ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ಸನರೈಸ್ ಮಾರ್ಕೆಟಿಂಗ್ನ ವಠಾರದಲ್ಲಿರುವ ಶ್ರೀ ಸುಧೀಂದ್ರ ಪ್ರಸಾದ ಕಟ್ಟಡದಲ್ಲಿ ಯುಪಿವಿಸಿಯಿಂದ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸುವ ಹೊಸ ಉದ್ಯಮವಾದ ‘ರೋಯ್ಸ ಯುಪಿವಿಸಿ ಡೋರ್ಸ & ವಿಂಡೋಸ್’ ಅನ್ನು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು. ದೀಪ ಪ್ರಜ್ವಲಿಸಿ ಹಾಗೂ ಯಂತ್ರದ ಗುಂಡಿಯನ್ನು ಒತ್ತುವುದರ ಮೂಲಕ ಘಟಕದ ಆರಂಭಕ್ಕೆ ಚಾಲನೆ ನೀಡಿದರು. ಡಿ.ಜಿ.ಕೆ. ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ದಿನೇಶ ಜಿ ಕಾಮತ್ ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಯಂತ್ರಗಳ ಹಾಗೂ ತಯಾರಿಸ್ಪಡುವ ಉತ್ಪನಗಳ ಮಾಹಿತಿಯನ್ನು ಸ್ವಾಮೀಜಿಯವರಿಗೆ ರಾಜೇಂದ್ರ ಡಿ ಕಾಮತ್ ನೀಡಿದರು. ನಂತರ ಸ್ವಾಮೀಜಿಯವರಿಗೆ ಕುಟುಂಬದ ವತಿಯಿಂದ ಪಾದಪೂಜೆ ಸೇವೆ ಸಲ್ಲಿಸಲಾಯಿತು. ಈ ಸಂಸ್ಥೆಯ ವೆಬ್ಸೈಟನ್ನು ಹಾಗೂ ಮಾಹಿತಿ ಕೈಪಿಡಿಯನ್ನು ಗುರುವರ್ಯರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಹೊಸ ಯುರೋಪಿಯನ್ ತಂತ್ರಜ್ಞಾನದಿಂದ ಇಲ್ಲಿ ಯುಪಿವಿಸಿ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸಲಾಗುತ್ತದೆ. ಸ್ಲೈಡಿಂಗ್, ಕೇಸ್ಮೆಂಟ್, ಫ್ರೆಂಚ್ ಡೋರ್, ಟಿಲ್ಟ್…
Author: ನ್ಯೂಸ್ ಬ್ಯೂರೋ
ನಾಲ್ಕು ದಿನಗಳ ಕಾರ್ಟೂನು ಹಬ್ಬಕ್ಕೆ ತೆರೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸ್ಯ ಪ್ರಜ್ಞೆ ಕಲಾ ಪ್ರಕಾರದಲ್ಲಿಯೇ ಶ್ರೇಷ್ಠವಾದದ್ದು. ಅದು ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಹಾಸ್ಯ ಪ್ರಜ್ಞೆಯ ಜೊತೆಗೆ, ಸಮಾಜದ ಬಗೆಗೆ ಕಾಳಜಿ ಹಾಗೂ ಗೆರೆಗಳೊಂದಿಗೆ ಬೆರಳಾಡಿಸುವ ಚಾಕಚಕ್ಯತೆಯ ಸಮ್ಮಿಳಿತವಿದ್ದರೆ ಉತ್ತಮ ವ್ಯಂಗ್ಯಚಿತ್ರಕಾರರನ್ನು ರೂಪುಗೊಳ್ಳುವಂತೆ ಮಾಡುತ್ತದೆ ಎಂದು ನಟ, ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು. ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಜರುಗಿದ ಕಾರ್ಟೂನು ಹಬ್ಬದ ಸಮಾರೋಪ ಹಾಗೂ ವಿವಿಧ ಸ್ವರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅಕ್ಷರ ಬರುವ ಮೊದಲೇ ಇತಿಹಾಸ ಸೃಷ್ಟಿಯಾದದ್ದು ಚಿತ್ರ ಕಲಾವಿದರಿಂದ. ನಮ್ಮ ನಾಗರಿಕತೆನ್ನೂ ಅವಲೋಕಿಸಿದಾಗಲೂ ಗೆರೆಗಳೂ ಸಂವಹನ ಮಾಧ್ಯಮವಾಗಿದ್ದನ್ನು ಕಾಣಬಹುದು. ಮಾತಿನಲ್ಲಿ ಹೇಳಬೇಕಾದ್ದನ್ನು, ಪುಟಗಟ್ಟಲೆ ಬರೆಯಬೇಕಾದ್ದನ್ನು ಸಣ್ಣ ಚಿತ್ರ ಸಂಕೇತಿಕರಿಸುತ್ತದೆ ಎಂದರೆ ಅದರ ಪ್ರಭಾವ ಅಂತಾದ್ದು ಎಂದರು. ಫ್ಯಾಶನ್ ಕೋರ್ಟ್ ಕುಂದಾಪುರದ ಮಾಲಿಕ ಕೆ. ಕಾರ್ತಿಕೇಯ ಮಧ್ಯಸ್ಥ, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್…
ಆಡು ಭಾಷೆ ಉಳಿಸಿಕೊಳ್ಳುವುದೇ ನಮ್ಮೆದುರಿನ ಸವಾಲು: ರವಿ ಬಸ್ರೂರು ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಶಾಪಿಂಗ್ ಮಾಲುಗಳ ರೀತಿಯಲ್ಲಿ ಸಾಂಸ್ಕೃತಿಕ ಸಂಕೀರ್ಣಗಳು ಹುಟ್ಟಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಪ್ರವಾಸೋದ್ಯಮ ಹೆಚ್ಚಾದಾಗ ಮಾತ್ರ ಸಾಂಸ್ಕೃತಿಕ ಅನನ್ಯತೆ ಹಾಗೂ ಸಂಸ್ಕೃತಿಯ ಉಳಿವು ಸಾಧ್ಯವಿದೆ ಎಂದು ಉದಯವಾಣಿ ಸಮೂಹ ಸಂಪಾದಕ ರವಿ ಹೆಗಡೆ ಹೇಳಿದರು. ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಭವನದಲ್ಲಿ ಜರುಗಿದ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ಒಂಭತ್ತನೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ ಇಂದಿನ ‘ವೇಷ ಭೂಷಣಗಳಿಂದ ವ್ಯಕ್ತಿಯ ಭೌಗೋಳಿಕ ಮೂಲವನ್ನು ಗುರುತಿಸುವುದು ಕಷ್ಟವಾಗುವಷ್ಟು ನಾವು ಬದಲಾಗಿದ್ದೇವೆ. ಆದರೆ ನಮ್ಮಲ್ಲಿ ಅಳಿಯದೆ ಉಳಿದಿರುವುದು ಹುಟ್ಟೂರಿನ ಆಡು ಭಾಷೆ ಮಾತ್ರ. ಅದನ್ನು ಉಳಿಸಿಕೊಂಡು ಗಟ್ಟಿಯಾಗಿ ಬೇರೂರುವಂತೆ ಮಾಡುವುದೇ ನಮ್ಮೆದುರಿನ ಸವಾಲು ಎಂದರು. ಕಾರ್ಯಕ್ರಮದಲ್ಲಿ ನಮ್ಮೂರ ಹಬ್ಬ 2017 ರ ಪೋಸ್ಟರ್ ಬಿಡುಗಡೆ, ಹಿಂದಿನ ವರ್ಷದ ಕಾರ್ಯಕ್ರಮದ ಸಿಡಿ ಹಾಗೂ ವೆಬ್ಸೈಟ್ ಲೋಕಾರ್ಪಣೆಗೊಳಿಸಲಾಯಿತು. ಸೃಜನ ಸಂಗೀತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲೆ ಎಲ್ಲರನ್ನೂ ತಲುಪುವ ಸುಲಭ ಮಾಧ್ಯಮ. ಭಾವನೆಗಳನ್ನು ಪ್ರಕಟ ಪಡಿಸಲು ಹಲವು ದಾರಿಗಳಿದ್ದರೂ ಚಿತ್ರಗಳ ಮನಸ್ಸಿಗೆ ನಾಟಿದಷ್ಟು ಸುಲಭವಾಗಿ ಬೇರಾವುದೂ ನಾಟಲಾರವು ಎಂದು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಹೇಳಿದರು. ಕಾರ್ಟೂನು ಕುಂದಾಪ್ರ ಬಳಗದ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗಿದ ಕಾರ್ಟೂನು ಹಬ್ಬದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಸಂಪಾದಕೀಯ ಕಾರ್ಟೂನುಗಳ ಒಳಹೊರವುಳನ್ನು ಅರಿಯಲು ಆಯೋಜಿಸಲಾಗಿದ್ದ ‘ಎಡಿಟೂನ್ಸ್’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲ ಮಕ್ಕಳನ್ನು ಒಂದೇ ವೃತ್ತಿಯಲ್ಲಿ ಕಾಣಬೇಕೆಂಬ ಹಂಬಲ ಸರಿಯಲ್ಲ. ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಆ ಕ್ಷೇತ್ರದಲ್ಲಿಯೇ ತೊಡಗಿಕೊಳ್ಳುವಂತೆ ಮಾಡಿದರೆ ಶ್ರಮದ ಸಾರ್ಥಕತೆ ತಿಳಿಯುವುದರ ಜೊತೆಗೆ ಯಶಸ್ಸೆಂಬುದು ಅರಸಿಕೊಂಡು ಬರುತ್ತದೆ ಎಂದರು. ಎಂಐಸಿ ಮಣಿಪಾಲದ ಉಪನ್ಯಾಸಕಿ ಶುಭಾ ಎಚ್. ಎಸ್ ಮಾತನಾಡಿ ಜನರನ್ನು ನಗಿಸುವುದು ಕಷ್ಟದ ಕೆಲಸ. ಆಡಳಿತದಲ್ಲಿರುವವರನ್ನು ಸದಾ ಕೆಣಕಿ, ಅಣಕಿಸಿ ಕೊನೆಗೆ ಮುಖದಲ್ಲೊಂದು ಮಂದಹಾಸ ಮೂಡುವಂತೆ ಮಾಡಲು ವ್ಯಂಗ್ಯಚಿತ್ರಕಾರರಿಂದ ಸಾಧ್ಯ. ಸಾವಿರ ಪುಟಗಳಲ್ಲಿ ತೆರೆದಿಡುವ ವಿಷಯವನ್ನು ಗರೆಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗು ಬದುಕನ್ನು ಪ್ರತಿಬಿಂಬಿಸಿದರೇ ವ್ಯಂಗ್ಯಚಿತ್ರ ನಗುವಿನ ಪ್ರತಿಬಿಂಬ. ಹಾಸ್ಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ವ್ಯಂಗ್ಯಚಿತ್ರಕಾರರು ಅದರ ಬೆಸುಗೆಯ ಕೊಂಡಿಯಾಗಿ ರೇಖೆಗಳ ಮೂಲಕ ನಗಿಸುವ ಜೊತೆಗೆ ಸಮಾಜಕ್ಕೊಂದು ಸಂದೇಶ ನೀಡುತ್ತಾರೆ ಎಂದು ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಹೇಳಿದರು. ಅವರು ಕಾರ್ಟೂನು ಕುಂದಾಪ್ರ ಆಶ್ರಯದಲ್ಲಿ ಸ್ವಸ್ತಿಕ್ ಯೂತ್ ಕ್ಲಬ್ ಸಹಯೋಗದೊಂದಿಗೆ ಇಲ್ಲಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕ್ಯಾರಿಕೇಚರ್ ಮೂಲಕ ನಿಧಿ ಸಂಗ್ರಹಿಸಿ ಬಿಆರ್ ರಾಯರ ಹಿಂದೂ ಶಾಲೆಗೆ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ವ್ಯಂಗ್ಯಚಿತ್ರಕಾರರು ಹಾಗೂ ಮಾಧ್ಯಮ ಸ್ವತಂತ್ರ್ಯಕ್ಕೆ ನಿರ್ಬಂಧ ಹೇರುವ ಕೆಲಸ ನಡೆಯಿತು. ಕಾರ್ಟೂನು ಬರೆಯುವಾಗ ನನ್ನನ್ನೂ ಬಿಡಬೇಡ ಎನ್ನುತ್ತಿದ್ದ ನೆಹರೂ ಅವರ ಮಗಳೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದ್ದರು. ಇದು ರಾಜಕಾರಣಿಗಳಲ್ಲಿ ಹಾಸ್ಯಪ್ರಜ್ಞೆ ಇಲ್ಲದ್ದನ್ನು ಸೂಚಿಸುತ್ತದೆ ಎಂದರು. ಸಮಾಜ ಸೇವಕ ಆರ್ಬೆಟ್ಟು ಜ್ಞಾನದೇವ ಕಾಮತ್ ಅವರ ಕ್ಯಾರಿಕೇಚರ್ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಿಲ್ಲವ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶದಲ್ಲಿ ೫೦೦, ೧೦೦೦ರೂ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ಜನಸಾಮಾನ್ಯರಿಗಾಗುತ್ತಿರುವ ತೊಂದರೆಯನ್ನು ಖಂಡಿಸಿ ಕೇಂದ್ರದ ಪ್ರತಿಪಕ್ಷಗಳ ಕರೆ ನೀಡಿದ್ದ ಆಕ್ರೋಶ್ ದಿವಸ್ಗೆ ಪ್ರತಿಯಾಗಿ ಉಪ್ಪಂದ ಪೇಟೆಯಲ್ಲಿ ಬೈಂದೂರು ಬಿಜೆಪಿ ಯುವ ಮೋರ್ಚಾ ಸಂಭ್ರಮ್ ದಿವಸ್ ಆಚರಿಸಿತು. ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಬ್ಯಾಂಕು ಹಾಗೂ ಪೇಟೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಕೇಂದ್ರ ಸರಕಾರದ ಈ ಮಹತ್ವದ ನಿರ್ಧಾರವನ್ನು ಸಂಭ್ರಮಿಸುವ ಕರೆ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಈಗಾಗಲೇ ಬಿಡುಗಡೆಗೊಂಡಿರುವ ಅನುದಾನವನ್ನು ಕ್ಷೇತ್ರದ ವಿವಿಧ ಪ್ರದೇಶಗಳ ಅಭಿವೃದ್ಧಿಗೆ ಸಮಪರ್ಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಕಾಮಗಾರಿಯಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ಗಳಿಗೆ ತಿಳಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಯಡ್ತರೆ ಗ್ರಾಪಂ ವ್ಯಾಪ್ತಿಯ ಸಂಕದಬಾಗಿಲು ಬಳಿ ಹಳೇ ಎಂ.ಬಿ.ಸಿ ರಸ್ತೆಯಲ್ಲಿ ನಬಾರ್ಡ್ನ ಸಹಕಾರದಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ರೂ.೯೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ೨೦ಮೀ ಉದ್ದ ಹಾಗೂ ೭.೫ಮೀ. ಅಗಲದ ಸೇತುವೆಗೆ ಮತ್ತು ರೂ.೨೦ ಲಕ್ಷ ವೆಚ್ಚದಲ್ಲಿ ಪೇಟೆ ಭಾಗ ಹಾಗೂ ಆರೋಗ್ಯ ಕೇಂದ್ರದ ಬಳಿ ನಿರ್ಮಿಸಲಾಗುವ ಕಾಂಕ್ರೇಟ್ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಬೈಂದೂರಿನ ಅನೇಕ ರಸ್ತೆಗಳನ್ನು ಈಗಾಗಲೇ ಕಾಂಕ್ರೀಟಿಕರಣಗೊಳಿಸಲಾಗಿದೆ ಎಂದ ಅವರು ಇನ್ನು ಪಡುವರಿ-ಅಳ್ವೆಕೊಡಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಗಂಗೊಳ್ಳಿ, ಗುಜ್ಜಾಡಿ,…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ನಗರದ ಇತಿಹಾಸ ಪ್ರಸಿದ್ಧ ಕುಂದೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ಅಮಾವಾಸ್ಯೆಯಂದು ನಡೆಯುವ ಲಕ್ಷದೀಪೋತ್ಸವಕ್ಕೆ ಸೋಮವಾರ ಅದ್ದೂರಿಯ ಚಾಲನೆ ದೊರಕಿತು. ದೇವಳದಲ್ಲಿ ಶ್ರೀ ಕುಂದೇಶ್ವರನಿಗೆ ವಿಶೇಷ ಪೂಜೆ, ಭಕ್ತರಿಂದ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು ನಡದರೇ ಸಂಜೆ ಲಕ್ಷದೀಪೋತ್ಸವ ಪ್ರಯುಕ್ತ ನೆರೆದಿದ್ದ ಅಸಂಖ್ಯ ಭಕ್ತರು ಕುಂದೇಶ್ವರ ದೇವರಿಗೆ ಹಣತೆ ದೀಪ ಬೆಳಗಿ ದೇವರ ದರ್ಶನ ಪಡೆದರು. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವ. ದೇವಳದ ಪುಷ್ಪ ರಥೋತ್ಸವಕ್ಕೆ ಹಾಗೂ ಶ್ರೀ ದೇವರ ಕಟ್ಟೆಪೂಜೆ ಚಾಲನೆ ನೀಡಲಾಯಿತು. ಕುಂದಾಪುರ ನಗರ ದೀಪಾಲಂಕಾರದಿಂದ ಶೋಭಾಯಮಾನವಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮ ದೀಪೋತ್ಸವದ ಮೆರಗು ಹೆಚ್ಚಿಸಿತ್ತು. ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದು ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರಬರುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೈಬರ್ ಪ್ರಪಂಚ ಕಾನೂನಿಗೆ ಹೊಸ ಬಗೆಯ ಸವಾಲು. ಸೈಬರ್ ಅಪರಾಧಗಳು ಹೊಸ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಒಂದು ಬಗೆಯ ಅಪರಾದವನ್ನು ಗುರುತಿಸಿ ಅದಕ್ಕೆ ಷರಾ ಬರೆಯುವ ವೇಳೆಗಾಗಲೇ ಅದೇ ಅಪರಾದ ಬೇರೆ ರೂಪದಲ್ಲಿ ಎದುರಾಗುತ್ತಿದೆ. ಎಂದು ಕುಂದಾಪುರ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜಶೇಖರ್ ವಿ. ಪಾಟೀಲ್ ಹೇಳಿದರು. ಕಾರ್ಟೂನು ಕುಂದಾಪ್ರ ಬಳಗದ ಸಾರಥ್ಯದಲ್ಲಿ ರೋಟರಿ ಕುಂದಾಪುರ ಸೌತ್ ಸಹಭಾಗಿತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗುತ್ತಿರುವ ಕಾರ್ಟೂನು ಹಬ್ಬದ ಮೂರನೇ ದಿನ ’ಸೈಬರಾಸುರ – ಯುವ ದೃಷ್ಠಿಯಲ್ಲಿ ಸೈಬರ್ ಪ್ರಪಂಚ’ ವಿಚಾರ ಸಂರ್ಕೀಣವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಂಗ್ಯಚಿತ್ರಗಳು ಮುಖದಲ್ಲಿ ನಗು ಮೂಡಿಸುವುದಲ್ಲದೇ ಸಾಮಾಜಿಕ ಸ್ಥಿತಿಗತಿಗಳನ್ನು ಮಾರ್ಮಿಕವಾಗಿ ತೆರಡಿಟುತ್ತದೆ. ರಾಜಕೀಯವನ್ನು ಟೀಕಿಸುವ ಜೊತೆಗೆ ಎಚ್ಚರಿಸುವ ಕೆಲಸವನ್ನು ಮಾಡುತ್ತದೆ. ಶಿಕ್ಷಣದಲ್ಲಿಯೂ ಕಾರ್ಟೂನು ಕಲಿಕೆ ಅವಳವಡಿಸಿದರೆ ಸೃಜನಾತ್ಮಕ ಕಲೆಗೆ ಸೂಕ್ತ ವೇದಿಕೆ ದೊರೆತಂತಾಗುವುದು ಎಂದರು. ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಮಾತನಾಡಿ ಪ್ರತಿ…
ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯಿಂದ ನೆಮ್ಮದಿಯ ಬದುಕು : ಡಾ. ಭಾಸ್ಕರ ಆಚಾರ್ಯ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಪರಿಸರ ಆತಂಕದ ಸ್ಥಿತಿಯಲ್ಲಿದ್ದು, ಅದನ್ನು ಊಳಿಸಿ ಸಮದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಆದುದರಿಂದ ಪರಿಸರ, ಜೀವ ವೈವಿಧ್ಯವನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ಹೊತ್ತಾಗ ನೆಮ್ಮದಿಯ ಬದುಕು ಸಾಧ್ಯ ಎಂದು ಕೋಟೇಶ್ವರದ ಡಾ. ಎನ್. ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್ನ ಮುಖ್ಯಸ್ಥರಾದ ಡಾ. ಭಾಸ್ಕರ ಆಚಾರ್ಯ ಹೇಳಿದರು. ಅವರು ಫ್ಲೋರಾ ಎಂಡ್ ಫೌನಾ ಕ್ಲಬ್ ಕುಂದಾಪುರ, ಡಾ| ಎನ್. ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್ ಕೋಟೇಶ್ವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯದ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಹರಿಪ್ರಸಾದ್ನ ಅಕ್ಷತಾ ಸಭಾಂಗಣದಲ್ಲಿ ನ.೨೬ರಂದು ನಡೆದ ಕುಂದಾಪುರ ತಾಲೂಕು ಮಟ್ಟದ ಇಕೋಕ್ಲಬ್ಗಳ ಸಮ್ಮೇಳನ ಸಮುದ್ರ ೨೦೧೬ ರಲ್ಲಿ ಡಾ| ಎನ್.ಆರ್. ಆಚಾರ್ಯ ಸ್ಮಾರಕ ಅತ್ಯುತ್ತಮ ಇಕೋ ಕ್ಲಬ್ ಪ್ರಶಸ್ತಿ…
