ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ತಮ್ಮ ಹೊಸ ಗೂಟದ ಕಾರಿನಲ್ಲಿ ಪತ್ನಿ ಮಮತಾ ಜಿ. ಪೂಜಾರಿ ಹಾಗೂ ಸಹೋದರಿಯೊಂದಿಗೆ ಕೊಲ್ಲೂರು ದೇವಳಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ತಮ್ಮ ಕಾರಿಗೆ ಪೂಜೆ ನೆರವೇರಿಸಿ ನಂತರ ಕ್ಷೇತ್ರದ ಗಜರಾಜನಿಂದ ದಂಪತಿಗಳು ಆಶೀರ್ವಾದ ಪಡೆದರು. ಈ ಸಂದರ್ಭ ದೇವಳದ ಎಇಒ ಎಚ್. ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ ಕೆ. ರಮೇಶ ಗಾಣಿಗ, ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮಾವಿನಕಾರು, ಮಾಜಿ ಅಧ್ಯಕ್ಷ ಕೆ. ಎನ್. ವಿಶ್ವನಾಥ ಅಡಿಗ, ಸದಸ್ಯರಾದ ಎಸ್. ಕುಮಾರ್, ಪ್ರಕಾಶ ಪೂಜಾರಿ, ಮುಖಂಡರಾದ ವಾಸು ಹೆಗ್ಡೆಹಕ್ಲು, ಸನತ್ ಬಳೆಗಾರ್, ರಾಜೇಶ್ ದಳಿ ಮತ್ತಿತರರು ಇದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ೧೫ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ಆವರಣದಲ್ಲಿ ಫೆಬ್ರವರಿ ೨೩ ಗುರುವಾರದಂದು ಜರುಗಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತರು, ಅಂಕಣಕಾರರು, ಸಾಹಿತಿಗಳೂ ಆದ ಸತೀಶ ಚಪ್ಪರಿಕೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ. ಕುಂದಾಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ ಒಂದು ದಿನದ ಈ ನುಡಿಹಬ್ಬವು ಬೆಳಿಗ್ಗೆ ೮ ಗಂಟೆಗೆ ಸರಿಯಾಗಿ ಧ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿದ್ದು, ಅನಂತರ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣವು ಸಮ್ಮೇಳನಾಧ್ಯಕ್ಷರನ್ನು ಎದುರುಗೊಂಡು ಸಮ್ಮೇಳನ ನಡೆಯುವ ವೇದಿಕೆಗೆ ಕರೆ ತರಲಿದೆ ಎಂದು ತಿಳಿಸಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಸತೀಶ ಚಪ್ಪರಿಕೆ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಆಶುಕವಯತ್ರಿ ಉಳ್ಳೂರು ಮೂಕಜ್ಜಿ ಅವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಮಾರ್ಕ್ಸ್ ಒಂದೇ ಮುಖ್ಯವಲ್ಲ ಅದರ ಜೊತೆಯಲ್ಲಿ ರಿಮಾರ್ಕ್ಸ್ ಅಗತ್ಯವಾಗಿದೆ. ಇತ್ತೀಚಿನ ಮಕ್ಕಳು ತಮ್ಮ ತಂದೆ-ತಾಯಿಯಂದಿರ ಮಾತು ಕೇಳುವಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಹಾಗೂ ಪೋಷಕರಿಗೂ ತಾಳ್ಮೆ ಮುಖ್ಯ. ನಮ್ಮ ಮಕ್ಕಳಿಗೆ ಆಸ್ತಿ ಮಾಡುವುದರಕ್ಕಿಂತ ಮಕ್ಕಳೇ ಆಸ್ತಿ ಎಂದು ಭಾವಿಸಬೇಕು ಎಂದು ವಿಠಲ ನಾಯ್ಕ್ ವಿಟ್ಲ ಹೇಳಿದರು. ರಾಜರಾಜೇಶ್ವರಿ ಸಭಾಭವನ ಜರುಗಿದ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರಿನ ಪ್ರೌಡಶಾಲೆ ವಿಭಾದ ಪೋಷಕರ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳು ಯಾವುದನ್ನು ಕಲಿಯಬೇಕು, ಯಾವುದನ್ನು ಕೇಳಿಸಿಕೊಳ್ಳಬೇಕು, ಯಾವುದನ್ನು ನೋಡಬೇಕು, ಎನ್ನುವುದು ಮಕ್ಕಳ ಮನಸ್ಸಿನಲ್ಲಿ ಬರಬೇಕು. ಆದರೆ ಮಕ್ಕಳ ಮನಸ್ಸುಗಳು ಇತ್ತೀಚ್ಛಿಗೆ ತತ್ರಜ್ಞಾನಗಳು ಬಂದ ನಂತರ ಸಂಬಂಧಗಳು ಕಡಿಮೆಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಕೇವಲ ಓದು ಓದು ಎಂದು ಹೇಳಿದರೆ, ಮಕ್ಕಳ ಮನಸ್ಸುಗಳು ಕೇವಲ ಓದುದರಲ್ಲಿ ಮಾತ್ರ ಸೀಮಿತವಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಓದುದರ ಜೊತೆಯಲ್ಲಿ ಸಾಂಸ್ಕೃತಿಕಗಳಲ್ಲಿ ಭಾಗವಹಿಸುವ ಕಾರ್ಯವನ್ನು ಪೋಷಕರು ಮಾಡಬೇಕು.ಬಹಳ ಮುಖ್ಯವಾಗಿ ಮಕ್ಕಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಪರೂಪದ ಸಾಂಪ್ರದಾಯಿಕ ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಜನರಲ್ಲಿ ಭಕ್ತಿ ಭಾವವನ್ನು ವೃದ್ಧಿಸುವ ನಿಟ್ಟಿನಲ್ಲಿ ಗಿಂಡಿ ನರ್ತನ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇಂತಹ ವಿಶೇಷ ಜಾನಪದ ನೃತ್ಯ ಗಿಂಡಿ ನರ್ತನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಫೆ.೧೨ರಂದು ತಿಂಗಳ ಕಾರ್ಯಕ್ರಮದ ಅಂಗವಾಗಿ ಜರುಗಿತು. ಗುಡ್ಡೆಯಂಗಡಿಯ ಉದ್ಯಮಿ ಹಾಗೂ ಗಿಂಡಿ ನರ್ತನ ಕಲಾವಿದ ಸತೀಶ್ ಎಂ. ನಾಯಕ್ ಅವರು ಸುಮಾರು ೧.೩೦ಗಂಟೆ ಕಾಲ ಭಜನೆ, ಭಕ್ತಿ ಭಾವವನ್ನು ಮೇಳೈಸ ಬಲ್ಲ ಭಕ್ತಿ ಗೀತೆಗಳಿಗೆ ತಲೆಯ ಮೇಲೆ ಗಿಂಡಿಯನ್ನು ಹೊತ್ತು ವಿವಿಧ ಭಂಗಿಗಳಲ್ಲಿ ನರ್ತಸಿ ನೆರೆದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಭಗವಂತನ ಲೀಲೆ, ಅವತಾರ, ಧರ್ಮಚಿಂತನೆಯನ್ನು ಸಾಮಾನ್ಯ ಜನರೂ ಸರಳವಾಗಿ ಅರ್ಥ ಮಾಡಿಕೊಳ್ಳಬಲ್ಲ ರೀತಿಯಲ್ಲಿ ನರ್ತನಾಭಿನಯನದ ಮೂಲಕ ಮನೋಜ್ಞವಾಗಿ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಅವರು ಅಕಾಡೆಮಿಯ ವತಿಯಿಂದ ಗಿಂಡಿ ನರ್ತನ ಕಲಾವಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಆರನೇ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ಅಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಣಾಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು. ಪ್ರತಿ ಸಭೆಗೂ ಅಧಿಕಾರಿಗಳು ಗೈರು ಹಾಜರಿ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಅವ್ಯವಸ್ಥೆಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಯನ್ನು ಖಂಡಿಸಿದರು. ಉತ್ತಮ ಗುಣಮಟ್ಟದ ಸೋಲಾರ್ ದೀಪಗಳ ಅಳವಡಿಸದೆ, ಕಳಪೆ ಮಟ್ಟದ ಸೋಲಾರ್ ದೀಪ ಅಳವಡಿಸುವುದರಿಂದ ಎನೂ ಪ್ರಯೋಜವಿಲ್ಲ. 13 ಸಾವಿರ ರೂ.ವೆಚ್ದದ ಸೋಲಾರ್ ದೀಪ ಕಳಪೆಯಾಗಿದ್ದು, ಆರು ತಿಂಗಳು ಕೂಡಾ ಉರಿಯೋದಿಲ್ಲ. ಸೋಲಾರ್ ದೀಪ ಅಳವಡಿಕೆ ಗ್ರಾಪಂಗೆ ನೀಡಿ, ವಿಸ್ವಾರ್ಹ ಕಂಪನಿಯಿಂದ ಉತ್ತಮ ಗುಣಮಟ್ಟದ ಸೋಲಾರ್ ಅಳವಡಿಕೆ ಮಾಡುವಂತೆ ಹಾಲಾಡಿ ಗ್ರಾಪಂ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ತಾಪಂ ಸದಸ್ಯರಾದ ರಾಜು ದೇವಾಡಿಗ, ಉದಯ ಪೂಜಾರಿ, ಮಾಲತಿ, ಜಗದೀಶ್ ಪೂಜಾರಿ ಸಲಹೆ ಮಾಡಿದರು. ಗುಣಮಟ್ಟದ ಸೋಲಾರ್ ಅಳವಡಿಸಿ, ಐದು ವರ್ಷ ಅದರ ಮೈಂಟೇನ್ ಮಾಡುವ ಜೊತೆ, ಶೇ.20ರಷ್ಟು ಹಣ…
೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಕುಂದಾಪ್ರ ಡಾಟ್ ಕಾಂ ಸುದ್ದಿ. ಮುದ್ರಾಡಿ: ಕರ್ನಾಟಕದ ಎಲ್ಲಾ ಕನ್ನಡ ಶಾಲೆಗಳು ಮುಂದಿನ ೫ ವರ್ಷದಲ್ಲಿ ಮುಚ್ಚುವ ಭೀತಿಯಲ್ಲಿದ್ದು ಸರ್ಕಾರ ೧ನೇ ತರಗತಿಯಿಂದಲೇ ಆಂಗ್ಲ ಭಾಷೆ ಕಡ್ಡಾಯ ಮಾಡಿ ಆಂಗ್ಲ ಶಿಕ್ಷಕರನ್ನು ನೇಮಿಸಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳ ಭವಿಷ್ಯವನ್ನು ಉಳಿಸಿ ಎಂದು ೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸರ್ಕಾರವನ್ನು ಒತ್ತಾಯಿಸಿದರು. ಅವರು ಮುದ್ರಾಡಿ ನಾಟ್ಕದೂರಿನಲ್ಲಿ ಡಜನ್ ನಾರಾಯಣ ಶೆಟ್ಟಿ ದ್ವಾರ ನಾಟ್ಕದೂರು ಬಯಲು ರಂಗಮಂದಿರದ ಎಂ.ಕೆ.ರವೀಂದ್ರ ನಾಥ ವೇದಿಕೆಯಲ್ಲಿ ಶನಿವಾರ ಶ್ರೀ ವಿದ್ಯಾ ಸಂಸ್ಥೆ ಅರ್ಪಿಸಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಅಜೆಕಾರು ಹೋಬಳಿ, ನಮ ತುಳುವೆರ್ ಕಲಾ ಸಂಘಟನೆ, ನಾಟ್ಕದೂರು ಮುದ್ರಾಡಿ ಸರ್ವರ ಸಹಕಾರದೊಂದಿಗೆ ನಡೆದ ೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವ ಮಾಧ್ಯಮದಲ್ಲಾದರೂ ಕಲಿಸಿರಿ ಕನ್ನಡ ಭಾಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಗ್ರಾಮ ಪಂಚಾಯತ್ ಸ್ವಚ್ಛ ಭಾರತ್ ಮಿಶನ್‌ನ ರೂ. ೧೬. ೭೫ ಲಕ್ಷ ಅನುದಾನ ಬಳಸಿಕೊಂಡು ಗಾಂಧಿನಗರದಲ್ಲಿ ನಿರ್ಮಿಸಿರುವ ಜಿಲ್ಲೆಯ ಮೊದಲ ಗ್ರಾಮೀಣ ತ್ಯಾಜ್ಯ ನಿರ್ವಹಣಾ ಘಟಕವನ್ನು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿರ್ವಹಣಾ ಘಟಕ ನಿರ್ಮಿಸುವುದಕ್ಕಿಂತ ಆ ಬಳಿಕ ತ್ಯಾಜ್ಯ ನಿರ್ವಹಣೆ ಮಾಡುವುದು ನಿಜವಾದ ಸವಾಲಿನ ಕೆಲಸ. ಅದಕ್ಕೆ ಸಾರ್ವಜನಿಕರ ನೆರವು ಅತಿ ಅಗತ್ಯ. ಅವರಿಗೆ ಗ್ರಾಮ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಿ ಗ್ರಾಮ ಪಂಚಾಯತ್‌ನ ಕೆಲಸದಲ್ಲಿ ಕೈಜೋಡಿಸುವಂತೆ ಮಾಡಬೇಕು. ಸಂಗ್ರಹವಾದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಮಾಡುವುದಕ್ಕೆ ಆದ್ಯತೆ ನೀಡಬೇಕು. ಹಲವು ವಿಷಯಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಮರವಂತೆ ಇದರಲ್ಲೂ ಮೊದಲಿನದೆನಿಸಿ, ಜಿಲ್ಲೆಯ ಅನ್ಯ ಗ್ರಾಮ ಪಂಚಾಯತ್‌ಳಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ರಾ.ಹೆ. ಪ್ರಾಧಿಕಾರವು ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಿಸಿದ್ದು, ಟೋಲ್‌ಸಂಗ್ರಹದ ಅಧಿಕ ವೆಚ್ಚ ಹಾಗೂ ತೈಲ ದರ ಹಾಗೂ ಬಿಡಿಭಾಗಗಳ ದರ ಹೆಚ್ಚಳದಿಂದಾಗಿ ಕುಂದಾಪುರ ಖಾಸಗಿ ಸರ್ವಿಸ್ ಬಸ್ಸುಗಳ ದರ ಪರಿಷ್ಕರಿಸಲಾಗಿದೆ ಎಂದು ಕುಂದಾಪುರ ತಾಲೂಕ್ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ತಿಳಿಸಿದ್ದಾರೆ. ಫೆ.17ರಿಂದ ಕನಿಷ್ಠದರ 8 ರೂ ಮತ್ತು 20 ರೂ. ವರಗಿನ ಸ್ಟೇಜ್ ಮೇಲೆ 1ರೂ ಮತ್ತು 40 ರೂ.ವರೆಗಿನ ಸ್ಟೇಜ್ ಮೇಲೆ ರೂ.2 ಎರಿಸಲಾಗುತ್ತಿದೆ. ಟೋಲ್ ದಾಟುವ ಬಸ್ಸುಗಳಿಗೆ ರೂ.3 ದರ ಹೆಚ್ಚಿಸಿ ನಿಗದಿ ಮಾಡಲಾಗಿದ್ದು, ಎಲ್ಲಾ ಬಸ್ಸು ಮಾಲಕರಿಗೆ ದರ ಹೆಚ್ಚಿಸಲು ಸೂಚಿಸಲಾಗಿದೆ. ಈ ದರ ಪಟ್ಟಿ ಕೆನರಾ ಬಸ್ಸು ಮಾಲಕರ ಸಂಘದ ನಿಬಂಧನೆಗೆ ಒಳ ಪಟ್ಟಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ವಿಜಯ ಕುಮಾರ್ ಶೆಟ್ಟಿ ಜಡ್ಡಾಡಿ, ಸುಪ್ರೀತ್ ಚಾತ್ರ, ರಾಘವೇಂದ್ರ, ಸದಸ್ಯರಾದ ನಾಗೇಶ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜೀವನದಲ್ಲಿ ಎನ್ನೆಸ್ಸೆಸ್‌ನಲ್ಲಿ ಕಲಿತ ಉತ್ತಮ ವಿಚಾರಗಳನ್ನು ಆಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.ನಮ್ಮ ಬೆಳವಣಿಗೆಯಿಂದ ಉಳಿದವರು ಸ್ಫೂರ್ತಿ ಪಡೆಯುವಂತಾಗಬೇಕು. ಅದೇ ನಿಜವಾದ ಸಾಧನೆ ಎಂದು ರಸಾಯನ ಶಾಸ್ತ್ರ ಪ್ರಾಧ್ಯಾಪಕ ಆರ್. ಎನ್ ರೇವಣ್ ಕರ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಮಾತನಾಡಿ ಎನ್ನೆಸ್ಸೆಸ್ ಬದುಕಿಗೆ ಬೇಕಾದ ವಿಶ್ವಾಸವನ್ನು ಮೂಡಿಸುವಲ್ಲಿ ಸಹಕಾರಿಯಾಗುತ್ತದೆ. ಇಲ್ಲಿ ಕಲಿತ ವಿಚಾರಗಳನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಆಶಾ ಸ್ವಾಗತಿಸಿದರು.ರಜತ್ ಅತಿಥಿಗಳನ್ನು ಪರಿಚಯಿಸಿದರು. ಸ್ವಾತಿ ಕಾರ‍್ಯಕ್ರಮ ನಿರೂಪಿಸಿದರು. ನಾಗಲಕ್ಷ್ಮಿ ಧನ್ಯವಾದ ಅರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಶರತ್‌ಕುಮಾರ್ ಶೆಟ್ಟಿ ಉಪಾಧ್ಯಕ್ಷರಾಗಿ ಗಣೇಶ್ ಶೇರಿಗಾರ್ ಆಯ್ಕಗೊಂಡಿದ್ದಾರೆ. ಕುಂದಾಪುರ ಎಪಿಎಂಸಿಯಲ್ಲಿ ಒಟ್ಟು 13ಕ್ಷೇತ್ರಗಳ ಪೈಕಿ 11 ಕೃಷಿಕರ ಕ್ಷೇತ್ರ, ತಲಾ ಒಂದು ಟಿಎಪಿಸಿಎಂ ಹಾಗೂ ಮಾರಾಟ ಪ್ರತಿನಿಧಿಗಳ ಕ್ಷೇತ್ರವಿದೆ. ಉಳಿದಂತೆ ಮೂವರು ನಾಮನಿರ್ದೇಶಿತ ಸದಸ್ಯರು ಇರಲಿದ್ದಾರೆ. ಎಪಿಎಂಸಿ ಸದಸ್ಯರುಗಳು: ಸ್ವರ್ಧಿಸಿದವರು: ವೆಂಕಟ ಪೂಜಾರಿ (ಬಿಜೆಪಿ, ಶಿರೂರು ಕೃಷಿಕರ ಕ್ಷೇತ್ರ) ಮಂಜು ದೇವಾಡಿಗ (ಬಿಜೆಪಿ, ಕಿರಿಮಂಜೇಶ್ವರ ಕೃಷಿಕರ ಕ್ಷೇತ್ರ) ವಸಂತ ಶೆಟ್ಟಿ(ಕಾಂಗ್ರೆಸ್, ಕಂಬದಕೋಣೆ ಕೃಷಿಕರ ಕ್ಷೇತ್ರ) ಸಂಜೀವ ಪೂಜಾರಿ (ಕಾಂಗ್ರೆಸ್ ವಂಡ್ಸೆ ಕೃಷಿಕರ ಕ್ಷೇತ್ರ), ಶರತ್ ಕುಮಾರ್ ಶೆಟ್ಟಿ(ಕಾಂಗ್ರೆಸ್ ತ್ರಾಸಿ ಕೃಷಿಕರ ಕ್ಷೇತ್ರ) ವರ್ತಕರ ಪ್ರತಿನಿಧಿ-ರಾಮರಾಯ ಕಾಮತ್ (ಬಿಜೆಪಿ) ಅವಿರೋಧವಾಗಿ ಆಯ್ಕೆಗೊಂಡವರು: ಎಸ್.ರಾಜು ಪೂಜಾರಿ (ಕಾಂಗ್ರೆಸ್ – ಸಹಕಾರಿ ಮಾರುಕಟ್ಟೆ ಪ್ರತಿನಿಧಿ ಕ್ಷೇತ್ರ) ಕೃಷ್ಣಾವತಿ ಶೆಡ್ತಿ (ಕಾಂಗ್ರೆಸ್- ಅಂಪಾರು ಕೃಷಿಕರ ಕ್ಷೇತ್ರ) ಕೆ.ರಾಮ ನಾಯ್ಕ್ (ಬಿಜೆಪಿ-ಸಿದ್ದಾಪುರ ಕೃಷಿಕರ ಕ್ಷೇತ) ಗಣೇಶ್ ಶೇರಿಗಾರ್ (ಕಾಂಗ್ರೆಸ್- ಕುಂದಾಪುರ ಕೃಷಿಕರ ಕ್ಷೇತ್ರ) ಹೆಚ್.ವಸಂತ…
