ನುಡಿಸಿರಿಯಲ್ಲೊಂದು ಸ್ವಚ್ಛತಾ ಅಭಿಯಾನ

Click Here

Call us

Call us

Call us

ಶ್ರೇಯಾಂಕ ಎಸ್ ರಾನಡೆ.
ಸ್ವಚ್ಛತೆಯೆಂಬುದು ಯಾರಿಗೆ ತಾನೇ ಇಷ್ಟವಿಲ್ಲ. ಅನೇಕರಿಗೆ ತಮ್ಮ ಸುತ್ತಮುತ್ತಲು ಸ್ವಚ್ಛವಾಗಿರಬೇಕೆಂಬ ಆಸೆಯಿದೆ. ಆದರೆ ಅದನ್ನು ತಾವು ಮಾಡಲು ಸಿದ್ಧರಿಲ್ಲ. ತನು, ಮನದಿಂದ ಸ್ವಚ್ಛತೆಯನ್ನು ತರಲು ಹೊರಟಿದ್ದ ಕೇಂದ್ರ ಸರಕಾರ ಕಾಳ ಧನವನ್ನೂ ಸ್ವಚ್ಛ ಮಾಡಲು ಹೊರಟಾಗಿನಿಂದ ಸ್ವಚ್ಛತೆಯ ಸಮಗ್ರ ಚಿತ್ರಣ ಭಾರತೀಯರಿಗೆ ಅರ್ಥವಾಗತೊಡಗಿದೆ. ಹಾಗಾಗಿಯೇ ಕಳೆದ ಹನ್ನೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ನುಡಿಸಿರಿಯಲ್ಲಿ ಜನರು ಸ್ವಚ್ಛತೆಯ ಕಾಳಜಿಯನ್ನೂ ಇನ್ನಿಲ್ಲದಂತೆ ವಹಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಡಾ. ಕುರಿಯನ್ ನೇತೃತ್ವದಲ್ಲಿ ಸ್ವಚ್ಛತಾ ಸಮಿತಿಯವರು ಸ್ವಚ್ಛತೆಗಾಗಿ ಪೂರ್ವ ತಯಾರಿಯನ್ನು ಮೊದಲೇ ಮಾಡಿಕೊಂಡಿದ್ದಲ್ಲದೇ ಅದಕ್ಕಾಗಿ ಅಭಿಯಾನವನ್ನೂ ಮಾಡುತ್ತಿದ್ದಾರೆ.

Call us

Click Here

ನುಡಿಸಿರಿಯ ಪ್ರಾಂಗಣದಲ್ಲಿ ಆಗೊಮ್ಮೆ ಈಗೊಮ್ಮೆ ಅತ್ತಿಂದಿತ್ತ “ಸ್ವಚ್ಛತೆಯ ಕಡೆಗೆ ಒಂದು ನಡಿಗೆ” ಎಂಬ ಫಲಕ ಹೊತ್ತ ಎರಡು ಚಕ್ರದ ವಾಹನವೊಂದು ಎಲ್ಲರ ಗಮನ ಸೆಳೆಯುತ್ತಿತ್ತು. ಸುಧಾಕರ ಪೂಂಜರವರು ತಮ್ಮ ಆಕ್ಸೆಸ್ ದ್ವಿಚಕ್ರ ವಾಹನದಲ್ಲಿ ಪ್ರತೀ ಮಗ್ಗಲಿಗೂ ಪ್ರತ್ಯೇಕವಾಗಿ ತೆರಳಿ ಆಗಮಿಸಿದ್ದ ಸಾಹಿತ್ಯಾಸಕ್ತರಿಗೆ ಸ್ವಚ್ಛತಾ ಪ್ರಜ್ಞೆ-ಕಳಕಳಿಯನ್ನು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಅನೇಕರಿಗೆ ತಮ್ಮ ಆವರಣದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರೇರೆಪಿಸುವಂತಿತ್ತು. ಅನೇಕರು ಆ ವಾಹನವನ್ನು ಕಂಡವರೇ ಪ್ರಧಾನಿಗಳ ಮಾತನ್ನು ನೆನೆಪಿಸಿಕೊಂಡು ತಾವೇ ಹಾಕಿದ್ದ ಕಸವನ್ನೂ ಹೆಕ್ಕಿ ಕಸದ ಬುಟ್ಟಿಗೆ ಹಾಕುವ ಚಿತ್ರಣ ಅನೇಕರಿಗೆ ಸ್ಫೂರ್ತಿ ತುಂಬುವ ವಿಚಾರ.

ಸುಧಾಕರ ಪೂಂಜರವರು ಮೂಲತಃ ಆಳ್ವಾಸ್ ಕಾಲೇಜಿನ ಸ್ವಚ್ಛತಾ ಗುತ್ತಿಗೆದಾರರು. ಕಳೆದ ಹನ್ನೆರಡು ನುಡಿಸಿರಿಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡು ನುಡಿಸಿರಿಯ ಆವರಣವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದುವರೆದು ತಮ್ಮದೇ ಸ್ವಂತ ಖರ್ಚಿನಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿರುವಿರುವುದು ಕಾರ್ಯಕರ್ತರಲ್ಲೂ, ಸಾಹಿತ್ಯಾಭಿಮಾನಿಗಳಿಗೆ ಹೊಸ ಹುಮ್ಮಸ್ಸನ್ನು ತುಂಬಿದೆ. ಪ್ರಾಥಮಿಕವಾಗಿ ಇದೊಂದು ಸ್ವಚ್ಛತಾ ಕಳಕಳಿಯನ್ನು ಮೂಡಿಸುವ ಪ್ರಯತ್ನ. ಆಗಮಿಸಿದ ಕಲಾಸಕ್ತರೂ ಇದನ್ನು ತಮ್ಮ ಮುಂದಿನ ಆಯಾಮಗಳಲ್ಲಿ ಸ್ವಚ್ಛತೆಯ ಆಯಾಮವನ್ನು ರೂಢಿಸಿಕೊಳ್ಳುವಂತಾದರೆ ಇಂತಹ ಪ್ರಯತ್ನಗಳಿಗೂ ಸಾರ್ಥಕತೆ ದೊರೆತಂತಾಗುತ್ತದೆ.

ನುಡಿಸಿರಿಯ ಸ್ವಚ್ಛತಾ ಕಾರ್ಯಕ್ಕೆ ಸುಮಾರು ೧೨೦ಕ್ಕೂ ಅಧಿಕ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ. ಮೊದಲೇ ಸರಿಯಾಗಿ ಆಲೋಚಿಸಿ ಅಸ್ವಚ್ಛಗೊಳ್ಳಬಹುದಾದ ಸ್ಥಳಗಳನ್ನು ಗುರುತಿಸಿ ಅಲ್ಲಲ್ಲಿ ಕಸದ ಬುಟ್ಟಿಗಳನ್ನಿಡುವ ಕಾರ್ಯ ಮಾಡಲಾಗಿದೆ. ಅಂದಂದಿನ ಕಸ ಅಂದಂದಿಗೆ ತ್ಯಾಜ್ಯ ಮರು ನಿರ್ಮಾಣ ಘಟಕಕ್ಕೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಬೆಳಗ್ಗೆ ೬.೩೦ಕ್ಕೆ ಪ್ರಾರಂಭವಾಗುವ ಈ ಕಾರ್ಯ ರಾತ್ರಿ ೧೧.೩೦ರ ವರೆಗೂ ನಿರಂತರವಾಗಿ ನಡೆಯುತ್ತದೆ. ಆ ಕಾರ್ಯಕ್ಕೆ ಹುಮ್ಮಸ್ಸು ತುಂಬಲು ಸ್ವಚ್ಛತಾ ಅಭಿಯಾನವೂ ನಿರಂತರವಾಗಿರುತ್ತದೆ. ನುಡಿಸಿರಿಯಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ನಡೆಯುವ ಇಂತಹ ಅಭಿಯಾನಗಳು ಹೆಚ್ಚು ಜನರನ್ನು ತಲುಪುವ ಜೊತೆಗೆ ಸಮಾಜದಲ್ಲಿ ಕ್ರಾಂತಿಕಾರಕವಾಗಿ ಬದಲಾವಣೆ ತರಬಲ್ಲ ಮಹತ್ವದ ಕಾರ್ಯಗಳಿಗೆ ಕೈಜೋಡಿಸಿದಂತಾಗುತ್ತದೆ.

“ಇಡೀ ನುಡಿಸಿರಿಯ ಬೃಹತ್ ಪ್ರಾಂಗಣವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ಎಲ್ಲ ಕೆಲಸಗಾರರನ್ನೂ ತಲುಪುವುದು, ನಿರಂತರವಾಗಿ ಸಂಪರ್ಕದಲ್ಲಿರುವುದು ಕಷ್ಟದ ಸಂಗತಿ ಹಾಗಾಗಿ ನನ್ನ ದ್ವಿಚಕ್ರ ವಾಹನವನ್ನೇ ಸ್ವಚ್ಛತೆಯ ಅರಿವನ್ನು ಮೂಡಿಸಲು ಹಾಗೂ ನನ್ನ ಕಾರ್ಯಕ್ಕೂ ಬಳಸಿಕೊಳ್ಳುತ್ತಿದ್ದೇನೆ. ಸ್ವಚ್ಛತೆಯನ್ನು ಕಾಪಾಡಲು ನಾವು ಅದಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಹಾಗೆ ನೋಡಿದರೆ ಈ ವರ್ಷ ನುಡಿಸಿರಿಗೆ ಆಗಮಿಸಿದ ಸಾಹಿಉತ್ಯಾಸಕ್ತರಲ್ಲಿ ೯೦ ಶೇಕಡಾ ಜನರಿಗೆ ಸ್ವಚ್ಛತೆಯ ಪ್ರಜ್ಞೆಯಿದೆ. ನಾನು ಕೇವಲ ೧೦ ಶೇಕಡಾ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇನೆ. ಈ ಅಭಿಯಾನ ನರೇಂದ್ರ ಮೋದಿಯವರ ಮಹಾಯಜ್ಞಕ್ಕೆ ನನ್ನದೊಂದು ಅಳಿಲು ಸೇವೆಯಷ್ಟೆ”. – ಸುಧಾಕರ ಪೂಂಜಾ, ನುಡಿಸಿರಿ ಸ್ವಚ್ಛತಾ ಅಭಿಯಾನದ ರೂವಾರಿ, ಹೊರಗುತ್ತಿಗೆದಾರರು, ಆಳ್ವಾಸ್ ಕಾಲೇಜ್.

Click here

Click here

Click here

Click Here

Call us

Call us

Leave a Reply