ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಮಕ್ಕಿಗದ್ದೆ ಫೆಂಡ್ಸ್ ಸಂಯೋಜನೆಯಲ್ಲಿ ಶ್ರೀ ಪೆರ್ಡೂರು ಮೇಳದವರಿಂದ ಕುಂದಾಪುರ ತಾಲೂಕಿನಲ್ಲಿಯೇ ಮೊದಲು ಪ್ರದರ್ಶನ ಕಂಡ ಪುಪ್ಪಸಿಂಧೂರಿ ಯಕ್ಷಗಾನದಲ್ಲಿ ಗಾನ ಸಾರಥಿ ಬಿರುದಾಂಕಿತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ನಾರಾಯಣ ಹೆಗ್ಡೆ ಈರ್ವ ಕಲಾವಿದರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಕ್ಕಿಗದ್ದೆ ಫೆಂಡ್ಸ್‌ನ ದೇವರಾಜ ಆಚಾರ್ಯ, ಗೋವಿಂದರಾಜ್ ಆಚಾರ್ಯ, ಪ್ರದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗಣೇಶ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪ.ಪೂ.ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ, ವಕೀಲರ ಸಂಘ, ಕುಂದಾಪುರ ಅಭಿಯೋಗ ಇಲಾಖೆ ಕುಂದಾಪುರ ಹಾಗೂ ರೋಟರಿ ಮಿಡ್‌ಟೌನ್ ಕುಂದಾಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜಶೇಖರ .ವಿ. ಪಾಟೀಲ್ ಮಾನವ ಹಕ್ಕುಗಳ ದಿನಾಚರಣೆಯ ಚರಿತ್ರೆ ಹಾಗೂ ಔಚಿತ್ಯವನ್ನು ವಿವರಿಸಿ , ಮಕ್ಕಳಲ್ಲಿ ಧನಾತ್ಮಕ ಹಾಗೂ ಆರೋಗ್ಯಕರ ಪೈಪೋಟಿ ಬೆಳೆಸಬೇಕು ಹಾಗೂ ೧೪ ವಯಸ್ಸಿಗಿಂತ ಕೆಳಗಿನ ಮಕ್ಕಳಿಗೆ ಅಂತರ್ಜಾಲ ಹಾಗೂ ಮೊಬೈಲ್ ಬಳಕೆಯ ನಿಷೇಧತೆ ತ್ವರಿತ ಅವಶ್ಯಕತೆಯಿದೆ ಎಂದರು. ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ.ರವೀಶ್ಚಂದ್ರ ಶೆಟ್ಟಿ ರವರು ಮಾನವ ಹಕ್ಕುಗಳ ಅರಿವಿನ ಅವಶ್ಯಕತೆಯನ್ನು ವಿವರಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ.ಶ್ರೀನಿವಾಸ ಸುವರ್ಣರವರು ಸಂವಿಧಾನವು ಜೀವಿಸುವ ಹಕ್ಕಿಗೆ ಹೆಚ್ಚಿನ ಶಕ್ತಿ ನೀಡಿದೆ ಹಾಗೂ ’ ಜೀವಿಸಿ ಹಾಗೂ ಜೀವಿಸಲು ಬಿಡಿ’ ನಿಯಮವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದದ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆ ನಡೆಯಿತು. ನಸುಕಿನಲ್ಲಿ ಖತೀಬ್ ಇಕ್ರಮುಲ್ಲಾ ಸಖಾಫಿ ಅವರ ನೇತೃತ್ವದಲ್ಲಿ ನಬೀ ಮದಹ್‌ಗೀತೆ ಹಾಗೂ ಬುರ್ದಾ ಮಜ್ಲಿಸ್ ನಡೆಸಿ ನಬೀ ಜನ್ಮದಿನಾಚರಣೆಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಮುತವಲ್ಲಿ ಬಿ. ಎ. ಸಯ್ಯದ್ ಧ್ವಜಾರೋಹಣಗೈದರು. ಮೆರವಣಿಗೆಯ ಬಳಿಕ ಮಧ್ಯಾಹ್ನ ಬೃಹತ್ ಅನ್ನದಾನ ನಡೆಯಿತು. ಈದ್ ಮಿಲಾದ್ ಪೂರ‍್ವಭಾವಿಯಾಗಿ ರವಿವಾರ ಜಮಾತ್ ಅಧ್ಯಕ್ಷ ಎನ್. ಅಬ್ದುಲ್ಲಾ ತೌಫೀಕ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು. ಕೇರಳ ಸಂಯುಕ್ತ ಸುನ್ನಿ ಶಿಕ್ಷಣ ಮಂಡಳಿ ನಡೆಸಿದ್ದ ಹತ್ತನೆ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಾವುಂದ ಕೋಯಾನಗರ ಬುಸ್ತಾನುಲ್ ಮದರಸದ ವಿದ್ಯಾರ್ಥಿನಿ ಆಯಿಶತ್ ಮೆಹರಾಜ್, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಂಸೀರಾ ಮತ್ತು ಉಸ್ತಾದ್ ಹನೀಫ್ ಸಅದಿ ಅವರನ್ನು ಸನ್ಮಾನಿಸಲಾಯಿತು. ಬಿ. ಎಸ್. ಮೊಯ್ದಿನ್, ಡಬ್ಲ್ಯುಎಫ್‌ಕೆ ಹುಸೇನ್ ಹಾಜಿ, ಎಂ. ಎ. ಕಾದರ್ ಹಾಜಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಜೀವನದಲ್ಲಿ ವಿದ್ಯಯೇ ಮುಖ್ಯವಲ್ಲ. ವಿದ್ಯೆಯ ಜೊತೆಗೆ ಸಾಮಾನ್ಯಜ್ಞಾನ ಅತ್ಯಗತ್ಯ. ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿದ ಬಳಿಕ ಅಗತ್ಯ ತರಬೇತಿ ಪಡೆದುಕೊಂಡಾಗ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಾಧನೆಗೈದು ಉನ್ನತ ಸ್ಥಾನ ಅಲಂಕರಿಸಿದಾಗ ತಮಗೆ ಶಿಕ್ಷಣ ನೀಡಿದ ಶಾಲೆ ಹಾಗೂ ಅಧ್ಯಾಪಕರನ್ನು ಎಂದಿಗೂ ಮರೆಯಬಾರದು. ಶಾಲೆಯ ಅಭಿವೃದ್ಧಿಗೆ ತಮ್ಮಿಂದಾಗುವ ಸಹಾಯ ಮಾಡುವಂತಾಗಬೇಕು ಎಂದು ಬಳ್ಳಾರಿಯ ಉದ್ಯಮಿ ಪದ್ಮನಾಭ ಕೊತ್ವಾಲ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಎಸ್.ವಿ.ಶಾಲೆಗಳ ಪ್ರಾಕ್ತನ ವಿದ್ಯಾರ್ಥಿ ಸಂಘದ ೪೭ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ, ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಕಾಶೀನಾಥ ಪೈ, ಗಂಗೊಳ್ಳಿಯ ಉದ್ಯಮಿ ಜಿ.ರಾಧಾಕೃಷ್ಣ ನಾಯಕ್ ಶುಭ ಹಾರೈಸಿದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ ಅವರು ವಿವಿಧ ಸ್ಪರ್ಧೆಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಪರಿವರ್ತನ ಪುನರ್ ವಸತಿ ಕೇಂದ್ರ, ಮನಸ್ಮಿತಾ ಫೌಂಡೇಶನ್,ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ ೧೪ನೇ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಕೋಟದ ವಿದ್ಯುತ್ ಗುತ್ತಿಗೆದಾರರಾದ ಶ್ರೀಕಾಂತ್ ಶೆಣೈ ಅವರು ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿgವನ್ನು ಸಾಲಿಗ್ರಾಮದ ಶಬರಿ ಕ್ಲಿನಿಕ್‌ನ ಡಾ. ಗಣೇಶ್ ಅವರು ಉದ್ಘಾಟಿಸಿ, ಈ ಪರಿಸರದ ಜನರು ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಹಾರೈಸಿದರು. ಪರಿವರ್ತನ ಕೇಂದ್ರದ ವೈದ್ಯಕೀಯ ನಿದೇರ್ಶಕ ಡಾ. ಪ್ರಕಾಶ ಸಿ. ತೋಳಾರ್‌ರವರು ಮಾತನಾಡಿ, ಈ ಶಿಬಿರವನ್ನು ಪ್ರತಿ ತಿಂಗಳು ಆಯೋಜಿಸಲಾಗುತ್ತಿದೆ. ಬಡ ರೋಗಿಗಳು ಔಷಧ ಮುಂದುವರಿಸಲು ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು. ಪರಿವರ್ತನ ಕೇಂದ್ರದ ನಿರ್ದೇಶಕ ಡಾ. ಸತೀಶ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನಸ್ಮಿತ ಫೌಂಡೇಶನ್‌ನ ನಿರ್ದೇಶಕರಾದ ಸವಿತಾ. ಪಿ ತೋಳಾರ್, ನೇಹಾ ಎಸ್ ಪೂಜಾರಿ ಇವರು ಉಪಸ್ಥಿತರಿದ್ದರು. ಆಪ್ತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ.೦೯ರಿಂದ ಡಿ.೧೬ರ ವರೆಗೆ ನಡೆಯಲಿದ್ದು, ದೇವಸ್ಥಾನದಲ್ಲಿ ಧ್ವಜಾರೋಹಣದೊಂದಿಗೆ ಕೊಡಿಹಬ್ಬಕ್ಕೆ ಚಾಲನೆ ನೀಡಿದ್ದು, ಡಿ.೧೪ರಂದು ಬುಧವಾರ ಮನ್ಮಾಹಾರಥೋತ್ಸವ ಜರುಗಲಿದೆ. ಗೋಕರ್ಣದ ತಂತ್ರಿ ವೇದಮೂರ್ತಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ಪುಣ್ಯಾಹ: ನಾಂದಿ, ವಾಹನ ಅದಿವಾಸ, ಅಸ್ತ್ರ ಹೋಮದೊಂದಿಗೆ ಇತರ ಧಾರ್ಮಿಕ ವಿಧಿವಿಧಾನವನ್ನು ನೆರವೆರಿಸಲಾಯಿತು. ಕೊಡಿಮರವನ್ನು ಧ್ವಜಸ್ಥಂಬಕ್ಕೆ ನಿಲ್ಲಿಸಿ ಸಿಂಹದ ಪಟವನ್ನು ಏರಿಸಿ ಧ್ವಜಬಲಿ ಮಾಡುವ ಮೂಲಕ ವಿದ್ಯುಕ್ತವಾಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ದೇವಳದ ಪ್ರದಾನ ಅರ್ಚಕ ವೇದಮೂರ್ತಿ ಪ್ರಕಾಶ ಉಡುಪ, ಶಂಕರನಾರಾಯಣ ಪುರಾಣಿಕ, ಗೋಪಾಲಕೃಷ್ಣ ಜೋಷಿ, ಶೇಷಪ್ಪ ಅಡಿಗ, ರಮೇಶ ಉಡುಪ, ಪೂಜಾಕಾರ್ಯಕ್ಕೆ ಸಹಕರಿಸಿದರು, ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ ಹಾಗೂ ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ, ಕಾರ್ಯನಿರ್ವಹಣಾಧಿಕಾರಿ ಬಿ. ಅಣ್ಣಪ್ಪ, ಜಿಪಂ ಸದಸ್ಯ ಸುರೇಶ ಬಟವಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು, ಖಂ.ರೈ.ಸೇ.ಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಲಾಮಂದಿರದಲ್ಲಿ ರಾಷ್ರ್ರೀಯ ಮಾನವಹಕ್ಕುಗಳ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಉ ಉಪನ್ಯಾಸಕರಾಗಿ ಆಗಮಿಸಿದ ಕುಂದಾಪುರದ ಹಿರಿಯ ನ್ಯಾಯವಾದಿ ಟಿ. ಬಿ ಶೆಟ್ಟಿ ಮಾತನಾಡಿ ಜಗತ್ತಿನ ಎಲ್ಲ ನಿಯಮಗಳು, ಕಟ್ಟುಪಾಡುಗಳು ಮತ್ತು ಕಾನೂನುಗಳು ಮಾನವ ಹಕ್ಕುಗಳ ಒಡಂಬಡಿಕೆಗೆ ಬದ್ಧವಾಗಿರಬೇಕಾಗುತ್ತದೆ. ಮನುಷ್ಯ ಘತೆಗೆ ಕುಂದುಂಟುಮಾಡುವ ಯಾವುದೇ ಕ್ರೀಯೆಯನ್ನು ಒಪ್ಪಲಾಗದು ಎಂದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ವಹಿಸಿದ್ದರು. ಎನ್ ಎಸ್ ಎಸ್ ಯೋಜನಾಧಿಕಾರಿ ಸಂಧ್ಯಾ ನಾಯಕ ಸ್ವಾಗತಿಸಿದರು. ನಿವೇದಿತಾ ನಿರೂಪಿಸಿದರು. ಕಾವ್ಯ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಆಸಕ್ತಿಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಭವಿಷ್ಯದ ನಿರ್ದಿಷ್ಟ ಗುರಿ ಮತ್ತು ಕಠಿಣ ಪ್ರಯತ್ನ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಸರಕಾರಿ ಪದವಿಪೂರ್ವ ಕಾಲೆಜಿನ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಮಹಾನ್ ಸಾಧಕರು ಸಾಧಿಸಿದ್ದು ಕೂಡಾ ಪರಿಶ್ರಮದಿಂದಲೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳ ಮೂಲಕ ಯಶಸ್ಸು ಕಾಣಬೇಕು ಎಂದರು. ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀಪಾದ ಶೆಟ್ಟಿ ಸ್ಪೂರ್ತಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಶಿಕ್ಷಣದ ಮೂಲಕ ಮಕ್ಕಳು ಕ್ರೀಯಾಶೀಲ ಕನಸನ್ನು ಕಾಣುವಂತಾಗಬೇಕು. ಪ್ರತಿಯೊಂದರಲ್ಲಿಯೂ ತಾಯಿಯನ್ನು ಕಾಣುವ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ನಾಡಿಗೆ ಶಕ್ತಿ ಕೊಡುವ ಉತ್ತಮ ಪ್ರಜೆಗಳನ್ನು ಶಿಕ್ಷಣ ಕೇಂದ್ರಗಳಲ್ಲಿ ರೂಪಿಸಬೇಕು ಎಂದರು. ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ವಿದ್ಯಾ ಸಂಸ್ಥೆಗಳಲ್ಲಿ ಮಕ್ಕಳಿಗೆ ಭಾವನಾತ್ಮಕ ವ್ಯಕ್ತಿತ್ವ ವಿಕಸನದ ಶಿಕ್ಷಣ ಸಿಗುವಂತಾಗಬೇಕು ಎಲ್ಲರಿಗೂ ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ್ ಅಧ್ಯಕ್ಷರಾಗಿ ಶ್ರೀಧರ್ ಬಿಜೂರು ಆಯ್ಕೆಯಾಗಿದ್ದಾರೆ. ಉಡುಪಿ ಅದಮಾರು ಮಠದ ಸಭಾಂಗಣದಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವಿಶೇಷ ಜಿಲ್ಲಾ ಬೈಠಕ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಬೈಂದೂರು ಘಟಕದ ಪ್ರಖಂಡ್ ಆಗಿ ಶ್ರೀಧರ್ ಬಿಜೂರು ಅವರನ್ನು ಹೆಸರನ್ನು ಘೋಷಿಸಿದ್ದಾರೆ. ವಿಶೇಷ ಬೈಠಕ್‌ನಲ್ಲಿ ಬಜರಂಗದಳ ವಿಭಾಗ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ಶ್ರೀಧರ ಬಿಜೂರು ಅವರು ಬಜರಂಗದಳ ಹಾಗೂ ಧರ್ಮ ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾಗಿ, ಭಗವದ್ಗೀತಾ ಅಭಿಯಾನದ ತಾಲೂಕು ಸಂಚಾಲಕರಾಗಿ ಹಿಂದೂ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾಗಿದ್ದಲ್ಲದೇ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ಸಂಸ್ಕೃತಿಯನ್ನು ಜಗದಗಲಕ್ಕೂ ಸಾರುವ ಸಲುವಾಗಿ ಕುಂದಾಪುರ ಮೂಲದ ತರುಣರಿಂದ ಹುಟ್ಟಿಕೊಂಡ ಕಾಣಿ ಸ್ಟುಡಿಯೋ ತಂಡ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ತಾಣಗಳಲ್ಲಿ ಗುರುತಿಸಿಕೊಂಡಿತ್ತು. ಇಲ್ಲಿನ ಭಾಷೆ, ಕಲೆ, ಜೀವನ ಶೈಲಿ, ಸಂಸ್ಕೃತಿಗೆ ಹೊಸ ಕಲ್ಪನೆಯೊಂದಿಗೆ ಬಣ್ಣ ನೀಡುತ್ತಿರುವ ಕಾಣಿ ಸ್ಟುಡಿಯೋ ಹುಡುಗರ ತಂಡ ಡಿಸೈನ್, ನಿರ್ವಹಣೆ, ನೆಟ್‌ವರ್ಕಿಂಗ್ ಮತ್ತು ಫಲಿತಾಂಶ ಹೀಗೆ ಮೂರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತೀರುವಹಿಸುತ್ತಿದೆ. ಈಗ ಕೋಟೇಶ್ವರ ಕೊಡಿ ಹಬ್ಬದಲ್ಲಿ ಸೆಲ್ಫಿ ಹಬ್ಬ ಎನ್ನುವ ಹೆಸರಿನೊಂದಿಗೆ ನವದಂಪತಿಗಳು, ಕುಟುಂಬ, ಸ್ನೇಹಿತರು, ಕೊಡಿ ಹಬ್ಬ ಸಂಭ್ರಮ, ಆಚರಣೆ ಗಮನದಲ್ಲಿಟು ಸೆಲ್ಫಿ ಪೋಟೋಗ್ರಾಫಿ ಸ್ಪರ್ಧೆ ಏರ್ಪಡಿಸಿದ್ದಾರೆ. ಇನ್ನು ಕೊಡಿ ಹಬ್ಬಕ್ಕೆ ಬಂದು ಹಾಗೇ ಹೊಗಬೇಡಿ. ಸೆಲ್ಫಿ ಹೇಗೆ ಬರುತ್ತೆ ಅಂತ ಕಾಣಿ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಸೆಲ್ಫಿ ತೆಗೆದು ಕಳುಹಿಸುವುದು ಹೇಗೆ?: ನಿಮ್ಮ ಫೇಸ್ಬುಕ್ ಅಂಕೌಟ್ನಲ್ಲಿ Add Photos ಕ್ಲಿಕ್ ಮಾಡಿ ನಿಮ್ಮ Selfi ಪೋಟೊ ಒಂದನ್ನು Open ಮಾಡಿ Say…
