Author: ನ್ಯೂಸ್ ಬ್ಯೂರೋ

ಉದಯ ನಾಯ್ಕ ಕೆ | ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ವಿಟ್ಲ ಶ್ರೀರಾಮ ಮಂದಿರದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ವೇಯ್ಟ್ ಲಿಪ್ಟಿಂಗ್ ಹಾಗೂ ಪುರುಷರ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಮಂಜುನಾಥ ಮರಾಠಿ ಹೊಸೇರಿ ವೇಯ್ಟ್ ಲಿಪ್ಟಿಂಗ್‌ನಲ್ಲಿ ಚಿನ್ನದ ಪದಕವನ್ನು ಹಾಗೂ ದೇಹದಾಡ್ಯ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನ ಪಡೆದಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ವೇಯ್ಟ್ ಲಿಪ್ಟಿಂಗ್ 62ಕೆ.ಜಿ. ವಿಭಾಗದಲ್ಲಿ 245ಕೆ.ಜಿ. ಭಾರ ಎತ್ತುವುದರ ಮೂಲಕ ತಮ್ಮದೇ ಹೆಸರಿನಲ್ಲಿರುವ ಹಳೆಯ ದಾಖಲೆಯನ್ನ (240ಕೆ.ಜಿ.) ಮುರಿದಿರುವ ಮಂಜುನಾಥ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ವೇಯ್ಟ್ ಲಿಫ್ಟರ್ ಪ್ರಶಸ್ತಿಯನ್ನೂ ಬಾಚಿಕೊಳ್ಳುವ ಮೂಲಕ ಹ್ಯಾಟ್ರಿಕ್ ಪದಕವನ್ನ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಇತ್ತಿಚಿಗೆ ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ವೇಯ್ಟ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನ 69ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಲಿಪ್ಟರ್ ಪ್ರಶಸ್ತಿಯನ್ನೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಸರಕಾರ ಕನ್ನಡ ಮಾಧ್ಯಮದ ಪ್ರತಿ ವಿದ್ಯಾರ್ಥಿಯ ಮೇಲೆ ವರ್ಷಕ್ಕೆ ಇಪ್ಪತ್ತು ಸಾವಿರದಷ್ಟು ಹಣ ಖರ್ಚು ಮಾಡುತ್ತಿದ್ದರೂ, ಒಟ್ಟು ವ್ಯವಸ್ಥೆಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಅವರು ಬಸ್ರೂರು ನಿವೇದಿತಾ ಪ್ರೌಢಶಾಲೆಯಲ್ಲಿ ಈ ಭಾಗದ ೫ ಕನ್ನಡ ಮಾಧ್ಯಮ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಕೊಡಮಾಡುವ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು. ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಕನ್ನಡ ಮಾಧ್ಯಮ ಶಾಲೆಗಳು ಇಂದು ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಕನ್ನಡ ಮಾಧ್ಯಮ ಶಾಲೆಗಳನ್ನೂ ಮಾದರಿ ವಿದ್ಯಾಸಂಸ್ಥೆಗಳಾಗಿ ಕಟ್ಟಬೇಕಿದೆ. ಉತ್ತಮ ಶಿಕ್ಷಣ ದೊರೆತರೆ ಕನ್ನಡ ಮಾಧ್ಯಮ ಮಕ್ಕಳು ಸೋಲುವ ಪ್ರಶ್ನೆಯೇ ಇಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಬೇಕಿದ್ದರೇ ಇಂದಿನಿಂದಲೇ ಪರೀಕ್ಷೆಗೆ ತಯಾರಿ ನಡೆಸಬೇಕಿದೆ. ಸ್ವಾಭಿಮಾನ, ಶ್ರದ್ಧೆಯಿಂದ ಓದು ಮನನ ಮಾಡುವುರಿಂದ ಪರೀಕ್ಷೆಯಲ್ಲಿ ಉತ್ತಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ  ಕುಂದಾಪುರ ಪ್ರತೀ ತಿಂಗಳೂ ಮೊದಲ ಭಾನುವಾರ ನಡೆಸುವ ತಿಂಗಳ ಕಥಾ ಓದು ಮಾಲಿಕೆಯಲ್ಲಿ ಡಿಸೆಂಬರ್ ತಿಂಗಳ ಈ ಭಾನುವಾರ ರಂಗನಿರ್ದೇಶಕರಾದ ವಾಸುದೇವ ಗಂಗೇರ ಅವರು ಸಾಹಿತಿ ವಸುಧೇಂದ್ರ ಅವರ ಜೀವನದ ಘಟನೆಗಳನ್ನಾಧರಿಸಿದ ಸರಳ ಪ್ರಬಂಧ ನಮ್ಮಮ್ಮ ಅಂದ್ರೆ ನಂಗಿಷ್ಟ” ದ ರಸವತ್ತಾದ ಓದನ್ನು ನಡೆಸಿಕೊಟ್ಟರು. ಲೇಖಕರ ಸ್ವಅನುಭವವನ್ನು ತನ್ನದೇ ಅನುಭವವೆನ್ನುವ ರೀತಿಯಲ್ಲಿ ಅಲ್ಲದೇ ಅದು ಕೇಳುಗರ ಅನುಭವವೂ ಆಗುವಂತೆ ನಿಜದ ಅರ್ಥದಲ್ಲಿ ಕಟ್ಟಿ ಕೊಡುವಲ್ಲಿ ಗಂಗೇರ ಅವರು ಯಶಸ್ವಿಯಾದರು. ಅವರ ಭಾಷಾ ಪರಿಪಕ್ವತೆ, ವೇಗ, ಓದಿನ ಶೈಲಿ ಕೇಳುಗರಿಗೆ ಪದಗಳೇ ದೃಶ್ಯಗಳಾಗಿ ಕಣ್ಮುಂದೆ ಹಾದುಹೋದಂತೆ ಭಾಸವಾಯಿತು. ಈ ಕುರಿತು ಎಲ್ಲರೂ ತಮ್ಮ ಅನುಭವವನ್ನು ಹಂಚಿಕೊಂಡರು. ಜನವರಿ ತಿಂಗಳ ಈ ಭಾನುವಾರ ಕುಂದಾಪುರದ ರಂಗ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ವಿನಾಯಕ ಅವರು ಸಾಹಿತಿ ಶ್ರೀನಿವಾಸ ವೈದ್ಯ ಅವರ ರಚನೆಯಾದ ಗಧೇ ಪಂಚವೀಸಿ” ಕಥೆಯ ರಸವತ್ತಾದ ಓದನ್ನು ನಡೆಸಿಕೊಟ್ಟರು. ಲೇಖಕರ ವಿಭಿನ್ನ ಭಾಷಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ರಾಜಾಡಿ ಸೇತುವೆ ಬಳಿ ಕಾರು-ಟ್ರ್ಯಾಕ್ಸಿ ಹಾಗೂ ಬಸ್ಸಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮುರುಡೇಶ್ವರ ಕಡೆಗೆ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ತೆರಳುತ್ತಿದ್ದ ಖಾಸಗಿ ವಾಹನವು ಮುಂದೆ ಸಾಗುತ್ತಿದ್ದ ಟ್ರಾಕ್ಸ್‌ಗೆ ಢಿಕ್ಕಿ ಹೊಡಿದು ಬಳಿಕ ಕುಂದಾಪುರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ವಾಹನಗಳು ಕಾರು ಹಾಗೂ ಬಸ್ಸಿನ ಮುಂಭಾಗ, ಟ್ರಾಕ್ಸ್‌ನ ಹಿಂಭಾಗ ಜಖಂಗೊಂಡಿದೆ. ಬಸ್ಸು ಟ್ರಾಕ್ಸ್‌ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಅಫಘಾತದಿಂದಾಗಿ ಗಂಟೆಗೂ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಕುಂದಾಪುರ ಸಂಚಾರಿ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರೀಡರ್ಸ್ ಆಂಡ್ ರೈಟರ್ಸ್ ಕ್ಲಬ್ ಮತ್ತು ಡಾ.ಹೆಚ್.ಶಾಂತಾರಾಂ ಕನ್ನಡ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ಒಂದು ದಿನದ ವಿಚಾರಸಂಕಿರಣ ಬೆರ್ಟೋಲ್ಟ್ ಬ್ರೆಕ್ಟ್ ಬಗ್ಗೆ ತಿಳಿದುಕೊಳ್ಳೋಣ ಕುರಿತು ಒಂದು ದಿನದ ವಿಚಾರಸಂಕಿರಣ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಮಾತನಾಡಿ ಜರ್ಮನಿ ದೇಶದ ತ್ಂತ್ರಜ್ನರ ಕಾರ್ಯವೈಖರಿಯನ್ನು ಸಮಯಪ್ರಜ್ನೆಯನ್ನು ಹೊಗಳಿ ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ದಿಕ್ಚೂಚಿ ಭಾಷಣ ಮಾಡಿ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಡಾ.ಟಿ.ಕೆ.ರವೀಂದ್ರನ್ ಮಾತನಾಡಿ ಬಂಡವಾಳಶಾಹಿಯ ಒಡಲಲ್ಲೆ ಅಂತರ್ಗತವಾಗಿರುವ ಜರ್ಮನಿಯಂತಹ ದೇಶದಲ್ಲಿನ ಆಗಿನ ಸನ್ನಿವೇಶವನ್ನು ಕುರಿತಂತೆ ಅಲ್ಲಿನ ಲೇಖಕ ಬ್ರೆಕ್ಟ್‌ನ ಬರಹಗಳು ಮುಖಾಮುಖಿಯಾಗಿವೆ. ಅವನ ಬದುಕು ಬರಹ ಮತ್ತು ಅದ್ಭುತ ನಾಟಕಗಳು ಸಂವೇದನಾಶೀಲವಾಗಿ ವಸ್ತುನಿಷ್ಠವಾಗಿ ಹುಟ್ಟಿಕೊಂಡಿದ್ದು ಇದೇ ಯುರೋಪಿಯನ್ ಸಮಾಜವಾದ, ಬಂಡವಾಳಶಾಹಿ ದೇಶಗಳಲ್ಲಿ. ಆಗಿನ ಯುರೋಪಿಯನ್ ದೇಶಗಳ ಒಡಲಲ್ಲಿ ಮಾಹಾಯುದ್ಧಗಳು, ಅರಾಜಕತೆ, ಸರ್ವಾಧಿಕಾರ, ನಾಜಿ ಸಿದ್ಧಾಂತ, ಬಾಂಬಿನ ಸದ್ದುಗಳ ಪ್ರಭಾವ ಎಷ್ಟಿತ್ತೆಂದರೆ ಅವನ ನಾಟಕಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಶನ್ (ರಿ.) ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ ಮತ್ತು ಬ್ಯಾರೀಸ್ ಪ್ರೌಢಶಾಲೆ ಮತ್ತು ಪಿ.ಯು.ಕಾಲೇಜು ಕೋಡಿ ಇವರ ಜಂಟಿ ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥದ ಮೂಲಕ ಕಾನೂನು ಮಾಹಿತಿ ಕಾರ್ಯಕ್ರಮ ಬ್ಯಾರೀಸ್ ಪ್ರೌಢಶಾಲೆ ಮತ್ತು ಪಿ.ಯು.ಕಾಲೇಜು ಕೋಡಿಯಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ, ರಾಜಶೇಖರ ವಿ ಪಾಟೀಲ ಕುಂದಾಪುರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂದಾಪುರ ಬಾರ್ ಅಸೋಸಿಯೇಶನ್ ಇದರ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕುಂದಾಪುರ ಬಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಎಚ್. ರವಿಶ್ಚಂದ್ರ ಶೆಟ್ಟಿ, ಸಹಾಯಕ ಸರಕಾರಿ ಅಭಿಯೋಜಕರಾದ ಸಂದೇಶ ಭಂಡಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಹಾಜಿ ಮಾಸ್ತರ್ ಮೊಹಮ್ಮದ್, ಬ್ಯಾರೀಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಡಾ|| ಸಮೀರ್, ಬ್ಯಾರೀಸ್ ಶಿಕ್ಷಕ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಸಿದ್ದಪ್ಪ, ಬ್ಯಾರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉದ್ಯಮ ಶೀಲತೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಇಲ್ಲಿ ಒಬ್ಬ ಉದ್ಯಮಿಯು ಪ್ರಾಯೋಗಿಕ ಚಿಂತನೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಕೆಲವು ಉದ್ಯಮಿಗಳ ಯಶಸ್ಸಿನ ಗುಟ್ಟನ್ನು ಅರಿವುದರ ಜೊತೆಗೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಸೈಂಟ್ ಮೇರಿಸ್ ಕಾಲೇಜು, ಶಿರ್ವ ಇದರ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಗಣೇಶ್ ಭಟ್ ಎಸ್. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಇವರು ಕಾಲೇಜಿನ ಸಂಶೋಧನಾ ಮತ್ತು ಉದ್ಯಮಶೀಲತಾಭಿವೃದ್ದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಘಟಕದ ಸಂಯೋಜಕಿ ಅನ್ವಿತಾ, ವಾಣಿಜ್ಯ ವಿಭಾಗದ ಮೂಖ್ಯಸ್ಥರಾದ ರಾಜೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಯನ ಸ್ವಾಗತಿಸಿದರು. ವಿದ್ಯಾರ್ಥಿನಿ ಶೈಲಜಾ ಉದ್ಘಾಟಕರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸರಸ್ವತಿ ವಂದಿಸಿದರು. ವಿದ್ಯಾರ್ಥಿನಿ ಶ್ರೀವಿಭಾ ಕಾರ್ಯಕ್ರಮವನ್ನು ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಜರಗಿತು. ಮಹೋತ್ಸವದ ಅಂಗವಾಗಿ ಶ್ರೀದೇವರ ಸನ್ನಿಧಿಯಲ್ಲಿ ಶ್ಲೋಕ ಪಠಣ, ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪುರೋಹಿತರಾದ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ ಹಾಗೂ ದೇವಳದ ಆಡಳಿತ ಮಂಡಳಿಯ ಡಾ.ಕಾಶೀನಾಥ ಪೈ ಅವರು ಶ್ರೀಗಳ ಗುಣಗಾನ ಮಾಡಿದರು. ಊರಿನ ವೈದಿಕರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಜಿಎಸ್‌ಬಿ ಸಮಾಜ ಬಾಂಧವರು ಮಹೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಮ್ಮ ಕುಟುಂಬಕ್ಕಿಂತ ಸಮಾಜದ ಹಿತವನ್ನೇ ಅನುಗಾಲವೂ ಬಯಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಜಿಲ್ಲೆಯ ಜನತೆಯ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಅವರಿಗೆ ಸರಿಯಾದ ರೀತಿ ಮಾರ್ಗದರ್ಶನ ನೀಡುತ್ತಾ ಕೇವಲ ಅಲ್ಪಕಾಲ ಬಾಳಿದ ಸಂಜೀವರಾಯರು ಒರ್ವ ವ್ಯಕ್ತಿಯಾಗಿರದೇ ತಮ್ಮ ವ್ಯಕ್ತಿತ್ವದ ಮೂಲಕ ಒಂದು ಅದ್ಭುತ ಶಕ್ತಿಯಾಗಿದ್ದರು ಎಂದು ೯೧ರ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು. ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ, ಖಂಬದಕೋಣೆ ಪರಿಸರದ ಅಭಿವೃದ್ಧಿಯ ಹರಿಕಾರ, ಬಹುಮುಖೀ ಸಾಧಕ ಖಂಬದಕೋಣೆ ದಿ. ಆರ್. ಕೆ. ಸಂಜೀವ ರಾವ್ ಜನ್ಮಶತಾಬ್ದಿ ಆಚರಣೆ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಂಸ್ಕೃತಿಕ ಸಂಪನ್ನ ಕೌಟುಂಬಿಕ ಹಿನ್ನೆಲೆಯ ಸಂಜೀವ ರಾವ್ ಇವರು ತಮ್ಮ ಹುಟ್ಟೂರು ಖಂಬದಕೋಣೆಯನ್ನು ಕೇಂದ್ರವಾಗಿರಿಸಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿಯತ್ತ ಅವರು ದೃಢ ಹೆಜ್ಜೆಗಳನ್ನಿರಿಸಿದ್ದರು. ಶಿಕ್ಷಣ, ಸಂಪರ್ಕ ಸೌಲಭ್ಯ ಸೃಷ್ಟಿಸುವಲ್ಲಿ ಅವರದು ಗಣನೀಯ ಸಾಧನೆ. ಭೂದಾನದ ಮೂಲಕ ಔದಾರ್ಯ ಮೆರೆದಿದ್ದರಲ್ಲದೇ ಸಂಗೀತ, ಸಾಹಿತ್ಯ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮುಂದಿನ ದಿನಗಳಲ್ಲಿ ನಗದು ವ್ಯವಹಾರ ಬಹುತೇಕ ಕೊನೆಗೊಳ್ಳುವ ಸಾಧ್ಯತೆಗಳಿದ್ದು ಎಲ್ಲರೂ ನಗದು ರಹಿತ ವ್ಯವಹಾರ ನಡೆಸಲು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಎಲ್ಲಾ ಬ್ಯಾಂಕುಗಳಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಅನೇಕ ಆಪ್ ಸಿದ್ಧಪಡಿಸಿದ್ದು, ಇಂತಹ ಆಪ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇದರ ತಮ್ಮ ದೈನಂದಿನ ವ್ಯವಹಾರಗಳನ್ನು ನಡೆಸಬಹುದಾಗಿದೆ ಎಂದು ಕೆನರಾ ಬ್ಯಾಂಕಿನ ಉಡುಪಿ ರೀಜಿನಲ್ ಕಛೇರಿಯ ಅಧಿಕಾರಿ ಮನಿಷ್ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ವತಿಯಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಗದು ರಹಿತ ವ್ಯವಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗದು ರಹಿತ ವ್ಯವಹಾರದ ಬಗ್ಗೆ ಅನೇಕರಿಗೆ ಗೊಂದಲ ಸಂದೇಹಗಳಿವೆ. ನಗದು ರಹಿತ ವ್ಯವಹಾರ ಸುರಕ್ಷಿತವಾಗಿದ್ದು, ಮಾಹಿತಿ ಕೊರತೆಯಿಂದ ಜನರು ನಗದು ರಹಿತ ವ್ಯವಹಾರದ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿಲ್ಲ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಲು ನಗದು ರಹಿತ ವ್ಯವಹಾರ ಸಹಕಾರಿಯಾಗಲಿದೆ ಎಂದು ಹೇಳಿದ ಅವರು, ರಿಸರ್ವ್ ಬ್ಯಾಂಕ್…

Read More