಾಗಿ ಕಾರ್ಟೂನ್ ನಿಂತಿದೆ ಎಂದು ಹೇಳಿದರು. ಯಾವುದೋ ಒಂದು ಸಂದರ್ಭದಲ್ಲಿ ಕಾರ್ಟೂನ್ ಲೋಕಕ್ಕೆ ಕಾಲಿಟ್ಟ ಸತೀಶ್ ಆಚಾರ‍್ಯ ಕಾರ್ಟೂನ್ ಲೋಕದ ಅದ್ಭುತ ಪ್ರತಿಭೆ ಎಂದು ಬಣ್ಣಿಸಿದ ಅವರು, ಕಾರ್ಟೂನ್‌ನಲ್ಲಿ ಪಕ್ಷಬೇಧ ಕಂಡುಬಾರದೆ ನಿಷ್ಪಕ್ಷಪಾತ ರಚನೆಯಲ್ಲಿ ಸತೀಶ್ ಸಿದ್ಧ ಹಸ್ತರು ಎಂದು ಬಣ್ಣಿಸಿದರು. ಕುಂದಾಪುರ ಐಎಂಎ ಅಧ್ಯಕ್ಷ ಶ್ರೀ ದೇವಿ ನರ್ಸಿಂಗ್ ಹೋಮ್ ವೈದ್ಯಕೀಯ ನಿರ್ದೇಶಕಿ…
