ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನ ರಂಗಪೂಜೆ, ವಾರ್ಷಿಕ ಮಹಾಸಭೆ

Call us

Call us

Call us

ಬೈಂದೂರು: ಅಶಕ್ತರಿಗೆ, ಶೋಷಿತರಿಗೆ ನೀಡುವ ಆರ್ಥಿಕ ಸಹಕಾರ ಕೇವಲ ಅರ್ಹರಿಗೆ ಮಾತ್ರವಲ್ಲದೆ ಭಗವಂತನಿಗೂ ತಲುಪಲಿದೆ, ತನ್ಮೂಲಕ ಭಗವಂತನೂ ತೃಪ್ತಿಪಟ್ಟು ದಾನಿಯ ಕುಟುಂಬಕ್ಕೆ ಒಳಿತನ್ನು ಮಾಡಲಿದ್ದಾನೆ ಎಂದು ಶ್ರೀಮದ್ ಆನೆಗುಂದಿ ಸರಸ್ವತೀ ಪೀಠ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು.

Call us

Click Here

ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನ ರಂಗಪೂಜೆ, ದೀಪೋತ್ಸವದ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಉಪ್ರಳ್ಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಡಾಕೆರೆ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಸದಾನಂದ ಮಂಜಯ್ಯ ಆಚಾರ್ಯ, ಮುಂಬಯಿಯ ಉದ್ಯಮಿ ಸುರೇಶ್ ಆಚಾರ್ಯ ಗೋಳಿಅಡಿ ಕೂರ್ಸಿ, ಕಂದಾಪುರ ತಾಲೂಕ್ ವಿಶ್ವಕರ್ಮ ಕಾರ್ಪೆಂಟರ‍್ಸ್ ಯೂನಿಯನ್ ಅಧ್ಯಕ್ಷ ಕೆ. ರುದ್ರಯ್ಯ ಆಚಾರ್ಯ, ಕುಂದಾಪುರ ತಾಲೂಕ್ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಶ್ರೀಧರ ಆಚಾರ್ಯ, ದೇವಸ್ಥಾನ 2ನೇ ಮೊಕ್ತೇಸರ ಬಾಬು ಆಚಾರ್ಯ, ೩ನೇ ಮೊಕ್ತೇಸರ ಚಿತ್ತೂರು ಪ್ರಭಾಕರ ಆಚಾರ್ಯ, ಆಡಳಿತ ಸಮಿತಿ ಸಲಹೆಗಾರರಾದ ಆತ್ರಾಡಿ ರುದ್ರಯ್ಯ ಆಚಾರ್ಯ, ಸಿ.ನಾರಾಯಣ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಳಿ ಚಂದ್ರಯ್ಯ ಆಚಾರ್ಯ, ದೇವಸ್ಥಾನದ ತಂತ್ರಿ ಉಮೇಶ್ ತಂತ್ರಿ ಮಂಗಳೂರು, ಸೇವಾ ಸಮಿತಿ ಅಧ್ಯಕ್ಷ ಆಲೂರು ಶ್ರೀಧರ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ವಿಶಾಲ ಯೋಗೀಶ್ ಆಚಾರ್ಯ ಇದ್ದರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಕೂಡುವಳಿಕೆ ವ್ಯಾಪ್ತಿಯ ವಿಶ್ವಕರ್ಮ ಸಮಾಜದ ಚುನಾಯಿತಿ ಗ್ರಾಮ ಪಂಚಾಯಿತಿ ಸದಸ್ಯರನ್ನು, ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಾಗಣೆ ಮೊಕ್ತೇಸರರನ್ನು ಸನ್ಮಾನಿಸಲಾಯಿತು. ಅಶೋಕ್ ಆಚಾರ್ಯ ನಾವುಂದ ಸ್ವಾಗತಿಸಿದ್ದು, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸಂಜೀವ ಆಚಾರ್ಯ ಕಳವಾಡಿ ವರದಿ ವಾಚಿಸಿದರು. ಕೊಡ್ಲಾಡಿ ಪ್ರಭಾಕರ ಆಚಾರ್ಯ ಸನ್ಮಾನಿತರನ್ನು ಪರಿಚಯಿಸಿ, ಬಂಡಾಡಿ ನಾಗೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಆಚಾರ್ಯ ಹೊಸಾಡು ವಂದಿಸಿದರು.

Leave a Reply