ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವ ಸಾಹಿತಿ, ಹಾಡುಗಾರ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಚೊಚ್ಚಲ ಕುಂದಾಪ್ರ ಕನ್ನಡದ ‘ಗಂಡ್ ಹಡಿ ಗಂಡ್’ ಆಲ್ಬಂ ಸಾಂಗ್ ಬಿಡುಗಡೆಗೆ ಸಿದ್ಧಗೊಂಡಿದ್ದು, ಎರಡು ಹಾಡುಗಳುಳ್ಳ ಆಲ್ಬಂ ನ.೨೫ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ. ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರೇ ಸಾಹಿತ್ಯ ಬರೆದು ಹಾಡಿರುವ ಕುಂದಾಪ್ರ ಕನ್ನಡದ ಹಾಡು ಅದ್ದೂರಿ ಸಂಗೀತ ಸಂಯೋಜನೆಯಲ್ಲಿ ಮೂಡಿಬರಲಿದ್ದು ಕುಂದಗನ್ನಡಿಗರ ಮನಗೆಲ್ಲಲಿದೆ. ಅಲ್ವಿನ್ ಬ್ರೂನೊ ಹಾಗೂ ವರ್ಣ ಬ್ರದರ್ಸ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರುಕ್ಮಿಣಿ ಸುರೇಶ್ ನಿರ್ಮಾಪಕರಾಗಿದ್ದಾರೆ. ಹುಟ್ಟೂರಿನ ಅಭಿಮಾನದಿಂದ ಕುಂದಗನ್ನಡದಲ್ಲಿಯೇ ಹಾಡು ರಚಿಸಿ, ಧ್ವನಿ ನೀಡಿರುವ ಸಂದೀಪ್ ಅವರ ಪ್ರಯತ್ನಕ್ಕೆ ಕುಂದಾಪ್ರ ಕನ್ನಡದ ವಾಟ್ಸಪ್ ಹೀರೋ ಮನು ಹಂದಾಡಿ ಸೇರಿದಂತೆ ಹಲವರು ಸಹಕಾರವಿತ್ತಿದ್ದು, ಎರಡೂ ಹಾಡುಗಳೂ ಅತ್ಯುತ್ತಮವಾಗಿ ಮೂಡಿಬಂದಿವೆ. Gand hadi gandi releasing on nov 25
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣ ಸ್ವಚ್ಛತಾ ಕಾರ್ಯಕ್ರಮ ಇತ್ತಿಚಿಗೆ ಊರಿನ ನಾಗರಿಕರಿಂದ ಜರುಗಿತು. ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಟಿ. ನಾರಾಯಣ ಹೆಗ್ಡೆ, ಜಿ.ಪಂ ಸದಸ್ಯ ಬಾಬು ಶೆಟ್ಟಿ, ಶಂಕರ ಪೂಜಾರಿ, ಗ್ರಾ.ಪಂ ಸದಸ್ಯ ಬಾಲಕೃಷ್ಣ ಶೆಟ್ಟಿ, ಶಿಕ್ಷಕರುಗಳಾದ ಕರುಣಾಕರ ಶೆಟ್ಟಿ, ತಿಮ್ಮಪ್ಪ ಗಾಣಿಗ, ಉದಯಕುಮಾರ್ ಹೆಗ್ಡೆ ಹಾಗೂ ಊರಿನ ಸಾರ್ವಜನಿಕರು ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ಕೇವಲ ಅಂಕಗಳ ಬಗ್ಗೆ ಮಾತ್ರ ಒತ್ತು ಕೊಡದೆ, ಜೀವನ ಕೌಶಲ್ಯಗಳನ್ನು ಶಾಲಾ ಹಂತಗಳಲ್ಲಿ ಕಲಿತು ಮುಂದಿನ ಸಮಾಜವನ್ನು ನಿರ್ಮಾಣ ಮಾಡುವ ಆಶಾ ಕಿರಣಗಳಾಗಬೇಕು ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ವಿನಯ ಎನ್ ಹೆಗಡೆ ಅಭಿಪ್ರಾಯಪಟ್ಟರು. ಅವರು ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ೧೧ನೇ ವಾರ್ಷಿಕೋತ್ಸವ ಸಮಾರಂಭದ ಸಮಾರೋಪದಲ್ಲಿ ಭಾಗವಹಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳ ದೈನಂದಿನ ಹವ್ಯಾಸಗಳು ಕ್ರೀಯಾಶೀಲ ಚಟುವಟಿಕೆಗಳು ಹಾಗೂ ಕೈಗೊಳ್ಳುವ ಕಾರ್ಯಗಳು ಇವೆ ಮುಂತಾದವುಗಳು ತಮ್ಮ ಮುಂದಿನ ಜೀವನ ನಿರ್ಧರಿಸುವಲ್ಲಿ ಗುರುತರವಾಗಲಿದೆ. ಗುರು ಹಿರಿಯರ ಮಾರ್ಗದರ್ಶನ ಆದರ್ಶ ವ್ಯಕ್ತಿಗಳ ವಿಚಾರಧಾರೆಗಳು ಹಾಗೂ ನಿರಂತರ ಪರಿಶ್ರಮ ಈ ಮೂರು ಪ್ರಮುಖ ಗುಣಗಳು ಒಬ್ಬನನ್ನು ಸನ್ಮಾರ್ಗದಲ್ಲಿ ಸಡೆಸಲು ಸಹಾಯಕವಾಗಲಿದೆ ಎಂದು ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಾಂಡ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಳೆಯ ೫೦೦, ೧೦೦೦ ನೋಟುಗಳನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್, ಪೋಸ್ಟ್ ಆಫೀಸ್‌ಗಳಲ್ಲಿ ಜನರ ಸರತಿಸಾಲು ನಿಂತು ಅರ್ಜಿ ತುಂಬಿಸಲು ಪರದಾಡುತ್ತಿರುವ ಜನರಿಗೆ ಕುಂದಾಪುರ ಎಜುಕೇಶನ್ ಸೊಸೈಟಿಯ ವಿ. ಕೆ. ಆರ್ ಆಚಾರ್ಯ ಹಾಗೂ ಎಚ್ ಎಮ್ ಎಮ್ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನೆರವಾದರು. ಕುಂದಾಪುರದ ವಿಜಯ, ಕಾರ್ಪೊರೇಶನ್, ಕೆನರಾ, ಎಸ್. ಬಿ. ಎಮ್, ಸಿಂಡಿಕೇಟ್ ಬ್ಯಾಂಕ್‌ಗಳಿಗೆ ಶಿಕ್ಷಕರೊಡಗೂಡಿ ತೆರಳಿದ ಇಪ್ಪತ್ತು ವಿದ್ಯಾರ್ಥಿಗಳು ಬ್ಯಾಂಕಿನ ಗ್ರಾಹಕರಿಗೆ ಸಹಾಯ ಹಸ್ತವನ್ನು ನೀಡಿದರು. ಸಂಸ್ಥೆಯ ಸಂಚಾಲಕರಾದ ಬಿ. ಎಮ್. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಇಂತಹ ಅಪೂರ್ವ ಕಾರ್ಯವನ್ನು ತಮ್ಮ ಸಂಸ್ಥೆಯ ಮೂಲಕ ಹಮ್ಮಿಕೊಂಡು ಸಾರ್ವಜನನಿಕರಿಗೆ ಸಹಕರಿಸಿ ಬದಲಾವಣೆಯಲ್ಲಿ ಅಳಿಲುಸೇವೆ ಸಲ್ಲಿಸಿರುವುದಕ್ಕೆ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಮೂರು ದಿನಗಳ ಕಾಲ ಜರುಗಿದ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರತ್ನಾಕರವರ್ಣಿ ವೇದಿಕೆಯಲ್ಲಿ ಜರುಗಿತು. ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿವರ್ಷವೂ ಜನರಿಂದ ಬರುತ್ತಿರುವ ಸಕಾರಾತ್ಮಕ ಸ್ವಂದನೆಯಿಂದಾಗಿ ನುಡಿಸಿರಿ ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದೆ. ಎಲ್ಲರನ್ನೂ ಎಲ್ಲವನ್ನೂ ಒಳಗೊಂಡಂತೆ ನುಡಿಸಿರಿಯನ್ನು ಸಾಂಸ್ಕೃತಿಕ ಹಬ್ಬವಾಗಿ ಮೂಡಿಬಂದಿದ್ದು ನಮ್ಮಲ್ಲೊಂದು ಸಾರ್ಥಕ ಭಾವವಿದೆ ಎಂದರು. ಡಾ. ಗಿರಡ್ಡಿ ಗೋವಿಂದರಾಜ್, ಸುಬ್ರಾಯ ಚೊಕ್ಕಾಡಿ, ಡಆ ಚೆನ್ನಣ್ಣ ವಾಲೀಕಾರ್, ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ಜಿ.ಎನ್. ರಂಗನಾಥ ರಾವ್, ಕೆ.ವಿ. ಅಕ್ಷರ, ಹರಿಣಿ, ಶ್ರೀನಿವಾಸ ಜಿ ಕಪ್ಪಣ್ಣ, ಶೀನಪ್ಪ ರೈ ಸಂಪಾಜೆ, ಜಬ್ಬಾರ್ ಸಮೊ, ಎಚ್.ಆರ್. ಲೀಲಾವತಿ, ಡಾ. ಚಂದ್ರಶೇಖರ ಚೌಟ, ಡಾ. ಈ. ಜ್ಞಾನಾನಂದ ಅ ಫಲಪುಷ್ಪ, ಪ್ರಶಸ್ತಿಪತ್ರ ಹಾಗೂ ಇಪ್ಪತ್ತೈದುಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.…
ಶಾಂಭವಿ ಎಂ. ಜೆ. ಅಂದರ ಲೋಕ ಕತ್ತಲೆ ಎನ್ನುತ್ತಾರೆ. ಆದರೆ ಅಂದರ ಲೋಕದಲ್ಲಿಯೂ ಅಪೂರ್ವ ಬೆಳಕಿದೆ ಎಂಬುದನ್ನು ನಮ್ಮ ನಡುವೆ ಎಷ್ಟೋ ವ್ಯಕ್ತಿಗಳ ಸಾಧನೆಯೇ ಸಾಕ್ಷಿಕರಿಸುತ್ತದೆ. ಈ ವಿಷ್ಯಾ ಈಗ್ಯಾಕೆ ಅಂತಿರಾ? ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹುಟ್ಟೂ ಅಂಧರಾದ, ಆದರೆ ಅಪ್ರತಿಮ ಪ್ರತಿಭಾನ್ವಿತ ಬಸವರಾಜ್ ಶಂಕರ್ ಉಮಾರಾಣಿ ಅವರ ಬುದ್ಧಿಮತ್ತೆ ಇದನ್ನು ಸಾಕ್ಷೀಕರಿಸಿತು. ಈ ಆಧುನಿಕ ಯುಗದಲ್ಲಿ ನಮ್ಮ ಮೊಬೈಲ್ ನಂಬರನ್ನೇ ನೆನಪಿಡಲಾಗದೇ ಸೇವ್ ಮಾಡುವುದನ್ನು ನೋಡಿದ್ದೇವೆ. ಆದರೆ ನಮ್ಮ ಬಸವರಾಜ್ ಅವರಿಗೆ ಯಾವುದೇ ಮೊಬೈಲ್ ನಂಬರನ್ನು ಒಮ್ಮೆ ಹೇಳಿದರೆ ಸಾಕು ಹತ್ತು ವರ್ಷದ ನಂತರ ಕೇಳಿದರು ಸರಾಗವಾಗಿ ಹೇಳುತ್ತಾರೆ. ಯಾರೇ ಹುಟ್ಟಿದ ದಿನಾಂಕ ತಿಂಗಳು ಹೇಳಿದರೆ ಸಾಕು ಕ್ಷಣದಲ್ಲಿಯೇ ವಾರವನ್ನು ಹೇಳುತ್ತಾರೆ. ವಿವಿಧ ಮೌಲ್ಯದ ನೋಟುಗಳನ್ನು ಅವರ ಕೈಗಿತ್ತ ಕೂಡಲೇ ಅದರ ಮೌಲ್ಯವನ್ನು ಹೇಳಬಲ್ಲ, ದಿನದ ಯಾವುದೇ ಕಾಲದಲ್ಲಿ ಸಮಯ ಕೇಳಿದರೂ ನಿಖರವಾಗಿ ಹೇಳಬಲ್ಲ, ಕೋಟಿಗಟ್ಟಲ್ಲೆ ಅಂಕಿಯನ್ನು ಕುಡಿಸಿ ಕಳೆದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಮೂರು ದಿನಗಳ ಕಾಲ ಜರುಗಿದ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಡಿನ ಗಣ್ಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಗಿರಡ್ಡಿ ಗೋವಿಂದರಾಜ್, ಸುಬ್ರಾಯ ಚೊಕ್ಕಾಡಿ, ಡಆ ಚೆನ್ನಣ್ಣ ವಾಲೀಕಾರ್, ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ಜಿ.ಎನ್. ರಂಗನಾಥ ರಾವ್, ಕೆ.ವಿ. ಅಕ್ಷರ, ಹರಿಣಿ, ಶ್ರೀನಿವಾಸ ಜಿ ಕಪ್ಪಣ್ಣ, ಶೀನಪ್ಪ ರೈ ಸಂಪಾಜೆ, ಜಬ್ಬಾರ್ ಸಮೊ, ಎಚ್.ಆರ್. ಲೀಲಾವತಿ, ಡಾ. ಚಂದ್ರಶೇಖರ ಚೌಟ, ಡಾ. ಈ. ಜ್ಞಾನಾನಂದ ಅ ಫಲಪುಷ್ಪ, ಪ್ರಶಸ್ತಿಪತ್ರ ಹಾಗೂ ಇಪ್ಪತ್ತೈದುಸಾವಿರ ನಗದು ನೀಡಿ ಪುರಸ್ಕರಿಸಲಾಯಿತು. ಚಿತ್ರ: ಮಾನಸ ಡಿಜಿಟಲ್ಸ್
ಶ್ರೇಯಾಂಕ ಎಸ್ ರಾನಡೆ. ಸ್ವಚ್ಛತೆಯೆಂಬುದು ಯಾರಿಗೆ ತಾನೇ ಇಷ್ಟವಿಲ್ಲ. ಅನೇಕರಿಗೆ ತಮ್ಮ ಸುತ್ತಮುತ್ತಲು ಸ್ವಚ್ಛವಾಗಿರಬೇಕೆಂಬ ಆಸೆಯಿದೆ. ಆದರೆ ಅದನ್ನು ತಾವು ಮಾಡಲು ಸಿದ್ಧರಿಲ್ಲ. ತನು, ಮನದಿಂದ ಸ್ವಚ್ಛತೆಯನ್ನು ತರಲು ಹೊರಟಿದ್ದ ಕೇಂದ್ರ ಸರಕಾರ ಕಾಳ ಧನವನ್ನೂ ಸ್ವಚ್ಛ ಮಾಡಲು ಹೊರಟಾಗಿನಿಂದ ಸ್ವಚ್ಛತೆಯ ಸಮಗ್ರ ಚಿತ್ರಣ ಭಾರತೀಯರಿಗೆ ಅರ್ಥವಾಗತೊಡಗಿದೆ. ಹಾಗಾಗಿಯೇ ಕಳೆದ ಹನ್ನೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ನುಡಿಸಿರಿಯಲ್ಲಿ ಜನರು ಸ್ವಚ್ಛತೆಯ ಕಾಳಜಿಯನ್ನೂ ಇನ್ನಿಲ್ಲದಂತೆ ವಹಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಡಾ. ಕುರಿಯನ್ ನೇತೃತ್ವದಲ್ಲಿ ಸ್ವಚ್ಛತಾ ಸಮಿತಿಯವರು ಸ್ವಚ್ಛತೆಗಾಗಿ ಪೂರ್ವ ತಯಾರಿಯನ್ನು ಮೊದಲೇ ಮಾಡಿಕೊಂಡಿದ್ದಲ್ಲದೇ ಅದಕ್ಕಾಗಿ ಅಭಿಯಾನವನ್ನೂ ಮಾಡುತ್ತಿದ್ದಾರೆ. ನುಡಿಸಿರಿಯ ಪ್ರಾಂಗಣದಲ್ಲಿ ಆಗೊಮ್ಮೆ ಈಗೊಮ್ಮೆ ಅತ್ತಿಂದಿತ್ತ “ಸ್ವಚ್ಛತೆಯ ಕಡೆಗೆ ಒಂದು ನಡಿಗೆ” ಎಂಬ ಫಲಕ ಹೊತ್ತ ಎರಡು ಚಕ್ರದ ವಾಹನವೊಂದು ಎಲ್ಲರ ಗಮನ ಸೆಳೆಯುತ್ತಿತ್ತು. ಸುಧಾಕರ ಪೂಂಜರವರು ತಮ್ಮ ಆಕ್ಸೆಸ್ ದ್ವಿಚಕ್ರ ವಾಹನದಲ್ಲಿ ಪ್ರತೀ ಮಗ್ಗಲಿಗೂ ಪ್ರತ್ಯೇಕವಾಗಿ ತೆರಳಿ ಆಗಮಿಸಿದ್ದ ಸಾಹಿತ್ಯಾಸಕ್ತರಿಗೆ ಸ್ವಚ್ಛತಾ ಪ್ರಜ್ಞೆ-ಕಳಕಳಿಯನ್ನು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಅನೇಕರಿಗೆ ತಮ್ಮ ಆವರಣದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಸೌತ್ ಕೆನರಾ ಪೋಟೋಗ್ರಾಪರ್‍ಸ್ ಅಸೋಸಿಯೇಶನ್ ರಿ. ಕುಂದಾಪುರ ವಲಯ ಮುದ್ದುಕಂದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕುಂದಾಪುರದ ಅಕ್ಷತಾ ಸಭಾಂಗಣದಲ್ಲಿ ನಡೆಯಿತು. ಆದ್ಯ ಜೋಯಿಸ್ ಪ್ರಥಮ, ಲಹರಿ ಕಿಣಿ ದ್ವಿತೀಯ, ಶ್ರೀಹಾನ್ ಎಸ್. ಶೆಟ್ಟಿ ತೃತೀಯ ಬಹುಮಾನವನ್ನು ಪಡೆದುಕೊಂಡರೇ. ಸಮಾಧಾನಕರ ಬಹುಮಾನವನ್ನು ಹರ್ಷಾಲಿ ಜಿ. ನಾಯಕ್, ಅಭಿಜ್ಞಾ ಆರ್. ಆಚಾರ್, ಅಕ್ಷೆಭ್ಯ ಜಿ. ಭಟ್, ಅಭಿನವ ಪೈ, ಪ್ರಥ್ವಿನ್ ಆರ್. ಶೆಟ್ಟಿ ಪಡೆದರು. ಬಸ್ರೂರು ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ವಿಜೇತರಿಗೆ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಂಸ್ಥೆಯ ಅಧ್ಯಕ್ಷರಾದ ಗ್ರೇಶನ್ ಡಯಾಸ್, ಕಾರ್ಯದರ್ಶಿ ಪ್ರಮೋದ್ ಚಂದನ್, ಕೋಶಾಧಿಕಾರಿ ಚಂದ್ರಕಾಂತ, ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯಕ್ರಮದ ಪ್ರಾಯೋಜಕರಾದ ದೊಟ್ಟಯ್ಯ ಪೂಜಾರಿ, ಶೀನ ದೇವಾಡಿಗ ಉಪ್ಪುಂದ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ನಾಡು ನುಡಿ ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಯನ್ನು ಮಂಗಳೂರು ಆಕಾಶವಾಣಿ ಮೂರು ದಿನಗಳ ಕಾಲವೂ ನೇರಪ್ರಸಾರ ಮಾಡಿತ್ತು. ಆಕಾಶವಾಣಿಯ ಮಂಗಳೂರು ವಿಭಾಗದ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ, ಸದಾನಂದ ಪೆರ್ಲ, ಶರಬೇಂದ್ರ ಸ್ವಾಮಿ ಹಾಗೂ ತಂಡದ ನೇತೃತ್ವದಲ್ಲಿ ಸಂಪೂರ್ಣ ಸಮ್ಮೇಳನವನ್ನು ನೇರಪ್ರಸಾರ ಮಾಡಲಾಗಿತ್ತು.
