ಪರಿವರ್ತನ ಕೋಟದಲ್ಲಿ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಪರಿವರ್ತನ ಪುನರ್ ವಸತಿ ಕೇಂದ್ರ, ಮನಸ್ಮಿತಾ ಫೌಂಡೇಶನ್,ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ ೧೪ನೇ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು.

Call us

Click Here

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಕೋಟದ ವಿದ್ಯುತ್ ಗುತ್ತಿಗೆದಾರರಾದ ಶ್ರೀಕಾಂತ್ ಶೆಣೈ ಅವರು ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿgವನ್ನು ಸಾಲಿಗ್ರಾಮದ ಶಬರಿ ಕ್ಲಿನಿಕ್‌ನ ಡಾ. ಗಣೇಶ್ ಅವರು ಉದ್ಘಾಟಿಸಿ, ಈ ಪರಿಸರದ ಜನರು ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಹಾರೈಸಿದರು.

ಪರಿವರ್ತನ ಕೇಂದ್ರದ ವೈದ್ಯಕೀಯ ನಿದೇರ್ಶಕ ಡಾ. ಪ್ರಕಾಶ ಸಿ. ತೋಳಾರ್‌ರವರು ಮಾತನಾಡಿ, ಈ ಶಿಬಿರವನ್ನು ಪ್ರತಿ ತಿಂಗಳು ಆಯೋಜಿಸಲಾಗುತ್ತಿದೆ. ಬಡ ರೋಗಿಗಳು ಔಷಧ ಮುಂದುವರಿಸಲು ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.

ಪರಿವರ್ತನ ಕೇಂದ್ರದ ನಿರ್ದೇಶಕ ಡಾ. ಸತೀಶ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮನಸ್ಮಿತ ಫೌಂಡೇಶನ್‌ನ ನಿರ್ದೇಶಕರಾದ ಸವಿತಾ. ಪಿ ತೋಳಾರ್, ನೇಹಾ ಎಸ್ ಪೂಜಾರಿ ಇವರು ಉಪಸ್ಥಿತರಿದ್ದರು. ಆಪ್ತ ಸಮಾಲೋಚಕರಾದ ಅನುಷಾ ಶೆಟ್ಟಯವರು ಸ್ವಾಗತಿಸಿ, ವಂದಿಸಿದರು.

Leave a Reply