Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಮಾಹಿತಿ. ಉದ್ಯೋಗಾಕಾಂಕ್ಷಿಗಳ ಬಹು ನಿರೀಕ್ಷಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 (ಜಿಪಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್ 15, 2016 ಶುಲ್ಕ ಪಾವತಿಸಲು ಕೊನೆ ದಿನ: ಅಕ್ಟೋಬರ್ 18, 2016 ಸಹಾಯವಾಣಿ: 080-23460460 ಮಾಹಿತಿಗೆ : http://kea.kar.nic.in 815 ಪಂಚಾಧಿಯಿತಿ ಅಭಿವೃದ್ಧಿ ಅಧಿಧಿಕಾರಿ (ಪಿಧಿಡಿಒ) ಮತ್ತು 809 ಗ್ರಾ.ಪಂ. ಕಾರ್ಯಧಿದರ್ಶಿ ಗ್ರೇಡ್-1 ಹುದ್ದೆ ಸೇರಿ ಒಟ್ಟು 1624 ಹುದ್ದೆಗಳನ್ನು ಸ್ಪರ್ಧಾಧಿತ್ಮಕ ಪರೀಕ್ಷೆ ಮೂಲಕ ನೇರ ನೇಮಧಿಕ ಮಾಡಿಕೊಳ್ಳಲಾಗುತ್ತಿದೆ. ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹುದ್ದೆಗಳ ಜಿಲ್ಲಾವಾರು ಹಂಚಿಕೆ: ಒಟ್ಟು 815 ಪಿಡಿಒ ಹುದ್ದೆಗಳ ಪೈಕಿ 177 ಹುದ್ದೆಗಳನ್ನು ಹೈದರಬಾದ್ ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ. ಅಂತೆಯೇ 809 ಗ್ರಾ.ಪಂ. ಕಾರ್ಯದರ್ಶಿ ಹುದ್ದೆಗಳಲ್ಲಿ 171ಹುದ್ದೆಗಳನ್ನು ಹೈದರಬಾದ್ -ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿನ ಸಂಗೀತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಕುಸುಮಾ ಫೌಂಡೇಶನ್ ಆಯೋಜಿಸಲಾಗುತ್ತಿರುವ ವಿನೂತನ ಕಾರ್ಯಕ್ರಮ ‘ಗಾನಕುಸುಮ – 2016’ ಸಂಗೀತ ಸ್ವರ್ಧೆಯ ನೊಂದಾವಣಿಗೆ ಪ್ರತಿ ವರ್ಷದಂತೆ ಅರ್ಜಿ ಆಹ್ವಾನಿಸಲಾಗಿದ್ದು, ಕುಂದಾಪುರ ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸಂಗೀತದ ಬಗೆಗೆ ಸಾಮಾನ್ಯ ಜ್ಞಾನ, ಅಭಿರುಚಿ ಹಾಗೂ ಆಸಕ್ತಿ ಇರುವ 20ರ ವಯೋಮಾನದೊಳಗಿನ ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿಯ ಚಿತ್ರಗೀತೆಗಳನ್ನು ಹಾಡಲು ಅವಕಾಶವಿದೆ. ಮೂರು ಹಂತಗಳಲ್ಲಿ ಸ್ವರ್ಧೆ ನಡೆಯಲಿದ್ದು ಒಟ್ಟು ಸ್ವರ್ಧಿಗಳಲ್ಲಿ 12 ಮಂದಿಯನ್ನು ಸೆಮಿಪೈನಲ್‌ಗೆ, 6 ಮಂದಿಯನ್ನು ಫೈನಲ್ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಫೈನಲ್‌ನಲ್ಲಿ ಆಯ್ಕೆಯಾದ ಓರ್ವರನ್ನು ‘ಗಾನಕುಸುಮ 2016’ ಎಂದು ಘೋಷಿಸಲಾಗುವುದು ಮತ್ತು ಫೈನಲ್ ಹಂತ ಪ್ರವೇಶಿಸಿದ 6 ಮಂದಿಗೆ ಕುಸುಮಾಂಜಲಿ 2016 ಕಾರ್ಯಕ್ರಮದಲ್ಲಿ ವೃತ್ತಿಪರ ಕಲಾವಿದರೊಂದಿಗೆ ಹಾಡಲು ಅವಕಾಶ ನೀಡಲಾಗುತ್ತದೆ. ಅಕ್ಟೋಬರ್ 05ನೇ ತಾರೀಕಿನ ಒಳಗಾಗಿ ಶಾಲಾ ಕಾಲೇಜಿನ ಮೂಲಕ ನೀಡಲಾಗಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಜ್ಞಾನಸ್ಫೋಟದ ಯುಗದಲ್ಲಿ ನಾವಿದ್ದೇವೆ. ಈ ಜ್ಞಾನವನ್ನು ಸಮಾಜಕ್ಕೆ ಕೊಡಬೇಕಾದಲ್ಲಿ ಇಂದಿನ ಯುವ ಜನಾಂಗದ ಕರ್ತವ್ಯ. ಈ ನಿಟ್ಟಿನಲ್ಲಿ ಜ್ಞಾನವಂತರಾಗಿ ಬೆಳೆಯಬೇಕು ಎಂದು ಕೋಣಿ ಶಿವಾನಂದ ಕಾರಂತರು ಹೇಳಿದರು. ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಶ್ರೀ ಕಾರಂತರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಜ್ಞಾನಾರ್ಜನೆಯಿಂದ ಮಾತ್ರ ಉತ್ತಮ ಸಮಾಜದ ಸೃಷ್ಟಿ ಸಾಧ್ಯವಿದೆ ಎಂದರು. ನಿವೃತ್ತ ಪ್ರಾಂಶುಪಾಲ, ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಹಿರಿಯ ಉಪನ್ಯಾ ರಮಾಕಾಂತ ರೇವಣ್‌ಕರ್ ಶೈಕ್ಷಣಿಕ ವರ್ಷದ ಎಲ್ಲಾ ಸಕಲ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯ ನಾಗೇಶ್ ಶಾನುಭಾಗ್ ಅಧ್ಯಕ್ಷತೆ  ವಹಿಸಿದ್ದರು. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ನಿಶ್ಮಾ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಡೆದ 42ನೇ ಸೀನಿಯರ್ ನ್ಯಾಶನಲ್ ಪವರ್ ಲಿಫ್ಟಿಂಗ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆಯ ದೇಹದಾರ್ಢ್ಯ ಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರು 83 ಕೆಜಿ ವಿಭಾಗದಲ್ಲಿ 2 ಚಿನ್ನದ ಪದಕ ಹಾಗೂ 1 ಬೆಳ್ಳಿ, 1 ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್‌ನಲ್ಲಿ ಸ್ಫರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಈತ ಬಾಳಿಕೆರೆಯ ಭಾಸ್ಕರ ಗಾಣಿಗ ಮತ್ತು ಶ್ರೀಮತಿ ಪದ್ಮಾವತಿ ಗಾಣಿಗ ಅವರ ಪುತ್ರರಾಗಿದ್ದಾರೆ. ಬೆಂಗಳೂರಿನ ಸೂಪರ್ ಬಾಡೀಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ಗೆ ತೆರಳುವ ರಸ್ತೆಯನ್ನು ದುರಸ್ತಿಗಳಿಸುವಂತೆ ಕೋರಿ ಬೈಂದೂರು ವಲಯ ಕ್ಯಾಥೋಲಿಕ್ ಸಭಾ ಕ್ರೈಸ್ತ ಸಮುದಾಯದ ಪರವಾಗಿ ಬೈಂದೂರು ಶಾಸಕರ ಭವನದಲ್ಲಿ ಶಾಸಕ ಗೋಪಾಲ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ರೋನಾಲ್ಡ್ ಮಿರಾಂಡಾ, ಕ್ಯಾಥೋಲಿಕ್ ಸಭಾ ಬೈಂದೂರು ವಲಯಾಧ್ಯಕ್ಷ ಇಗ್ನೇಷಿಯಸ್ ನಜ್ರತ್, ಕಾರ್ಯದರ್ಶಿ ಜೋಸ್ಟಿನ್ ರೋಡ್ರಿಗಸ್, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಬೈಂದೂರು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಾರ್ಟಿನ್ ಡಯಾಸ್ ಮೊದಲಾದವರು ಉಪಸ್ಥಿತರಿದ್ದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನಸೇವಾ ವಿವಿದೋದ್ದೇಶ ಸಹಕಾರಿ ಸಂಘ (ನಿ) ಬಸ್ರೂರು ಇದರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಎಚ್.ಎಸ್. ಹತ್ವಾರ್‌ರವರ ಅಧ್ಯಕ್ಷತೆಯಲ್ಲಿ ಬಿ.ಎಂ. ಶಾಲೆ ಬಸ್ರೂರು ಸಭಾಂಗಣದಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಪೂಜಾರಿ ಬಳ್ಕೂರು ವಾರ್ಷಿಕ ವರದಿಯನ್ನು ವಾಚಿಸಿದರು. ಸ್ಥಳಿಯ ಪ್ರತಿಭಾವಂತ ಪ್ರಾಥಮಿಕ ಹಾಗೂ ಫ್ರೌಡ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಯಿತು. ಸದಸ್ಯರಿಗೆ ಶೇ. ೧೧ ಡಿವಿಡೆಂಟ್ ಘೋಷಿಸಲಾಯಿತು. ಹಾಜರಿದ್ದ ಎಲ್ಲಾ ಸದಸ್ಯರಿಗೆ ಎಲ್.ಇ.ಡಿ. ಬಲ್ಬ್‌ಗಳನ್ನು ನೀಡಿ ಸರಕಾರದ ಕಾರ್ಯಕ್ರಮವಾದ ವಿದ್ಯುತ್ ಉಳಿಸಿ ದೇಶ ಬೆಳಸಿ ಎನ್ನುವುದನ್ನು ಪ್ರೋತ್ಸಾಹಿಸಲಾಯಿತು. ನಿರ್ದೇಶಕ ಪಿ. ಜಗನ್ನಾಥ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಂತಕ್ಕೆ ಸ್ವಲ್ಪ – ಸಮಾಜಕ್ಕೆ ಸರ್ವಸ್ವವೆಂಬ ಧ್ಯೇಯವನ್ನಿಟ್ಟುಕೊಂಡ ವ್ಯಕ್ತಿಗಳೂ ಆರಂಭಿಸುವ ಉದ್ಯಮ ಯಾವಾಗಲೂ ಯಶಸ್ಸನ್ನು ಕಾಣುತ್ತದೆ. ಸಮಾಜಕ್ಕೇನಾದರೂ ಮಾಡಬೇಕೆಂಬ ತುಡಿತದ ಹಿಂದೆ ಜನರ ಹಿತಕಾಯುವ ಉತ್ತಮ ಚಿಂತನೆ ಅಡಗಿರುತ್ತದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಬೈಂದೂರು ಶ್ರೀ ಮೂಕಾಂಬಿಕಾ ಡೆವೆಲಪರ್ಸ್ ಹಾಗೂ ಮೆ. ವೃಂದಾ ಮಾರ್ಕೆಟಿಂಗ್ ಎಂಟರ್‌ಪ್ರೈಸಸ್ ಅವರ ನೂತನ ಕಟ್ಟಡ ‘ಸಿಟಿ ಪಾಯಿಂಟ್’ ಹಾಗೂ ಅತ್ಯಾಧುನಿಕ ಹವಾನಿಯಂತ್ರಿತ ಹೈಪರ್ ಮಾರ್ಕೆಟ್ ‘ನಮ್ಮ ಬಜಾರ್’ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತ ಬದಲಾವಣೆಯ ಕಾಲಘಟ್ಟದಲ್ಲಿದೆ. ಮೂಲಭೂತ ಸೌಕರ್ಯ, ಶಿಕ್ಷಣ, ಉದ್ಯೋಗದಿಂದ ಸಮಾಜದ ಕಟ್ಟಕಡೆಯ ವ್ಯಕಿಯ ಜೀವನ ಮಟ್ಟವೂ ಸುಧಾರಿಸುತ್ತಿದೆ. ಹೆಚ್ಚುತ್ತಿರುವ ವ್ಯಕ್ತಿಯ ಅಗತ್ಯತೆಗಳಿಗೆ ತಕ್ಕಂತೆ ಬೈಂದೂರು ನಗರಕ್ಕೊಂದು ದೃಷ್ಠಿ ಎಂಬಂತೆ ಆರಂಭಗೊಂಡಿರುವ ನಮ್ಮ ಬಜಾರ್ ಜನರಿಗೆ ಹತ್ತಿರವಾಗಲಿದೆ ಎಂದ ಅವರು ಭಾರತೀಯರ ಜನಜೀವನ ಭಿನ್ನವಾದದ್ದು. ನಮ್ಮ ಆರ್ಥಿಕ ವ್ಯವಸ್ಥೆಯ ಕೇಂದ್ರಬಿಂದು ತಾಯಿ. ನಮ್ಮದು ಉಳಿಸುವ ಸಂಸ್ಕೃತಿ. ಹಾಗಾಗಿ ಕೆಲವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಸಿಟಿ ಪಾಯಿಂಟ್ ಕಟ್ಟಡ ಹಾಗೂ ಹೈಪರ್ ಎಸಿ ಮಾರ್ಕೆಟ್ ನಮ್ಮ ಬಜಾರ್ ಲೋಪಾರ್ಪಣೆಗೊಂಡಿತು. ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಲೋಕಾರ್ಪಣೆಗೊಳಿಸಿದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಸಿ.ಎ ಹಾಗೂ ಉದ್ಯಮಿ ಯು ರಾಮಚಂದ್ರ ಪ್ರಭು ಶುಭಶಂಸಗೈದರು. ನಮ್ಮ ಬಜಾರ್ – ಸಿಟಿ ಪಾಯಿಂಟ್ ಪ್ರವರ್ತಕ, ಶ್ರೀ ಮೂಕಾಂಬಿಕಾ ಡೆವೆಲಪರ‍್ಸ್‌ನ ಕೆ. ಸ್ವಾಗತಿಸಿ, ವೆಂಕಟೇಶ ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಾದೂಗಾರ ಓಂಗಣೇಶ್ ಉಪ್ಪುಂದ ನಿರೂಪಿಸಿದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆಯಲ್ಲಿ ಗಾಳಿಮಳೆಗೆ ಮನೆ ಕುಸಿದುಹೋಗಿ ನಷ್ಟ ಅನುಭವಿಸಿದ ದಾಸಿಮನೆ ಲಕ್ಷ್ಮೀ ಖಾರ್ವಿ ಅವರಿಗೆ ಇಲ್ಲಿ ಮೀನುಗಾರಿಕಾ ಬಂದರು ಕಾಮಗಾರಿ ನಡೆಸುತ್ತಿರುವ ಎನ್‌ಎಸ್‌ಕೆ ಬಿಲ್ಡರ್ ವತಿಯಿಂದ ಅದರ ವ್ಯವಸ್ಥಾಪಕ ಕಿಶೋರ್ ರೂ. ೨೫೦೦೦ ನೆರವು ನೀಡಿದರು. ತಾಲ್ಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಸ್ಥಳೀಯ ಮೀನುಗಾರ ಸಮುದಾಯದ ಪ್ರಮುಖರಾದ ಎಂ. ರಾಮಕೃಷ್ಣ ಖಾರ್ವಿ, ಚಂದ್ರಗುಪ್ತ ಖಾರ್ವಿ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಪದವಿಪೂರ್ವ ಕಾಲೇಜುಗಳ ಕುಂದಾಪುರ ತಾಲೂಕು ಮಟ್ಟದ ಬಾಲಕ ಹಾಗೂ ಬಾಲಕಿಯರ ತ್ರೋಬಾಲ್ ಪಂದ್ಯಾಟ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ನಡೆಯಿತು. ಪಂದ್ಯಾಟಗಳನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ವಸಂತ ಬಂಗೇರ ವಿದ್ಯಾರ್ಥಿಗಳು ಶಾಲಾ ಜೀವನದಲ್ಲೇ ನಿರಂತರ ಅಭ್ಯಾಸ ಮಾಡಿದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಕ್ರೀಡಾ ಚಟುವಟಿಕೆಗಳಿಗೆ ಆಡಳಿತ ಮಂಡಳಿ ಪೂರಕವಾಗಿ ಸ್ಪಂದಿಸುತ್ತದೆ ಮತ್ತು ವಿದ್ಯಾರ್ಥಿಗಳಿಗಾಗಿ ಉತ್ತಮ ಕ್ರೀಡಾಂಗಣ ಸಧ್ಯದಲ್ಲೆ ಸಜ್ಜುಗೊಳ್ಳಲಿದೆ ಎಂದರು. ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್. ಬಿ. ನಾಯಕ್ ಕ್ರೀಡಾಳುಗಳನ್ನು ಪ್ರೋತ್ಸಾಹಿಸುತ್ತಾ ಪಂದ್ಯಾಟ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ಶ್ರೀಧರ ಶೆಟ್ಟಿ, ವಲಯ…

Read More