ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಕೊಲ್ಲೂರು ೨೦೧೬-೧೭ನೇ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿರುವುದನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರಕುಮಾರ್ ಅವರು ಸಹಕಾರಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಶ್ಯಾನುಭೋಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರ ಬಳೆಗಾರ್, ಮಾಜಿ ಅಧ್ಯಕ್ಷರಾದ ವಿಶ್ವೇಶ್ವರ ಅಡಿಗ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿದೇಶಕರಾದ ರಘುರಾಮ ಶೆಟ್ಟಿ, ಎಸ್. ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ನಾವುಂದ ಇದರ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ಎಂ. ವಿನಾಯಕ ರಾವ್, ರಾಮಕೃಷ್ಣ ಖಾರ್ವಿ, ನಾಗಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಘುರಾಮ ಶೆಟ್ಟಿ, ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಶಿವರಾಮ ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ., ಬೈಂದೂರು ಇದರ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಅವರು ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಷ್ಟು ಬಿಲ್ಲವ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಘುರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಪಘಾತದಲ್ಲಿ ಗಾಯಗೊಂಡಿದ್ದ ಗೋವನ್ನು ಕಳೆದೊಂದು ವಾರದಿಂದ ಆರೈಕೆ ಮಾಡುತ್ತಿರುವ ಯಡ್ತರೆಯ ರಿಕ್ಷಾ ಚಾಲಕರು ಮಾನವೀಯತೆ ಮೆರೆದಿದ್ದಾರೆ. ರಿಕ್ಷಾ ಚಾಲಕರು ಆರೈಕೆ, ವೈದ್ಯರ ಚಿಕಿತ್ಸೆಯಿಂದಾಗಿ ನಿತ್ರಾಣ ಸ್ಥಿತಿಯಲ್ಲಿದ್ದ ಗೋವು ಚೇತರಿಸಿಕೊಳ್ಳುತ್ತಿದೆ. ಯಡ್ತರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರದ ಹಿಂದೆ ರಸ್ತೆ ದಾಟುತ್ತಿದ್ದ ಗೋವಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅಫಘಾತದಿಂದ ತೀವ್ರ ಗಾಯಗೊಂಡ ದನವನ್ನು ಯಡ್ತರೆ ಮೂಕಾಂಬಿಕಾ ಹಾರ್ಡ್‌ವೇರ್ ಹಿಂಭಾಗದ ಜಾಗದಲ್ಲಿ ತಂದು ಹಾಕಿದ ಯಡ್ತರೆಯ ರಿಕ್ಷಾ ಚಾಲಕರು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಮಾಡಿದ್ದಾರೆ. ಪ್ರತಿನಿತ್ಯ ಬಾಡಿಗೆಗೆ ತೆರಳುವ ಚಾಲಕರು ತಾವೇ ಹುಲ್ಲು ತಂದು ಹಾಕುತ್ತಿದ್ದಾರೆ. ಆಗಿಂದಾಗ್ಗೆ ಬಾಳೆಹಣ್ಣು, ನೀರು ನೀಡಿ ಆರೈಕೆ ಮಾಡುತ್ತಿದ್ದಾರೆ. ಮಳೆಯಿಂದ ರಕ್ಷಣೆಗಾಗಿ ಅಲ್ಲಿಯೇ ಚಿಕ್ಕದಾಗಿ ಮಾಡೋದನ್ನು ನಿರ್ಮಿಸಿದ್ದಾರೆ. ರಿಕ್ಷಾ ಚಾಲಕರ ನಿರಂತರ ಆರೈಕೆಯಿಂದಾಗಿ ಗೋವು ಚೇತರಿಸಿಕೊಳ್ಳುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಒಟ್ಟಿನಲ್ಲಿ ಅಫಘಾತದಲ್ಲಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡಬೇಕಿದ್ದ ಗೋವನ್ನು ಪ್ರೀತಿಯಿಂದ ಆರೈಕೆ ಮಾಡಿರುವ ಯಡ್ತರೆ ರಿಕ್ಷಾ ಚಾಲಕರ ಮಾನವೀಯತೆ ಮೆಚ್ಚಲೇಬೇಕಾದ್ದು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಟೇಶ್ವರದಲ್ಲಿ ಸೂರ್ಯನ ಸುತ್ತ ಕಂಡು ಬಂದ ವರ್ತುಲವೊಂದು ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಸುಮಾರು 20 ಸಾವಿರ ಅಡಿಗಳ ಎತ್ತರದಲ್ಲಿ ಶೇಖರಣೆಗೊಂಡ ಸಿರ್ರಸ್ ಮೋಡಗಳಲ್ಲಿರುವ ಮಂಜಿನ ತುಣುಕುಗಳ ಮೂಲಕ ಸೂರ್ಯನ ಬೆಳಕಿನ ವಕ್ರೀಭವನದ ಕಾರಣದಿಂದ ಇಂತಹ ವರ್ತುಲ ಮೂಡಿ ನೋಡುಗರನ್ನು ವಿಸ್ಮಯಗೊಳಿಸಿತು.ಭಂಡಾರ್ಕಾರ್ಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಎಂ. ಬಿ. ನಟರಾಜ್ ಈ ಚಿತ್ರವನ್ನು ಸೆರೆ ಹಿಡಿದಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಸೋರುವ ಮಾಡು, ಶಿಥಿಲಗೊಂಡಿರುವ ಗೋಡೆಯ ಸಣ್ಣ ಸೂರೊಳಕ್ಕೆ ಏಳು ಮಂದಿಯ ನಿತ್ಯದ ಬದುಕು. ಕುಟುಂಬಕ್ಕೆ ನೆಲೆಯಾಗಬೇಕಿದ್ದ ಪತಿರಾಯ ಮನೆಯತ್ತ ಸುಳಿಯುವುದೇ ಇಲ್ಲ. ರಕ್ತ ಸಂಬಂಧಿಗಳಂತೂ ಸದ್ಯಕ್ಕೆ ಯಾರೂ ಇಲ್ಲ. ದಿನವೂ ಆತಂಕದ ನಡುವೆ ಮಕ್ಕಳೊಂದಿಗೆ ಬದುಕುತ್ತಿರುವ ಮಹಿಳೆಗೆ ಆರೋಗ್ಯವೂ ಆಗಿಂದ್ದಾಗೆ ಕೈಕೊಡುತ್ತಿದೆ. ಇದು ತಾಲೂಕಿನ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಳೆಕಟ್ಟು ನಿವಾಸಿ ಶಕುಂತಲಾ ಪೂಜಾರ್ತಿ ಎಂಬುವವರ ಕುಟುಂಬದ ಕರುಣಾಜನಕ ಕಥೆ. ಕುಂಭಾಶಿಯ ಹೊಳೆಕಟ್ಟಿವಿನ ಶಕುಂತಲಾ ಅವರಿಗೆ ಆರು ಮಕ್ಕಳು. ಕೂಲಿ ಮಾಡಿ ಮಕ್ಕಳೊಂದಿಗೆ ನಿತ್ಯದ ಬದುಕು ಸವೆಸುತ್ತಿದ್ದರೂ ತಿಂಗಳ ರೇಷನ್ ಅಕ್ಕಿಯನ್ನೇ ಇಡಿ ಕುಟುಂಬ ನಂಬಿ ಕುಳಿತಿದೆ. ಇಷ್ಟರ ಮಧ್ಯೆ ಶಾಕುಂತಲ ಅವರಿಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ದುಡಿದು ತಿನ್ನಬೇಕೆನ್ನುವ ಛಲವನ್ನೇ ಹತ್ತಿಕ್ಕುತ್ತಿದೆ. ಮಕ್ಕಳಿಗೆ ಉತ್ತಮ ಬದುಕು, ಶಿಕ್ಷಣ ಕೊಡಿಸಬೇಕೆಂಬುವ ತಾಯಿಯ ಹಂಬಲ; ಶಿಥಿಲಗೊಂಡಿರುವ ಮನೆಯಯನ್ನು ದುರಸ್ತಿಗೊಳಿಸುವ ಅನಿವಾರ್ಯ ಸಂದರ್ಭ ಕೈಗೂಡಲು ಆರ್ಥಿಕ ಸಮಸ್ಯೆ ಅಡ್ಡಿ ಉಂಟುಮಾಡುತ್ತಿದೆ. ಕುಂಭಾಶಿ ಗ್ರಾಮ ಪಂಚಾಯತಿಯ ಹೊಳೆಕಟ್ಟುವಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ. ಎನ್. ರಾಜೇಂದ್ರಕುಮಾರ್ ಅವರು ಇತ್ತಿಚಿಗೆ ಬೈಕ್ ಅಪಘಾತದಲ್ಲಿ ಮರಣ ಹೊಂದಿದ ಗಂಗೊಳ್ಳಿ ಸೀತಾರಾಮ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಮಂಗಳ ಖಾರ್ವಿ ಅವರ ಕುಟುಂಬಕ್ಕೆ ಕೊಡಮಾಡಿದ ಒಂದು ಲಕ್ಷ ರೂ. ಚೆಕ್‌ನ್ನು ಎಸ್. ರಾಜು ಪೂಜಾರಿ ಅವರು ಕುಟುಂಬಿಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ತಾಲೂಕು ನವೋದಯ ಸಂಘಗಳ ಮೇಲ್ವಿಚಾರಕ ಮನೋಹರ ಶೆಟ್ಟಿ, ಬೈಂದೂರು ವಲಯ ನವೋದಯ ಸಂಘಗಳ ಮೇಲ್ವಿಚಾರಕ ಶಿವರಾಮ ಪೂಜಾರಿ, ಸೇವಾನಿರತ ನಾಗ ಹಾಗೂ ಪ್ರೇರಕ ವಾಸುದೇವ ಖಾರ್ವಿ, ಜ್ಯೋತಿಕೃಷ್ಣ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಇಲ್ಲಿನ ಶ್ರೀ ಮೂಕಾಂಬಿಕಾ ಬಾಲಕರ ವಸತಿ ನಿಲಯದಲ್ಲಿ ಜರುಗಿದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ ಶೆಟ್ಟಿ, ವಸಂತ ಶೆಟ್ಟಿ, ನವೀನ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣಪ್ರಕಾಶ್ ಶೆಟ್ಟಿ ಪ್ರಶಸ್ತಿ ಹಸ್ತಾಂತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಗೀತ ಕೇಳುಗರ ಮನಸ್ಸನ್ನು ಅರಳಿಸುತ್ತದೆ. ಕಿವಿ ಮತ್ತು ಹೃದಯವನ್ನು ತೆರೆದು ಆಸ್ವಾದಿಸುವ ಗುಣ ಅದಕ್ಕೆ ಬೇಕು. ಮನಸ್ಸನ್ನು ಕೇಂದ್ರಿತವಾಗಿಟ್ಟುಕೊಂಡು ಸಂಗೀತದಿಂದ ಪರಿವರ್ತನೆಯೂ ಸಾಧ್ಯವಿದೆ. ಉತ್ತಮ, ಆಹ್ಲಾದಕರ ಸಂಗೀತದಿಂದ ಸಕಾರಾತ್ಮಕ ಪರಿಣಾಮವೂ ಆಗಬಲ್ಲುದು ಎಂಬುದನ್ನು ಪ್ರಯೋಗಗಳಿಂದ ಕಂಡುಕೊಳ್ಳಲಾಗಿದೆ. ಸಂಗೀತವು ಹೃದಯಕ್ಕೆ ಸಾಕಷ್ಟು ಹತ್ತಿರವಾದ ಭಾಷೆಯಾಗಿದೆ ಎಂದು ಮರವಂತೆ ಸಾಧನಾ ಜನಾರ್ದನ ಪ್ರತಿಷ್ಠಾನ ರಿ. ಪ್ರವರ್ತಕ, ಪತ್ರಕರ್ತ ಎಸ್. ಜನಾರ್ದನ ಹೇಳಿದರು. ಮರವಂತೆ ಸಾಧನಾ ಜನಾರ್ದನ ಪ್ರತಿಷ್ಠಾನ ರಿ. ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಕಲಾವಿದ ಶಂಭು ಗುಡ್ಡಮ್ಮಾಡಿ ಮತ್ತು ಬಳಗದವರಿಂದ ನಾಡಾ-ಗುಡ್ಡೆಹೋಟೆಲ್‌ನ ರೆ. ಫಾ. ರಾಬರ್ಟ್ ಝಡ್ ಎಂ. ಡಿಸೋಜ ಸ್ಮಾರಕ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಬುಧವಾರ ಮಧ್ಯಾಹ್ನ ಜರುಗಿದ ವಿಶೇಷ ಘಟಕ ಯೋಜನೆಯಡಿ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಪತ್ರಕರ್ತ ರಾಜೇಶ್ ಕೆ. ಸಿ. ಮಾತನಾಡಿ ಯುವಜನರಲ್ಲಿ ಸಂಗೀತದ ಅಭಿರುಚಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಾಮಾಣಿಕತೆ, ಶುದ್ಧ ಮನಸ್ಸಿನ ಜೊತೆಗೆ ಪರಿಶ್ರಮದ ಹಾದಿ ನಮ್ಮದಾದಾಗ ಸಾಧನೆಯ ಶಿಖರವನ್ನೇರಬಹುದು. ನಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ದೇವರ ಸೇವೆಯ ಜೊತೆಗೆ ಜನಕಲ್ಯಾಣ ಕಾರ್ಯಗಳನ್ನು ಮಾಡಬಹುದೆಂಬುದನ್ನು ಹಟ್ಟಿಯಂಗಡಿ ಕ್ಷೇತ್ರ ತೋರಿಸಿಕೊಟ್ಟು ರಾಜ್ಯಾದ್ಯಂತ ಭಕ್ತರನ್ನು ಹೊಂದಿದೆ. ಕ್ಷೇತ್ರ ಇನ್ನಷ್ಟು ಪ್ರಗತಿದಾಯಕವಾಗಲಿ ಎಂದು ಸಾಗರದ ಮಾಜಿ ಶಾಸಕ ಎಲ್. ಟಿ. ತಿಮ್ಮಪ್ಪ ಹೆಗಡೆ ಹೇಳಿದರು. ಅವರು ಸಂಜೆ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ್ ಮಾತನಾಡಿ ದೇವರ ಮೇಲೆ ಭಯ ಮತ್ತು ಭಕ್ತಿ ಇದ್ದಲ್ಲಿ ಶ್ರದ್ಧೆ ಮೂಡುತ್ತದೆ. ಅದು ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುತ್ತದೆ ಎಂದರು. ಈ ಸಂದರ್ಭದಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ದೇವ ಎಜ್ಯುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್(ರಿ.) ಕಾರ್ಯದರ್ಶಿ ಭಂಡಾರಿ ರಾಧಾಕೃಷ್ಣ ಶೆಣೈ, ಯಕ್ಷಗಾನ ಕಲಾವಿದ ಹೆಮ್ಮಾಡಿ ರಾಮ, ಹಟ್ಟಿಯಂಗಡಿ ದೇವಳದ…
