ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಒತ್ತಿನಣೆ ಬಳಿ ಕಂಟೇನರ್ ಹಾಗೂ ಸಾಂಟ್ರೊ ಕಾರಿನ ನಡುವಿನ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮೂರು ತಿಂಗಳ ಹಸುಗೂಸು ಸ್ಥಳದಲ್ಲಿಯೇ ಮೃತಪಟ್ಟು ಈರ್ವರು ಗಾಯಗೊಂಡ ದಾರುಣ ಘಟನೆ ವರದಿಯಾಗಿದೆ. ಕಾರಿನಲ್ಲಿದ್ದ ನಾಲ್ಕರ ಪೈಕಿ ಸಾರಾ (25), ಆಕೆಯ ಮಗಳು ಫಾತಿಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಆಕೆಯ ಪತಿ ಅಬು ಸಲ್ಮಾನ್ (35), ಹಾಗೂ ಮಗ ಮೊಹಮ್ಮದ್ ರಜೀಕ್ (5) ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ವಿವರ: ಹೊನ್ನಾವರದ ಸಾರಾ ಅವರ ತವರು ಮನೆಯಿಂದ ಕುಂದಾಪುರದ ಹಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಬೈಂದೂರು ಬಳಿಕ ಒತ್ತಿನಣೆಯಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ಸಲ್ಮಾನ್ ಅವರಿಗೆ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಕಂಟೇನರ್‌ಗೆ ಢಿಕ್ಕಿ ಹೊಡೆದಿದ್ದರ ಕಾರು ಸೀದಾ ಕಂಟೇನರ್ ಹಿಂಭಾಗಕ್ಕೆ ನುಗ್ಗಿ ಜರ್ಜರಿತವಾಗಿದ್ದು ತಾಯಿ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ರಫೀಕ್‌ನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೇ, ಸಲ್ಮಾನ್ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಮೇರಿಕಾ ನ್ಯೂಜೆರ್ಸಿಯಲ್ಲಿರುವ ‘ಸಪ್ತಮಿ’ ಸಂಸ್ಥೆ ಆಯೋಜಿಸಿದ್ದ ಶಾಸ್ತ್ರೀಯ ಸಂಗೀತ ಸ್ವರ್ದೆ ಸಬ್ ಜ್ಯೂನಿಯರ್ ವಿಭಾಗದಲ್ಲಿ ಕುಂದಾಪುರದ ದಿಶಾ ಹೆಬ್ಬಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ ಅಭ್ಯಸಿಸುತ್ತಿದ್ದಾಳೆ. ಈಕೆ ರಘುನಂದನ್ ಹೆಬ್ಬಾರ್ ಹಾಗೂ ದೀಪಾ ದಂಪತಿಗಳ ಪುತ್ರಿ, ಕುಂದಾಪುರದ ಸಾಹಿತಿ, ನ್ಯಾಯವಾದಿ ಎಎಸ್‌ಎನ್ ಹೆಬ್ಬಾರ್ ಅವರ ಮೊಮ್ಮಗಳು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಜನ ಸೇರುವುದಿಲ್ಲ; ಸಾಮಾನ್ಯರಿಂದ ಸಂಗೀತದ ಆಸ್ವಾದನೆ ಸಾಧ್ಯವಿಲ್ಲ ಎನ್ನಲಾಗುತ್ತದೆ. ಇದು ನಿಜವಲ್ಲ. ಸಂಗೀತ ಶ್ರವಣದಿಂದ ಹಂತಹಂತವಾಗಿ ಸಂಗೀತಾಸಕ್ತಿ ಹುಟ್ಟಿಕೊಂಡು, ವೃದ್ಧಿಯಾಗುತ್ತದೆ. ಕಲಾವಿದರನ್ನು ಕರೆಸಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಅಷ್ಟಷ್ಟೆ ಜನರಿಗೆ ಅದರ ಸವಿ ಉಣಿಸಿದರೆ ದೊಡ್ಡ ಸಂಖ್ಯೆಯ ಶ್ರೋತೃಗಳನ್ನು ಸೃಷ್ಟಿಸಬಹುದು ಎನ್ನುವುದಕ್ಕೆ ಹಲವು ನಿದರ್ಶನಗಳು ಇವೆ ಎಂದು ಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿ ಹೇಳಿದರು. ಗಾಯಕರೂ, ಸಂಗೀತ ಗುರುಗಳೂ ಆಗಿರುವ ಗೋಪಾಡಿಯ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ, ವಿದುಷಿ ಪ್ರತಿಮಾ ಭಟ್ ದಂಪತಿ ನೇತೃತ್ವದಲ್ಲಿ ಕುಂದಾಪುರ ಪರಿಸರದ ಸಮಾನ ಮನಸ್ಕರು ಸೇರಿ ಇತ್ತೀಚೆಗೆ ಅಗಲಿದ ಸಿತಾರ್ ವಾದಕ ಹಾಗೂ ಕಲಾ ಸಂಘಟಕ ಎ. ಅವಿನಾಶ್ ಹೆಬ್ಬಾರ್ ಅವರ ಆಶಯದ ಮುಂದುವರಿಕೆಗಾಗಿ ಆರಂಭಿಸಿರುವ ’ಸಂಗೀತ ಅವಿನಾಶಿ ಪ್ರತಿಷ್ಠಾನ’ವನ್ನು ಕುಂದಾಪುರದ ಪಾರಿಜಾತ ಹೋಟೆಲ್‌ನ ಪದ್ಮಾವತಿ ಸಭಾಗೃಹದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಎಂದಾಕ್ಷಣ ಅವಿನಾಶ್ ಹೆಬ್ಬಾರ್ ನೆನಪಾಗುತ್ತಾರೆ. ಸಂಗೀತಕ್ಕೆ ಸಾವಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟ ಪೊಲೀಸ್ ಠಾಣೆಗೆ ಬಂದು ಸುಮಾರು ೧ ವರೆ ವರ್ಷದ ಅವಧಿಯಲ್ಲಿ ಸಾಕಷ್ಟು ಅನುಭವಗಳಾಗಿವೆ. ಆದರೆ ಉತ್ತಮ ಸಹಕಾರ ನೀಡುವ ಮೇಲಧಿಕಾರಿಗಳು ಮತ್ತು ಸಿಬ್ಬಂದಿಗಳು ನನಗೆ ಕರ್ತವ್ಯ ನಡೆಸಲು ಸಾಕಷ್ಟು ಸಹಕಾರ ನೀಡಿದ್ದಾರೆ. ಎಲ್ಲರಿಗೂ ನನ್ನಿಂದ ಸಂತೋಷ ಸಿಕ್ಕಿದೆ ಎನ್ನುವ ಮಾತು ಹೇಳಲಾರೆ, ಒಬ್ಬರಿಗೆ ನ್ಯಾಯ ನೀಡುವ ಸಂದರ್ಭದಲ್ಲಿ ಎದರುಗಿನವರಿಗೆ ಬೇಸರವಾಗುವುದು ಸಹಜ. ಇಲಾಖೆಯ ವ್ಯಾಪ್ತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಏನು ಸಾಧ್ಯವೋ ಅದೇ ರೀತಿಯಲ್ಲಿ ದಕ್ಷವಾಗಿ ಕರ್ತವ್ಯ ನಿರ್ವಹಿಸದ ಹೆಮ್ಮೆ ಇದೆ ಎಂದು ಕೋಟ ಪೊಲೀಸ್ ಠಾಣೆಯ ನಿರ್ಗಮನ ಉಪನಿರೀಕ್ಷಕ ಕಬ್ಬಾಳ್ ರಾಜ್ ಹೆಚ್.ಡಿ. ಹೇಳಿದರು. ಅವರು ಸಂಜೆ ಕೋಟ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಲಾಗಿದ್ದ ಬಿಳ್ಕೋಡುಗೆ ಸಂದರ್ಭ ಮಾತನಾಡಿದರು. ಬ್ರಹ್ಮಾವರದ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕಬ್ಬಾಳ್‌ರಾಜ್ ಅವರು ನೇರ ನಡೆಯ ಪೊಲೀಸ್ ಅಧಿಕಾರಿ, ಕಾನೂನು ವಿಚಾರ ಬಂದಾಗ ನಿಷ್ಠುರವಾಗಿ ಪಾಲಿಸಿಸುವ ವ್ಯಕ್ತಿ. ಇದು ಕೆಲವು ವ್ಯಕ್ತಿಗಳಿಗೆ ಸಮಸ್ಯೆಯಾಗಿರಬಹುದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶ್ರೀ ಗುರು ಪರಾಶಕ್ತಿ ಮಠ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ಬ್ರಹ್ಮಶ್ರೀ ವೇ. ಮೂ. ಕೋಟ ಚಂದ್ರಶೇಖರ ಸೋಮಯಾಜಿ ಅವರ ನೇತೃತ್ವದಲ್ಲಿ ನಡೆದ ಚಂಡಿಕಾಯಾಗವು ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಸಾಂಗವಾಗಿ ನೆರವೇರಿತು. ಈ ಸಂದರ್ಭದಲ್ಲಿ ದೇವಳದ ಉತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್ ಕೆ. ಬಿ, ದೇವಳದ ಪ್ರಧಾನ ಅರ್ಚಕ ಗಣಪತಿ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ೨೦೧೬-೧೭ನೇ ಸಾಲಿನ ಇಂಟರ‍್ಯಾಕ್ಟ್ ಪದಪ್ರದಾನ ಸಮಾರಂಭ ಇತ್ತೀಚೆಗೆ ರೋಟರಿ ಕ್ಲಬ್ ಕುಂದಾಪುರದ ಅದ್ಯಕ್ಷ ಉದಯಕುಮಾರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಇಂಟರ‍್ಯಾಕ್ಟ್‌ನ ನೂತನ ಅಧ್ಯಕ್ಷ ಜಿತಿನ್ ಕುಲಾಲ್, ಕಾರ್ಯದರ್ಶಿ ಶಮಿತಾ ದೇವಾಡಿಗ ಮತ್ತು ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಲಾಯಿತು. ಮುಖ್ಯ ಅತಿಥಿ ರೋಟರಿ ಕ್ಲಬ್ ಕುಂದಾಪುರದ ಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ ವಿದ್ಯಾರ್ಥಿಗಳು ಆತ್ಮವಿಶ್ವಾಸದ ಮೇಲೆ ನಂಬಿಕೆಯನ್ನಿಟ್ಟುಕೊಂಡು ಕಾರ್ಯ ಪ್ರವೃತ್ತರಾದಾಗ ಯಶಸ್ಸು ಲಭಿಸುತ್ತದೆ. ಓದುವ ಪ್ರಕ್ರಿಯನ್ನು ಸರಳಗೊಳಿಸಿಕೊಂಡು ವಿಭಾಗವನ್ನು ಮಾಡಿಕೊಳ್ಳುವುದರಿಂದ ಸುಲಭವಾಗಿ ಓದಿರುವ ಸಂಗತಿಗಳು ಮನನವಾಗುತ್ತದೆ ಮತ್ತು ಜ್ಞಾಪನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಮನೋಜ್ ನಾಯರ್ ಉಪಸ್ಥಿತರಿದ್ದರು. ಸಹಶಿಕ್ಷಕ ದಿನಕರ ಅವರು ಸ್ವಾಗತಿಸಿದರು. ಇಂಟರ‍್ಯಾಕ್ಟ್ ಚೇರ್‌ಮೆನ್ ರಾಘವೇಂದ್ರ ಚರಣ ನಾವಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಗದೀಶ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಸಾಂಸ್ಕೃತಿಕ ಕಲಾಕುಟುಂಬ ’ಲಾವಣ್ಯ’ದ ೪೦ನೇ ವರ್ಷಾಚರಣೆಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸದಾಶಿವ ಡಿ. ಪಡುವರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ದೇವಾಡಿಗ ಕೆರೆಕಟ್ಟೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಉಪಾಧ್ಯಕ್ಷರಾಗಿ ಸುನಿಲ್ ಕುಮಾರ್, ಬಾಲಕೃಷ್ಣ ಬೈಂದೂರು, ದಿನಕರ್ ಹೋಬಳಿದಾರ್, ಜೊತೆ ಕಾರ್ಯದರ್ಶಿಯಾಗಿ ಗುರುಪ್ರಕಾಶ್, ಬಿ. ಕೃಷ್ಣಮೂರ್ತಿ ಕಾರಂತ್, ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ, ಸಂಚಾಲಕರಾಗಿ ಕೃಷ್ಣಪ್ಪ ಶೆಟ್ಟಿ (ಅಪ್ಪು ಮಾಸ್ಟರ್) ಹುಂಚನಿ ಇವರನ್ನು ಆಯ್ಕೆ ಮಾಡಲಾಯಿತು. ಉತ್ಸವ ಸಮಿತಿಯ ಗೌರವ ಸಲಹೆಗಾರರಾಗಿ ಡಾ. ಎಚ್. ಶಾಂತಾರಾಮ ಮಣಿಪಾಲ, ಉಪ್ಪುಂದ ಚಂದ್ರಶೇಖರ ಹೊಳ್ಳ, ಬಾಲಚಂದ್ರ ವಿ. ಆರ್., ಪಿ. ಸುಖಾನಂದ ಶೆಟ್ಟಿ, ಅನಿಲ್ ಕುಮಾರ್ ಶ್ಯಾನುಭಾಗ್, ಉಪ್ಪುಂದ ವೆಂಕಟೇಶ ಪ್ರಭು, ಕಂಚಿಕಾನ್ ರವೀಂದ್ರ ಕಿಣಿ, ರಾಜೇಂದ್ರ ಕೆ. ಹೆಜ್ಜಾಲ್, ಡಾ. ಎ.ಎಸ್.ಉಡುಪ, ಗುರುರಾಜ್ ರಾವ್, ಬಿ. ಉಮೇಶ ಕುಮಾರ್, ಅಶೋಕ ಕುಮಾರ್ ಬಾಡ ಆಯ್ಕೆಯಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ್. ಬಿ. ದಾವೆ ಹಾಗೂ ಅವರ ಪತ್ನಿ ಮೀನಾ ಎ. ದಾವೆ ಶುಕ್ರವಾರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಮಾಜಿ ಸಚಿವರನ್ನು ದೇವಳದವತಿಯಿಂದ ಗೌರವಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೆದೂರು ಸ್ಪೂರ್ತಿಧಾಮದಲ್ಲಿ ಮಹಾತ್ಮ ಗಾಂದೀಜಿಯವರ ಜನ್ಮದಿನದ ಪ್ರಯುಕ್ತ ಒಂದು ದಿನದ ವಿಶೇಷ ಸ್ವಚ್ಚತಾ ಕಾರ್ಯಕ್ರಮ ಮತ್ತು ಶ್ರಮದಾನವನ್ನು ಬೈಂದೂರು ಸರಕಾರಿ ಪ್ರಥಮ ದರ್ಜಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋವರ್ ರೆಂಜರ‍್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಸ್ಪೂರ್ತಿ ಸಂಸ್ಥೆಯ ರೂವಾರಿ ಡಾ. ಕೇಶವ ಕೋಟೇಶ್ವರ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೋ ಬಿ. ಎ. ಮೇಳಿ ಕಾರ್ಯಕ್ರಮವನ್ನು ಸಂಯೋಜಿಸಿದ್ದು, ಎನ್‌ಎಸ್‌ಎಸ್ ಯೋಜನಾಧಿಕಾರಿ ರವಿಚಂದ್ರ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪಾಂಡುರಂಗ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜ್ಯಶಾಸ್ತ್ರ ವಿಭಾಗ ಉಪನ್ಯಾಸಕ ವೆಂಕಟರಮಣ, ವಾಣಿಜ್ಯಶಾಸ್ತ್ರ ವಿಭಾಗ ಜ್ಯೋತಿ, ವಾಣಿಜ್ಯಶಾಸ್ತ್ರ ವಿಭಾಗ ಶ್ವೇತಾ ಮತ್ತು ಇತರೇ ವಿಭಾಗದ ಉಪನ್ಯಾಸಕ ವೃಂದದವರು ಸಹಕರಿಸಿದರು. ಕಾಲೇಜಿನ ರೋವರ್ ಮತ್ತು ರೆಂಜರ‍್ಸ್ ಘಟಕದ ಅಧಿಕಾರಿ ನಾಗೇಶ್ ವಂದಿಸಿದರು. ಶಿಬಿರಾರ್ಥಿ ಸಂಪ್ರೀತ್ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವ ಛಾಯಾಚಿತ್ರಕಾರ ನಿತೀಶ್ ಪಿ. ಬೈಂದೂರು ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೇ ಛಾಯಾಗ್ರಹಣ ಕ್ಷೇತ್ರದಲ್ಲಿ ತೋರುತ್ತಿರುವ ಸಾಧನೆಯನ್ನು ಪರಿಗಣಿಸಿ ಇತ್ತಿಚಿಗೆ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಅಜೆಕಾರು ಹೋಬಳಿ ಘಟಕ ಸಹಕಾರದಲ್ಲಿ ಡಾ| ಕೋಟ ಶಿವರಾಮ ಕಾರಂತರ ನೆನಪಲ್ಲಿ ಮಿತ್ರಮಂಡಳಿ ಕೋಟ ಆಯೋಜಿಸಿದ ವಿಂಶತಿ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ‘ಡಾ. ಕೋಟ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ’ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ನಕ್ರೆ ಜಾರ್ಜ್ ಕ್ಯಾಸ್ತೆಲಿನೋ, ಮಹಮ್ಮದಾಲಿ ಅಬ್ಬಾಸ್, ಶ್ರೀವರ್ಮ ಅಜ್ರಿ, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಗಿರಿಧರ ನಾಯಕ್, ಯೋಗೀಶ್ ಡಿ.ಎಚ್, ಸಮದ್ ಖಾನ್, ಪಂಚಮಿ ಮಾರೂರು, ರಕ್ಷಾ ಆರ್.ಶೆಣೈ, ಆಶ್ವಿತಾ ಎಂ. ಉಪಸ್ಥಿತರಿದ್ದರು. ಪತ್ರಕರ್ತ, ಸಂಘಟಕ ಶೇಖರ ಅಜೆಕಾರು ಕಾರ್ಯಕ್ರಮ ಸಂಘಟಿಸಿದರು.
