Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಾತ್ಯಾತೀತ ಜನತದಳದ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕುಂದಾಪುರ ಅವರನ್ನು ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರ ಶೀಪಾರಸ್ಸಿನ ಮೇರೆಗೆ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಅವರು ರಮೇಶ್ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು/ಕುಂದಾಪುರ: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು ಭಟ್ಕಳ ಮಾರ್ಗದಲ್ಲಿ ಹೊಸತಾಗಿ ಆರಂಭಿಸಿದ ವೋಲ್ವೋ ಬಸ್ ಸೇವೆಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಭಟ್ಕಳ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ಶಿರೂರು, ಬೈಂದೂರು ಹಾಗೂ ಕುಂದಾಪುರ ಮೊದಲಾದೆಡೆ ನಾಗರಿಕರು ನೂತನ ಬಸ್ಸನ್ನು ಸ್ವಾಗತಿಸಿದರು. ಶಿರೂರಿನಲ್ಲಿ ಜೆಸಿಐ ಶಿರೂರು ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ಸ್ವಾಗತಿಸಿಕೊಂಡು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರನ್ನು ಗೌರವಿಸಲಾಯಿತು. ಬೈಂದೂರಿನ ಸಾರ್ವಜನಿಕರು ಬಸ್ಸುನ್ನು ಬರಮಾಡಿಕೊಂಡ ಬಳಿಕ ಕೆಎಸ್‌ಆರ್‌ಟಿಸಿ ಅಧ್ಯಕ್ಷರನ್ನು ಗೌರವಿಸಿದರು. ಕುಂದಾಪುರದಲ್ಲಿಯೂ ನೂತನ ಬಸ್ಸನ್ನು ಸಾರ್ವಜನಿಕರು ಸ್ವಾಗತಿಸಿಕೊಂಡರು. ► ಮಂಗಳೂರು-ಭಟ್ಕಳ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್ಸಿಗೆ ಚಾಲನೆ – http://kundapraa.com/?p=21783  ► ಮಾ.5ರಿಂದ ಮಂಗಳೂರು-ಭಟ್ಕಳ ನೂತನ ವೋಲ್ವೋ ಬಸ್ ಸೇವೆ – http://kundapraa.com/?p=21752 =   

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಭಟ್ಕಳ: ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು ಭಟ್ಕಳ ಮಾರ್ಗದಲ್ಲಿ ಹೊಸತಾಗಿ ಆರಂಭಿಸಿದ ವೋಲ್ವೋ ಬಸ್ ಸೇವೆಗೆ ಕೆಎಸ್ಆರ್ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಭಟ್ಕಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಕೊನೆಗೂ ಸಾಕಾರಗೊಂಡಿದೆ. ಜನರ ಬೇಡಿಕೆಗನುಗುಣವಾಗಿ 9 ವೋಲ್ವೋ ಬಸ್ ನೀಡಿದ್ದು, ಮೊದಲಿಗೆ 6 ಬಸ್ಸುಗಳು ಸಂಚರಿಸಲಿದೆ. ಖಾಸಗಿಯವರ ಲಾಭಿಗೆ ಮಣಿಯದೇ ನೂತನ ವೋಲ್ವೋ ಬಸ್ಸುಗಳನ್ನು ಆರಂಭಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡಾಗ ಮಾತ್ರ ಇದರ ಯಶಸ್ಸು ಸಾಧ್ಯವಿದೆ ಎಂದರು. ರಾಜ್ಯದಲ್ಲಿ 3,600 ಬಸ್ಸುಗಳಿಗೆ ಟೆಂಡರ್ ಕರೆಯಲಾಗಿದ್ದು ಹೊಸ ಮಾರ್ಗಗಳಿಗೂ ಬಸ್ ಸಂಚರಿಸುವಂತೆ ಮಾಡಿ ಸಂಪರ್ಕ ವ್ಯವಸ್ಥೆಯನ್ನು ಸದೃಢಗೊಳಿಸಲು ಬದ್ಧರಾಗಿದ್ದೇವೆ ಎಂದರು. ಭಟ್ಕಳ ಶಾಸಕ ಮಾಂಕಾಳ ವೈದ್ಯ, ಕುಂದಾಪುರ ತಾ.ಪಂ ಸದಸ್ಯ ರಾಜು ದೇವಾಡಿಗ, ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಕಲತೆಯಿಂದ ಕುಗ್ಗಿದರೆ ಸಮಾಜ ನಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ. ನ್ಯೂನ್ಯತೆ ಮೆಟ್ಟಿನ ನಿಂತು ಸಾಧನೆ ಮಾಡುವ ಛಲವಿಲದ್ದರೆ ಸಾಧನೆಯ ಉತ್ತಂಗಕ್ಕೆ ಏರುವ ಮೂಲಕ ಸಮಾಜ ಕೂಡಾ ನಮ್ಮ ಗುರುತಿಸುತ್ತದೆ. ನ್ಯೂನ್ಯತೆಯನ್ನು ಮೆಟ್ಟಿನಿಲ್ಲುವ ಛಲವಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಹೇಳಿದರು. ಅವರು ಕುಂದಾಪುರ ಭಂಡಾರ್‌ಕಾರ್ರ‍್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜ್ ಹಳೆ ವಿದ್ಯಾರ್ಥಿ ಸಂಘ ವಾರ್ಷಿಕೋತ್ಸವ ನಿಮಿತ್ತ ಕಾಲೇಜ್ ಮಾಧವ ಮಂಟಪದಲ್ಲಿ ಆಯೋಜಿಸಿದ ಅಂತರ್ ಕಾಲೇಜ್ ಪ್ರತಿಭಾ ಸ್ಪರ್ಧೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಸರಕಾರದ ಸಹಾಯ ಮಾಡುವುದೆಂದು ಕುಳಿತುಕೊಳ್ಳದೇ ನಮ್ಮಿಂದ ಸಮಾಜಕ್ಕೆ ಸಾಧ್ಯವಾದಷ್ಟು ಸಹಕಾರ ನೀಡಬೇಕು. ಹಳೆ ವಿದ್ಯಾರ್ಥಿಗಳು ಕಾಲೇಜ್ ನೆರವಿಗೆ ಬರುವ ಮೂಲಕ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದ ಅವರು ಕಾಲೇಜ್ ಉಚಿತ ಭೋಜನ ನಿಧಿಗೆ ಅರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ಭಂಡಾರ್‌ಕಾರ‍್ಸ್ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಚ್. ಶಾಂತಾರಾಮ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊಲೆಗೆ ಒಂದು ಕೋಟಿ ರೂಪಾಯಿ ಸುಫಾರಿ ನೀಡುವುದಾಗಿ ಪರೋಕ್ಷವಾಗಿ ಹೇಳಿಕೆಕೊಟ್ಟ ಆರ್ ಎಸ್ ಎಸ್ ಮುಖಂಡ ಚಂದ್ರಾವತ್ ಬಂಧನವಾಗದಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಇಂತಹವರನ್ನು ಪ್ರಧಾನಿಗಳು ರಕ್ಷಿಸುತ್ತಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗೆ ಕೆಡುಕುಂಟು ಮಾಡುತ್ತಿರುವವರೆ ದೇಶದ ಚುಕ್ಕಾಣಿಯಂತೆ ಹಿಡಿದರೆ ದೇಶವಾಸಿಗಳ ಪರಿಸ್ಥಿತಿ ಏನಾಗಬಹುದು ಎಂಬುವುದು ಸೂಚನೆ ದಿನದಿಂದ ದಿನಕ್ಕೆ ಗೋಚರಿಸುತ್ತಿದೆ. ಇಂತಹ ಕೊಲೆಗಡುಕ ಸಂಸ್ಕೃತಿ ಯನ್ನು ಎಲ್ಲರೂ ವಿರೋಧಿಸಬೇಕಾಗಿದೆ ಎಂದು ಕುಂದಾಪುರ ಸಿಪಿಎಂ ಮುಖಂಡ ಕಾಂ.ಹೆಚ್ ನರಸಿಂಹ ಹೇಳಿದರು. ಅವರು ಕುಂದಾಪುರ ಶಾಸ್ತ್ರೀವೃತ್ತದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷ ಕುಂದಾಪುರದ ನೇತೃತ್ವದಲ್ಲಿ ಪಿಣರಾಯಿ ವಿಜಯನ್ ಕೊಲೆಗೆ ಸುಫಾರಿ ನೀಡುವುದಾಗಿ ಹೇಳಿದ ಆರ್ ಎಸ್ ಎಸ್ ಮುಖಂಡನ ಹೇಳಿಕೆಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಸಿಪಿಎಂ ಕುಂದಾಪುರ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ಕೇರಳವು ದೇಶದಲ್ಲೇ ಕೋಮು ಸೌಹಾರ್ದತೆಗೆ ಹೆಸರಾದ ರಾಜ್ಯವಾಗಿದೆ. ಈ ಸೌಹಾರ್ದತೆಗೆ ಸಿಪಿಎಂ ಪಕ್ಷದ ತ್ಯಾಗದಿಂದಾಗಿ ನೆಲೆಗೊಂಡಿದೆ. ಇಂತಹ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಬೈಂದೂರು ಸಂಸದ ಬಿ. ಎಸ್. ಯಡಿಯೂರಪ್ಪರ ಅವರನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ ನೇತೃತ್ವದ ತಂಡ ಭೇಟಿ ಮಾಡಿ ಮರವಂತೆ ಕಡಲ್ಕೊರೆತ, ಬೈಂದೂರು ಮೇಲ್ಸೆತುವೆ ಹಾಗೂ ಕೆರಾಡಿ ದತ್ತುಗ್ರಾಮಕ್ಕೆ ಅನುದಾನ ಬಿಡುಗಡೆ ಮುಂತಾದ ವಿಷಯಗಳ ಬಗೆಗೆ ಮನವಿ ಸಲ್ಲಿಸಿತು. ಮರವಂತೆಯಲ್ಲಿ ಕಡಲ್ಕೊರೆತದಿಂದ ರಸ್ತೆ ಹಾಗೂ ಮನೆಗಳನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದು ಕಡಲ್ಕೊರೆತಕ್ಕೆ ಸೂಕ್ತ ವ್ಯವಸ್ಥೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು. ಬೈಂದೂರು ವೃತ್ತದಲ್ಲಿ ಅಂಡರ್ ಪಾಸ್ ಮಾಡಲು ರಾಷ್ಟೀಯ ಹೆದ್ದಾರಿಯವರು ಯೋಚಿಸಿದ್ದು ಸದರಿ ಯೋಜನೆಯನ್ನು ಕೈಬಿಟ್ಟು ಮೇಲ್ಸೆತುವೆ ಒಪ್ಪಿಗೆ ನೀಡುವಂತೆ ಶೀಪಾರಸ್ಸು ಮಾಡುವುದು ಹಾಗೂ ಕೆರಾಡಿ ದತ್ತು ಗ್ರಾಮಕ್ಕೆ ವಾರಾಹಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಲಾಯಿತು. ಮನವಿಗೆ ಸ್ಪಂದಿಸಿದ ಸಂಸದ ಬಿ.ಎಸ್. ಯಡಿಯೂರಪ್ಪ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು ಕಡಲ್ಕೋರೆತ, ಅಂಡರ್ ಪಾಸ್ ಸಮಸ್ಯೆಗಳ ಬಗೆಗೆ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಯಾಶೀಲ ಚಿಂತನೆಯೊಂದಿಗೆ ತನ್ನದೇ ವೈಶಿಷ್ಟ್ಯವನ್ನು ಹೊಂದಿರುವ ಮಾತಾ ಮೊಂಟೆಸ್ಟೋರಿಯ ಈ ವರ್ಷದ ಕ್ರೀಡೋತ್ಸವ ಕೋಡಿಯ ದ್ವೀಪ ಸ್ತಂಭದ ಬಳಿ ಕಡಲ ತೀರದಲ್ಲಿ ಜರುಗಿತು. ಕ್ರೀಡೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಕಳೆದ ೭ ವರ್ಷಗಳಿಂದ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ತೋರಿದ ಬದ್ಧತೆ ಹಾಗೂ ಅದರ ಉಪಯೋಗವನ್ನು ಪಡೆದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮಕ್ಕಳನ್ನು ಕೇವಲ ಪುಸ್ತಕದೊಂದಿಗೆ ಏಕತಾನತೆಗೆ ಒಳಪಡಿಸದೆ ಅವರ ದೈಹಿಕ ಮಾನಸಿಕ ಧೃಢತೆಗೆ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವ ಪೋಷಕರು ಅಭಿನಂದನಾರ್ಹರು ಎಂದು ನುಡಿದರು. ವಿವಿಧ ವಯೋಮಿತಿಯಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಪುಟಾಣಿಗಳು ಆನಂದಕ್ಕೆ ಪಾರವೇ ಇರಲಿಲ್ಲ. ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ಹಿರಿಯ ವಿದ್ಯಾರ್ಥಿಗಳಿಗೂ ವಿಶೇಷವಾಗಿ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿತ್ತು. ಪೋಷಕರಿಗಾಗಿ ಹಮ್ಮಿಕೊಂಡ ಕ್ರೀಡಾ ಚಟುವಟಿಕೆಗಳು ವಿಶೇಷವಾಗಿ ತಂದೆ ತಾಯಿಯರ ಮೂರು ಕಾಲಿನ ಓಟ ಮುದ್ದು ಮಕ್ಕಳ ಮನಸ್ಸಿಗೆ ಇನ್ನಷ್ಟು ಆಹ್ಲಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಪರಿವರ್ತನ ಪುನರ್ ವಸತಿ ಕೇಂದ್ರ ಮತ್ತು ಮನಸ್ಮಿತಾ ಫೌಂಡೇಶನ್, ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ ೧೭ನೇ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು. ಕೋಟ ಸಿ.ಎ ಬ್ಯಾಂಕ್‌ನ ಅಧ್ಯಕ್ಷರಾದ ತಿಮ್ಮ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ಮಾನಸಿಕ ರೋಗವು ಒಂದು ಸಾಮಾಜಿಕ ಕಳಂಕವೆಂದು ಭಾವಿಸದೆ ಮನೋ ವೈದ್ಯರ ಚಿಕಿತ್ಸೆಯನ್ನು ಪಡೆಯುವ ಪ್ರವೃತ್ತಿ ಇಂದು ಜನರಲ್ಲಿ ಹೆಚ್ಚುತ್ತಿದೆ ಹಾಗೂ ಅವರಿಗೂ ಮತ್ತು ಅವರ ಕುಟುಂಬದವರಿಗೂ ಮಾನಸಿಕ ನೆಮ್ಮದಿ ಸಿಗುವಂತಾಗುತ್ತಿದೆ ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಶ್ರೀಮತಿ ದೇವಕಿ .ಕೆ. ಶೆಟ್ಟಿ (ಅಧ್ಯಕ್ಷರು ಲಯನೆಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು) ಇವರು ಮಾತನಾಡಿ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ ಆದಷ್ಟು ಶ್ರೀಘ್ರದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಶ್ರೀಮತಿ ಶಕುಂತಲಾ ಶೆಟ್ಟಿ (ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್) ಇವರು ಈ ಪರಿಸರದ ಜನರು ಶಿಬಿರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದದ ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೆದ್ದಾರಿ ಅಂಡರ್ ಪಾಸ್‌ನಿಂದ ಅನುಕೂಲಕ್ಕಿಂತ ಅನನುಕೂಲವೇ ಅಧಿಕ ಎಂದು ವಾದಿಸುತ್ತಿರುವ ಸಾರ್ವಜನಿಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕುಂದಾಪುರ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ಹಿಂದೆ ಸಮೀಪದ ಪದ್ಮಾವತಿ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸುವುದರಿಂದ ದೇವಾಲಯಕ್ಕೆ ಬಂದು ಹೋಗುವ ಭಕ್ತರಿಗೆ, ಅನ್ಯ ಸಂಚಾರಿಗಳಿಗೆ ತೀವ್ರ ತೊಂದರೆಯಾಗಲಿದೆ. ಇಲ್ಲಿ ಯಾವುದೇ ಸ್ಥಳೀಯ ರಸ್ತೆ ಹೆದ್ದಾರಿಗೆ ಸೇರುತ್ತಿಲ್ಲ. ಇಲ್ಲಿ ಅಂಡರ್ ಪಾಸ್ ನಿರ್ಮಿಸಿದರೆ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದರ ಬದಲಾಗಿ ಹೆದ್ದಾರಿ ಇಕ್ಕಡೆಗಳ ಬಡಾಕೆರೆ-ಮರವಂತೆ ಸ್ಥಳೀಯ ರಸ್ತೆಗಳ ಕೂಡುಸ್ಥಳದಲ್ಲಿ ಅಥವಾ ಅರೆಹೊಳೆ ಕ್ರಾಸ್‌ನಲ್ಲಿ ಅದನ್ನು ನಿರ್ಮಿಸಿದರೆ ಜನೋಪಕಾರಿಯಾಗುವುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ಯಾಮಲಾ ಕುಂದರ್, ಜಗದೀಶ ಪೂಜಾರಿ, ಮಹೇಂದ್ರಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ಆಯೋಜಿಸಿದ ಪ್ಲಾಸ್ಟಿಕ್ ನಿಷೇಧ, ಕಸ ವಿಲೇವಾರಿಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಜಾಥಾಕ್ಕೆ ಸ್ಥಳೀಯ ಬಿಇಒ ಪ್ರಕಾಶ್ ಚಾಲನೆ ನೀಡಿದರು. ರತ್ತೂಬಾ ಪ್ರೌಢಶಾಲೆ, ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯ ನಿಷೇಧದ ಕುರಿತು ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಪಂ ಸದಸ್ಯರು, ಪಿಡಿಒ ರುಕ್ಕನ ಗೌಡ ಜಾಥಾದ ನೇತೃತ್ವವಹಿಸಿದ್ದರು.

Read More