ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಭಾಷೆ ಸಂಸ್ಕೃತಿಯ ಪ್ರತಿಬಿಂಬ. ಭಾಷೆ ಅಂದರೆ ಜೀವನ. ಜೀವನದ ನಿಜವಾದ ಸತ್ವವನ್ನು ಆಸ್ವಾದಿಸಬೇಕಾದರೆ ಭಾಷೆ ಬೇಕು ಎಂದು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಭಂಡಾರ್ಕಾರ್ಸ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಆಶ್ರಯದಲ್ಲಿ ನಡೆದ ನಾಡು ನುಡಿ ಸಂಸ್ಕೃತಿ ಎಂಬ ವಿಷಯದ ಕುರಿತು ಮಾತನಾಡಿ ಭಾಷೆ ಎನ್ನುವುದು ಜೀವನದ ಪ್ರತಿ ಹಂತದ ಅನುಭವಗಳನ್ನು ಕಟ್ಟಿಕೊಡುತ್ತದೆ. ಭಾಷೆ ಮತ್ತು ಸಂಸ್ಕೃತಿಯಿಂದ ಸಾಹಿತ್ಯ ಬೆಳೆಯುತ್ತದೆ. ಇಂತಹ ಸಾಹಿತ್ಯವು ನಮ್ಮ ಜೀವನದ ರಸಾನುಭವಗಳನ್ನು ಒಟ್ಟಿಗೆ ಕೊಡುತ್ತದೆ. ಸಂಕೀರ್ಣ ಸಮಾಜವನ್ನು ಅರಿಯುವಲ್ಲಿ ಭಾಷೆಗೆ ವಿಶೇಷ ಪ್ರಾಮುಖ್ಯತೆ ಇದೆ. ತನ್ಮೂಲಕ ಸಂಸ್ಕೃತಿ ಬೆಳೆಯುತ್ತದೆ ಎಂದು ಹೇಳುತ್ತಾ ಕುಂದಗನ್ನಡ ಮತು ಕನ್ನಡ ಸಾಹಿತ್ಯದ ಕುರಿತು ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಗಣಪತಿ ಭಟ್ ವಂದಿಸಿದರು. ವಿದ್ಯಾರ್ಥಿನಿ ವಿನಯಾ ಕಾರ್ಯಕ್ರಮ ನಿರ್ವಹಿಸಿದರು.