Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 118ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.  ಡಾ. ಕಾಶೀನಾಥ್ ಪೈ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಸರಂಗ ಕೋಟ ಇದರ ಮುಖ್ಯಸ್ಥರಾದ ಸುಧಾ ಮಣೂರು, ಶ್ರೀ ಅಮೃತೇಶ್ವರಿ ಮೇಳದ ಪ್ರದಾನ ಭಾಗವತ ರಾಘವೇಂದ್ರ ಮಯ್ಯ, ಶಿಕ್ಷಕಿ ಮಾಧುರಿ ಶ್ರೀರಾಮ್, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ಧನ ಹಂದೆ ಮಂಗಳೂರು ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾ ಮಣೂರು ಹಾಗೂ ಮಾಧುರಿ ಶ್ರೀರಾಮ್ ಅವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ತದನಂತರ ರಸರಂಗ ಕೋಟ ಇದರ ಮಹಿಳಾ ಸದಸ್ಯೆಯರಿಂದ ನಡೆದ ಶಮಂತಕ ರತ್ನ ಯಕ್ಷಗಾನ ತಾಳ ಮದ್ದಳೆ ನೆರೆದ ಪ್ರೇಕ್ಷಕರನ್ನು ರಂಜಿಸಿತು. ರಾಜೇಂದ್ರ ಪೈ ಅವರು ಧನ್ಯವಾದ ಸಮರ್ಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಪ್ರಸಿದ್ಧ ಅರ್ಚಕ ಮನೆತನದ ಗಂಗೊಳ್ಳಿ ನಿವಾಸಿ ದಿ. ಜಿ. ರಾಮನಾಥ ಭಟ್ ಅವರ ಪುತ್ರ ಬಾಬಣ್ಣ ಭಟ್ (71) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡು ಜನಾನುರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಬಾರಿಕೆರೆ ಯುವಕ ಮಂಡಲ ಕೋಟ ಇವರ ಆಶ್ರಯದಲ್ಲಿ 24ನೇ ವರ್ಷದ ಅಂಗವಾಗಿ ಹಮ್ಮಿಕೊಂಡ ಬಾರಿಕೆರೆ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟ ಕಾರ್ಯಕ್ರಮದಲ್ಲಿ ರಕ್ತದಾನಿ ದಿನೇಶ್ ಕಾಂಚನ್ ಬಾರಿಕೆರೆ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ಆನಂದ್ ಸಿ. ಕುಂದರ್, ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಸ್ಥಳೀಯರಾದ ಪ್ರಕಾಶ್ ಹೊಳ್ಳ, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ್ ನಾವಡ, ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್, ಕೋಟತಟ್ಟು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಸತೀಶ್ ಕುಂದರ್, ಬಾರಿಕೆರೆ ಯುವಕ ಮಂಡಲದ ರತ್ನಾಕರ್ ಬಾರಿಕೆರೆ, ರವಿ ಲೇಫ್ಟಿ, ಸಿರಾಜ್ ಸಾಹೇಬ್ ಮತ್ತಿತರರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಭಾರತ ಸಂವಿಧಾನದ ಶಿಲ್ಪಿ, ವಿಶ್ವಜ್ಞಾನಿ ಪೂಜ್ಯ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ಕಂಬದಕೋಣೆಯ ರಾಷ್ಟ್ರೀಯ ಹೆದ್ದಾರಿಯ ಆವರಣದಲ್ಲಿ ಮಂಗಳವಾರ ಅತ್ಯಂತ ಭವ್ಯವಾಗಿ ಆಚರಿಸಲಾಯಿತು. ಆದಿದ್ರಾವಿಡ ಸಂಘಟನಾ ಸಮಿತಿ ರಿ. ಹೇರಂಜಾಲು ಕಂಬದಕೋಣೆ  ಆಶ್ರಯದಲ್ಲಿ  ಈ ಕಾರ್ಯಕ್ರಮವು ನೆರವೇರಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳು ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಅತಿಥಿಗಳು ತಮ್ಮ ಭಾಷಣದಲ್ಲಿ, “ಬಾಬಾಸಾಹೇಬರು ನೀಡಿದ ಸಂವಿಧಾನದ ಹಕ್ಕುಗಳು ನಮ್ಮ ಬದುಕಿನ ದಾರಿದೀಪ. ಶೋಷಿತರು ಶಿಕ್ಷಿತರಾಗಿ, ಸಂಘಟಿತರಾಗಿ, ಹೊರಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ,” ಎಂದು ಒಕ್ಕೊರಲಿನಿಂದ ಆಶಿಸಿದರು. ನೂರಾರು ಬಂಧುಗಳು ನೀಲಿ ಶಾಲು ಧರಿಸಿ ಸಂಭ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರು ಮತ್ತು ಯುವಜನತೆಯ ಅಭೂತಪೂರ್ವ ಭಾಗವಹಿಸುವಿಕೆಯು ಈ ಬಾರಿಯ ಜಯಂತಿಗೆ ವಿಶೇಷ ಕಳೆಯನ್ನು ತಂದಿತ್ತು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಏರೋಡೈನಾಮಿಕ್ಸ್ ಸಂಸ್ಥೆಯು ಆಳ್ವಾಸ್ ಕಾಲೇಜಿನಲ್ಲಿ ಪ್ರಾರಂಭಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರವನ್ನು  ಮಂಗಳವಾರ ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು. ಕರ್ನಾಟಕದ ಕೋಸ್ಟ್ ಗಾರ್ಡ್ನ ಉಪಮಹಾನಿರೀಕ್ಷಕ (ಡಿಐಜಿ) ಹಾಗೂ ಜಿಲ್ಲಾ ಕಮಾಂಡರ್ ಪಿಕೆ ಮಿಶ್ರಾ  ಮಾತನಾಡಿ, ರಕ್ಷಣೆ ಹಾಗೂ ನಾಗರಿಕ ಕ್ಷೇತ್ರಗಳಲ್ಲಿ ಡ್ರೋನ್ ತಂತ್ರಜ್ಞಾನವು ವ್ಯಾಪಕವಾಗಿ ಬಳಸಲ್ಪಡುತ್ತಿರುವುದರಿಂದ ಇದರ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಡಿಮೆ ವೆಚ್ಚ, ನಿಖರತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬಳಸಬಹುದಾದ ಸಾಮರ್ಥ್ಯದಿಂದ ಡ್ರೋನ್‌ಗಳು ಕ್ರಾಂತಿಕಾರಿ ತಂತ್ರಜ್ಞಾನವಾಗಿ ಹೊರಹೊಮ್ಮುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. ಜಾಗತಿಕ ಬೆಳವಣಿಗೆಗಳನ್ನು ಉಲ್ಲೇಖಿಸಿ, ಅಮೇರಿಕಾ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷಗಳಲ್ಲಿ,  ಡ್ರೋನ್‌ಗಳು ಆಧುನಿಕ ಯುದ್ಧ ತಂತ್ರಗಳನ್ನು ಮಹತ್ತರವಾಗಿ ಬದಲಾಯಿಸುತ್ತಿರುವುದಾಗಿ ಹೇಳಿದರು. ಡ್ರೋನ್ ತಂತ್ರಜ್ಞಾನವು ಸಣ್ಣ ರಾಷ್ಟ್ರಗಳಿಗೂ ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡುತ್ತಿವೆ.  ದುಬಾರಿ ಸಾಂಪ್ರದಾಯಿಕ ಯುದ್ಧೋಪಕರಣಗಳಿಗಿಂತ ಕಡಿಮೆ ವೆಚ್ಚದ ಮಾನವರಹಿತ ಡ್ರೋನ್‌ಗಳ ಅಭಿವೃದ್ಧಿಗೆ ದೇಶಗಳು ಹೆಚ್ಚು ಒತ್ತು ನೀಡುತ್ತಿರುವುದಾಗಿ ತಿಳಿಸಿದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಂಬಂಧಿಕರನ್ನು ಕಂಡು ಮಾತನಾಡಿಸಲು ರಸ್ತೆ ದಾಟಲು ಮುಂದಾದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಜೆ ವಂಡ್ಸೆಯಲ್ಲಿ ಸಂಭವಿಸಿದೆ. ವಂಡ್ಸೆಯಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದ ಶಶಿಕಲಾ ಮೊಗವೀರ (52) ಮೃತಪಟ್ಟ ದುರ್ದೈವಿ. ಮಂಗಳವಾರ ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ವಂಡ್ಸೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿರುವ ದಿನಸಿ ಅಂಗಡಿಗೆ ಸಾಮಾನು ಖರೀದಿಸಲು ಶಶಿಕಲಾ ಅವರು ಬಂದಿದ್ದರು. ಖರೀದಿಯ ಬಳಿಕ ರಸ್ತೆಯ ಇನ್ನೊಂದು ಬದಿಯಲ್ಲಿ ತಮ್ಮ ಸಂಬಂಧಿಕರೊಬ್ಬರು ನಿಂತಿರುವುದನ್ನು ಕಂಡ ಅವರು, ಅತ್ತ ತೆರಳಲು ತಕ್ಷಣವೇ ರಸ್ತೆ ದಾಟಲು ಮುಂದಾಗಿದ್ದಾರೆ. ಇದೇ ವೇಳೆ ಚಿತ್ತೂರು ಕಡೆಯಿಂದ ವಂಡ್ಸೆ ಮಾರ್ಗವಾಗಿ ಅತಿ ವೇಗದಲ್ಲಿ ಬಂದ ಕಾರು ಇವರಿಗೆ ಬಲವಾಗಿ ಡಿಕ್ಕಿ ಹೊಡೆದ ರಭಸಕ್ಕೆ ಶಶಿಕಲಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 2025 -26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶವು ಪ್ರಕಟವಾಗಿದ್ದು, ಇದರಲ್ಲಿ ಬ್ಯಾರಿಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 100% ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡುವುದರ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಹಾಗೂ ಕಲಾ ವಿಭಾಗದ ಒಟ್ಟು 92 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ  ತೇರ್ಗಡೆಗೊಂಡು  ವಿಶೇಷ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ತ್ರಿಶಾ -577 (96.16%), ಮೊಹಮ್ಮದ್ ರಿಲಾ -564 (94%), ಇರ್ಫಾನ್ ಶರ್ಫುದ್ದಿನ್ -554 (92.33% ) ಫಾತಿಮಾ ನಿಶಾ -543 (90.5%), F M ಜಿಫಾನ್ -539 (89.83%), ಆಯಿಷಾತುಲ್ ಮುಜೈನ -530 (88.33%), ಆಫೀಯಾ -529 (88.16%), ಕೃಷ್ಣ -528 (88%) ಅಂಕಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಮಿಷ -570 (95%), ಕಶಿಫಾ – 556 (92.6%), ಅಸಿಫಾ – 542 (90.33%), ಡೆಲ್ ಸ್ಟನ್ -…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದೇಶ ಕಂಡ ಮಹಾನ್ ನಾಯಕ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಜೆಸಿಐ ಹಾಲಾಡಿ ವಾರಾಹಿ ಘಟಕದ ವತಿಯಿಂದ ಮಂಗಳವಾರ ಅಂಪಾರಿನ ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. ಹಾಲಾಡಿ  ಜೆಸಿಐನ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ ಅವರು ದೀಪವನ್ನು ಬೆಳಗಿಸಿ, ಡಾ. ಬಿ.ಆರ್ .ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಅವರ ಮಾದರಿ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಬಹು ದೊಡ್ಡ ಆಸ್ತಿ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಮುಖ್ಯ ಶಿಕ್ಷಕಿ ಸರೋಜಾವರು ಮಾತನಾಡಿ, ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಜಯಕರ, ಸಹ ಶಿಕ್ಷಕಿಯರಾದ ಶೈಲಜಾ  ಶೈಲಶ್ರೀ, ಸೌಭಾಗ್ಯಲಕ್ಷ್ಮಿ, ಆಶಾ, ಪ್ರತಿಮಾ,  ಶೋಭ, ಶ್ವೇತಾ, ಭವ್ಯ ಮತ್ತು ಜೆಸಿಐ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಮಂಗಳೂರಿನ ಟೌನ್ ಹಾಲ್ ನಲ್ಲಿ ಎ.11 ರಿಂದ 12ರ ವರೆಗೆ ನಡೆದ ಕರ್ನಾಟಕ ಸ್ಟೇಟ್ ಆರ್ಮ್ ರಸ್ಲಿಂಗ್ ಚಾಂಪಿಯನ್‌ಶಿಪ್‌ – 2026ರಲ್ಲಿ 90 ಕೆಜಿ ವಿಭಾಗದಲ್ಲಿ ಬಲ ಕೈ ಹಾಗೂ ಎಡ ಕೈ ವಿಭಾಗದಲ್ಲಿ ಸುರೇಶ್ ಪೂಜಾರಿ ಪಾಂಡೇಶ್ವರ ಸ್ಪರ್ಧಿಸಿ ಎರಡರಲ್ಲೂ ಚಿನ್ನದ ಪದಕ ಪಡೆದು ಮೇ ತಿಂಗಳಿನಲ್ಲಿ ಗುಜರಾತ್‌ನಲ್ಲಿ ನಡೆಯುವ ರಾಷ್ಟ ಮಟ್ಟದ ಸ್ವರ್ಧೆಗೆ ಆಯ್ಕೆಯಾಗಿದ್ದಾರೆ. ಅವರು ಬ್ರಹ್ಮಾವರದ ಬಾಡಿ ಜೋನ್ ಜೀಮ್ ನಾ ಸದಸ್ಯರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಪ್ರಶಸ್ತಿಗಳನ್ನು ಮಡಿಲಿಗೆರಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಅಶೋಕ್ ಕುಮಾರ್ ಮತ್ತು ಭರತನಾಟ್ಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ ಅವರ ಪುತ್ರಿಯರಾದ ಪೂರ್ವಿಕಾ ಮತ್ತು ಗಾರ್ಗಿದೇವಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಏಪ್ರಿಲ್ 18ರಂದು ಸಂಜೆ 4.00 ಗಂಟೆಗೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗ ದಲ್ಲಿ ನಡೆಯಲಿದೆ. ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಫೌಂಡೇಶನ್ ನಿರ್ದೇಶಕರು ಡಾ. ಮೋಹನ ಆಳ್ವಾ, ನಾಟ್ಯನಿಕೇತನ, ಕೋಲ್ಯ ಸೋಮೇಶ್ವರದ ಕರ್ನಾಟಕ ಕಲಾತಿಲಕ ಗುರು ಉಳ್ಳಾಲ ಮೋಹನ ಕುಮಾರ್, ಚಿತ್ಕಲಾ ಸ್ಕೂಲ್ ಆಫ್ ನೃತ್ಯ, ಬೆಂಗಳೂರಿನ ಭರತನಾಟ್ಯ ಕಲಾವಿದ ಪ್ರವೀಣ ಕುಮಾರ್ ಭರತನಾಟ್ಯ ಕಲಾವಿದೆ, ವ್ಯಾಸ (ಡೀಮ್ಡ್ ವಿಶ್ವವಿದ್ಯಾನಿಲಯ) ಇಲ್ಲಿನ ಯೋಗ ಮತ್ತು ಮಾನವೀಯ ಅಧ್ಯಯನ ಬೆಂಗಳೂರು ಇಲ್ಲಿನ ಡೀನ್ ಡಾ. ಕರುಣಾ ವಿಜಯೇಂದ್ರ, ಕರ್ನಾಟಕ ಕಲಾಶ್ರೀ ವಿದ್ಯಾನ್ ಕೆ. ಚಂದ್ರಶೇಖರ ನಾವಡ ನಿರ್ದೇಶಕರು, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇವರುಗಳು ರಂಗಪ್ರವೇಶ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ನೃತ್ಯ ಗುರು ವಿದುಷಿ ಪ್ರವಿತಾ…

Read More