ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಂಡರೆ ಯಶಸ್ಸು ಸಾಧ್ಯ: ಡಾ. ಪ್ರಕಾಶ್ ತೋಳಾರ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲೆ ಎಲ್ಲರನ್ನೂ ತಲುಪುವ ಸುಲಭ ಮಾಧ್ಯಮ. ಭಾವನೆಗಳನ್ನು ಪ್ರಕಟ ಪಡಿಸಲು ಹಲವು ದಾರಿಗಳಿದ್ದರೂ ಚಿತ್ರಗಳ ಮನಸ್ಸಿಗೆ ನಾಟಿದಷ್ಟು ಸುಲಭವಾಗಿ ಬೇರಾವುದೂ ನಾಟಲಾರವು ಎಂದು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಹೇಳಿದರು.

Call us

Click Here

ಕಾರ್ಟೂನು ಕುಂದಾಪ್ರ ಬಳಗದ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗಿದ ಕಾರ್ಟೂನು ಹಬ್ಬದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಸಂಪಾದಕೀಯ ಕಾರ್ಟೂನುಗಳ ಒಳಹೊರವುಳನ್ನು ಅರಿಯಲು ಆಯೋಜಿಸಲಾಗಿದ್ದ ‘ಎಡಿಟೂನ್ಸ್’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲ ಮಕ್ಕಳನ್ನು ಒಂದೇ ವೃತ್ತಿಯಲ್ಲಿ ಕಾಣಬೇಕೆಂಬ ಹಂಬಲ ಸರಿಯಲ್ಲ. ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಆ ಕ್ಷೇತ್ರದಲ್ಲಿಯೇ ತೊಡಗಿಕೊಳ್ಳುವಂತೆ ಮಾಡಿದರೆ ಶ್ರಮದ ಸಾರ್ಥಕತೆ ತಿಳಿಯುವುದರ ಜೊತೆಗೆ ಯಶಸ್ಸೆಂಬುದು ಅರಸಿಕೊಂಡು ಬರುತ್ತದೆ ಎಂದರು.

ಎಂಐಸಿ ಮಣಿಪಾಲದ ಉಪನ್ಯಾಸಕಿ ಶುಭಾ ಎಚ್. ಎಸ್ ಮಾತನಾಡಿ ಜನರನ್ನು ನಗಿಸುವುದು ಕಷ್ಟದ ಕೆಲಸ. ಆಡಳಿತದಲ್ಲಿರುವವರನ್ನು ಸದಾ ಕೆಣಕಿ, ಅಣಕಿಸಿ ಕೊನೆಗೆ ಮುಖದಲ್ಲೊಂದು ಮಂದಹಾಸ ಮೂಡುವಂತೆ ಮಾಡಲು ವ್ಯಂಗ್ಯಚಿತ್ರಕಾರರಿಂದ ಸಾಧ್ಯ. ಸಾವಿರ ಪುಟಗಳಲ್ಲಿ ತೆರೆದಿಡುವ ವಿಷಯವನ್ನು ಗರೆಗಳ ಮೂಲವೇ ತೋರಿಸುವ ಸೃಜನಶೀಲತೆ ವ್ಯಂಗ್ಯಚಿತ್ರಕಾರರಲ್ಲಿದೆ ಎಂದರು.

ಗ್ಯಾಲಾಕ್ಸಿ ಸ್ಟೋರ್ಟ್ಸ್ ಪ್ರವರ್ತಕ ಸದಾನಂದ ನಾವಡ ಉಪಸ್ಥಿತರಿದ್ದರು. ವ್ಯಂಗ್ಯಚಿತ್ರಕಾರ ಕೇಶವ ಸಸಿಹಿತ್ಲು ಅವರನ್ನು ಅಭಿನಂದಿಸಲಾಯಿತು. ಕಾರ್ಟನು ಹಬ್ಬದ ಸಂಘಟಕ, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ ಸ್ವಾಗತಿಸಿದರು. ವ್ಯಂಗ್ಯಚಿತ್ರಕಾರರಾದ ಚಂದ್ರಶೇಖರ ಶೆಟ್ಟಿ ಸಹಕರಿಸಿ, ರಾಮಕೃಷ್ಣ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Click Here

Call us

Call us

cartoon-habba-editoons-1 cartoon-habba-editoons-5 cartoon-habba-editoons-4 cartoon-habba-editoons-3 cartoon-habba-editoons-2news-cartoon-habba-4th-day2 news-cartoon-habba-4th-day1

Leave a Reply