ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಗು ತನ್ನ ಸುತ್ತಲಿನ ಜನರರೊಂದಿಗೆ ಮುಕ್ತವಾಗಿ ಬೆರೆಯಲು ಭಾಷೆ ಅನಿವಾರ್ಯ. ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಮಾತೃಭಾಷೆ ದಾರಿದೀಪವಾಗುತ್ತದೆ. ಯಾವುದೇ ಭಾಷೆಯನ್ನು ಕಲಿಯಬೇಕಾದರೂ ಮಾತೃಭಾಷೆಯಲ್ಲಿ ಗಟ್ಟಿತನ ಅಗತ್ಯ. ಆದ್ದರಿಂದ ತಾಯಿಭಾಷೆಯ ಮೇಲೆ ಹಿಡಿತ ಸಾಧಿಸದೇ ಇನ್ನೊಂದು ಭಾಷೆಯನ್ನು ಕಲಿತರೂ ಅದು ನಿಷ್ಪ್ರಯೋಜಕ. ಆದ್ದರಿಂದ ಮಾತೃಭಾಷೆಯ ಮೇಲೆ ಹಿಡಿತ ಸಾಧಿಸಲು ಮಕ್ಕಳಿಗೆ ಎಳವೆಯಲ್ಲೇ ಅನೇಕ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಈ ದಿಸೆಯಲ್ಲಿ ಬಿದ್ಕಲ್ಕಟ್ಟೆ ಶಾಲೆಯಲ್ಲಿ ಹಮ್ಮಿಕೊಂಡಿರುವ ಚಾರಣ ಮಾಸಪತ್ರಿಕೆಯ ಅನಾವರಣ ಕಾರ್ಯಕ್ರಮ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಒಂದು ಅತ್ಯುತ್ತಮ ಸೃಜನಶೀಲ ಚಟುವಟಿಕೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಕುಂದಾಪುರ ವಲಯದ ಬಿದ್ಕಲ್ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತೀಶ ಅಡಿಗ ಮತ್ಯಾಡಿ ಇವರು ತಮ್ಮ ಮಗ ವಿಕಾಸನ ಹುಟ್ಟುಹಬ್ಬದ ಪ್ರಯುಕ್ತ ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಮಾಸ ಪತ್ರಿಕೆ ಹಾಗೂ ವಿಜ್ಞಾನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸೈನಿಕರು ನಮ್ಮ ದೇಶಕ್ಕಾಗಿ ಊರು, ಕುಟುಂಬಗಳನ್ನು ತ್ಯಜಿಸಿ ಸೇವೆ ಸಲ್ಲಿಸುತ್ತಾರೆ. ಅವರ ಕುಟುಂಬಗಳಿಗೆ ಸಮಸ್ಯೆಯಾದಗ ಅದನ್ನು ವಿಚಾರಿಸಲು ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಅಗತ್ಯ ಎಂದು ಕರ್ನಾಟಕ ಪಶ್ಚಿಮ ವಲಯ ಐ.ಜಿ.ಪಿ. ಅರುಣ್ ಚಕ್ರವರ್ತಿ ಹೇಳಿದರು. ಅವರು ಮೂಡುಗಿಳಿಯಾರು ಹಿ.ಪ್ರಾ.ಶಾಲೆ ಮೈದಾನದಲ್ಲಿ ಪತ್ರಕರ್ತ ವಿಷ್ಣು ವಕ್ವಾಡಿ ವೇದಿಕೆಯಲ್ಲಿ ಜರಗಿದ ಗಿಳಿಯಾರು ಜನಸೇವಾ ಟ್ರಸ್ಟ್ ಅನಾವರಣ ಹಾಗೂ ಅಭಿಮತ ದಶಮಾನೋತ್ಸವ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಜನಸೇವಾ ಟ್ರಸ್ಟ್ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಲಿ ಹಾಗೂ ಸಮಾಜಮುಖಿ ಕಾರ್ಯದಲ್ಲಿ ಮುಂದುವರಿಯಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಪ್ರಸನ್ನ ಗಣಪತಿ ದೇಗುಲದ ಧರ್ಮದರ್ಶಿ ಬೆಳ್ಳಿಪಾಡಿ ಹರಿಪ್ರಸಾದ್ ರೈ ಮಾತನಾಡಿ, ವಸಂತ್ ಗಿಳಿಯಾರ್ ನೇತೃತ್ವದಲ್ಲಿ ಉದ್ಘಾಟನೆಗೊಂಡಿರುವ ಜನಸೇವಾ ಟ್ರಸ್ಟ್ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತದೆ ಎನ್ನುವುದು ಉದ್ಘಾಟನೆಯ ಸಂದರ್ಭದಲ್ಲೇ ಕೈಗೊಂಡಿರುವ ಸಮಾಜಮುಖಿ ಕಾರ್ಯಗಳಿಂದ ತಿಳಿದುಬಂದಿದೆ ಎಂದರು. ದುಬೈನ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಟ್ರಸ್ಟ್ ಉದ್ಘಾಟಿಸಿ ಶುಭ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸತತ ಪ್ರಯತ್ನ ಮತ್ತು ಕ್ರೀಯಾಶೀಲತೆ ಒಬ್ಬ ವ್ಯಕ್ತಿಯನ್ನು ಉನ್ನತ ಮಟ್ಟ ಏರಲು ಸಹಾಯ ಮಾಡುತ್ತದೆ. ಪ್ರಯತ್ನ ನಿರಂತರವಾಗಿ ನಡೆಯುತ್ತಿರಬೇಕು ಅಲ್ಲದೇ ಅವಕಾಶಗಳು ಸಿಕ್ಕಾಗ ಗುಣಾತ್ಮಕವಾಗಿ ಬಳಸಿಕೊಳ್ಳಬೇಕು ವಿದ್ಯಾರ್ಥಿಗಳು ಇಂತಹ ಗುಣಗಳನ್ನು ತಮ್ಮ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ರೂಢಿಸಿಕೊಂಡರೆ, ತಮ್ಮ ಮುಂದಿನ ಜೀವನದಲ್ಲಿ ವಿಶೇಷ ಕೀರ್ತಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿಯ ೬ನೇ ತರಗತಿಯಲ್ಲಿ ಓದುತ್ತಿರುವ ಕುಮಾರ್ ರಕ್ಷಣ್ ಕುಂದಾಪುರ್ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ಪ್ರತಿಷ್ಠಿತ ಅಂತರಾಷ್ಟ್ರೀಯ ಒಲಂಪಿಯಾಡ್ ಸಂಸ್ಥೆ ನಡೆಸುವ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇಕಡಾ 99.77 ಅಂಕಗಳನ್ನು ಪಡೆದು ಪ್ರಥಮ ರ್ಯಾಂಕ್ನ್ನು ಪಡೆದನಲ್ಲದೇ , ನವದೆಹಲಿಯಲ್ಲಿ ನಡೆಯುವ ಅಂತಿಮ ಹಂತದ ಪರೀಕ್ಷೆಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾನೆ. ಈ ಪ್ರತಿಷ್ಠಿತ ಸಂಸ್ಥೆಯು ಈ ವಿದ್ಯಾರ್ಥಿಗೆ 15,000/- ರೂಪಾಯಿ ವಿಶೇಷ ಬಹುಮಾನವನ್ನು ನೀಡಿದೆ. ರಾಜ್ಯದಿಂದ ಆಯ್ಕೆಯಾಗುವ 3 ವಿದ್ಯಾರ್ಥಿಗಳಲ್ಲಿ ರಕ್ಷಣ್ ಮೊದಲಿಗನಾಗಿದ್ದಾನೆ. ಈ ಸಾಧನೆಯ ಬಗ್ಗೆ ವಿದ್ಯಾರ್ಥಿಯ ಪಾಲಕರು, ಶಾಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಂಭ್ರಮದ ಈಸ್ಟರ್ ಹಬ್ಬವನ್ನು ಚರ್ಚಿನ ಧರ್ಮಗುರು-ವಂದನೀಯ ರೊನಾಲ್ಡ್ ಮಿರಾಂದ, ರಾಕ್ಣೊಂ ಪತ್ರಿಕೆಯ ಸಂಪಾದಕರಾದ ವಂದನೀಯ ವೆಲೇರಿಯನ್ ಫೆರ್ನಾಂಡೀಸ್, ವಂದನೀಯ ರಿಚರ್ಡ್ ಸಲ್ದಾನ ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪಡುವಣ ಪ್ರೆಂಡ್ಸ್ ರಿ. ಪಡುವರಿ ಇದರ 9 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಟ್ಯೋತ್ಸವ ಸೋಮೇಶ್ವರ ಬೀಚ್ ರೋಡ್ ಪಡುವರಿಯಲ್ಲಿ ನಡೆಯಿತು. ಕಾರ್ಪೋರೇಶನ್ ಬ್ಯಾಂಕ್ ಕೊಲ್ಲೂರು ಉದ್ಯಮಿ ಚಂದ್ರಶೇಖರ ನಾವಡ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಂದು ಊರಿನ ಅಭಿವೃದ್ದಿಯನ್ನು ಬಿಂಬಿಸುವಂತದ್ದು ಅಲ್ಲಿನ ಯುವಕರ ಕ್ರಿಯಾಶೀಲತೆಯಾಗಿದೆ. ಪಡುವಣ ಪ್ರೆಂಡ್ಸ್ ಸಂಸ್ಥೆ ಸಮಾಜಮುಖಿ ಚಿಂತನೆಗಳಿಂದ ಹಲವು ಜನಪರ ಕಾರ್ಯಗಳನ್ನು ರೂಪಿಸಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದರು. ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಹಾಪ್ರಬಂಧಕ ಎನ್.ಕೃಷ್ಣ ಬಿಲ್ಲವ, ಶಾರದಾ ಕಾಲೇಜು ಬಸ್ರೂರು ಉಪನ್ಯಾಸಕ ಪಾಂಡುರಂಗ ಮೊಗೇರ್,ಎಲ್.ಐ.ಸಿ.ಚೇರ್ಮನ್ ಕ್ಲಬ್ ಮೆಂಬರ್ ಈಶ್ವರ ಕೆ.ಜಿ, ಶಿವಸೇನಾ ಮುಖಂಡ ಹರೀಶ್ ತೋಳಾರ್,ನಾಗರಾಜ ತಾಂಡೇಲ್ ಅಧ್ಯಕ್ಷರು ರಾಮಕ್ಷತ್ರೀಯ ಯುವಕ ಸಮಾಜ ಬಂದೂರು, ಭರತ್ಸಿಂಗ್, ಪಡುವಣ ಪ್ರೆಂಡ್ಸ್ ಪಡುವರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿನ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಹನುಮ ಜಯಂತಿ ಕಾರ್ಯಕ್ರಮ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಜರಗಿತು. ದೇವಸ್ಥಾನದಲ್ಲಿ ಶ್ರೀ ಮುಖ್ಯಪ್ರಾಣ ದೇವರಿಗೆ ವಿಶೇಷ ಅಭಿಷೇಕ, ಪವಮಾನ ಅಭಿಷೇಕ, ರುದ್ರಾಭಿಷೇಕ ಸಹಿತ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು. ಸಾವಿರಾರು ಮಂದಿ ಭಕ್ತರು ದೇವಳಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಜರಗಿದವು. ಹನುಮಜ್ಜಯಂತಿ ಪ್ರಯುಕ್ತ ರಾತ್ರಿ ಗಂಗೊಳ್ಳಿ ಬೀದಿಯಲ್ಲಿ ಶ್ರೀದೇವರ ಪಲ್ಲಕಿ ಉತ್ಸವ, ವಸಂತ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿತು ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಅನುಷ್ಠಾನಗಳು ಸಂಪನ್ನಗೊಂಡಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಿರುಮಂತ್ರಾಲಯ ವತ್ತಿನೆಣೆ ಬೈಂದೂರು ಇದರ ಪ್ರತಿಷ್ಠಾಪನಾ ವರ್ದಂತಿ ಉತ್ಸವ ನಡೆಯಿತು. ಗುರು ರಾಘವೇಂದ್ರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಮದ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ಜಯಾನಂದ ಹೋಬಳಿದಾರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಎನ್ ಎಸ್ ಎಸ್ ವಿಭಾಗದ 2017-18 ಶೈಕ್ಷಣಿಕ ವರ್ಷದ ಚಟುವಟಿಕಗಳ ಸಮಾರೋಪ ಸಮಾರಂಭ ಕಾಲೇಜಿನ ಪಿ.ಜಿ ಸೆಮಿನಾರ್ ಹಾಲ್ ನಲ್ಲಿ ಜರುಗಿತು. ಮೂಡಬಿದಿರೆ ರೋಟರಿ ಕ್ಲಬ್ನ ಅಧ್ಯಕ್ಷ ಶ್ರೀಕಾಂತ ಕಾಮತ್, ಎನ್ಎಸ್ಎಸ್ ವಿದ್ಯಾರ್ಥಿಗಳು ಸದಾ ಸ್ವಚ್ಛತಾ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ, ಸುಂದರ ಪರಿಸರದ ನಿರ್ಮಾತೃಗಳಾಗಬೇಕು ಮೂಡಬಿದಿರೆ ರೋಟರಿ ಕ್ಲಬ್ನ ಮಹತ್ತರ ಯೋಜನೆಯಲ್ಲೊಂದಾದ ಸ್ವಚ್ಛ ಸುಂದರ ಮೂಡಬಿದಿರೆ ನಿರ್ಮಾಣದಲ್ಲಿ ಮುಂದಿನ ದಿನಗಳಲ್ಲಿ ಆಳ್ವಾಸ್ ಕಾಲೇಜಿನ ಎನ್ಎಸ್ಎಸ್ ವಿಭಾಗವು ಕೈಜೋಡಿಸಬೇಕು ಎಂದು ವಿನಂತಿಸಿದರು. ಕಾಲೇಜಿನ ಎನ್ಎಸ್ಎಸ್ ಘಟಕಕ್ಕೆ ಐದುಸಾವಿರ ರೂಪಾಯಿಯ ಧನ ಸಹಾಯ ನೀಡಿ, ಸಲಕರಣೆಗಳನ್ನು ಖರೀದಿಸಲು ಸಹಕರಿಸುವುದಾಗಿ ತಿಳಿಸಿದರು. ಕಾಲೇಜಿನ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಂಘಟನೆಯಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳಲ್ಲಿ ಸಮಾಜದೆಡೆಗಿನ ದೃಷ್ಠಿಕೋನ ಬದಲಾಗುವುದರೊಂದಿಗೆ, ಸಮಾಜಕ್ಕೆ ಬೇಕಾಗುವ ಹತ್ತು ಹಲವು ಸಮಾಜಮುಖಿ ಕಾರ್ಯಗಳು ನೆರವೇರುತ್ತವೆ.ಯುವ ಜನತೆ ಸದೃಡ ಸಮಾಜ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಬೈಂದೂರು ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೈಂದೂರು-ಗಂಗಾನಾಡು ರಸ್ತೆಯ ಭರತನಗರದಲ್ಲಿ ಸೌಪರ್ಣಿಕ ಡೆವಲಪರ್ಸ್ತ ಹಾಗೂ ಮಹಾವೀರ ಕನ್ಸ್ಸ್ಟ್ರಕ್ಷನ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ’ಓಂ ಮಹಾವೀರ ಸುಸಜ್ಜಿತ ವಸತಿ ಸಮುಚ್ಚಯ ಎರಡನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಟಿ. ನಾರಾಯಣ ಹೆಗ್ಡೆ ಶಂಕುಸ್ಥಾಪನೆ ನೆರವೇರಿಸಿದರು. ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಸಂಸ್ಥೆಯ ಆಡಳಿತ ಪಾಲುದಾರರಾದ ಗೋಪಾಲಕೃಷ್ಣ ಜಿ., ಭೀಮೇಶ್ ಕುಮಾರ್, ನಾಗೇಶ ನಾಯ್ಕ್ ಗೊರಟೆ, ಮುಂತಾದವರು ಹಾಜರಿದ್ದರು. ಭರತ್ ನಗರದಲ್ಲಿ ನಿರ್ಮಾಣವಾಗಲಿರುವ 1 ಬಿಹೆಚ್ಕೆ ಹಾಗೂ 2 ಬಿಹೆಚ್ಕೆ ಅಪಾರ್ಟ್ಮೆಂಟ್ಗಳು ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದೆ. ನೂತನ ಅಪಾರ್ಟ್ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500ಮೀಟರ್ ದೂರದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1.5ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಗಿಳಿಯಾರು ಜನಸೇವಾ ಟ್ರಸ್ಟ್ ಅನಾವರಣ ಹಾಗೂ ಅಭಿಮತ ಪತ್ರಿಕೆಯ ದಶಮಾನೋತ್ಸವ ಮಾ.31ರಂದು ಮೂಡುಗಿಳಿಯಾರು ಹಿ.ಪ್ರಾ.ಶಾಲೆ ಮೈದಾನದಲ್ಲಿ ಜರಗಲಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಅಶೋಕ್ ಶೆಟ್ಟಿ ಬನ್ನಾಡಿ ಸೋಮವಾರ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮ ಬೆಳಗ್ಗೆ 9ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಅನಂತರ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ ಇಲ್ಲಿನ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ, ಗಿಳಿಯಾರು ದಿ| ಐತ ಪೂಜಾರಿ ಸ್ಮರಣಾರ್ಥ ನೇತ್ರದಾನಕ್ಕೆ ಹೆಸರು ನೋಂದಣಿ ಶಿಬಿರ ನಡೆಯಲಿದೆ. ಸಂಜೆ 6 ಗಂಟೆಯಿಂದ ಕಾವ್ಯಶ್ರೀ ಅಜೇರು ಇವರಿಂದ ಯಕ್ಷರಸಕಾವ್ಯ, ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ, ಮೂಡುಬಿದ್ರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವಾ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಕರ್ನಾಟಕ ಪಶ್ಚಿಮ ವಲಯ ಐ.ಜಿ.ಪಿ. ಅರುಣ್ ಚಕ್ರವರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಿಕ್ಕಮಂಗಳೂರು ಎಸ್.ಪಿ. ಅಣ್ಣಾಮಲೈ ಜನಸೇವಾ ಟ್ರಸ್ಟ್ ಅನಾವರಣಗೊಳಿಸಲಿದ್ದಾರೆ ಹಾಗೂ ಅನೇಕ ಗಣ್ಯರು ಉಪಸ್ಥಿತರಿರುವರು. ಸಾಮಾಜಿಕ…
