ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳು ಕ್ರಿಸ್‌ಮಸ್ ಡೇ ಯನ್ನು ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಹಬ್ಬವನ್ನು ಪ್ರತಿಬಿಂಬಿಸುವ ಎಲ್ಲಾ ವಸ್ತುಗಳನ್ನು ಇಟ್ಟು ಅಲಂಕರಿಸಲಾಗಿತ್ತು. ಹಬ್ಬಗಳು ಸಾಮರಸ್ಯದ ಬದುಕಿಗೆ ಹೇಗೆ ಪೂರಕವಾಗಿರಬೇಕು ಎನ್ನುವುದರ ಜೊತೆಗೆ ಕ್ರಿಸ್‌ಮಸ್ ಹಬ್ಬವು ಮಾನವೀಯ ಗುಣಗಳನ್ನು ಉದ್ದೀಪಗೊಳಿಸುವ ಪರಸ್ಪರ ಪ್ರೀತಿ,ಶಾಂತಿ, ಸಮಾನತೆಯನ್ನು ಸಾರುವುದರ ಜೊತೆಗೆ ಪರಿಸರ ರಕ್ಷಣೆ, ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮ ಧ್ಯೇಯವಾಗಿರಬೇಕು, ಎನ್ನುವ ಮಾಹಿತಿಯ ಜೊತೆಗೆ ಏಸುವಿನ ಜನನ ಮತ್ತು ಜೀವನ ಹಾಗೂ ಅವರು ಸಾರಿದ ಸಂದೇಶಗಳ ಮಹತ್ವವನ್ನು ಮಕ್ಕಳಿಗೆ ವಿಸ್ತಾರವಾಗಿ ಶಿಕ್ಷಕಿಯರು ವಿವರಿಸಿದರು. ನಂತರ ಪುಟಾಣಿಮಕ್ಕಳಿಗೆ ಸಿಹಿ ಹಂಚುವ ಮೂಲಕ ಈ ದಿನವನ್ನು ಅರ್ಥಪೂರ್ಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ಪ್ರಾಂಶುಪಾಲರಾದ ಶಾಯಿಜು ಕೆ. ಆರ್. ನಾಯರ್ ಹಾಗೂ ಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು.