Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಭಾಷೆ ಸಂಸ್ಕೃತಿಯ ಪ್ರತಿಬಿಂಬ. ಭಾಷೆ ಅಂದರೆ ಜೀವನ. ಜೀವನದ ನಿಜವಾದ ಸತ್ವವನ್ನು ಆಸ್ವಾದಿಸಬೇಕಾದರೆ ಭಾಷೆ ಬೇಕು ಎಂದು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಭಂಡಾರ್ಕಾರ್ಸ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಆಶ್ರಯದಲ್ಲಿ ನಡೆದ ನಾಡು ನುಡಿ ಸಂಸ್ಕೃತಿ ಎಂಬ ವಿಷಯದ ಕುರಿತು ಮಾತನಾಡಿ ಭಾಷೆ ಎನ್ನುವುದು ಜೀವನದ ಪ್ರತಿ ಹಂತದ ಅನುಭವಗಳನ್ನು ಕಟ್ಟಿಕೊಡುತ್ತದೆ. ಭಾಷೆ ಮತ್ತು ಸಂಸ್ಕೃತಿಯಿಂದ ಸಾಹಿತ್ಯ ಬೆಳೆಯುತ್ತದೆ. ಇಂತಹ ಸಾಹಿತ್ಯವು ನಮ್ಮ ಜೀವನದ ರಸಾನುಭವಗಳನ್ನು ಒಟ್ಟಿಗೆ ಕೊಡುತ್ತದೆ. ಸಂಕೀರ್ಣ ಸಮಾಜವನ್ನು ಅರಿಯುವಲ್ಲಿ ಭಾಷೆಗೆ ವಿಶೇಷ ಪ್ರಾಮುಖ್ಯತೆ ಇದೆ. ತನ್ಮೂಲಕ ಸಂಸ್ಕೃತಿ ಬೆಳೆಯುತ್ತದೆ ಎಂದು ಹೇಳುತ್ತಾ ಕುಂದಗನ್ನಡ ಮತು ಕನ್ನಡ ಸಾಹಿತ್ಯದ ಕುರಿತು ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಗಣಪತಿ ಭಟ್ ವಂದಿಸಿದರು. ವಿದ್ಯಾರ್ಥಿನಿ ವಿನಯಾ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಂಡಿತ್ ದೀನದಯಾಳ ಉಪಾಧ್ಯಾಯ ಜನ್ಮ ಶತಮಾನೋತ್ಸವದ ಪ್ರಯುಕ್ತ ವಿಸ್ತಾರಕ ಯೋಜನೆಯನ್ನು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿತು. ವಿಸ್ತಾರಕರಾಗಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಮ್ ಸುಕುಮಾರ ಶೆಟ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಪುರಸಭೆ ವ್ಯಾಪ್ತಿಯ ವಾರ್ಡ್ 21 ಮತ್ತು 22 ರಲ್ಲಿ ವಿಸ್ತಾರಕರಾಗಿ ಪ್ರಧಾನಿ ಹಾಗೂ ಭಾಜಪಾದ ಯೋಜನೆ ತಿಳಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವ್ಯಕ್ತಿಯ ವಿಚಾರಗಳು, ಭಾವನೆ ಮತ್ತು ಜ್ಞಾನವನ್ನು ಹೊರಹಾಕಲು ಪ್ರಮುಖ ಮಾಧ್ಯಮ ಭಾಷೆಯಾಗಿರುತ್ತದೆ. ವ್ಯಕ್ತಿಯ ವ್ಯಕ್ತಿತ್ವದ ಸಂಪೂರ್ಣ ವಿಕಾಸಕ್ಕೆ ಭಾಷೆಯು ವಿಶಿಷ್ಟವಾದ ಪಾತ್ರ ನಿರ್ವಹಿಸುತ್ತದೆ.ವಿದ್ಯಾರ್ಥಿಗಳಲ್ಲಿ ಕಲಿಕೆಯು ಪರಿಣಾಮಕಾರಿಯಾಗಿ ನಿರ್ವಹಿಸಲು ಭಾಷಾ ಕೌಶಲ್ಯ ಅತೀ ಅವಶ್ಯಕವಾಗಿರುತ್ತದೆ. ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ ಕೌಶಲ್ಯಗಳು ವಿಶಿಷ್ಟವಾದ ಕಾರ್ಯನಿರ್ವಹಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಭಾಷೆ ಎಂದು ಮನ್ನಣೆಗೆ ಪಾತ್ರವಾದ ಇಂಗ್ಲೀಷ್‌ನ ಸ್ಪಷ್ಟ ಜ್ಞಾನ ಮತ್ತು ಬಳಕೆ ಎಲ್ಲರನ್ನು ಗುರುತಿಸುವಂತೆ ಮಾಡುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಕೇಳುವ, ಬರೆಯುವ, ಓದುವ ಮತ್ತು ಮಾತನಾಡುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ವಿದ್ಯಾಸಂಸ್ಥೆಗಳ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಗುರುಕುಲ ಪಬ್ಲಿಕ್ ಶಾಲೆಯು ಪ್ರಮುಖ ಹೆಜ್ಜೆಯನ್ನು ಇಟ್ಟಿದೆಯೆಂದರೆ ತಪ್ಪಾಗಲಾರದು. ಪ್ರತಿಷ್ಠಿತ ವರ್ಡ್ಸ್‌ವರ್ತ್ ಇಂಗ್ಲೀಷ್ ಲ್ಯಾಂಗ್ವೇಜ್ ಲ್ಯಾಬ್ ನ ಸಹಕಾರದೊಂದಿಗೆ ಸಂಸ್ಥೆಯು ಡಿಜಿಟಲ್ ಇಂಗ್ಲೀಷ್ ಲ್ಯಾಬ್‌ನ್ನು ರಂದು ಪ್ರಾರಂಭಿಸಲಾಯಿತು. ಸಂಸ್ಥೆಯ ಇಂಗ್ಲೀಷ್ ಶಿಕ್ಷಕರುಗಳಿಗೆ ನಿರಂತರ ಎರಡು ದಿನಗಳ ಕಾಲ ತರಬೇತಿಯನ್ನು ನೀಡಿದರಲ್ಲದೇ, ವಿದ್ಯಾರ್ಥಿಗಳು ಹೇಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಧನ ಕಲಾ ಸಂಗಮ (ರಿ), ಹಲ್ಸನಾಡು ಬಿಲ್ಡಿಂಗ್, ಮುಖ್ಯರಸ್ತೆ, ಕುಂದಾಪುರದಲ್ಲಿ ರಂದು ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನೆಯನ್ನು ಖ್ಯಾತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪನವರಿಂದ ನೆರವೇರಿದರು. ಬಳಿಕ ಮಾತನಾಡಿದ ಅವರು ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನ ಬರೆ ಶೋಕಿಗಾಗಿ ಯಕ್ಷಗಾನವೆಂದಂತಾಗಿದೆ. ಅದು ಆ ಕಲೆಗೆ ಮಾಡುತ್ತಿರುವ ಅಪಚಾರ. ಬಡಗು ತಿಟ್ಟಿನ ಮೂಲ ಶಿಕ್ಷಣ ನೀಡುವುದರ ಮೂಲಕ ಅತ್ತ್ಯುತ್ತಮ ಯಕ್ಷಗಾನ ಕಲಾವಿದರನ್ನು ತಯಾರು ಮಾಡಿ, ಸಮಾಜಕ್ಕೆ ಸಮರ್ಪಿಸುವಂತೆ ಕೇಳಿಕೊಂಡರು. ನಾರಾಯಣ ಐತಾಳರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ಯಕ್ಷಗಾನ ಕಲಾವಿದ ಹಾಗೂ ಗುರು ಗಣಪತಿ ಹೆಗಡೆ, ಕಡ್ಲೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಿಸುವ ಮೂಲಕ ಸಾರ್ಥಕ್ಯವನ್ನು ಕಂಡುಕೊಳ್ಳ ಬೇಕು, ಆ ನಿಟ್ಟಿನಲ್ಲಿ ಶ್ರಮವಹಿಸಿ ಪ್ರಯತ್ನ ಮಾಡುವುದಾಗಿ ಭರವಸೆ ಇತ್ತರು. ಇನ್ನೋರ್ವ ಹವ್ಯಾಸಿ ಯಕ್ಷಗಾನ ಕಲಾವಿದರಾದ ಆಶೋಕ ಆಚಾರ್ ಶುಭಶಯವನ್ನು ಕೋರಿದರು, ಚಿತ್ರಕಲಾವಿದ ಮಂಜುನಾಥ ಮಯ್ಯರು ವಂದನಾರ್ಪಣೆ ಸಲ್ಲಿಸಿದರು. ತದನಂತರ ಯಕ್ಷಗಾನ ತರಗತಿ…

Read More

ಪ್ರೀತಿ ಎಂಬದೇ ಚುಂಬಕ ಗಾಳಿ: ಬಿ.ಎ.ಸನದಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರೀತಿಯೆಂಬುದೇ ಒಂದು ಪ್ರಶಸ್ತ ಚುಂಬಕ ಶಕ್ತಿ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವನ ಕೆಲಸ ಸಾಧನೆಗಳ ಮೇಲೆ ಇಂತಹ ಪ್ರೀತಿ ಗೌರವವೇ ನಮ್ಮನ್ನು ಪರಸ್ಪರ ಸೆಳೆಯುತ್ತದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ, ಆಕಾಶವಾಣಿ ಮಾಧ್ಯಮದ ಹಿರಿಯ ಚೇತನ ಬಿ.ಎ ಸನದಿ ಹೇಳಿದರು. ಅವರು ಪತ್ರಕರ್ತರ ವೇದಿಕೆ( ರಿ) ಬೆಂಗಳೂರು ಉಡುಪಿ ಜಿಲ್ಲಾ ಘಟಕದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ದಶಮಾನೋತ್ಸವ ಪ್ರಯುಕ್ತ ನೀಡಲಾದ ಗೌರವವನ್ನು ಗುರುವಾರ ಸ್ವೀಕರಿಸಿ ಮಾತನಾಡುತ್ತಿದ್ದರು. ನನಗೆ ಭಾಷೆಯ ಮೇಲೆ ಪ್ರೀತಿಇದೆ. ಭಾಷಾ ವ್ಯಾಮೋಹವಿರಲಿಲ್ಲ ಆಯಾ ಭಾಷೆಯ ಜನರೊಡನೆ ಅವರ ಭಾಷೆಯಲ್ಲಿ ಪ್ರೀತಿ ವಿಶ್ವಾಸ ಹಂಚಿ ಕೊಳ್ಳುವುದು ಸಾಧ್ಯವಾಯಿತು. ಸಾಮರಸ್ಯದ ಬದುಕೇ ಶ್ರೇಷ್ಠ ಎಂದು ಅವರು ಹೇಳಿದರು. ಗೌರವ ಪ್ರಧಾನಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಾಹಿತ್ಯದಲ್ಲಿ ಕೀರ್ತಿಗಳಿಸಿದ ಸನದಿ ಅವರು ಜನರ ಮನಸ್ಸಿನಲ್ಲಿ ಉಳಿಯುವ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಗೌರವಿಸುವುದೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ವಿಕಿಪೀಡಿಯಾ ಅಸೋಸಿಯೇಶನ್‍ನ ಉದ್ಘಾಟನೆ ಹಾಗೂ ಮೂರು ದಿನಗಳ ಮಾಹಿತಿ ಕಾರ್ಯಾಗಾರಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ಗುರುವಾರ ನೀಡಲಾಯಿತು. ಪ್ರಭು ಆಸ್ಪತ್ರೆಯ ಡಾ. ಕೃಷ್ಣ ಮೋಹನ ಪ್ರಭು, ವಿಕಿಪೀಡಿಯಾ ಅಸೋಸಿಯೇಶನ್ ಅನ್ನು ಉದ್ಘಾಟಿಸಿ, ವಿಶ್ವಕೋಶಗಳು ಜನರಿಂದ ದೂರವಿರುವಾಗ ವಿಕಿಪೀಡಿಯಾ ಜ್ಞಾನವನ್ನು ಪಸರಿಸಲು ಜನಸ್ನೇಹಿ ಕೆಲಸವನ್ನು ಮಾಡುತ್ತಿದೆ. ಯುವಜನರು ಪೂರ್ವಾಗ್ರಹವಿಲ್ಲದೆ ಇದನ್ನು ಸದುಪತೋಗಪಡಿಕೊಳ್ಳಬೇಕು. ಕನ್ನಡದ ಹೆಚ್ಚಿನ ಲೇಖನಗಳು ವಿಕಿಪೀಡಿಯಾದಲ್ಲಿ ಪ್ರಕಟಗೊಂಡು ಭಾಷೆಯನ್ನು ಸಮೃದ್ಧ ಮಾಡುವ ಕೆಲಸ ಯುವ ಸಮೂಹದಿಂದಾಗಬೇಕು. ಜ್ಞಾನ ಸಂಪಾದನೆಗೆ ಉತ್ತಮ ಅವಕಾಶ ನೀಡುವ ವಿಕಿಪೀಡಿಯಾದಲ್ಲಿಮಾಹಿತಿಗಳನ್ನು ಪ್ರಕಟಿಸುವ ಮುನ್ನ ಅಧ್ಯಯನ, ವಿಮರ್ಶೆ ಅಗತ್ಯ ಎಂದರು. ಕರಾವಳಿ ವಿಕಿಪೀಡಿಯನ್ಸ್ ಹಾಗೂ ಸಂಪಾದಕ ಡಾ. ಪವನಜ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಪಾರ ಮಾಹಿತಿಗಳ ಕಣಜ ವಿಕಿಪೀಡಿಯಾ. ಇದರ ಮೂಲಕ ಬರವಣಿಗೆಯಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಸಾಧ್ಯ. ಬೇರೆಯವರ ಬರಹಗಳನ್ನು ನಕಲು ಮಾಡುವಂತಿಲ್ಲ. ತರ್ಕಬದ್ಧ ಆಲೋಚನೆ, ನಿರಂತರ ಸಂಶೋಧನಾ ಪ್ರವೃತ್ತಿ, ಬೇರೆ ಮೂಲದಿಂದ ಮಾಹಿತಿ ಸಂಗ್ರಹಿಸಿ ಅಧ್ಯಯನ ಪೂರ್ಣವಾಗಿ ಬರೆದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನ್ಯ ಸಂಸದೆ ಶೋಭಾ ಕರಂದ್ಲಾಜೆಯವರು ಸಂವಿಧಾನದ ರಕ್ಷಣೆಯಂತಹ ಜವಾಬ್ದಾರಿಯುತ ಹುದ್ದೆಯಾದ ಸಂಸದೆಯಾಗಿದ್ದು ಕೋಮು ಸಾಮರಸ್ಯ ಕೆಡುವಂತಹ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ ಗಲಭೆ ಪೀಡಿತ ಪ್ರದೇಶದಲ್ಲಿ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯದವರನ್ನು ಎತ್ತಿಕಟ್ಟುತ್ತಿರುವುದು ಖಂಡನೀಯವಾಗಿದೆ. ಇವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ. ಗಲಭೆಯನ್ನು ತನ್ನ ಭಾಷಣದ ಮೂಲಕ ರಾಜ್ಯಾದ್ಯಂತ ಹಬ್ಬಿಸಲು ಪ್ರಯತ್ನಿಸಿರುವುದು ಹೊಣೆಗೇಡಿ ಮತ್ತು ಅಘಾತಕಾರಿ ವರ್ತನೆಯಾಗಿದೆ. ಸಂವಿಧಾನದ ಆಶಯದಂತೆ ಎಲ್ಲಾ ಧರ್ಮ ಮತ್ತು ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸಂಸದರಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆ ಕಾರಣಕ್ಕಾಗಿ ಅವರು ಈಗಿಂದೀಗಲೇ ರಾಜೀನಾಮೆ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಶ್ಯಾಮಲಾ ಭಂಡಾರಿ ಆಗ್ರಹಿಸಿದ್ದಾರೆ. ಎಲ್ಲಾ ಧರ್ಮಗಲ್ಲಿಯೂ ಒಳ್ಳೆಯವರು ಇರುವಂತೆ, ಕೆಟ್ಟವರೂ ಇದ್ದಾರೆ. ಯಾರೋ ಬೆರೆಳೆಣಿಕೆಯಷ್ಟು ಕಿಡಿಗೇಡಿಗಳು ಯಾವುದೋ ಆಮಿಷಕ್ಕೆ ಒಳಗಾಗಿ ಎಸಗುವ ದುಷ್ಕೃತ್ಯಗಳಿಗೊಸ್ಕರ ಇಡೀ ಒಂದು ಸಮುದಾಯವನ್ನೇ ದೂಷಿಸುವುದು ಸರಿಯಲ್ಲ. ದೇಶದ ಸಂವಿಧಾನದ ಪ್ರಕಾರ ಯಾರೇ ತಪ್ಪು ಮಾಡಿದರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯಕರ್ನಾಟಕ ಪತ್ರಿಕೆಯ ಕುಂದಾಪುರದ ಯುವ ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಅವರು ಪತ್ರಿಕೋದ್ಯಮದಲ್ಲಿ ಮಹಿಳೆಯರ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವಿಕ ಸಂಘದ ಸಂಯೋಜಕರಾದ ಪ್ರೊ. ರಾಮಚಂದ್ರ ಅವರು ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸುಮಲತಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶಬರಿ ಕಾರ್ಯಕ್ರಮ ನಿರೂಪಿಸಿ, ಅನಿತಾ ವಂದಿಸಿದರು.’

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಹಕಾರಿ ಸಂಘಗಳ ನಡುವೆ ಪೈಪೋಟಿ ಇದ್ದರೂ ಸಾರ್ವಜನಿಕರಿಗೆ ಉತ್ತಮ ಸೇವೆ ಸಹಕಾರಿ ಸಂಘಗಳು ನೀಡುತ್ತಾ ಬಂದಿರುವುದು ಸಹಕಾರಿ ಕ್ಷೇತ್ರದ ಹೆಚ್ಚುಗಾರಿಕೆ ಹೊಸ ವ್ಯವಸ್ಥೆಗಳ ಮೂಲಕ ಸಹಕಾರಿ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ದ.ಕ ಜಿಲ್ಲೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಕುಂದಾಪುರ ತಾಲೂಕು ನವೀಕೃತ ಕೇಂದ್ರ ಕಚೇರಿ ಉದ್ಘಾಟಿಸಿ, ನವೀಕೃತ ಕಟ್ಟಡಕ್ಕೆ ಎರಡು ಲಕ್ಷಅನುದಾನ ನೀಡುವುದಾಗಿ ಘೋಷಿಸಿದರು. ನವೀಕೃತ ಕೇಂದ್ರದ ಮೂಲಕ ಸಾರ್ವಜನಿಕರಿಗೆಇನ್ನಷ್ಟು ಸೌಲಭ್ಯ ಲಭಿಸಲಿ ಎಂದ ಅವರು, ಸೇವೆ ಮೂಲಕ ಸಹಕಾರಿ ಕ್ಷೇತ್ರ ಬೆಳೆಯಲು ಕಾರಣವಾಗಿದ್ದು, ಸಹಾಕಾರಿ ಮಟ್ಟ ವೃದ್ಧಿಸಲೂ ಕಾರಣವಾಗಿದೆ ಎಂದು ಹೇಳಿದರು. ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರದೇವಸ್ಥಾನ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಭದ್ರತಾಕೊಠಡಿ ಉದ್ಘಾಟಿಸಿರು. ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಅಧ್ಯಕ್ಷ ಮಲ್ಯಾಡಿ ಮೋಹನದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘ ಉಪಾಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಬಾಳೆಮನೆ, ಕುಂದಾಪುರ ಎಪಿಎಂಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ಯೆಂದೂರು: ಯಡ್ತರೆ ಮನೆತನದ ಹಿರಿಕ ಆಲಂದೂರು ಅಣ್ಣಪ್ಪ ಶೆಟ್ಟಿ (76) ಅವರು ತಮ್ಮ ಸ್ವಗೃಹದಲ್ಲಿ ಇಂದು ನಿಧನರಾದರು. ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತೋಡಗಿಸಿಕೊಂಡಿದ್ದ ಅವರು ಯಡ್ತರೆ ಮನೆತನದಲ್ಲಿ ಓರ್ವ ಪ್ರಮುಖರೆನಿಸಿಕೊಂಡಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಟ್ರಸ್ಟಿಗಳಾಗಿ, ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಯ ಆಡಳಿತ ಮೊಕ್ತೇಸರರಾಗಿ, ಬೈಂದೂರು ಶ್ರೀ ಸೇನೆಶ್ವರ ದೇವಸ್ಥಾನ, ಬ್ಯೆಂದೂರು ಶ್ರೀ ವೆಂಕಟರಮಣ ದೇವಸ್ಥಾನಗಳ ಮಾಜಿ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬೈಂದೂರು ಮಂಡಲದ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದರು. ಬ್ಯೆಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿ ಸಹಕಾರಿ ರಂಗದಲ್ಲಿ ಗುರುತಿಸಿಕೊಂಡಿದ್ದರು. ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಅಣ್ಣಪ್ಪ ಶೆಟ್ಟರ ಕುಟುಂಬಿಕರು ದೊಡ್ಡ ಜಮಿನ್ದಾರರಾಗಿದ್ದರು. ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಯಾದ ಸಂದರ್ಭ ಅಣ್ಣಪ್ಪ ಶೆಟ್ಟರು ಹಾಗೂ ಅವರ ತಂದೆ ತಮ್ಮ ಒಕ್ಕಲುಗಳಿಗೆ ಗೇಣಿ ಪಡೆಯುವುದನ್ನು ತಾವಾಗಿಯೇ ಇಲ್ಲಿಸಿದ್ದರು. ಒಕ್ಕಲುಗಳು ಉಳುವೆ ಮಾಡುತ್ತಿದ್ದ ಜಮೀನನ್ನು ಯಾವುದೇ…

Read More