Author: ನ್ಯೂಸ್ ಬ್ಯೂರೋ

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸದಲ್ಲಿ ಕಾಶೀ ಮಠದ ಕಿರಿಯ ಯತಿಗಳಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸುರೇಶ ಗೋವಿಂದ್ರಾಯ ಕಾಮತರ “ಶ್ರೀ ಗೋವಿಂದ ಗೋರಕ್ಷಾ ಗೋಕುಲ ಧಾಮ”ಕ್ಕೆ ಭೇಟಿ ನೀಡಿ ಗೋಪೂಜೆಯನ್ನು ಸಲ್ಲಿಸಿದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖ್ಯಾತ ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಇಂದು ಹೊಸನಗರ ತಾಲೂಕು ನಿಟ್ಟೂರು ಬಳಿಯ ಬಾಮೆ ಎಂಬಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಹೆಜ್ಜೆನು ಕಚ್ಚಿದ ಪರಿಣಾಮ ಕುಂದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ವಿವರ: ನಾಗತಿಹಳ್ಳಿ ಚಂದ್ರಶೇಕರ್ ನಿರ್ದೇಶನದ ಇಷ್ಟಕಾಮ್ಯ ಎಂಬ ಕನ್ನಡ ಚಿತ್ರದ ಶೂಟಿಂಗ್ ಗಾಗಿ 60ಜನರ ಚಿತ್ರತಂಡ ಇಂದು ಕೊಲ್ಲೂರು ಸಮೀಪದ ನಿಟ್ಟೂರಿಗೆ ಬಂದಿಳಿದಿತ್ತು. ಬಾಮೆ ತೂಗು ಸೇತುವೆ ಸಮೀಪ ಶೂಟಿಂಗ್ ನಡೆಸುವುದು ನಿಗದಿಯಾಗಿತ್ತು. ಬೆಳಿಗ್ಗೆ 10:30ರ ಹೊತ್ತಿಗೆ ಕ್ಯಾಮರಾ ಪೊಜಿಷನ್ ನೋಡಲು ಸ್ವಲ್ಪ ಮುಂದೆ ತೆರಳಿದ ನಾಗತಿಹಳ್ಳಿಗೆ ಒಮ್ಮೇಲೆ ಎಲ್ಲಿಂದಲೋ ಬಂದ ಜೇನು ದಾಳಿ ಇಟ್ಟಿದೆ. ಕೂಡಲೇ ಚಿತ್ರತಂಡದ ಇತರರಿಗೆ ತಿಳಿಸಿದ ನಾಗತಿಹಳ್ಳಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆದರೆ ಅಷ್ಟರೊಳಗೆ ಜೇನು ಇತರರಿಗೂ ದಾಳಿ ಮಾಡಲು ಶುರುವಿಟ್ಟುಕೊಂಡಿತ್ತು. ನಾಗತಿಹಳ್ಳಿಯವರನ್ನು ರಕ್ಷಿಸಲು ಬಂದ ನಾಲ್ಕೈದು ಮಂದಿಗೂ ಜೇನು ದಾಳಿ ಮಾಡಿದೆ. ನಾಗತಿಹಳ್ಳಿ ಹಾಗೂ ಕೃಷ್ಣ ಎಂಬುವವರಿಗೆ ಕಣ್ಣು ಹಾಗೂ ತಲೆಯ…

Read More

ಕುಂದಾಪುರ: ಕರ್ನಾಟಕ ಕಾರ್ಮಿಕರ ವೇದಿಕೆ ನೀಡುವ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ವಿಜಯವಾಣಿ ಉಡುಪಿ ಜಿಲ್ಲಾ ಹಿರಿಯ ವರದಿಗಾರ ಆರ್.ಶ್ರೀಪತಿ ಹೆಗಡೆ ಹಕ್ಲಾಡಿ ಆಯ್ಕೆ ಆಗಿದ್ದಾರೆ. ನ.29 ರಂದು ಉಡುಪಿ ಎಂಜಿಎಂ ಕಾಲೇಜ್ ಆಟದ ಮೈದಾನದಲ್ಲಿ ದಿನವಿಡೀ ನಡೆಯುವ ರಾಜ್ಯ ಸಮಾವೇಶ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ಕೆ.ರವಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ನೇರ, ದಿಟ್ಟ ವರದಿಗಾರಿಕೆಯ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಪತ್ರಕರ್ತ ಹಕ್ಲಾಡಿಯವರಿಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯು ಕೊಡಮಾಡುವ ಆರನೇ ವರ್ಷದ `ಕಡಲ ತೀರದ ಭಾರ್ಗವ ಡಾ.ಕೆ.ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’, ಮಾನವ ಹಕ್ಕು ಮಂಡಳಿ- ಬೆಂಗಳೂರು ಸಂಸ್ಥೆಯು ಕೊಡಮಾಡುವ ರಾಜ್ಯ ಮಟ್ಟದ ‘ಟಿಪ್ಪು ಸುಲ್ತಾನ್ ಸದ್ಭಾವನಾ ಪ್ರಶಸ್ತಿ’, ಬಿಜಾಪುರದ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಕೋಡಮಾಡುವ ‘ಬಸವ ಜ್ಯೋತಿ ರಾಜ್ಯ ಪ್ರಶಸ್ತಿ’ ಸೇರಿದಂತೆ ಹಲವಾರು…

Read More

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸದ ದೀಪಾವಳಿಯ ಸಂಭ್ರಮದಲ್ಲಿ ಕಾಶೀ ಮಠ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿಗೆ ಕಾಶೀ ಮಠದ ಕಿರಿಯ ಯತಿಗಳಾದ ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತೈಲಾಭ್ಯಂಜನ ನಡೆಸಿದರು.

Read More

ಗಂಗೊಳ್ಳಿ: ಸಾಹಿತ್ಯ ವೇದಿಕೆ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಜೋತ್ಸವ ಸಂಭ್ರಮದ ಸವಿನುಡಿ ಹಬ್ಬ2015 ಮತ್ತು ಗಂಗೊಳ್ಳಿ ಯು ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಪತ್ರಿಕೆಯ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಕಥಾ ಗೋಷ್ಠಿ ಕಾರ‍್ಯಕ್ರಮವು ನವೆಂಬರ್ 17 ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ತನಕ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಉತ್ಸವದ ಉದ್ಘಾಟನೆಯನ್ನು ಕನ್ನಡದ ಖ್ಯಾತ ಸಾಹಿತಗಳಾದ ಜಯಂತ ಕಾಯ್ಕಿಣಿ ಅವರು ನೆರವೇರಿಸಲಿದ್ದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ.ಕಾಶೀನಾಥ ಪೈ, ಯು.ಎಸ್.ಶೆಣೈ, ಪ್ರಶಾಂತ್ ಕುಂದರ್, ದತ್ತಾನಂದ ಜಿ. ಪ್ರಾಂಶುಪಾಲ ಆರ್ ಎನ್ ರೇವಣ್ ಕರ್ ಮತ್ತು ಎನ್ ಸದಾಶಿವ ನಾಯಕ್ ಉಪಸ್ಥಿತರಿರುವರು. ಆ ಬಳಿಕ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಸುವ್ರತಾ ಅಡಿಗ ವಹಿಸಲಿದ್ದಾರೆ. ಕಥಾ ಗೋಷ್ಠಿ ಅಧ್ಯಕ್ಷತೆಯನ್ನು ಕಿದಿಯೂರು ಶ್ಯಾಮಿಲಿ ಪದವಿಪೂರ್ವ ಕಾಲೇಜಿನ…

Read More

ಕುಂದಾಪುರ: ಹಳೆ ವಿದ್ಯಾರ್ಥಿಗಳು ಕಾಲೇಜಿನ ಕಾರ್ಯಚಟುವಟಿಕೆಯಲ್ಲಿ ಸ್ಪಂದಿಸಿದಾಗ ಕಾಲೇಜು ಉತ್ತಮ ಬೆಳವಣಿಗೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದೆ. ಅವರ ಕಾರ್ಯಚಟುವಟಿಕೆ ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿರಲಿ ಎಂದು ಉಡುಪಿ ಜಿಲ್ಲೆಯ ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಆರ್.ಬಿ. ನಾಯಕ್ ಹೇಳಿದರು. ಅವರು ಭಂಡಾರ್‌ಕಾರ್ಸ್ ಪಿ.ಯು ಕಾಲೇಜು ಕುಂದಾಪುರ ಮತ್ತು ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಪಿ.ಯು ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು, ಎಸ್.ಪಿ. ತೋಳಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಹುಡುಗರ ವಿಭಾಗದಲ್ಲಿ ಉಡುಪಿಯ ಎಂ.ಜಿ.ಎಂ. ಪಿಯು. ಕಾಲೇಜು ಪ್ರಥಮ, ಕುಂದಾಪುರದ ಆರ್.ಎನ್.ಶೆಟ್ಟಿ ಪಿ.ಯು. ಕಾಲೇಜು ದ್ವಿತೀಯ, ಕುಂದಾಪುರದ ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು ತೃತೀಯ, ಕುಂದಾಪುರದ ಎಸ್.ಎಂ.ಎಸ್ ಪಿ.ಯು. ಕಾಲೇಜು ನಾಲ್ಕುನೇ ಬಹುಮಾನವನ್ನು ಪಡೆದುಕೊಂಡರು. ಹುಡುಗಿಯರ…

Read More

ಕುಂದಾಪುರ: ಇತ್ತಿಚಿಗೆ ಲೋಕಾರ್ಪಣೆಗೊಂಡ ಕೋಟ ಇ೦ದಿರಾ ಭವನದಲ್ಲಿ ಅ೦ಬೇಡ್ಕರ್ ಭಾವಚಿತ್ರ ಹಾಕದೇ ಇರುವ ಬಗ್ಗೆ ದಲಿತ ಸ೦ಘಷ೯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇ೦ದಿರಾ ಭವನದಲ್ಲಿ ಎಲ್ಲಾ ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ಹಾಕಲಾಗಿದ್ದು ಸ೦ವಿಧಾನ ಶಿಲ್ಪಿ ಡಾ.ಬಿ.ಆರ್ ಅ೦ಬೇಡ್ಕರ್ ಚಿತ್ರ ಹಾಕಿಲ್ಲ. ಇದನ್ನು ದಸಂಸ ಖ೦ಡಿಸಿದೆ. ಗೃಹ ಸಚಿವ ಜಿ ಪರಮೇಶ್ವರ್ ಅವರೇ ಭವನ ಉದ್ಘಾಟನೆಗೊಳಿಸಿದ್ದರೂ  ಈ ಬಗ್ಗೆ ಗಮನ ಹರಿಸದೆ ಇರುವುದು ದುರದೃಷ್ಟಕರ ಎ೦ದು ಕನಾ೯ಟಕ ರಾಜ್ಯ ದಲಿತ ಸ೦ಘಷ೯ ಸಮಿತಿ ಹೇಳಿದೆ.

Read More

ಕುಂದಾಪುರ: ಇಲ್ಲಿನ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸವನ್ನಾಚರಿಸುತ್ತಿರುವ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವದ ಪುರಮೆರವಣಿಗೆ ಸಂಜೆ ದೇವಳದಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಆರಂಭಗೊಂಡಿತು. ವಿಶೇಷವಾಗಿ ಪುಷ್ಪಲಂಕಾರಗೊಂಡ ವಾಹನದಲ್ಲಿ ಶ್ರೀಗಳು ವಿರಾಜಮಾನರಾದರು. ವೇದ ಘೋಷಗಳಿಂದ ಆರಂಭವಾದ ಪುರ ಮೆರವಣಿಯಲ್ಲಿ ವೆಂಕಟರಮಣ, ಆಂಜನೇಯ, ನರಸಿಂಹ ಅವತಾರ, ಕಂಸ ವಧೆ, ವೇದವ್ಯಾಸ ದೇವರು, ತಾರಕಾಸುರ ವಧೆ, ಸಂಜೀವಿನಿ ಪರ್ವತ ಹೊತ್ತ ಹನುಮಂತ, ದುರ್ಗೆ, ಮಕ್ಕಳ ಶ್ರೀ ರಾಮ ಸೀತಾ ಲಕ್ಷ್ಮಣ ಹನುಮಂತ, ವೆಂಕಟರಮಣ ದೇವರು, ಇದಲ್ಲದೆ ಕೀಲು ಕುದುರೆ, ನಾಸಿಕ್ ಬ್ಯಾಂಡ್, ಮಹಿಳಾ ಚಂಡೆ, ಹುಲಿವೇಷ ಅಲ್ಲದೇ ಇನ್ನಿತರ ಟ್ಯಾಬ್ಲೋಗಳು ಜನರ ಮನಸೂರೆಗೊಂಡಿತು. ಸುಮಾರು 10000ಕ್ಕೂ ಹೆಚ್ಚಿನ ಜಿ.ಎಸ್.ಬಿ ಸಮಾಜ ಭಾಂದವರು ಮೆರವಣಿಗೆಯಲ್ಲಿ ಪಾಲ್ಗೊಂಡು ಪುಳಕಿತರಾದರು. ಊರ ಹಾಗೂ ಪರವೂರಿನ ಭಕ್ತಾದಿಗಳು ಸ್ವಾಮೀಜಿಯಿಂದ ಫಲ ಮಂತ್ರಾಕ್ಷತೆಯನ್ನು ಪಡೆದರು. ಕೋಟೇಶ್ವರ ಪೇಟೆಯಲ್ಲಿ ವಿದ್ಯುತ್ ದೀಪಗಳ ಅಲಂಕಾರಗಳಿಂದ ಸಿಂಗರಿಸಲಾಗಿತ್ತು.…

Read More

ಎಲ್ಲಾ ಮೊಬೈಲ್ ಖರೀದಿಯ ಮೇಲೂ ಡಿಸ್ಕೌಂಟ್, ವಿಶೇಷ ಆಫರ್ ಕುಂದಾಪುರ: ಸತತ ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮೊಬೈಲ್ ಉತ್ಪನ್ನಗಳ ಉತ್ಕೃಷ್ಟ ಮಳಿಗೆ ‘ಮೊಬೈಲ್ ಎಕ್ಸ್’ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಹಾಗೂ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಖರೀದಿಸುವ ಪ್ರತಿ ಉತ್ಪನ್ನಕ್ಕೂ ವಿಶೇಷ ಆಫರ್ ನೀಡುತ್ತಿರುವ ಮೊಬೈಲ್ ಎಕ್ಸ್ – ಕಂಪ್ಲೀಟ್ ಮೊಬೈಲ್ ಶಾಪ್ ಇದೀಗ ಕುಂದಾಪುರ ಬಹು ನಂಬುಗೆಯ, ಬಹು ಬೇಡಿಕೆಯ ಮೊಬೈಲ್ ಶೋರೂಮಂಗಳಲ್ಲಿ ಒಂದೆನಿಸಿದೆ. ದೀಪಾವಳಿಯ ಸಂದರ್ಭ ಮೊಬೈಲ್ ಎಕ್ಸ್ ನಲ್ಲಿ ಯಾವುದೇ ಮೊಬೈಲ್ ಖರೀದಿಸುವವರಿಗೆ ಒಂದು ಎಲ್.ಇ.ಡಿ ಟಾರ್ಚ್ ನೀಡುವುದರ ಜೊತೆಗೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು 50,000 ಮೌಲ್ಯದ ಮೊಬೈಲ್ ಗೆಲ್ಲುವ ಸುವರ್ಣವಕಾಶವಿದೆ. ವಿವೋ ವಿ1, ವಿ1ಮಿನಿ, ವಿ1 ಮಾಕ್ಸ್, ಸ್ಯಾಮಸಂಗ್ ಜೆ2, ಜೆ5, ಜೆ7 ಶ್ರೇಣಿಯ ಮೊಬೈಲ್ ಕೊಂಡಲ್ಲಿ 8ಜಿಬಿ ಮೆಮೊರಿ ಕಾರ್ಡ್, ಸೆಲ್ಪಿ ಸ್ಟಿಕ್, ವಿಶೇಷ ಗಿಫ್ಟ್ ನೀಡಿದರೇ, ಲೆನೊವಾ 6000, 7000, ಕೆ3 ಮ್ಯೂಸಿಕ್ ಶ್ರೇಣಿಯ ಮೊಬೈಲ್ ಕೊಂಡಲ್ಲಿ…

Read More