ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಂಚಿಕಾನ್ ಸಹಿಪ್ರಾ ಶಾಲೆಯ ಶಾರದಾ ರಂಗಮಂದಿರದಲ್ಲಿ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು. ಒರ್ವ ವ್ಯಕ್ತಿಯ ಕಾಲದ ಅನಂತರ ಅವರ ಸಾಧನೆಗಳನ್ನು ಗುರುತಿಸಿ ಆಚರಿಸುವ ಉತ್ಸವಗಳಿಂದಾಗುವ ತೃಪ್ತಿ ಸಾಧಕರಿಗೆ ಯಾವುದೇ ಪ್ರಶಸ್ತಿಗಿಂತ ದೊಡ್ಡದಾಗಿರುತ್ತದೆ. ವೈಯಕ್ತಿಕ ಬದುಕಿನ ಜೊತೆಗೆ ಸಮಾಜದ ಅಭಿವೃದ್ಧಿಯ ಕಾಳಜಿ ಇರುವುದು ಕೇಲವೇ ಕೆಲವು ಮಹಾನ್ ವ್ಯಕ್ತಿಗಳಿಗೆ ಮಾತ್ರವಾಗಿದ್ದು, ಅಂತಹ ಸಾಧಕರಲ್ಲಿ ಖಂಬದಕೋಣೆ ದಿ. ಆರ್. ಕೆ. ಸಂಜೀವರಾಯರ ಕೊಡುಗೆ ಅಪಾರ. ಈ ನೆಲೆಯಲ್ಲಿ ಮುಂದಿನ ತಲೆಮಾರಿನವರು ಕೂಡಾ ಇವರ ಆದರ್ಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿದ್ಯಾಸಂಸ್ಥೆಗಳು ವ್ಯಕ್ತಿಯ ಭವ್ಯ ಭವಿಷ್ಯದ ಬುನಾದಿ ಇದ್ದಂತೆ. ಅವುಗಳನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಶಾಲೆ ಎನ್ನುವುದು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರಯುತವಾದ ಮೌಲ್ಯಗಳನ್ನು ಬೆಳೆಸಲು ಸಹಕಾರಿ ಎಂದು ಕುಂದಾಪುರ ವಲಯದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅನಿಲ್ ಡಿಸೋಜ ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಸನ್ಮಾನ ಮತ್ತು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಅಪೋಸ್ತಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಕಾರ‍್ಯದರ್ಶಿ ಸಿಸ್ಟರ್ ಐಡಾ ಬರ್ಬೋಜ ಎ.ಸಿ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ಅಲ್ಲಿ ಕಲಿತ ವಿದ್ಯಾರ್ಥಿಗಳು ನೆರವಾಗಬೇಕು. ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಸಹಕಾರದಲ್ಲಿ ಜೀವನದ ಆನಂದ ಅಡಗಿದೆ ಎಂದು ಹೇಳಿದರು. ಗಂಗೊಳ್ಳಿಯ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ, ಗಂಗೊಳ್ಳಿಯ ಪುರೋಹಿತರಾದ ಜಿ. ನಾರಾಯಣ ಆಚಾರ್ಯ, ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಅಬ್ದುಲ್ ವಹಾಬ್ ನದ್ವಿ, ಮಂಗಳೂರಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ಸಂಸ್ಥೆಯನ್ನು ಆರಂಭಿಸುವ ಸ್ಥಾಪಕ ವ್ಯಕ್ತಿಯ ತ್ಯಾಗ, ಪರಿಶ್ರಮ ಹಾಗೂ ನಿಷ್ಠೆಯಿಂದ ಕೂಡಿದ ಪ್ರಾಮಾಣಿಕ ಸೇವೆಯಿಂದ ಮಾತ್ರ ಅದು ಅಭಿವೃದ್ಧಿ ಕಾಣಲು ಸಾಧ್ಯ. ಆತನ ದೂರದೃಷ್ಠಿತ್ವದ ಚಿಂತನೆಯನ್ನು ಸಮಾನ ಮನಸ್ಕ ಸಹಚರರು ಆತನನ್ನು ಹಿಂಬಲಿಸುತ್ತಾರೆ. ಈ ವ್ಯವಸ್ಥೆಯಿಂದ ಸಂಸ್ಥೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಮಹಾಬಲೇಶ್ವರದ ವೇದಮೂರ್ತಿ ಪ್ರಕಾಶ ಉಡುಪ ಹೇಳಿದರು. ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾರದಾ ರಂಗಮಂದಿರದಲ್ಲಿ ನಡೆದ ಶಾಲೆಯ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಪರಿಣಾಮಕಾರಿಯಾಗಿ ಹೊಣೆ ನಿರ್ವಹಿಸಲು ಕರ್ತವ್ಯಶೀಲ ಶಿಕ್ಷಕರ, ಪ್ರೋತ್ಸಾಹಕ ಪಾಲಕರ, ಹಳೆವಿದ್ಯಾರ್ಥಿಗಳ, ಹೊಣೆಗಾರರಾದ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಪ್ರೇಮಿ ಸಾರ್ವಜನಿಕರ ಬೆಂಬಲ ಬೇಕು ಎಂದರು. ಅಧ್ಯಕ್ಷತೆವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹಳೆವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಗ್ರಾಮದ ಎಲ್ಲಾ ಅಂಗನವಾಡಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಹೊಸಂಗಡಿ: ಬೈಂದೂರು ವಲಯ ಮರಾಠಿ ಭಾಂದವರಿಗಾಗಿ ಆಯೋಜಿಸಲಾಗಿದ್ದ 8ನೇ ವರ್ಷದ ಕ್ರಿಕೆಟ್ ಪಂದ್ಯಾಟ್ ಮಹಾಗಣಪತಿ ಟ್ರೋಪಿ 2016 ಹೊಸಂಗಡಿಯಲ್ಲಿ ಜರುಗಿತು. ಪಂದ್ಯಾಟದಲ್ಲಿ ಹಳ್ಳಿಹೊಳೆ ತಂಡ ಪ್ರಥಮ ಸ್ಥಾನವನ್ನೂ, ಮುದೂರು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಳವಾಡಿ ಮಾರಿಕಾಂಬಾ ಯೂತ್ ಕ್ಲಬ್ ಆಶ್ರಯದಲ್ಲಿ ಕಳವಾಡಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಕೆರೆಯ ಸ್ವಚ್ಚತಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿಯ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಮಿತಿ ಆಶ್ರಯದಲ್ಲಿ ಹಳಗೇರಿಯಲ್ಲಿ ದ.ಸಂ.ಸ ಮಹಿಳಾ ಘಟಕ ಉದ್ಘಾಟನೆಗೊಂಡಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಮಹಿಳಾ ಘಟಕವನ್ನು ಉದ್ಘಾಟಿಸಿ ಶುಭಹಾರೈಸಿದರು. ದ.ಸಂ.ಸ. ಉಡುಪಿ ಜಿಲ್ಲಾ ನಾಯಕ ಜಯನ್ ಮಲ್ಪೆ, ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ಚಂದ್ರ ಹಳಗೇರಿ, ನರಸಿಂಹ ಹಳಗೇರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೊಸ ವರ್ಷಾಚರಣೆಗಾಗಿ ಕಾಲ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರೂರು ಕೊರಗರ ಕೇರಿಯ ಮರ್ಲಿ ಹೆಂಗ್ಸು ಮನೆಯಲ್ಲಿ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಡಿ. 31ರಂದು ವಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮುರೂರಿಗೆ ಭೇಟಿ ನೀಡಿ ಸಚಿವರ ವಾಸ್ತವ್ಯವಿರಲಿರುವ ಮನೆಗೆ ಭೇಟಿ ನೀಡಿ ಅಲ್ಲಿನ ಪೂರ್ವತಯಾರಿಗಳನ್ನು ಅವಲೋಕಿಸಿದರು. ಮುರೂರಿಗೆ ಆಗಮಿಸಲಿರುವ ಸಚಿವರು ಜಿಲ್ಲೆಯ ನಾನಾ ಭಾಗದಿಂದ ಆಗಮಿಸುವ ಕೊರಗ ಜನಾಂಗದವರು ಹಾಗೂ ಸ್ಥಳೀಯರ ಸಮಾವೇಶ ನಡೆಸಿ, ಬಳಿಕ ಅವರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸಂಜೆ ಗಂಟೆಯ ಬಳಿಕ ಕೊರಗ ಸಂಘಟನೆಯ ಮುಖಂಡರು ಹಾಗೂ ಇತರ ಜನರೊಂದಿಗೆ, ಕೊರಗ ಕೇರಿಯ ಮರ್ಲಿ ಹೆಂಗ್ಸು ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆ ದಿನ ಮಧ್ಯರಾತ್ರಿಯವರೆಗೂ ಕೊರಗ ಸಂಘಟನೆಯಿಂದ ಜಾನಪದ ನೃತ್ಯ, ಡೊಳ್ಳು ಕುಣಿತ ಮೂಲಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಮಯ್ಯಾಡಿ ಸೊಸೈಟಿ ಸಮೀಪ ರಸ್ತೆಯ ಬದಿಯಲ್ಲಿ ನಿಂತಿದ್ದ ಸ್ವಿಫ್ಟ್ ಕಾರಿಗೆ ಎದುರಿನಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿಯಾದ ಘಟನೆ ವರದಿಯಾಗಿದ್ದು, ಚಲಿಸುತ್ತಿದ್ದ ಕಾರಿನಲ್ಲಿದ್ದ ಮಹಿಳೆಯೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೊಲ್ಲೂರಿನಲ್ಲಿ ಬೈಂದೂರು ಕಡೆಗೆ ಸಂಚರಿಸುತ್ತಿದ್ದ ಬೆಂಗಳೂರು ನೊಂದಣಿ ಹೊಂದಿರುವ ಸ್ವಿಫ್ಟ್ ಕಾರು ಮಯ್ಯಾಡಿಯ ಸೊಸೈಟಿಯ ಬಳಿ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಎರಡೂ ಕಾರಿನ ಎಡಭಾಗ ಸಂಪೂರ್ಣ ಜಖಂಗೊಂಡಿದೆ. ಚಲಿಸುತ್ತಿದ್ದ ಕಾರಿನಲ್ಲಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳೀಯರು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಉಡುಪಿ ಜಿಲ್ಲೆಯ ರಾಷ್ಟ್ರಿಯ ಹೆದ್ದಾರಿ-೬೬ರಲ್ಲಿ ಅಳವಡಿಸಿರುವ ಕನ್ನಡ ಫಲಕಗಳಲ್ಲಿರುವ ಪದಗಳ ತಪ್ಪು ಬಳಕೆ ಸರಿಪಡಿಸುವಂತೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಸ್ತಾನ ಸುಂಕ ಸಂಗ್ರಹಣಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರಕುಮಾರ್ ಕೋಟ ಸೇರಿದಂತೆ ಪರಿಷತ್ತಿನ ತಾಲೂಕು, ಹೋಬಳಿ ಪದಾಧಿಕಾರಿಗಳು, ಸಂಘಸಂಸ್ಥೆಗಳ ಪ್ರಮುಖರು ಪ್ರತಿಭಟನೆಗೆ ಸಾಥ್ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳು ಕ್ರಿಸ್‌ಮಸ್ ಡೇ ಯನ್ನು ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಹಬ್ಬವನ್ನು ಪ್ರತಿಬಿಂಬಿಸುವ ಎಲ್ಲಾ ವಸ್ತುಗಳನ್ನು ಇಟ್ಟು ಅಲಂಕರಿಸಲಾಗಿತ್ತು. ಹಬ್ಬಗಳು ಸಾಮರಸ್ಯದ ಬದುಕಿಗೆ ಹೇಗೆ ಪೂರಕವಾಗಿರಬೇಕು ಎನ್ನುವುದರ ಜೊತೆಗೆ ಕ್ರಿಸ್‌ಮಸ್ ಹಬ್ಬವು ಮಾನವೀಯ ಗುಣಗಳನ್ನು ಉದ್ದೀಪಗೊಳಿಸುವ ಪರಸ್ಪರ ಪ್ರೀತಿ,ಶಾಂತಿ, ಸಮಾನತೆಯನ್ನು ಸಾರುವುದರ ಜೊತೆಗೆ ಪರಿಸರ ರಕ್ಷಣೆ, ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮ ಧ್ಯೇಯವಾಗಿರಬೇಕು, ಎನ್ನುವ ಮಾಹಿತಿಯ ಜೊತೆಗೆ ಏಸುವಿನ ಜನನ ಮತ್ತು ಜೀವನ ಹಾಗೂ ಅವರು ಸಾರಿದ ಸಂದೇಶಗಳ ಮಹತ್ವವನ್ನು ಮಕ್ಕಳಿಗೆ ವಿಸ್ತಾರವಾಗಿ ಶಿಕ್ಷಕಿಯರು ವಿವರಿಸಿದರು. ನಂತರ ಪುಟಾಣಿಮಕ್ಕಳಿಗೆ ಸಿಹಿ ಹಂಚುವ ಮೂಲಕ ಈ ದಿನವನ್ನು ಅರ್ಥಪೂರ್ಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ಪ್ರಾಂಶುಪಾಲರಾದ ಶಾಯಿಜು ಕೆ. ಆರ್. ನಾಯರ್ ಹಾಗೂ ಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
