ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಅ.೩೧ರಂದು ವಡೇರಹೋಬಳಿಯ ಸರೋಜಿನಿ ಮಧುಸೂಧನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸರ್ದಾರ್ ವಲ್ಲಭಾಯ್ ಪಟೇಲರ ಜನ್ಮ ದಿನಾಚರಣೆಯ ಅಂಗವಾಗಿ ರೋಟರಿ ಕ್ವಿಜ್ ನಡೆಸಲಾಯಿತು ಸರ್ದಾರ್ ವಲ್ಲಭಾಯ್ ಪಟೇಲರ ಕುರಿತಾದ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಸವಿತಾ ಪ್ರಥಮ ಸ್ಥಾನ ಪಡೆದರು. 10ನೇ ತರಗತಿಯ ಮೇಘನಾ, 8ನೇ ತರಗತಿಯ ಸ್ವಾತಿ ದ್ವಿತಿಯ ಸ್ಥಾನ ಪಡೆದುಕೊಂಡರು. ತೃತೀಯ ಸ್ಥಾನವನ್ನು 10ನೇ ತರಗತಿಯ ಪೂರ್ಣಶ್ರೀ, ಶ್ವೇತಾ, ಅಂಜು, ಸುಮ, ಅನುಪಮ, 9ನೇ ತರಗತಿಯ ಶ್ವೇತಾ, ಚೈತನ್ಯ, ಶಾಲಿನಿ ಪಡೆದುಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಬಹುಮಾನ ವಿತರಿಸಿ ಮಾತನಾಡಿ ಈ ದೇಶ ಕಂಡ ಅಪ್ರತಿಮ ನಾಯಕ ಸರ್ದಾರ್ ವಲ್ಲಭಾಯ್ ಪಟೇಲರು. ಅವರ ಅನನ್ಯ ದೇಶ ಭಕ್ತಿ, ನಾವೆಲ್ಲರೂ ಒಂದೇ ಎನ್ನುವ ಏಕತೆಯ ಭಾವವನ್ನು ದೇಶದಲ್ಲಿ ಜಾಗೃತಗೊಳಿಸಿ ನಮ್ಮೆಲ್ಲರ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರಂತೆ ದೇಶದ ಉಜ್ವಲ ಭವಿಷ್ಯಕ್ಕೆ ನಿವೆಲ್ಲರೂ ಕೊಡುಗೆಗಳಾಗಿ ಎಂದು ಹಾರೈಸಿದರು. ಸದಸ್ಯರಾದ ಮುತ್ತಯ್ಯ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸದ ವಿಶೇಷ ಕಾರ್ಯಕ್ರಮವಾಗಿ ಶ್ರೀಮದ್ ಭಾಗವತ ಕಥಾ ಜ್ಞಾನ ಯಜ್ಞ ಮಹೋತ್ಸವದ ಶ್ರೀ ಕೃಷ್ಣ ಜನ್ಮೋತ್ಸವವು ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಅ.೩೧ರಂದು ಕೋಣಿಯ ಎಚ್.ಎಂ.ಟಿ ರಸ್ತೆ ಬಳಿಯ ಕೃಷಿಭೂಮಿಯಲ್ಲಿ ಸ್ಥಳೀಯ ಮಹಿಳೆಯರು ಮತ್ತು ಆನ್ಸ್ ಕ್ಲಬ್ ಕುಂದಾಪುರದ ಸದಸ್ಯರಿಗೆ ತೆನೆಕೊಯ್ಲು ಸ್ಪರ್ಧೆ ನಡೆಯಿತು. ಕೋಣಿಯ ಎಚ್ಎಂಟಿ ರಸ್ತೆ ನಿವಾಸಿ ಮುತ್ತು ಪೂಜಾರ್ತಿ ತೆನೆಕೊಯ್ಲು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ಕಾಳಮ್ಮ ಪೂಜಾರ್ತಿ ದ್ವಿತಿಯ ಸ್ಥಾನ ಹಾಗೂ ಶಾರದ ಪೂಜಾರಿ ತೃತೀಯ ಸ್ಥಾನ ಪಡೆದುಕೊಂಡರು. ಆನ್ಸ್ ಸದಸ್ಯರಿಗೆ ನಡೆದ ಸ್ಪರ್ಧೆಯಲ್ಲಿ ಭಾರತಿ ಪ್ರಕಾಶ್ಚಂದ್ರ ಶೆಟ್ಟಿ ಪ್ರಥಮ ಸ್ಥಾನ, ಗೀತಾ ಟಿ. ಬಿ. ಶೆಟ್ಟಿ ದ್ವಿತೀಯ ಸ್ಥಾನ, ಸಾವಿತ್ರಿ ಕನ್ನಂತ ತೃತೀಯ ಸ್ಥಾನ ಪಡೆದುಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸದಸ್ಯರಾದ ಮುತ್ತಯ್ಯ ಶೆಟ್ಟಿ, ವೆಂಕಟಾಚಲ ಕನ್ನಂತ, ಶ್ರೀಮತಿ ಉಷಾ ಮುತ್ತಯ್ಯ ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಚಂದ್ರ ಗಾಣಿಗ ಸಹಕರಿಸಿದರು.
ಕುಂದಾಪುರ: ಊರ ಅಭಿವೃದ್ಧಿ ಮತ್ತು ಲೋಕಕಲ್ಯಾಣಾರ್ಥವಾಗಿ ಊರ ಜಾತ್ರೆಯನ್ನು ನಡೆಸಬೇಕು. ಐತಿಹಾಸಿಕ ಜಾತ್ರೆ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕೊಡಿಹಬ್ಬ ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕೆ ಹೊಸ ಆಯಾಮ ನೀಡಿದೆ. ಇಂತಹ ಮಹತ್ವದ ಬಹು ದೊಡ್ಡ ಹಬ್ಬವನ್ನು ಸಾಂಗವಾಗಿ ನೆರವೇರಿಸುವಲ್ಲಿ ಸರ್ವಧರ್ಮದವರ ಸಹಭಾಗಿತ್ವ ಮತ್ತು ಸಹಕಾರ ಅವಶ್ಯಕವಾಗಿದೆ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯ ಪ್ರಧಾನ ಅರ್ಚಕ ಪ್ರಸನ್ನ ಕುಮಾರ ಐತಾಳ ಹೇಳಿದರು. ಅವರು ಕೋಟೇಶ್ವರ ಕೋಡಿಹಬ್ಬದ ಆಹ್ವಾನ ಪತ್ರಿಕೆ ದೇವಳ ವಠಾರದಲ್ಲಿ ಬಿಡುಗಡೆ ಮಾಡಿ, ಮಾತನಾಡಿದರು. ಕೊಡಿಹಬ್ಬದ ಪೂರ್ವಭಾವಿ ತಯಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ದೇವಾಲಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್ ಆಗಮೋಕ್ತ ಪೂಜೆ, ವಿಧಿ ವಿಧಾನಗಳು, ಇಲಾಖೆ ಸಹಕಾರದ ಬಗ್ಗೆ ವಿವರಿಸಿದರು. ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಮಾತನಾಡಿ ನಾನಾ ಕಡೆಗಳಿಂದ ಜಾತ್ರೆಗೆ ಆಗಮಿಸುವ ವಾಹನಗಳಿಗೆ ನಗರ ಪ್ರವೇಶದ ಉತ್ತರ ಮತ್ತು ದಕ್ಷಿಣ ವೈ ಜಂಕ್ಷನ್ಗಳಲ್ಲಿ ಹಾಗೂ ಹಾಲಾಡಿ ಜಂಕ್ಷನ್ ನಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಹೊರ…
ಕುಂದಾಪುರ: ಪ್ರತಿ ವರ್ಷದ ಆಶ್ವೀಜ ಪೂರ್ಣಿಮೆಯಂದು ಮುಂಬೈ ವೈದಿಕ ವೃಂದದವರಿಂದ ನಡೆಸಲ್ಪಡುವ ಲಘು ವಿಷ್ಣು ಹವನವು ಈ ವರ್ಷ ಚಾತುರ್ಮಾಸ ನಡೆಯುತ್ತಿರುವ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು. ಮುಂಬೈಯಿಂದ ಆಗಮಿಸಿದ 15 ಮಂದಿ ವೈದಿಕರು ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾಶೀ ಮಠ ಕಿರಿಯ ಯತಿಗಳಾದ ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪೂರ್ಣಾಹುತಿ ನಡೆಸಿದರು.
ಕುಂದಾಪುರ: ಇಂದು ವಿಶ್ವಮಾನ್ಯತೆಯನ್ನು ಪಡೆದಿರುವ ಯೋಗವನ್ನು ನಮ್ಮ ದಿನನಿತ್ಯದ ಜೀವನಕ್ರಮದಲ್ಲಿ ರೂಢಿಸಿಕೊಂಡು ಆರೋಗ್ಯದಾಯಕ ಜೀವನ ನಡೆಸುವ ಜೊತೆಗೆ ಇಂತಹ ಯೋಗ ಸ್ಪರ್ಧೆಯ ಆಯೋಜನೆಯಿಂದ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಅ.೩೦ರಂದು ರೋಟರಿ ವಲಯ 1ರ ಸದಸ್ಯರಿಗೆ ಏರ್ಪಡಿಸಿದ ಯೋಗ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯದ ಕಾರ್ಯದರ್ಶಿ ಸುದರ್ಶನ ಕೆ.ಎಸ್., ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಕ್ರೀಡೋತ್ಸವ ಸಂಯೋಜಕ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಖ್ಯಾತ ನ್ಯಾಯವಾದಿ ಟಿ. ಬಿ. ಶೆಟ್ಟಿ, ಉದ್ಯಮಿ ಪ್ರಶಾಂತ ತೋಳಾರ್ ಯೋಗ ಸ್ಪರ್ಧಾಳುಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಕಲಾ ಪ್ರೋತ್ಸಾಹಕ ಕರುಣಾಕರ ಪೈ ಹೆಮ್ಮಾಡಿ, ನಿವೃತ್ತ ಹಿರಿಯ ಶಿಕ್ಷಕಿ ಶ್ರೀಮತಿ ಸೆವರಿನ್ ಮೆಂಡೋನ್ಸಾ ಅವರನ್ನು ಸನ್ಮಾನಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ಸದಾನಂದ ಸೇರುಗಾರ್ ಉಪ್ಪಿನಕುದ್ರು, ಗೊಂಬೆಯಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯು.ವಾಮನ್ ಪೈ, ಕಲಾವಿದ ಮಂಜುನಾಥ ಮೈಪಾಡಿ ಉಪಸ್ಥಿತರಿದ್ದರು. ಅನಂತರ ಶ್ರೀ ದುರ್ಗಾಪರಮೇಶ್ವರಿ ಬಾಲಕಿಯರ ಯಕ್ಷಗಾನ ತಂಡ, ಹೆಮ್ಮಾಡಿ ಇವರಿಂದ ಮಧುರ ಮಹೇಂದ್ರ ಯಕ್ಷಗಾನ ಬಯಲಾಟ ಕಿಕ್ಕಿರಿದು ಸೇರಿದ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ: ಜೇಸಿಐ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷ ದಿನೇಶ್ ಗೋಡೆ ಅವರಿಗೆ ’ಕಮಲಪತ್ರ’ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೇಸಿ ವಲಯ ಉಪಾಧ್ಯಕ್ಷ ಸುಹಾನ್ ಸುಸ್ತಾನ, ವಲಯ ನಿರ್ದೇಶಕ ರತ್ನಾಕರ ಕೆ., ಡಾ| ಕೃಷ್ಣರಾವ್ ಎಚ್. ವಿ., ನಿವೃತ್ತ ಸೈನಿಕ ಅನಂತಪದ್ಮನಾಭ, ಜೇಸಿಐ ಕುಂದಾಪುರದ ಅಧ್ಯಕ್ಷ ಚಂದ್ರ ಇಂಬಾಳಿ, ಕಾರ್ಯದರ್ಶಿ ಅವಿನಾಶ್ ರೈ, ನಿಕಟಪೂರ್ವಾಧ್ಯಕ್ಷ ರವಿರಾಜ್ ಆಚಾರ್, ಸಪ್ತಾಹ ಸಭಾಪತಿ ವಿಷ್ಣು ಕೆ. ಬಿ, ಜೇಸಿರೆಟ್ ಅಧ್ಯಕ್ಷೆ ರೂಪಾ ಚಂದ್ರ ಇಂಬಾಳಿ, ಜೆಜೇಸಿ ಅಧ್ಯಕ್ಷೆ ದೀಕ್ಷಿತಾ ಗೋಡೆ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪುರ: ನಾವಡರಕೇರಿ ನಿವಾಸಿ ವಿ. ಪರಮೇಶ್ವರ ನಾವಡ(80) ಸ್ವಗೃಹದಲ್ಲಿ ಅ.29ರಂದು ನಿಧನರಾದರು. ಮೃತರು ಕೃಷಿಕರಾಗಿದ್ದು ಪರಿಸರದಲ್ಲಿ ಪೌರೋಹಿತ್ಯವನ್ನು ನಡೆಸಿಕೊಂಡು ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಗೆಲಾಕ್ಸಿ ಸ್ಪೋರ್ಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ನಾವಡ ಸೇರಿದಂತೆ ನಾಲ್ವರು ಪುತ್ರರು, ಇರ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕರ್ನಾಟಕ ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್ಕುಮಾರ್, ಭಾರತೀಯ ಜೇಸಿಐನ ವಲಯದ ಪದಾಧಿಕಾರಿಗಳು, ಹತ್ತು ಹಲವು ಸಂಘ ಸಂಸ್ಥೆ, ಸಂಘಟನೆಯ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು.
ಗಂಗೊಳ್ಳಿ: ರಾಮಾಯಣ ಮತ್ತು ಮಹಾಭಾರತ ಎರಡೂ ಕೃತಿಗಳೂ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಅತ್ಯಂತ ಅಮೋಘವಾಗಿ ಮತ್ತು ಸಮರ್ಥವಾಗಿ ಜಗತ್ತಿಗೆ ಸಾರಿ ಹೇಳಿದಂತಹ ಅತ್ಯಮೂಲ್ಯ ಕೃತಿಗಳು.ಅವುಗಳು ಭಾರತದ ಹೆಮ್ಮೆ. ಅವುಗಳನ್ನು ಸೃಷ್ಟಿಸಿದ ಮಹಾತ್ಮರನ್ನು ನಾವು ಸ್ಮರಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂದು ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು. ಅವರು ವಾಲ್ಮೀಕಿ ಜಯಂತಿಯ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ವಾಲ್ಮೀಕಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ವಾಲ್ಮೀಕಿ ಮಹರ್ಷಿಗಳ ಮೂಲಗಳ ಬಗೆಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರು ರಾಮಾಯಣದಲ್ಲಿ ಪ್ರತಿಪಾದಿಸಿರುವ ಉತ್ತಮ ವಿಚಾರಗಳ ಬಗೆಗೆ ಆಸಕ್ತಿಯನ್ನು ತೋರಬೇಕಿದೆ ಜೊತೆಗೆ ಆ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರ್ವಹಿಸಬೇಕಿದೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕಿವೆ.ವಾಲ್ಮೀಕಿಯನ್ನು ಒಂದು ನಿರ್ದಿಷ್ಠ ವರ್ಗಕ್ಕೆ ಅಥವಾ ಧರ್ಮಕ್ಕೆ ಸೇರಿದ ವ್ಯಕ್ತಿಯೆಂದು ಮಾತ್ರ ಪರಿಗಣಿಸುವುದು ನಾವು ಅವರಿಗೆ ಮಾಡುವ ಅವಮಾನ. ಎಂದು ಅವರು ಹೇಳಿದರು. ಸರಸ್ವತಿ…
