ರೋಟರಿಗೆ ಸಲ್ಲಿಸಿದ ಸೇವೆ ಅಪಾರ : ಸತೀಶ್ ಎನ್. ಶೇರೆಗಾರ್ ಕುಂದಾಪುರ: ರೋಟರಿ ಇಂಟರ್‌ನ್ಯಾಷನಲ್‌ಗೆ ಕಳೆದ ಮೂರು ತಲೆಮಾರುಗಳಿಂದ ಅನನ್ಯ ಸೇವೆಯನ್ನು ಸಲ್ಲಿಸುತ್ತಾ ಬಂದ ಕುಟುಂಬದ ಹಿನ್ನಲೆಯನ್ನೊಳಗೊಂಡು ಇದೀಗ ರೋಟರಿ ಜಿಲ್ಲೆ 3180 ವಿಭಾಗವಾಗಿ 3181 ಮತ್ತು 3182 ಪ್ರತ್ಯೇಕ ಜಿಲ್ಲೆಗಳಾಗಿ ಮಾರ್ಪಾಡು ಹೊಂದುತ್ತಿರುವ ಕಾಲಘಟ್ಟದಲ್ಲಿ 3182 ಇದರ 2018-19ನೇ ಸಾಲಿನ ರೋಟರಿ ಜಿಲ್ಲಾ ಗವರ್ನರ್ ಆಗಿ ಅವಿರೋಧವಾಗಿ ಆಯ್ಕೆಯಾದ ಅಭಿನಂದನ ಶೆಟ್ಟರು ರೋಟರಿಗೆ ಸಲ್ಲಿಸಿದ ಸೇವೆ ಅಪಾರವಾದುದು ಎಂದು ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು ರೋಟರಿ ವಲಯ 1ರ ಆಶ್ರಯದಲ್ಲಿ ಕುಂದಾಪುರ ಈಸ್ಟ್‌ವೆಸ್ಟ್ ಕಂಟ್ರಿ ಕ್ಲಬ್‌ನಲ್ಲಿ ನಡೆದ 2018-19ರ ಸಾಲಿನ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ ಎ. ಶೆಟ್ಟರ ಸನ್ಮಾನ ಸಮಾರಂಭದಲ್ಲಿ ಅಭಿನಂದನ ಶೆಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದರು. ರೋಟರಿಯ ಉನ್ನತ ಜವಾಬ್ದಾರಿಯನ್ನು ಹೊತ್ತಿರುವ ಸಂದರ್ಭದಲ್ಲಿ ಹಲವಾರು ಸವಾಲುಗಳು ಕಣ್ಮುಂದೆ ಇದೆ. ಅವೆಲ್ಲವನ್ನು ನಿರೀಕ್ಷೆಗೂ ಮೀರಿ ಸಂಘಟಿಸುವ, ತನ್ಮೂಲಕ ರೋಟರಿ 3182 ಬೆಳವಣಿಗೆಯಲ್ಲಿ ಮಹತ್ತರ…
Author: ನ್ಯೂಸ್ ಬ್ಯೂರೋ
ಬೈಂದೂರು: ಮಕ್ಕಳಿಗೆ ಶಾಲೆಯಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೇ ಕರ್ತವ್ಯ ಪ್ರಜ್ಞೆ ಕಾನೂನುಗಳ ಅರಿವುಗಳಂತಹ ಸಾಮಾನ್ಯಜ್ಞಾನವನ್ನು ಎಳೆವೆಯಲ್ಲಿ ಕಲಿಸುವ ಮೂಲಕ ಅವರು ಸರಿದಾರಿಯಲ್ಲಿ ಸಾಗುವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣ ಪಡೆಯತ್ತಿರುವ ಮಕ್ಕಳು ಮೊದಲು ಮಾನಸಿಕವಾಗಿ ಬಲಿಷ್ಟರಾಗಬೇಕು ಎಂದು ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮುದ್ರಾಡಿ ಹೇಳಿದರು. ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕವೂ ಸಾಧನೆಗೆ ಅವಕಾಶಗಳನ್ನು ಕಲ್ಪಿಸಬೇಕು. ಸಮಾಜದ ಕುರಿತ ಕಳಕಳಿ, ಸಜ್ಜನರ, ಗುರು-ಹಿರಿಯರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದ ಮೂಲಕ ದೇಶದ ಅಭ್ಯುದಯಕ್ಕೆ ಇಂದಿನ ಮಕ್ಕಳು ಕಾರಣರಾಗಬೇಕು ಎಂದರು. ಮಕ್ಕಳು ದೇಶದ ಆಸ್ತಿ. ಹೆತ್ತವರ ಅತೀಯಾದ ಪ್ರೀತಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು. ಎಂದು ಎಚ್ಚರಿಸಿದ ಅವರು ಕೇವಲ ಪದವಿಪತ್ರ (ಡಿಗ್ರಿ ಸರ್ಟಿಫಿಕೇಟ್) ಮಾತ್ರ ಮಾನದಂಡವಾಗಬಾರದು. ಪಾಲಕರು ಮಕ್ಕಳ ಆಸಕ್ತಿಯ ವಿಷಯಗಳನ್ನು ಸೂಕ್ಷವಾಗಿ ಗಮನಿಸಿ ಆರಂಭದಿಂದಲೇ ಅವರ ಪ್ರತಿಭೆಗೆ ತಕ್ಕಂತೆ ವೇದಿಕೆ ನಿರ್ಮಿಸಬೇಕು. ಎಲ್ಲಾ…
ಬೈಂದೂರು: ಕರಾವಳಿಯಾದ್ಯಂತ ನಿರಂತರವಾಗಿ ನಡೆಯುತ್ತಿರುವ ಬಡ್ಡಿ ದಂಧೆಗೆ ಹಲವಾರು ಕುಟುಂಬಗಳು ಬಲಿಯಾಗುತ್ತಲೇ ಇವೆ. ತಮಗೇ ಗೊತ್ತಿಲ್ಲದಂತೆ ಹಲವು ಬಡ ಕುಟುಂಬಗಳು ಬಡ್ಡಿ ದಂಧೆಯಿಂದ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿರುವ ಬೆನ್ನಿಗೇ ಯಡ್ತರೆ ಗ್ರಾಪಂ ವ್ಯಾಪ್ತಿಯ ಆಲಂದೂರು ಎಂಬಲ್ಲಿ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಸಾಲ ಮತ್ತು ಬಡ್ಡಿ ತೀರಿದರೂ ಮತ್ತೆ ಒಂದು ಲಕ್ಷ ರೂಪಾಯಿ ಕೊಡುವಂತೆ ಕಿರುಕುಳ ನೀಡುತ್ತಿದ್ದ ಆರೋಪಿ ಆಲಂದೂರು ನಿವಾಸಿ ಅನಂತ ಕೊಠಾರಿ ಯಾನೆ ಅಂತ ಕೊಠಾರಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಸಮಯದ ಹಿಂದೆ ಯಡ್ತೆರೆ ಗ್ರಾಮದ ಆಲಂದೂರು ನಿವಾಸಿ ಪ್ರಕರಣದ ಆರೋಪಿ ಅಂತ ಕೊಠಾರಿ ಎಂಬಾತ ಅಲ್ಲೇ ಮನೆ ಸಮೀಪದ ಮಾಚ ಪೂಜಾರಿ ಎಂಬುವರಿಗೆ ಒಂದು ಲಕ್ಷ ರೂಪಾಯಿ ಸಾಲವನ್ನು ಬಡ್ಡಿಗೆ ನೀಡಿದ್ದರು. ಅದರ ಜೊತೆಗೆ ಕೊಟ್ಟ ಸಾಲಕ್ಕೆ ಜಾಮೀನು ಎಂಬಂತೆ ಕರ್ನಾಟಕ ಬ್ಯಾಂಕಿನ ಶಿರೂರು ಶಾಖೆಯ ಖಾಲಿ ಚೆಕ್ಕನ್ನು ಪಡೆದುಕೊಂಡಿದ್ದರು. ಬಡ್ಡಿಗೆ ಹಣ ಪಡೆದಿದ್ದ ಮಾಚ ಪೂಜಾರಿ…
ಗಂಗೊಳ್ಳಿ: ಬೇರೆ ಎಲ್ಲಾ ಧರ್ಮಗಳಿಗೆ ಹೋಲಿಸಿದರೆ ಹಿಂದುಗಳಲ್ಲಿ ಧರ್ಮದ ಮೇಲೆ ಪ್ರೀತಿ ಕಡಿಮೆಯಾಗುತ್ತಿದೆ. ನಮ್ಮ ದೇಶದ ನೆಲ, ಜಲ, ಕುಲಕ್ಕೆ ನಾವು ಏನು ಮಾಡಿದ್ದೇವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹಿಂದು ಧರ್ಮವನ್ನು ಒಡೆಯುವ, ಹಿಂದು ಧರ್ಮ ಗುರುಗಳನ್ನು ಅತಂತ್ರಗೊಳಿಸುವ ಹುನ್ನಾರ ಕುತಂತ್ರ ನಡೆಯುತ್ತಿದೆ. ಆ ಮೂಲಕ ಬಹುಸಂಖ್ಯಾತ ಹಿಂದುಗಳನ್ನು ಒಡೆದು ದೇಶದಲ್ಲಿ ಅಶಾಂತಿ ಅಜಾಗರೂಕತೆ ಸೃಷ್ಟಿಸುವ ಅಸಹಿಷ್ಣುತೆ ಹೆಸರಿನಲ್ಲಿ ಗೊಂದಲ ಮೂಡಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಶ್ರೀ ಸಂತೋಷ ಗುರೂಜಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ಸುಮಾರು 15 ಲಕ್ಷ ರೂ. ವೆಚ್ಚದ ನೂತನ ಪುಷ್ಪರಥವನ್ನು ಶ್ರೀದೇವರಿಗೆ ಸಮರ್ಪಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ನಾವು ಜಾತಿ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ, ನಮ್ಮಲ್ಲಿ ಸರಿಸಮಾನತೆ ಬೆಳೆದಾಗ ಮಾತ್ರ ನಮ್ಮ ದೇಶ ಒಂದಾಗಲು…
ಕುಂದಾಪುರ: ನಮ್ಮ ದೇಶ, ಕಲೆ, ಸಂಸ್ಕೃತಿ, ಜೀವನ ಪದ್ಧತಿಯನ್ನು ಪ್ರೀತಿಸುವ ಸೌಂದರ್ಯ ಪ್ರಜ್ಞೆ ಇದ್ದವರು ದೇಶದ ದೊಡ್ಡ ಸಂಪತ್ತು. ನಾವು ಎಲ್ಲವನ್ನೂ ಗೌರವಿಸುವ ದೇಶದ ಆಸ್ತಿಯಾಗಬೇಕೇ ಹೊರತು ಅಪಾಯಕಾರಿ ವ್ಯಕ್ತಿಯಾಗಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಅವರು ಕುಂದಾಪುರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಡಾ. ಸುಭೋದ್ ಕುಮಾರ್ ಮಲ್ಲಿ ಅವರ ‘ಸೃಜನಾ’ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಮಾತನಾಡಿದರು. ಚಿತ್ರಕಲೆ ಸಮಾಜದ ಮೊತ್ತ ಮೊದಲ ಅಭಿವ್ಯಕ್ತಿ ಮಾಧ್ಯಮ. ಇದು ನೃತ್ಯ, ಬರಹ, ಹಾಡು ಎಲ್ಲಕ್ಕಿಂತಲೂ ಭಿನ್ನ. ಚಿತ್ರಕಲೆಯನ್ನು ನೋಡಿದರಷ್ಟೇ ಸಾಲದು ಅದರೊಳಗಿನ ಭಾವವನ್ನು ಕಾಣುವ ದೃಷ್ಟಿಯೂ ಬೇಕಾಗುತ್ತದೆ ಎಂದ ಅವರು, ದೇಶದ ಸಂಪನ್ಮೂಲಗಳ ಬಗ್ಗೆ ಮಾತನಾಡುವ ನಾವುಗಳು ನಮ್ಮೊಳಗಿನ ನಿಜವಾದ ಸಂಪನ್ಮೂಲದ ಬಗ್ಗೆ ತಿಳಿಯುವುದೇ ಇಲ್ಲ. ಏನನ್ನೋ ಕಲಿಯುತ್ತೇನೆ. ಇನ್ನೇನೋ ಆಗುತ್ತೇವೆ. ಇದು ಬದಲಾಗಬೇಕು. ಇಂದಿನ ಶಿಕ್ಷಣ ಜ್ಞಾನವನ್ನು ಕೊಡುತ್ತಿದೆಯೇ ಹೊರತು ಸುಂದರ ಮನಸ್ಸುಗಳನ್ನು ಕಟ್ಟಿಕೊಡುತ್ತಿಲ್ಲ ಎಂದರು. ಕೊಲ್ಲೂರು ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್…
ಕುಂದಾಪುರ: ಸಾಮಾಜಿಕ ಸೇವೆಯಲ್ಲಿ ಅರ್ಪಣಾಭಾವದೊಂದಿಗೆ ತೊಡಗಿಕೊಂಡು ವಿಶ್ವಕ್ಕೆ ವರವಾಗುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಪಾಲಿಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಆಧಿರಾಜ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ಗೆ ಆಧಿಕೃತ ಭೇಟಿ ನೀಡಿದ ಸಂದರ್ಭ ಹಂಗಳೂರಿನ ಸಹನಾ ಕನ್ವೆನಶನ್ ಸೆಂಟರ್‌ನಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ದಿನಕರ ಪಟೇಲ್ ಅಧ್ಯಕ್ಷತೆವಹಿಸಿದ್ದರು. 2018-19 ನೇ ಸಾಲಿನ ರೋಟರಿ ಜಿಲ್ಲೆ 3180ಇದರ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ ಶೆಟ್ಟಿ, ಕನ್ನಡ ಮಾಧ್ಯಮ ಪ್ರಶಸ್ತಿ ಪುರಸ್ಕೃತ ರೋಷನ್ ಭಾಸ್ಕರ್ ಪೂಜಾರಿ, ಕುಂದಾಪುರ ತಾಲೂಕು ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ದಿನಕರ ಆರ್. ಶೆಟ್ಟಿಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಮುಖವಾಣಿ ಸುರ್ಯೋದಯವನ್ನು ರೋಟರಿ ವಲಯ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಬಿಡುಗಡೆಗೊಳಿಸಿದರು. ಕ್ಲಬ್‌ಗೆ ನೂತನ ಸದಸ್ಯರನ್ನಾಗಿ ಮಹೇಶ್ ಪೂಜಾರಿ ಮತ್ತು ರವಿ. ಕೆ. ಅವರನ್ನು ಸೇರ್ಪಡೆಗೊಳಿಸಲಾಯಿತು.…
ಗಂಗೊಳ್ಳಿ: ಇತ್ತೀಚೆಗೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಟೆನ್ನಿಕಾಯ್ಟ್ ಸ್ಪರ್ಧೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿದ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರಜ್ವಲ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಾಂಡ್ಯ ಪಾಂಡುರಂಗ ಪೈ ,ಡಾ.ಭರತ್ ಕುಮಾರ್ ಭಟ್,ಎನ್ ಸದಾಶಿವ ನಾಯಕ್, ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ಡಾ.ಕಾಶೀನಾಥ ಪೈ ,ವಾಮನದಾಸ ಭಟ್ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕೊಲ್ಲೂರು: ಉತ್ತಮ ಆರೋಗ್ಯ, ಮನರಂಜನೆ ಹಾಗೂ ಯಶಸ್ಸು ಕ್ರೀಡೆಯಿಂದ ಸಿಗುತ್ತದೆ. ಇದರ ಜೊತೆ ತಾಳ್ಮೆ, ಇತರರೊಂದಿಗೆ ಮಧುರ ಬಾಂಧವ್ಯ ಹಾಗೂ ನಿಕಟ ಸಂಪರ್ಕದಿಂದ ನಮ್ಮ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ನಿರ್ಮಾಣವಾಗುತ್ತದೆ. ಕ್ರೀಡಾಪಟುಗಳು ಸ್ಪರ್ಧಾತ್ಮಕ ನೀತಿ-ನಿಯಮಗಳಿಗೆ ಬದ್ದರಾಗಿರಬೇಕು. ಈ ತತ್ವಗಳನ್ನು ನಿತ್ಯಜೀವನದಲ್ಲಿಯೂ ಅಳವಡಿಸಿಕೊಂಡರೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡಾ ಗುರುತಿಸಿಕೊಳ್ಳಲು ಸಾಧ್ಯ ಎಂದು ಕೋಟಾ ವಿವೇಕ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಸಂತ್ ಶೆಟ್ಟಿ ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ 2015-16ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಧ್ವಜಾರೋಹಣ ಮಾಡಿದ ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಭವಿಷ್ಯದಲ್ಲಿ ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದನ್ನು ಧೃಡಚಿತ್ತದಿಂದ ಆಯ್ಕೆ ಮಾಡಿಕೊಳ್ಳಬೇಕು. ಮನಸ್ಸಿನಲ್ಲಿ ದ್ವಂದ್ವ ನಿಲುವು ಬೇಡ. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯಿರಲಿ. ಯಾವುದೇ ಕಾರಣಕ್ಕೂ ಆಕರ್ಷಣೆಗೆ ಒಳಗಾಗದೇ ಉತ್ತಮವಾಗಿದ್ದನ್ನೆ ಆಯ್ಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕ್ರೀಡಾ…
ಬೈಂದೂರು: ಇಲ್ಲಿಗೆ ಸಮೀಪದ ಉಪ್ಪುಂದದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಯು. ಕೇಶವ ಪ್ರಭು (65) ತಮ್ಮ ಸ್ವಗೃಹದಲ್ಲಿ ನಿಧನರಾದ ಘಟನೆ ವರದಿಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಕೇಶವ ಪ್ರಭ್ರು ತಮ್ಮ ನಿವೃತ್ತಿಯ ನಂತರ ಉಪ್ಪುಂದ ಗ್ರಾಮವಿಕಾಸ ಸಮಿತಿಯ ಗೌರವಾಧ್ಯಕ್ಷರಾಗಿ ಮತ್ತು ಸೇವಾ ಸಂಗಮ ಶಿಶುಮಂದಿರದ ವ್ಯವಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ಮಾಡಿದ್ದರು. ಕಳೆದ ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.
ಕುಂದಾಪುರ: ಕರಾವಳಿಯ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಕ್ಷೇತ್ರದಲ್ಲಿ ಚಂಪಾಷಷ್ಠಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆದರೇ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು, ತಮ್ಮ ಹರಕೆಗಳನ್ನು ಸಲ್ಲಿಸಿ ಪುನೀತರಾದರು. ಮೊದಲ ದಿನ ಷಣ್ಣಾಳಿಕೇರ ಗಣಹೋಮ, ಶ್ರೀ ಕಾಳಿಂಗ ದೇವರಿಗೆ ನವಕುಂಭ ಸ್ನಪನ, ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಶ್ರೀ ದುರ್ಗಾದೇವಿಗೆ ಚಂಡಿಕಾ ಪಾರಾಯಣ ನಡೆದವು. ಷಷ್ಠಿಯ ದಿನದಂದು ಸುಬ್ರಹ್ಮಣ್ಯ ಕ್ಷೇತ್ರವೆಂಬ ಪ್ರತೀತಿ ಇರುವ ಕಾಳಾವರ ಕ್ಷೇತ್ರದಲ್ಲಿ ವೇ.ಮೂ ಚೆನ್ನಕೇಶವ ಭಟ್ ಸಾರಥ್ಯದಲ್ಲಿ ದೇವರಿಗೆ ಅಭಿಷೇಕ, ಪಂಚಾಮೃತ ಪೂಜೆ, ತೀರ್ಥಾಭಿಷೇಕ, ಪಲ್ಲಪೂಜೆ ಜರುಗಿದರೇ, ಭಕ್ತರಿಂದ ಉರುಳು ಸೇವೆ ನಡೆಯಿತು. ಸಾರ್ವಜನಿಕರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
