ಅಪಘಾತದಲ್ಲಿ ಗಾಯಗೊಂಡ ಗೋವಿಗೆ ಯಡ್ತರೆ ರಿಕ್ಷಾ ಚಾಲಕರಿಂದ ಆರೈಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಪಘಾತದಲ್ಲಿ ಗಾಯಗೊಂಡಿದ್ದ ಗೋವನ್ನು ಕಳೆದೊಂದು ವಾರದಿಂದ ಆರೈಕೆ ಮಾಡುತ್ತಿರುವ ಯಡ್ತರೆಯ ರಿಕ್ಷಾ ಚಾಲಕರು ಮಾನವೀಯತೆ ಮೆರೆದಿದ್ದಾರೆ. ರಿಕ್ಷಾ ಚಾಲಕರು ಆರೈಕೆ, ವೈದ್ಯರ ಚಿಕಿತ್ಸೆಯಿಂದಾಗಿ ನಿತ್ರಾಣ ಸ್ಥಿತಿಯಲ್ಲಿದ್ದ ಗೋವು ಚೇತರಿಸಿಕೊಳ್ಳುತ್ತಿದೆ.

Call us

Click Here

ಯಡ್ತರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರದ ಹಿಂದೆ ರಸ್ತೆ ದಾಟುತ್ತಿದ್ದ ಗೋವಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅಫಘಾತದಿಂದ ತೀವ್ರ ಗಾಯಗೊಂಡ ದನವನ್ನು ಯಡ್ತರೆ ಮೂಕಾಂಬಿಕಾ ಹಾರ್ಡ್‌ವೇರ್ ಹಿಂಭಾಗದ ಜಾಗದಲ್ಲಿ ತಂದು ಹಾಕಿದ ಯಡ್ತರೆಯ ರಿಕ್ಷಾ ಚಾಲಕರು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಮಾಡಿದ್ದಾರೆ. ಪ್ರತಿನಿತ್ಯ ಬಾಡಿಗೆಗೆ ತೆರಳುವ ಚಾಲಕರು ತಾವೇ ಹುಲ್ಲು ತಂದು ಹಾಕುತ್ತಿದ್ದಾರೆ. ಆಗಿಂದಾಗ್ಗೆ ಬಾಳೆಹಣ್ಣು, ನೀರು ನೀಡಿ ಆರೈಕೆ ಮಾಡುತ್ತಿದ್ದಾರೆ. ಮಳೆಯಿಂದ ರಕ್ಷಣೆಗಾಗಿ ಅಲ್ಲಿಯೇ ಚಿಕ್ಕದಾಗಿ ಮಾಡೋದನ್ನು ನಿರ್ಮಿಸಿದ್ದಾರೆ. ರಿಕ್ಷಾ ಚಾಲಕರ ನಿರಂತರ ಆರೈಕೆಯಿಂದಾಗಿ ಗೋವು ಚೇತರಿಸಿಕೊಳ್ಳುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಒಟ್ಟಿನಲ್ಲಿ ಅಫಘಾತದಲ್ಲಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡಬೇಕಿದ್ದ ಗೋವನ್ನು ಪ್ರೀತಿಯಿಂದ ಆರೈಕೆ ಮಾಡಿರುವ ಯಡ್ತರೆ ರಿಕ್ಷಾ ಚಾಲಕರ ಮಾನವೀಯತೆ ಮೆಚ್ಚಲೇಬೇಕಾದ್ದು.

 

Click here

Click here

Click here

Click Here

Call us

Call us

Leave a Reply