ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಂದ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಮೂಡಬಿದರೆಯ ಕಾಂಗ್ರೆಸ್ ನಾಯಕ ಮೇಘನಾಥ್ ಶೆಟ್ಟಿ, ಹೊಸಪೇಟೆಯ ಮಾಜಿ ಶಾಸಕ ರತನ್ ಸಿಂಗ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆರ್. ಅಶೋಕ್, ವಿ ಸೋಮಣ್ಣ, ಕಾರ್ಕಳ ಸುನಿಲ್ ಕುಮಾರ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಹಾಗೂ ಇತರರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ತಾಲೂಕಿನ ಕೋರ್ಗಿಯವರಾದ ಜಯಪ್ರಕಾಶ್ ಹೆಗ್ಡೆ ಅವರು ವೃತ್ತಿಯಲ್ಲಿ ವಕೀಲರು. ಮೊದಲ ಭಾರಿಗೆ ಬ್ರಹ್ಮಾವರ ಕ್ಷೇತ್ರದಿಂದ ಜನತಾ ಪರಿವಾರದ ಮೂಲಕ ಸ್ವರ್ಧಿಸಿ ಶಾಸಕರಾಗಿ ಆಯ್ಕೆಗೊಂಡು ಬಳಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜನತಾ ಪರಿವಾರದ ಒಡಕಿನ ಹಿನ್ನೆಲೆಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ | ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಶಿವರಾಜ್ ಮತ್ತು ಕೀರ್ತನ್ ತಯಾರಿಸಿದ ಸಾಕ್ಷ್ಯಚಿತ್ರ. ನೀವು ನೋಡಿದರ ಕಾಲೇಜಿನ ಈ ನೋಟ! ಒಮ್ಮೆ ನೋಡಿ, ಶೇರ್ ಮಾಡಿ Direct Link: https://youtu.be/Q3KaGAxqpW4?list=PLRT_i080rqa9bVdhFqIcEa4-X_btXuZls
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವರದಿಗಾರಿಕೆ ಎಂಬುದು ಸುಲಭದ ಕಾರ್ಯವಲ್ಲ. ಅದರ ನಡುವೆ ಪುರಷರೇ ಬಹುಸಂಖ್ಯಾತರಿರುವ ಮಾಧ್ಯಮ ಕ್ಷೇತ್ರದಲ್ಲಿ ವಿರಳ ಸಂಖ್ಯೆಯಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ. ಅಪರೂಪಕ್ಕೆಂಬಂತೆ ಕುಂದಾಪುರದಲ್ಲಿ ಏಕೈಕ ಮಹಿಳಾ ವರದಿಗಾರರಾಗಿ ಅಶ್ವಿನಿ ಹಕ್ಲಾಡಿ ಅವರಂತವರು ದುಡಿಯುತ್ತಿರುವುದು ಪ್ರಶಂಸನೀಯ ಎಂದು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ನಾಯ್ಕ ಮಾತನಾಡಿದರು. ಬುಧವಾರ ಕೋಟೇಶ್ವರ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಜಯ ಕರ್ನಾಟಕ ಕುಂದಾಪುರ ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಅವರನ್ನು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ನಾಯ್ಕ ಸನ್ಮಾನಿಸಿ ಮಾತನಾಡಿದರು. ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಅರುಣ್ ದೇವಾಡಿಗ ವಕ್ವಾಡಿ, ಮಾಜಿ ಅಧ್ಯಕ್ಷ ರಾಘವೇಂದ್ರ ಎಸ್ ಬೀಜಾಡಿ, ರೋಟರ‍್ಯಾಕ್ಟ್ ಸದಸ್ಯ ಸಂತೋಷ ಬಳ್ಕೂರು, ಕೃಷ್ಣ, ಮಿತ್ರಸಂಗಮ ಬೀಜಾಡಿ ಗೋಪಾಡಿ ಉಪಾಧ್ಯಕ್ಷ ಗಿರೀಶ್ ಬೀಜಾಡಿ, ಕುಂದಾಪುರ ಮೊಗವೀರ ಸಂಘಟನೆ ಅಧ್ಯಕ್ಷ ರಮೇಶ್ ಟಿ, ಮೊಗವೀರ ಸಂಘಟನೆ ಕಚೇರಿ ಸಿಬ್ಬಂಧಿ ಶಕೀಲಾ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಕೊಲ್ಲೂರಿನಲ್ಲಿ ಮಾರ್ಚ್ 10ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಹೊರೆ ಕಾಣಿಕೆ ಸಮರ್ಪಣೆ ಮಾ. 6ರಿಂದ 8ರ ತನಕ ನಡೆಯಿತು. ಕುಂದಾಪುರ ತಾಲೂಕಿನ ವಿವಿಧ ಗ್ರಾಮಗಳಿಂದ, ಸಂಘ ಸಂಸ್ಥೆಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ಮಾಡಲಾಯಿತು. ಮೂರು ದಿನಗಳ ಕಾಲ ನಿತ್ಯವೂ ವಿವಿಧ ಭಾಗಗಳಿಂದ ಹೊರೆ ಕಾಣಿಕೆ ಹರಿದು ಬಂದವು. ಸಿಂಗಾರ ಹೂವಿನ ಗೊನೆ, ಅಕ್ಕಿ, ತೆಂಗಿನಕಾಯಿ, ಬೆಲ್ಲ, ವಿವಿಧ ಧಾನ್ಯಗಳು, ತರಕಾರಿ, ಹಣ್ಣು, ಅಡಿಕೆ ಹೀಗೆ ಸಾಕಷ್ಟು ಪ್ರಮಾಣದಲ್ಲಿ ಹೊರೆಕಾಣಿಕೆ ನಾಗದೇವರ ಪುಣ್ಯ ಕಾರ್ಯಕ್ಕೆ ಸಮರ್ಪಣೆಗೊಂಡಿತು. ಭಕ್ತಾದಿಗಳು ಸ್ವಯಂಪ್ರೇರಿತವಾಗಿ ಭಕ್ತಿ ಪೂರ್ವಕವಾಗಿ ಹೊರೆ ಕಾಣಿಕೆ ಸಲ್ಲಿಸಿ ಈ ಮಹತ್ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಕಂಡು ಬಂತು. ಹೊರೆಕಾಣಿಕೆ ಸಲ್ಲಿಸಿದ ಪ್ರತಿ ಯೋರ್ವರನ್ನು ಬ್ಯಾಂಡ್ ವಾದ್ಯ, ತಾಂಬೂಲ, ಶಾಲು ನೀಡುವ ಮೂಲಕ ವಿನಯ ಪೂರ್ವಕವಾಗಿ ಸೇವಾರ್ಥಿಗಳಾದ ನಯನ ರಮೇಶ ಗಾಣಿಗ, ಮಕ್ಕಳಾದ ಪವನ್ ಗಾಣಿಗ, ಪ್ರಸನ್ನ ಗಾಣಿಗ, ಪೃಥ್ವಿನ್ ಗಾಣಿಗ ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಸ್ವಾಗತಿಸಿಕೊಂಡರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಸ್ವರ್ಧೆಯ ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಹೆಚ್. ಶಾಂತಾರಾಮ್ ಬಹುಮಾನ ವಿತರಿಸಿದರು. ಬಹುಮಾನ ವಿಜೇತರ ಪಟ್ಟಿ: ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ನಿರ್ಣಾಯಕರಾದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅರವಿಂದ ಹೆಬ್ಬಾರ್, ಪದ್ಮಿನಿ ಪ್ರಭು, ನರೇಂದ್ರ್ ಎಸ್. ಗಂಗೊಳ್ಳಿ, ಕಾರ್ಯಕ್ರಮ ಸಂಯೋಜಕರಾದ ಡಾ. ಪಾರ್ವತಿ ಜಿ. ಐತಾಳ್ ಉಪಸ್ಥಿತರಿದ್ದರು. ಬಹುಮಾನ ವಿಜೇತರು: ಲಘು ಶಾಸ್ತ್ರೀಯ ನೃತ್ಯ ಪ್ರಥಮ – ಸಿಂಧೂ ತಂಡ(ತೃತೀಯ ಬಿ.ಕಾಂ), ದ್ವಿತೀಯ – ಶರಾವತಿ (ದ್ವಿತೀಯ ಬಿ.ಎಸ್.ಸಿ), ತೃತೀಯ- ಯಮುನಾ (ದ್ವಿತೀಯಬಿ.ಕಾಂ) ಮತ್ತು ಸರಯೂ (ಪ್ರಥಮಬಿ.ಕಾಂ) ಜಾನಪದ ಶೈಲಿ ನೃತ್ಯ ಪ್ರಥಮ -ಕಾವೇರಿ ತಂಡ(ತೃತೀಯ ಬಿ.ಬಿ.ಎಸ್.ಸಿ), ದ್ವಿತೀಯ – ಗಂಗಾ (ಬಿ.ಬಿ.ಎಮ್) ತೃತೀಯ- – ಸಿಂಧೂ ತಂಡ(ತೃತೀಯ) ಬಿ.ಕಾಂ). ಚಲನಚಿತ್ರ ನೃತ್ಯ – ಗೋದಾವರಿ ತಂಡ(ಬಿ.ಎ) ದ್ವಿತೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಧಾರ್ಮಿಕ, ಸಾಮಾಜಿಕ ಕಾರ್ಯಗಳೊಂದಿಗೆ ಸ್ನೇಹ ಜೀವಿಯಾಗಿ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸಗಳಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್ ರಾಘವೇಂದ್ರ ರಾವ್ ನೇರಂಬಳ್ಳಿ ಅವರನ್ನು “ಸಮಾಜ ಸೇವಾ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದರಿಂದ ಕೋಟೇಶ್ವರದ ಹಿರಿಮೆಗೆ ಮತ್ತೂಂದು ಗರಿ ಸೇರಿದಂತಾಗಿದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲ ಭತೀರ್ಥ ಶ್ರೀಪಾದರು ನುಡಿದರು. ಕೋಟೇಶ್ವರದ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ರವಿವಾರ ನಡೆದ ಎನ್. ರಾಘವೇಂದ್ರ ರಾವ್ ನೇರಂಬಳ್ಳಿ ಅವರಿಗೆ ಸಮಾಜ ಸೇವಾ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು. ಸಚಿವ ಪ್ರಮೋದ್ ಮಧ್ವರಾಜ್ ಶುಭಾಶಂಸನೆಗೈದು, ರಾಘವೇಂದ್ರ ರಾವ್ ಅವರ ಸೇವೆಯ ಇತರರಿಗೆ ಮಾದರಿ ಎಂದರು. ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಆನೆಗುಡ್ಡೆ ಶ್ರೀ ವಿನಾಯಕ ದೇವಾಸ್ಥನದ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯ ನಾರಾಯಣ ಉಪಾಧ್ಯಾಯ ಅವರು ರಾಘವೇಂದ್ರ ರಾವ್ ಅವರ ಕ್ರೀಯಾಶೀಲತೆ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೇವರಿಗೆ ಭಕ್ತಿ ಪ್ರಧಾನವೇ ಹೊರತು ನಾವು ಅರ್ಪಿಸುವ ವಸ್ತುಗಳಲ್ಲ. ಸಂಸ್ಕಾರ, ಸಂಸ್ಕೃತಿಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಮನುಷ್ಯನಿಗೆ ಜಾತಿ ಮುಖ್ಯವಲ್ಲ ನೀತಿ ಮುಖ್ಯ. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಭಜನೆಯಿಂದ ಭಗವಂತ ಒಲಿದು ಸುಖ ಶಾಂತಿ ನೆಮ್ಮದಿ ಲಭಿಸಿ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಬಾರ್ಕೂರು ಸಂಸ್ಥಾನ ಮಠಾಧೀಶರಾದ ವಿದ್ಯಾವಾಚಸ್ಪತಿ ಡಾ. ಶ್ರೀ ಸಂತೋಷ ಗುರೂಜಿ ಹೇಳಿದರು. ಅವರು ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಶಿವರಾತ್ರಿ ಮಹೋತ್ಸವ, ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿಯ ೬೩ನೇ ವಾರ್ಷಿಕೋತ್ಸವ ಹಾಗೂ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ೪೩ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ದೇವಸ್ಥಾನದ ಅಧ್ಯಕ್ಷ ಸದಾಶಿವ ಜಿ.ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ಶುಭ ಹಾರೈಸಿದರು. ಕುಂದಾಪುರ ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಪುಟಾಣಿಗಳಿಗೆ ಬಹುಮಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ಮೀನುಗಾರಿಕಾ ಹೊರಬಂದರು ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಇದರಿಂದ ಮೀನುಗಾರರು ಬೇರೆಬೇರೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಸಂಬಂಧ ಗುತ್ತಿಗೆದಾರರಿಗೆ ನೋಟೀಸು ನೀಡಿ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬಂದರು ನಿರ್ಮಾಣ ಪ್ರದೇಶಕ್ಕೆ ರವಿವಾರ ಭೇಟಿನೀಡಿದ ಅವರು ಸ್ಥಳೀಯ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದರು. ನಿಧಾನಗತಿಯ ಕಾಮಗಾರಿಯಿಂದ ಮೀನುಗಾರರಿಗೆ ಬಂದರಿನ ಲಾಭ ದೊರೆಯದಂತಾಗಿದೆ. ಅದರ ಪಶ್ಚಿಮದ ತಡೆಗೋಡೆ ಪೂರ್ತಿಯಾಗದಿರುವ ಕಾರಣ ಇಲ್ಲಿ ವರ್ಷವಿಡೀ ಕಡಲ್ಕೊರೆತ ಸಂಭವಿಸಿ ಮರಮಟ್ಟ, ಜಮೀನು ಸಮುದ್ರ ಪಾಲಾಗಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿ ರಸ್ತೆ, ಮನೆಗಳಿಗೆ ಅಪಾಯ ಸಂಭವಿಸಲಿದೆ. ಗುತ್ತಿಗೆದಾರರ ವಾಹನ ಓಡಾಟದಿಂದ ಕರಾವಳಿ ಮಾರ್ಗ ಸಂಪೂರ್ಣ ಕೆಟ್ಟುಹೋಗಿದೆ. ಇವುಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಮೀನುಗಾರರು ಆಗ್ರಹಿಸಿದರು. ಉಪಸ್ಥಿತರಿದ್ದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ. ಆರ್. ದಯಾಂದ ಅವರೊಂದಿಗೆ ಚರ್ಚಿಸಿ ಉತ್ತರಿಸಿದ ಶಾಸಕರು ಕಾಮಗಾರಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ಭಾನುವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಹಾಗೂ ಅವರ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರಗಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ನೇತೃತ್ವದಲ್ಲಿ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಜರಗಿದವು. ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಕಾರ್ಯದರ್ಶಿ ಜಿ.ವೆಂಕಟೇಶ ನಾಯಕ್, ಖಜಾಂಚಿ ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಆಚಾರ್ಯ ಕುಟುಂಬಸ್ಥರು, ಪುರೋಹಿತರು, ಅರ್ಚಕರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಾತ್ಯಾತೀತ ಜನತದಳದ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕುಂದಾಪುರ ಅವರನ್ನು ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರ ಶೀಪಾರಸ್ಸಿನ ಮೇರೆಗೆ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಅವರು ರಮೇಶ್ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
