ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಭಾಗವಾದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಳೆದ ೧೦ ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಹಲವಷ್ಟು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಹೇಳಿದರು. ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಮೊಗವೀರ ಸೌಹಾರ್ದಯುತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯ ಮೂಲಕ ಯುವ ಸಮುದಾಯದ ಸಂಘಟನೆಯೊಂದಿಗೆ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಸ್ಥಳೀಯ ತಂಡಗಳನ್ನು ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗೆ ಅಣಿಗೊಳಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಇಂತಹ ಪಂದ್ಯಾಟಗಳಿಂದ ಸಾಧ್ಯವಾಗಿಸುವ ಜತೆಗೆ ಯುವಜನರನ್ನು ಕ್ರೀಯಾಶೀಲರಾಗಲು ಅವಕಾಶ ಮಾಡಿಕೊಡುತ್ತದೆ. ಯುವಶಕ್ತಿಗೆ ಹೊಸ ಆಯಾಮಾ ನೀಡುವ ಇಂತಹ ಕಾರ್ಯಕ್ರಮಗಳಲ್ಲಿ ಸಮುದಾಯದ ಯುವಕ-ಯುವತಿಯರು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದರು. ಘಟಕದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಚರ್ಚ್‌ಗಳಲ್ಲಿ ಗರಿಗಳ ಭಾನುವಾರ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಹಳ ಪುರಾತನ ಚಾರಿತ್ರ್ಯವುಳ್ಳ ಕುಂದಾಪುರ ರೊಜಾರಿ ಮಾತೆಯ ಇಗರ್ಜಿಯಲ್ಲಿ ‘ಗರಿಗಳ ಬಾನುವಾರ ಹಬ್ಬ’ ವನ್ನು ಬಹಳ ಭಕ್ತಿ ಪೂಜೆಯಿಂದ ಆಚರಿಸಲಾಯಿತು. ಇದರ ನೇತ್ರತ್ವವನ್ನು ಕುಂದಾಪುರ ಚರ್ಚಿನ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ವಹಿಸಿ. ’ಎಸುವಿನ ಕಷ್ಟ ವೇದನೆಯನ್ನು, ಮನದಾಳದಿಂದ ಚಿಂತಿಸಬೇಕು, ಜೀವನದಲ್ಲಿ ಎಸುವಿನಂತೆ ನಿಂದನೆಗೆ, ವಿರೋದಕ್ಕೆ ಸದಾ ಸಿದ್ದನಿರಬೇಕು ಮತ್ತು ಸೋತವರಿಗೆ ಬಡ ಬಗ್ಗರಿಗೆ, ಇನ್ನೂ ಹೆಚ್ಚು ಕೆಳಕ್ಕೆ ಬೀಳಿಸುವಂತ ಕ್ರತ್ಯಗಳನ್ನು ಮಾಡಬೇಡಿ’ ಎಂದು ಸಂದೇಶ ನೀಡಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವ|ಅನೀಲ್ ಡಿಸೋಜಾ ಸಹ ಯಾಜಾಕರಾಗಿ ಭಾಗವಹಿಸಿದ್ದ ಈ ಧಾರ್ಮಿಕ ಪೂಜಾ ವಿಧಿಯ ಅಚರಣೆಯಲ್ಲಿ ಬಹಳಸ್ಟು ಭಕ್ತಾದಿಗಳು ಈ ಪವಿತ್ರವಾದ ಆಚರಣೆಯಲ್ಲಿ ಭಾಗಿಯಾಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳವಾಡಿ ಶ್ರೀ ಮೂಕಾಂಬಿಕಾ ಯೂತ್ ಕ್ಲಬ್ ರಿ. ಇದರ 12ನೇ ವರ್ಷದ ವಾರ್ಷಿಕೋತ್ಸವ ಎಪ್ರಿಲ್ 15 ಶನಿವಾರ ಕಳವಾಡಿಯಲ್ಲಿ ಅದ್ದೂರಿಯಾಗಿ ಜರುಗಲಿದ್ದು, ಸಕಲ ಸಿದ್ಧತೆಗಳು ನಡೆದಿವೆ. ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ವೇದಮೂರ್ತಿ ರಾಮಚಂದ್ರ ಅನಂತ ಭಟ್ಟರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಮಾರಿಕಾಂಬ ಯೂತ್ ಕ್ಲಬ್ ಸದಸ್ಯರಿಂದ ಆಕರ್ಷಕ ನೃತ್ಯ ಪ್ರದರ್ಶನ, ಅಂಗನವಾಡಿ ಪುಟಾಣಿಗಳಿಂದ ನೃತ್ಯ; ರಾತ್ರಿ, ನರ್ತಕಿ ಉಡುಪಿ ಕಲಾವಿದರಿಂದ ಭರತನಾಟ್ಯ ಹಾಗೂ ನೃತ್ಯ ರೂಪಕ ಬಳಿಕ ರೂಪಕಲಾ ಕುಂದಾಪುರ ತಂಡದಿಂದ ಪಾಪಾ ಪಾಂಡು ನಾಟಕ ಪ್ರದರ್ಶನಗೊಳ್ಳಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವರ್ಗಾವಣೆಗೆ ಪಟ್ಟು ಹಿಡಿದ ಆಡಳಿತ ಪಕ್ಷದ ಸದಸ್ಯರು. ಕರ್ತವ್ಯ ಲೋಪ, ತಾ.ಪಂ ಸದಸ್ಯರಿಗೆ ಅಗೌರವ ತೋರಿದ ಅಧಿಕಾರಿಯ ವರ್ಗಾವಣೆಗೆ ಆಗುವ ತನಕ ಸಭೆಯಲ್ಲಿ ಭಾಗವಹಿಸಲಾರೆವು ಎಂದು ಸಭಾತ್ಯಾಗ ನಡೆಸಿದ ಘಟನೆಗೆ ಕುಂದಾಪುರ ತಾಲೂಕು ಪಂಚಾಯತ್ ಸಾಕ್ಷಿಯಾಯಿತು. ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆ ಸಭಾತ್ಯಾಗದೊಂದಿಗೆ ಅಂತ್ಯಗೊಂಡಿದ್ದು ಆಡಳಿತ ಪ್ರತಿಪಕ್ಷಗಳ ಭಿನ್ನ ಧ್ವನಿಯ ನಡುವೆಯೂ ಇಒ ವರ್ಗಾವಣೆ ಇಲ್ಲವೇ ಜಿಪಂ ಎದುರು ಪ್ರತಿಭಟನೆ ಎಂದು ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಮಾತನಾಡಿ, ತಾಲೂಕು ಪಂಚಾಯತ್ ಸದಸ್ಯರ ಅಹವಾಲುಗಳಿಗೆ ಕಾರ್ಯನಿರ್ವಹಣಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಸದಸ್ಯರು ಪ್ರಶ್ನಿಸಿದರೆ ಗಲಾಟೆ ಮಾಡುವುದು, ಏರು ಧ್ವನಿಯಲ್ಲಿ ಮಾತನಾಡುವುದನ್ನು ಮಾಡುತ್ತಿದ್ದಾರೆ. ಮಹಿಳಾ ಸದಸ್ಯರು ಯಾವುದಾದರೂ ವಿಚಾರ ಕೇಳಿ ಕರೆ ಮಾಡಿದರೆ ಅವರನ್ನು ಹೆಂಗಸು ಎಂದು ಸಂಭೋಧಿಸಿ ಸದಸ್ಯರ ಗೌರವಕ್ಕೆ ಚ್ಯುತಿ ತಂದಿದ್ದಾರೆ. ತಮ್ಮ ಮೇಲೆ ಕ್ರಮಕೈಗೊಳ್ಳು ನಿರ್ಣಯ ಕೈಗೊಳ್ಳಲಾವುದು ಎಂದು…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಅಮಾಸೆಬೈಲು: ಅಂಧತ್ವ ಅನ್ನೋದು ಕಣ್ಣಿಗೆ ಹೊರತು ಒಳಗಣ್ಣಿಗಲ್ಲ. ಬದುಕುವ ಛಲವಿದ್ದರೆ, ಎಂಥಹ ಸಂದರ್ಭವನ್ನೂ ಎದುರಿಸುವ ತಾಕತ್ತಿದ್ದರೇ ತನ್ನಲ್ಲಿನ ವಿಕಲತೆ ಅಡ್ಡಿಯಾಗದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟಿನ ಅಂಧ ದಂಪತಿಗಳು. ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಸ್ಥಳೀಯ ಗ್ರಾಮ ಪಂಚಾಯತ್‌ನೊಂದಿಗೆ ಸೆಣಸುತ್ತಾ, ತಮ್ಮ ಹಕ್ಕಿಗಾಗಿ ಹೋರಾಡುತ್ತಲೇ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ. ಅಮಾಸೆಬೈಲು ಗ್ರಾಮ ತೊಂಬಟ್ಟು ಭಟ್ರಪಾಲು ನಿವಾಸಿ ನಾರಾಯಣ ಪೂಜಾರಿ ರಾಧಾ ಪೂಜಾರಿ ನಾಲ್ವರ ಮಕ್ಕಳಲ್ಲಿ ಕೊನೆಯವರಾದ ಗಣಪತಿ ಪೂಜಾರಿ ಅವರು ಹುಟ್ಟೂ ಅಂಧರು. ಅವರ ಪತ್ನಿ ಸುಶೀಲಾ ಪೂಜಾರಿ ಕೂಡಾ ಒಂದು ಕಣ್ಣು ದೃಷ್ಠಿ ಕೊಂಡಿದ್ದಾರೆ. ಆದರೇನಂತೆ ಬದುಕಿನಲ್ಲಿ ಒಂದಿಷ್ಟೂ ಧೈರ್ಯಗುಂದದೇ ಸಾಮಾನ್ಯರೂ ನಾಚಿಸುವಂತೆ ಬದುಕಿ ತೋರಿಸುತ್ತಿದ್ದಾರೆ ದಂಪತಿಗಳು. ಆದರೆ ಈ ದಂಪತಿಗಳ ಛಲದ ಬದುಕಿಗೆ ಅಮಾಸೆಬೈಲು ಗ್ರಾ.ಪಂ ಎಳ್ಳುನೀರು ಬಿಡುತ್ತಿದೆ. ವೈಯಕ್ತಿಕ ಮರ್ಚಿಗೆ ಅಂಧರೊಂದಿಗೆ ಸೆಣಸಾಡುತ್ತಿರುವ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಣ್ಣತನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ೫೦೫ ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಭಾನುವಾರ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್, ಹಿಂಜಾವೇ ಉಡುಪಿ ಜಿಲ್ಲಾ ಸಹಸಂಚಾಲಕ ಟಿ.ವಾಸುದೇವ ದೇವಾಡಿಗ, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಮಡಿವಾಳ, ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಸೇವಾದಾರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಛಿದ್ರವಾಗುತ್ತಿರುವ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯು ಕಾರ್ಯ ದೊಡ್ಡದು. ಒಕ್ಕೂಟ ವ್ಯವಸ್ಥೆಯಲ್ಲಿ ಸಾಮರಸ್ಯದ ಬದುಕು ಕಂಡುಕೊಳ್ಳಬೇಕಿದ್ದರೆ, ಪರಸ್ಪರರ ಚಿಂತನೆಯನ್ನು ಗೌರವಿಸಿ ಎಲ್ಲರನ್ನೂ ಸಮಾನವಾಗಿ ಕಾಣುವಂತವರಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ಧರಾಮಯ್ಯ ಹೇಳಿದರು. ಅವರು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಗುಲ್ವಾಡಿ ತೋಟದಮನೆ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 2016ನೇ ಸಾಲಿನ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಸ್ವಾರಕ ಗೌರವ ಪುರಸ್ಕಾರವನ್ನು ಪತ್ರಕರ್ತ ಕೆ.ಪಿ ಮಂಜುನಾಥ ಸಾಗರ್ ಅವರಿಗೆ ಪ್ರದಾನಿಸಿ ಮಾತನಾಡಿದರು. ಸಂತೋಷ್‌ಕುಮಾರ್ ಗುಲ್ವಾಡಿ ಪತ್ರಿಕೋದ್ಯಮ, ಶಿಕ್ಷಣ ಹಾಗೂ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದೆ ಸೇವೆ ಅಪಾರವಾದುದು. ಅವರ ಗರಡಿಯಲ್ಲಿ ಬೆಳೆದು ಎತ್ತರಕ್ಕೇರಿದವರ ಸಂಖ್ಯೆ ದೊಡ್ಡದಿದೆ. ಗುಲ್ವಾಡಿ ಅವರ ಹುಟ್ಟೂರಿನಲ್ಲಿ ಅವರನ್ನು ಸ್ಮರಿಸುವ ಕಾರ್ಯವಾಗುತ್ತಿರುವುದು ಶ್ಲಾಘನೀಯ ಎಂದ ಅವರು ಯಾಕೂಬ್ ಖಾದರ್ ಗುಲ್ವಾಡಿ ಅವರು ಸಂತೋಷ್‌ಕುಮಾರ್ ಗುಲ್ವಾಡಿ ಅವರನ್ನು ಏಕಲವ್ಯನಂತೆ ಅನುಸರಿಸಿದವರು. ಗುಜರಿಯಂಗಡಿಯಲ್ಲಿದ್ದುಕೊಂಡು ಓದು, ಬರವಣಿಗೆಯ ಬಗೆಗೆ…
ತಾಲೂಕು ರಚನೆಯಲ್ಲಿ ಅನುಮಾನ ಬೇಡ. ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ಕೆ. ಗೋಪಾಲ ಪೂಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಜನರ ಬಹುಕಾಲದ ಬೇಡಿಕೆಯಾಗಿದ್ದ ತಾಲೂಕು ರಚನೆಯ ಕನಸು ಈಡೇರಿದ್ದು, ತಾಲೂಕು ಕೇಂದ್ರವಾಗಲು ಅಗತ್ಯವಿರುವ ಕಛೇರಿಗಳನ್ನು ಶೀಘ್ರ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಲಾಗುವುದು. ಬೈಂದೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮಿಸಿದ್ದು ಮಾದರಿ ತಾಲೂಕನ್ನಾಗಿ ರೂಪಿಸುವಲ್ಲಿ ಎಲ್ಲರೂ ಶ್ರಮವಹಿಸಬೇಕಿದೆ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ತಾಲೂಕು ರಚನೆ, ಅನುಷ್ಠಾನ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರು ಆಯೋಜಿಸಿದ್ದ ನೂತನ ತಾಲೂಕು ರಚನೆಯ ಸಂಭ್ರಮಾಚರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬೈಂದೂರಿನ ಹಲವು ನಾಯಕರ ನಿರಂತರ ಹೋರಾಟ ತಾಲೂಕಾಗುವಲ್ಲಿ ಪ್ರಮುಖ ಪಾತ್ರವಹಿಸಿದೆ. ಘೋಷಿತ ತಾಲೂಕು ಅನುಷ್ಠಾನದ ಬಗ್ಗೆ ಯಾರಿಗೂ ಸಂದೇಹ ಬೇಡ. ಈಗಾಗಲೇ ಬೈಂದೂರಿನಲ್ಲಿ ತಾಲೂಕು ಕೇಂದ್ರಕ್ಕೆ ಅಗತ್ಯವಾದ ಬಹುತೇಕ ಕಛೇರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಜೆ.ಸಿ.ಐ ಕುಂದಾಪುರ ಚೆರಿಷ್ಮಾ ಮತ್ತು ಜೆ.ಸಿ.ಐ ಕುಂದಾಪುರದ ಆಶ್ರಯದಲ್ಲಿ ರೋಟರಿ, ಲಯನ್ಸ್ ಹಾಗೂ ಜೇಸಿ ಸದಸ್ಯರಿಗಾಗಿ ನೆಹರೂ ಪೇವಿಲಿಯನ್‌ನಲ್ಲಿ ನಡೆದ ಶೆಟ್ಲ ಬ್ಯಾಡ್ಮಿಂಟನ್ ಪಂದ್ಯಾಕೂಟದ ೪೦ ವಯೋಮಾನ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ರೋಟರಿ ಕ್ಲಬ್ ಕುಂದಾಪುರದ ಸತೀಶ್ ಕೋಟ್ಯಾನ್ ಮತ್ತು ರಾಜೇಶ್ ನಾಯರ್ ಪ್ರಥಮ ಸ್ಥಾನ ಪಡೆದರು. ರೋಟರಿ ಕ್ಲಬ್ ಕುಂದಾಪುರ ಸೌತ್‌ನ ಸುಪ್ರೀತ್ ಚಾತ್ರಾ ಮತ್ತು ಪ್ರಸಾದ್ ದ್ವೀತಿಯ ಸ್ಥಾನ, 40 ವಯೋಮಾನದೊಳಗಿನ ಪುರುಷರ ವಿಭಾಗದಲ್ಲಿ ರೋಟರಿ ಕ್ಲಬ್ ಕುಂದಾಪುರ ಸೌತ್‌ನ ವಿನಾಯಕ್ ಪೈ ಮತ್ತು ಸಂತೋಷ ಕಾಮತ್ ಪ್ರಥಮ, ಜೆಸಿಐ ಕುಂದಾಪುರದ ಚಂದನ್ ಮತ್ತು ಶಂಕರ್ ನಾರಾಯಣ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಜೆಸಿಐ ಕುಂದಾಪುರ ಚರಿಷ್ಮಾದ ಗೀತಾಂಜಲಿ ಆರ್. ನಾಯ್ಕ್ ಮತ್ತು ರೋಶನಿ ಪ್ರಥಮ, ಜ್ಯೂನಿಯರ್ ಜೇಸಿ ಕುಂದಾಪುರದ ಸ್ಪಂದನಾ ಮತ್ತು ನಕ್ಷಾ ದ್ವಿತೀಯ ಸ್ಥಾನ ಪಡೆದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಹಂಗಳೂರಿನ ಸೂಪರ್ ಗ್ರೇಡ್ ಇಲೆಕ್ಟ್ರೀಕಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’, ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ 2015-16ನೇ ಸಾಲಿನ ಅಂತರ್‌ಕಾಲೇಜು ವಾರ್ಷಿಕ ಸಂಚಿಕೆ ಸ್ವರ್ಧೆಯ ವರ್ಗ-1ರಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಗ್ರಾಮೀಣ ಸೊಗಡು, ವಿಶಿಷ್ಟ ಸಮುದಾಯಗಳ ಪರಿಚಯ, ಬಹುಭಾಷಾ ವೈವಿಧ್ಯ, ಕಥೆ, ಕವನ ಸೇರಿದಂತೆ ಹತ್ತಾರು ವಿಭಾಗಗಳನ್ನೊಳಗೊಂಡ ಸಂಚಿಕೆ ಶಿಖರ ಅಂದದ ಮುಖಪುಟದೊಂದಿಗೆ ಮೂಡಿಬಂದಿತ್ತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೋಮ ವಾರ್ಷಿಕ ಸಂಚಿಕೆಯ ಗೌರವ ಸಂಪಾದಕರಾಗಿದ್ದರೇ, ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ ನಿರ್ವಾಹಕ ಸಂಪಾದಕರಾಗಿದ್ದಾರೆ. ಕಳೆದ ಸಾಲಿನಲ್ಲಿಯೂ ಶಿಖರ ಪ್ರಥಮ ಸ್ಥಾನ ಪಡೆದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾರ್ಷಿಕ ಸಂಚಿಕೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣೀಕರ್ತರಾದ ಸಂಪಾದಕೀಯ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ.
