Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಮುದಾಯ ಮಾತ್ರ ಹೊರತು ಜಾತಿ ಸಮುದಾಯವಲ್ಲ. ಶಾಲಾ ಹಬ್ಬದ, ಉತ್ಸವಗಳ ಸವಿಯನ್ನು ಬಡವ-ಬಲ್ಲಿದ ಹಾಗೂ ಜಾತಿಭೇಧವಿಲ್ಲದೇ ಎಲ್ಲಾ ಮಕ್ಕಳು ಅನುಭವಿಸಿ ಸಂಭ್ರಮಿಸುವಂತಾಗಬೇಕು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಒಂದು ಕುಟುಂಬದ ಹಾಗೆ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗಬೇಕು ಎಂದು ಸುಣ್ಣಾರಿ ಎಕ್ಸ್‌ಲೆಂಟ್ ಪದವಿ ಪೂರ್ವ ಕಾಲೇಜಿನ ಸಂಚಾಲಕಿ ಪಿ. ಚಿತ್ರಾ ಕಾರಂತ್ ಹೇಳಿದರು. ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾ ಕೇಂದ್ರಗಳಲ್ಲಿ ಮಕ್ಕಳು ಪುಸ್ತಕದಿಂದ ಪಡೆದ ಜ್ಞಾನವನ್ನು ತಮ್ಮ ಮಸ್ತಕದಲ್ಲಿ ಸೇವಿಂಗ್ಸ್ ಮಾಡುವುದರಿಂದ ಮುಂದೆ ಯಾವುದೇ ರೀತಿಯಲ್ಲಿಯೂ ಖರ್ಚಾಗದ ಇದು ದೊಡ್ಡ ಅಸ್ತಿಯಾಗಿ ಅವರ ಜೀವನದುದ್ದಕ್ಕೂ ನಿಮಗೆ ಸಹಕಾರಿಯಾಗುತ್ತದೆ. ಶಿಕ್ಷಕರು ಕೂಡಾ ಪಾಠದ ಕುರಿತು ಪೂರ್ವ ತಯಾರಿಯಿಂದ ತರಗತಿಗೆ ಹೋಗಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ನಂತರ ಯಕ್ಷಗಾನ ಕಲಾವಿದ ಸಂಪಾಜೆಯ ಜಬ್ಬಾರ್ ಸಮೋ ಮಾತನಾಡಿ, ಕಲೆಯೆಂಬ ಮಾಧ್ಯಮದಿಂದ ಸಂಬಂಧಗಳನ್ನು Pಟ್ಟಿ ಬೆಸೆಯುವುದರ ಮೂಲಕ ಸಮಜದಲ್ಲಿ ಸಾಮರಸ್ಯ ಬೆಳೆಸುವುದಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ಶಿಕ್ಷಣದ ಮೂಲಕ ಬದುಕಿನ ಬೆಳಕು ಪಡೆದ ಸಂಸ್ಥೆಗಳನ್ನು ಬೆಂಬಲಿಸಬೇಕಾದ ಹೊಣೆ ಹಳೆವಿದ್ಯಾರ್ಥಿಗಳಿಗೆ ಇದೆ. ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಎಷ್ಟೇ ಪ್ರಯತ್ನ ನಡೆಸಿದರೂ ಅದರಲ್ಲಿ ಸಾರ್ವಜನಿಕರು ಸಹಭಾಗಿತ್ವ ನೀಡದಿದ್ದರೆ ಆ ಪ್ರಯತ್ನ ಸಫಲವಾಗದು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು. ಉಪ್ಪುಂದ ಜ್ಯೂನಿಯರ್ ಕಾಲೇಜಿನ ಹಳೆವಿದ್ಯಾರ್ಥಿಗಳ ಸಮ್ಮಿಲನ, ಅಭಿನಂದನಾ ಮತ್ತು ಕ್ರೀಡಾ ದತ್ತು ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವೆಡೆ ಹಳೆವಿದ್ಯಾರ್ಥಿ ಸಂಘ ಸೇರಿದಂತೆ ಸ್ಥಳೀಯ ಸಂಘಟನೆಗಳು ತಮ್ಮೂರಿನ ಶೈಕ್ಷಣಿಕ ಕೇಂದ್ರಗಳ ಅಭ್ಯುದಯಕ್ಕಾಗಿ ಯೋಜನೆ ರೂಪಿಸುತ್ತಿರುವುದು ಶ್ಲಾಘನೀಯ. ಈ ದಿಸೆಯಲ್ಲಿ ಹಳೆವಿದ್ಯಾರ್ಥಿ ಸಂಘವು ಶಾಲೆಯ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಕೂಡಾ ಮುನ್ನಡೆಯಬೇಕಿದೆ. ಎಂದು ಸಲಹೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಮಾತನಾಡಿ, ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಮಾನಸಿಕ ಶಾಂತಿ ದೊರೆಯುತ್ತಿಲ್ಲ. ದಾನ ಧರ್ಮ, ಸಮಾಜ ಸೇವೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಂಚಿಕಾನ್ ಸಹಿಪ್ರಾ ಶಾಲೆಯ ಶಾರದಾ ರಂಗಮಂದಿರದಲ್ಲಿ ಹಳೆವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆರ್.ಕೆ. ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು. ಒರ್ವ ವ್ಯಕ್ತಿಯ ಕಾಲದ ಅನಂತರ ಅವರ ಸಾಧನೆಗಳನ್ನು ಗುರುತಿಸಿ ಆಚರಿಸುವ ಉತ್ಸವಗಳಿಂದಾಗುವ ತೃಪ್ತಿ ಸಾಧಕರಿಗೆ ಯಾವುದೇ ಪ್ರಶಸ್ತಿಗಿಂತ ದೊಡ್ಡದಾಗಿರುತ್ತದೆ. ವೈಯಕ್ತಿಕ ಬದುಕಿನ ಜೊತೆಗೆ ಸಮಾಜದ ಅಭಿವೃದ್ಧಿಯ ಕಾಳಜಿ ಇರುವುದು ಕೇಲವೇ ಕೆಲವು ಮಹಾನ್ ವ್ಯಕ್ತಿಗಳಿಗೆ ಮಾತ್ರವಾಗಿದ್ದು, ಅಂತಹ ಸಾಧಕರಲ್ಲಿ ಖಂಬದಕೋಣೆ ದಿ. ಆರ್. ಕೆ. ಸಂಜೀವರಾಯರ ಕೊಡುಗೆ ಅಪಾರ. ಈ ನೆಲೆಯಲ್ಲಿ ಮುಂದಿನ ತಲೆಮಾರಿನವರು ಕೂಡಾ ಇವರ ಆದರ್ಶಗಳನ್ನು ಸಾರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿದ್ಯಾಸಂಸ್ಥೆಗಳು ವ್ಯಕ್ತಿಯ ಭವ್ಯ ಭವಿಷ್ಯದ ಬುನಾದಿ ಇದ್ದಂತೆ. ಅವುಗಳನ್ನು ಉಳಿಸಿ ಬೆಳೆಸುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಶಾಲೆ ಎನ್ನುವುದು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರಯುತವಾದ ಮೌಲ್ಯಗಳನ್ನು ಬೆಳೆಸಲು ಸಹಕಾರಿ ಎಂದು ಕುಂದಾಪುರ ವಲಯದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅನಿಲ್ ಡಿಸೋಜ ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಸನ್ಮಾನ ಮತ್ತು ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಅಪೋಸ್ತಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಕಾರ‍್ಯದರ್ಶಿ ಸಿಸ್ಟರ್ ಐಡಾ ಬರ್ಬೋಜ ಎ.ಸಿ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ಅಲ್ಲಿ ಕಲಿತ ವಿದ್ಯಾರ್ಥಿಗಳು ನೆರವಾಗಬೇಕು. ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಸಹಕಾರದಲ್ಲಿ ಜೀವನದ ಆನಂದ ಅಡಗಿದೆ ಎಂದು ಹೇಳಿದರು. ಗಂಗೊಳ್ಳಿಯ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ, ಗಂಗೊಳ್ಳಿಯ ಪುರೋಹಿತರಾದ ಜಿ. ನಾರಾಯಣ ಆಚಾರ್ಯ, ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಅಬ್ದುಲ್ ವಹಾಬ್ ನದ್ವಿ, ಮಂಗಳೂರಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಾವುದೇ ಸಂಸ್ಥೆಯನ್ನು ಆರಂಭಿಸುವ ಸ್ಥಾಪಕ ವ್ಯಕ್ತಿಯ ತ್ಯಾಗ, ಪರಿಶ್ರಮ ಹಾಗೂ ನಿಷ್ಠೆಯಿಂದ ಕೂಡಿದ ಪ್ರಾಮಾಣಿಕ ಸೇವೆಯಿಂದ ಮಾತ್ರ ಅದು ಅಭಿವೃದ್ಧಿ ಕಾಣಲು ಸಾಧ್ಯ. ಆತನ ದೂರದೃಷ್ಠಿತ್ವದ ಚಿಂತನೆಯನ್ನು ಸಮಾನ ಮನಸ್ಕ ಸಹಚರರು ಆತನನ್ನು ಹಿಂಬಲಿಸುತ್ತಾರೆ. ಈ ವ್ಯವಸ್ಥೆಯಿಂದ ಸಂಸ್ಥೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಮಹಾಬಲೇಶ್ವರದ ವೇದಮೂರ್ತಿ ಪ್ರಕಾಶ ಉಡುಪ ಹೇಳಿದರು. ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾರದಾ ರಂಗಮಂದಿರದಲ್ಲಿ ನಡೆದ ಶಾಲೆಯ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಪರಿಣಾಮಕಾರಿಯಾಗಿ ಹೊಣೆ ನಿರ್ವಹಿಸಲು ಕರ್ತವ್ಯಶೀಲ ಶಿಕ್ಷಕರ, ಪ್ರೋತ್ಸಾಹಕ ಪಾಲಕರ, ಹಳೆವಿದ್ಯಾರ್ಥಿಗಳ, ಹೊಣೆಗಾರರಾದ ಜನಪ್ರತಿನಿಧಿಗಳ ಮತ್ತು ಶಿಕ್ಷಣ ಪ್ರೇಮಿ ಸಾರ್ವಜನಿಕರ ಬೆಂಬಲ ಬೇಕು ಎಂದರು. ಅಧ್ಯಕ್ಷತೆವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರನ್ನು ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹಳೆವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಗ್ರಾಮದ ಎಲ್ಲಾ ಅಂಗನವಾಡಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಹೊಸಂಗಡಿ: ಬೈಂದೂರು ವಲಯ ಮರಾಠಿ ಭಾಂದವರಿಗಾಗಿ ಆಯೋಜಿಸಲಾಗಿದ್ದ 8ನೇ ವರ್ಷದ ಕ್ರಿಕೆಟ್ ಪಂದ್ಯಾಟ್ ಮಹಾಗಣಪತಿ ಟ್ರೋಪಿ 2016 ಹೊಸಂಗಡಿಯಲ್ಲಿ ಜರುಗಿತು. ಪಂದ್ಯಾಟದಲ್ಲಿ ಹಳ್ಳಿಹೊಳೆ ತಂಡ ಪ್ರಥಮ ಸ್ಥಾನವನ್ನೂ, ಮುದೂರು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಳವಾಡಿ ಮಾರಿಕಾಂಬಾ ಯೂತ್ ಕ್ಲಬ್ ಆಶ್ರಯದಲ್ಲಿ ಕಳವಾಡಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಕೆರೆಯ ಸ್ವಚ್ಚತಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿಯ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಮಿತಿ ಆಶ್ರಯದಲ್ಲಿ ಹಳಗೇರಿಯಲ್ಲಿ ದ.ಸಂ.ಸ ಮಹಿಳಾ ಘಟಕ ಉದ್ಘಾಟನೆಗೊಂಡಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಮಹಿಳಾ ಘಟಕವನ್ನು ಉದ್ಘಾಟಿಸಿ ಶುಭಹಾರೈಸಿದರು. ದ.ಸಂ.ಸ. ಉಡುಪಿ ಜಿಲ್ಲಾ ನಾಯಕ ಜಯನ್ ಮಲ್ಪೆ, ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ಚಂದ್ರ ಹಳಗೇರಿ, ನರಸಿಂಹ ಹಳಗೇರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೊಸ ವರ್ಷಾಚರಣೆಗಾಗಿ ಕಾಲ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರೂರು ಕೊರಗರ ಕೇರಿಯ ಮರ್ಲಿ ಹೆಂಗ್ಸು ಮನೆಯಲ್ಲಿ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಡಿ. 31ರಂದು ವಾಸ್ತವ್ಯ ಹೂಡಲಿರುವ  ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮುರೂರಿಗೆ ಭೇಟಿ ನೀಡಿ ಸಚಿವರ ವಾಸ್ತವ್ಯವಿರಲಿರುವ ಮನೆಗೆ ಭೇಟಿ ನೀಡಿ ಅಲ್ಲಿನ ಪೂರ್ವತಯಾರಿಗಳನ್ನು ಅವಲೋಕಿಸಿದರು. ಮುರೂರಿಗೆ ಆಗಮಿಸಲಿರುವ ಸಚಿವರು ಜಿಲ್ಲೆಯ ನಾನಾ ಭಾಗದಿಂದ ಆಗಮಿಸುವ ಕೊರಗ ಜನಾಂಗದವರು ಹಾಗೂ ಸ್ಥಳೀಯರ ಸಮಾವೇಶ ನಡೆಸಿ, ಬಳಿಕ ಅವರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸಂಜೆ  ಗಂಟೆಯ ಬಳಿಕ ಕೊರಗ ಸಂಘಟನೆಯ ಮುಖಂಡರು ಹಾಗೂ ಇತರ ಜನರೊಂದಿಗೆ, ಕೊರಗ ಕೇರಿಯ ಮರ್ಲಿ ಹೆಂಗ್ಸು ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆ ದಿನ ಮಧ್ಯರಾತ್ರಿಯವರೆಗೂ ಕೊರಗ ಸಂಘಟನೆಯಿಂದ ಜಾನಪದ ನೃತ್ಯ, ಡೊಳ್ಳು ಕುಣಿತ ಮೂಲಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಮಯ್ಯಾಡಿ ಸೊಸೈಟಿ ಸಮೀಪ ರಸ್ತೆಯ ಬದಿಯಲ್ಲಿ ನಿಂತಿದ್ದ ಸ್ವಿಫ್ಟ್ ಕಾರಿಗೆ ಎದುರಿನಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿಯಾದ ಘಟನೆ ವರದಿಯಾಗಿದ್ದು, ಚಲಿಸುತ್ತಿದ್ದ ಕಾರಿನಲ್ಲಿದ್ದ ಮಹಿಳೆಯೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೊಲ್ಲೂರಿನಲ್ಲಿ ಬೈಂದೂರು ಕಡೆಗೆ ಸಂಚರಿಸುತ್ತಿದ್ದ ಬೆಂಗಳೂರು ನೊಂದಣಿ ಹೊಂದಿರುವ ಸ್ವಿಫ್ಟ್ ಕಾರು ಮಯ್ಯಾಡಿಯ ಸೊಸೈಟಿಯ ಬಳಿ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಎರಡೂ ಕಾರಿನ ಎಡಭಾಗ ಸಂಪೂರ್ಣ ಜಖಂಗೊಂಡಿದೆ. ಚಲಿಸುತ್ತಿದ್ದ ಕಾರಿನಲ್ಲಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳೀಯರು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More