ಕುಂದಾಪುರ: ಜೇಸಿಐ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷ ದಿನೇಶ್ ಗೋಡೆ ಅವರಿಗೆ ’ಕಮಲಪತ್ರ’ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿ ವಲಯ ಉಪಾಧ್ಯಕ್ಷ ಸುಹಾನ್ ಸುಸ್ತಾನ, ವಲಯ ನಿರ್ದೇಶಕ ರತ್ನಾಕರ ಕೆ., ಡಾ| ಕೃಷ್ಣರಾವ್ ಎಚ್. ವಿ., ನಿವೃತ್ತ ಸೈನಿಕ ಅನಂತಪದ್ಮನಾಭ, ಜೇಸಿಐ ಕುಂದಾಪುರದ ಅಧ್ಯಕ್ಷ ಚಂದ್ರ ಇಂಬಾಳಿ, ಕಾರ್ಯದರ್ಶಿ ಅವಿನಾಶ್ ರೈ, ನಿಕಟಪೂರ್ವಾಧ್ಯಕ್ಷ ರವಿರಾಜ್ ಆಚಾರ್, ಸಪ್ತಾಹ ಸಭಾಪತಿ ವಿಷ್ಣು ಕೆ. ಬಿ, ಜೇಸಿರೆಟ್ ಅಧ್ಯಕ್ಷೆ ರೂಪಾ ಚಂದ್ರ ಇಂಬಾಳಿ, ಜೆಜೇಸಿ ಅಧ್ಯಕ್ಷೆ ದೀಕ್ಷಿತಾ ಗೋಡೆ ಇನ್ನಿತರರು ಉಪಸ್ಥಿತರಿದ್ದರು.