Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ತ್ಯಾಜ್ಯ ಕಡಿತವೇ ಮೊದಲ ಹೆಜ್ಜೆ; ಪ್ರತಿ ಗ್ರಾಮವೂ ಸ್ವಚ್ಛತೆಯ ಮಾದರಿಯಾಗಬೇಕು: ವಿವೇಕ ಆಳ್ವ
    alvas nudisiri

    ತ್ಯಾಜ್ಯ ಕಡಿತವೇ ಮೊದಲ ಹೆಜ್ಜೆ; ಪ್ರತಿ ಗ್ರಾಮವೂ ಸ್ವಚ್ಛತೆಯ ಮಾದರಿಯಾಗಬೇಕು: ವಿವೇಕ ಆಳ್ವ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ:
    ಸ್ವಚ್ಛತೆ ಎನ್ನುವುದು ಕೇವಲ ತ್ಯಾಜ್ಯ ಸಂಗ್ರಹಿಸುವ ಅಥವಾ ವಿಲೇವಾರಿ ಮಾಡುವ ಕಾರ್ಯವಾಗದೆ, ತ್ಯಾಜ್ಯ ಉತ್ಪತ್ತಿಯಾಗುವುದನ್ನೇ ಕಡಿಮೆ ಮಾಡುವ ಜೀವನಶೈಲಿಯಾಗಿ ರೂಪುಗೊಳ್ಳಬೇಕು. ಪ್ರತಿಯೊಂದು ಗ್ರಾಮದಲ್ಲಿಯೂ ಜನರನ್ನು ಜಾಗೃತಗೊಳಿಸಿ, ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಸ್ವಚ್ಛ ಗ್ರಾಮಗಳ ನಿರ್ಮಾಣ ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಹೇಳಿದರು.

    Click Here

    Call us

    Click Here

    ಅವರು ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಹಸಿರು ಸಂವಾದ–ಸ್ವಚ್ಛ ಗ್ರಾಮಕ್ಕಾಗಿ ಕಾರ್ಯಯೋಜನೆ’ ಅವಲೋಕನ ಹಾಗೂ ಮುಂದಿನ ಕಾರ್ಯಯೋಜನೆ ರೂಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈಗಾಗಲೇ ಆಯ್ದ ಗ್ರಾಮಗಳಲ್ಲಿ ಹಸಿರು ಸಂವಾದದ ಚಟುವಟಿಕೆಗಳು ಆರಂಭವಾಗಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಗ್ರಾಮಗಳನ್ನು ಒಳಗೊಳ್ಳಲಾಗುವುದು. ತುಳುನಾಡಿನ ಗ್ರಾಮಗಳಿಗೆ ಹೊಂದುವಂತಹ ಸ್ಥಳೀಯ ಮಾದರಿಯೊಂದನ್ನು ರೂಪಿಸುವುದು ಹಸಿರು ಸಂವಾದದ ಉದ್ದೇಶವಾಗಿದೆ ಎಂದು ಹೇಳಿದರು. ಸ್ವಚ್ಛತೆಯ ಹೊಣೆಗಾರಿಕೆಯನ್ನು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಗೆ ಸೀಮಿತಗೊಳಿಸದೆ ಸಾಮೂಹಿಕ ಮತ್ತು ಸಾಂಸ್ಥಿಕ ವ್ಯವಸ್ಥೆಯಾಗಿ ಬೆಳೆಸಬೇಕು. ತಾತ್ಕಾಲಿಕ ಕ್ರಮಗಳಿಗಿಂತ ಶಾಶ್ವತ ಪರಿಹಾರಗಳಿಗೆ ಆದ್ಯತೆ ನೀಡಬೇಕು. ‘ಸ್ವಚ್ಛ ಗ್ರಾಮ’ ಎಂಬುದು ಪ್ರಶಸ್ತಿಗಾಗಿ ನಡೆಯುವ ಚಟುವಟಿಕೆಯಾಗದೆ, ಗ್ರಾಮಸ್ಥರ ಜೀವನದ ಭಾಗವಾಗಬೇಕು ಎಂದು ಹೇಳಿದರು.

    ಅನುಭವದಿಂದ ರೂಪುಗೊಂಡ ಪರಿಸರ ಮಾದರಿಗಳು:
    ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳು ಹಾಗೂ ಸಂಘಟನೆಗಳು ಪರಿಸರ ಸಂರಕ್ಷಣೆಯಲ್ಲಿ ಕೈಗೊಂಡಿರುವ ಕಾರ್ಯಗಳ ಅವಲೋಕನ ನಡೆಯಿತು. ಕೇವಲ ಉಪನ್ಯಾಸಗಳ ಮೂಲಕವಲ್ಲದೆ, ಸ್ಥಳೀಯವಾಗಿ ಅನುಸರಿಸಬಹುದಾದ ಸಣ್ಣ ಪ್ರಯತ್ನಗಳ ಮೂಲಕವೂ ಪರಿಸರ ಬದಲಾವಣೆ ಸಾಧ್ಯ ಎಂಬುದಕ್ಕೆ ಹಲವು ಮಾದರಿಗಳನ್ನು ಪ್ರಸ್ತುತಪಡಿಸಲಾಯಿತು.

    ಕಾರ್ಕಳದ ‘ವೇಸ್ಟ್ ಟು ಆರ್ಟ್’ ಪರಿಕಲ್ಪನೆಯಡಿ ತ್ಯಾಜ್ಯ ವಸ್ತುಗಳನ್ನು ಕಲಾಕೃತಿಗಳಾಗಿ ಪರಿವರ್ತಿಸುವ ಪ್ರಯತ್ನದ ಕುರಿತು ಜ್ಯೋತಿ ವಿವರಿಸಿದರು.
    ಚೇತನ ವಿಶೇಷ ಶಾಲೆ ಕಳೆದ ಎರಡು ವರ್ಷಗಳಿಂದ ‘ಹಸಿರು ಕ್ರಾಂತಿ’ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದು, ವಿಶೇಷ ಮಕ್ಕಳಿಂದ ತಯಾರಿಸಲಾದ ಹತ್ತಿ ಚೀಲ, ಕಾಗದದ ಹೂವು, ಬಣ್ಣದ ದೀಪಗಳು ಸೇರಿದಂತೆ ಪರಿಸರ ಸ್ನೇಹಿ ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಗಣೇಶೋತ್ಸವದ ಸಂದರ್ಭದಲ್ಲಿ ಈ ಬಾರಿ ಸ್ಕ್ರೀನ್ ಪ್ರಿಂಟಿಂಗ್ ಮಾಡಲಾದ ಬಟ್ಟೆಯ ಚೀಲಗಳನ್ನು ತಯಾರಿಸಿ ನೀಡಿರುವುದನ್ನು ಶಾಲೆಯ ರಘುನಾಥ ಭಟ್ ವಿವರಿಸಿದರು.

    Click here

    Click here

    Click here

    Call us

    Call us

    ಸಾಣೂರಿನ ಶಂಕರ್ ಕುಲಾಲ್ ಮಣ್ಣಿನ ಉತ್ಪನ್ನಗಳ ಬಳಕೆಯ ಕುರಿತು ವಿವರಿಸಿದರು. ಸಾಣೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಣ್ಣಿನ ಆಧಾರಿತ ಉತ್ಪನ್ನಗಳ ತಯಾರಿಕೆಗೆ ಪ್ರಯತ್ನ ನಡೆಯುತ್ತಿದೆ. ಅಡುಗೆ ಹಾಗೂ ದೈನಂದಿನ ಬಳಕೆಯಲ್ಲಿ ಮಣ್ಣಿನ ಪಾತ್ರೆಗಳ ಬಳಕೆಯನ್ನು ಉತ್ತೇಜಿಸುವುದು, ಸ್ಥಳೀಯ ವಸ್ತುಗಳ ಬಳಕೆಯನ್ನು ಹೆಚ್ಚಿಸುವುದು ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಕುರಿತು ಸಂಶೋಧನೆ ನಡೆಸುವ ಅಗತ್ಯವನ್ನು ಅವರು ವಿವರಿಸಿದರು.

    ಮೂಡುಬಿದಿರೆಯ ಸಂಧ್ಯಾ ಅಳಿಕೆವರು ನಡೆಸುತ್ತಿರುವ ‘ಕಲ್ಪವೃಕ್ಷ ಕಟ್ಲರಿ ಬ್ಯಾಂಕ್’ ಏಕಬಳಕೆಯ ವಸ್ತುಗಳಿಗೆ ಪರ್ಯಾಯ ರೂಪಿಸುವ ಗಮನಾರ್ಹ ಪ್ರಯತ್ನವಾಗಿ ಗುರುತಿಸಲಾಯಿತು. 2022ರಲ್ಲಿ ಸುಮಾರು 100 ಸ್ಟೀಲ್ ಲೋಟಗಳಿಂದ ಆರಂಭವಾದ ಈ ಪ್ರಯತ್ನ ಇದೀಗ ಸಾರ್ವಜನಿಕರ ಸಹಕಾರದಿಂದ 500ಕ್ಕೂ ಹೆಚ್ಚು ತಟ್ಟೆ, ಲೋಟ ಮತ್ತು ಚಮಚಗಳ ವ್ಯವಸ್ಥೆಯಾಗಿ ಬೆಳೆದಿದೆ. ಹುಟ್ಟುಹಬ್ಬದ ಕಾರ್ಯಕ್ರಮಗಳಿಂದ ಹಿಡಿದು ಕಂಬಳದಂತಹ ಸಾರ್ವಜನಿಕ ಸಮಾರಂಭಗಳವರೆಗೆ ಇವುಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.

    ಡಾ. ಪ್ರಸನ್ನ ಕಾಕುಂಜೆ ಮಾತನಾಡಿ, ಮನುಷ್ಯನ ಅನುಕೂಲ ಮತ್ತು ಸೌಕರ್ಯ ಹೆಚ್ಚಿದಂತೆ ಬಳಕೆ ಹೆಚ್ಚುತ್ತಿದೆ; ಅದರ ಪರಿಣಾಮವಾಗಿ ಆರೋಗ್ಯ ಮತ್ತು ಪರಿಸರದ ಮೇಲಿನ ಒತ್ತಡವೂ ಹೆಚ್ಚುತ್ತಿದೆ ಎಂದರು.  ಅತಿಯಾದ ಬಳಕೆ ಮತ್ತು ‘ಕೊಳ್ಳುವ ಸಂಸ್ಕೃತಿ’ಯಿಂದ ದೂರ ಸರಿದು ಮರುಬಳಕೆ ಹಾಗೂ ಪರಿಸರ ಸ್ನೇಹಿ ಪರ್ಯಾಯಗಳತ್ತ ಗಮನ ಹರಿಸಬೇಕು. ಜೈವಿಕವಾಗಿ ವಿಘಟಿಸಬಹುದಾದ ವಸ್ತುಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದರು.

    ಬೆಂಗಳೂರಿನ ‘ಕುಸುರಿ ಮನೆ’ಯ ಸುಜಾತಾ ಅವರು ತ್ಯಾಜ್ಯ ಬಟ್ಟೆಗಳಿಂದ ಪೆನ್ಸಿಲ್ ಪೌಚ್, ವಿವಿಧ ಉಪಯುಕ್ತ ವಸ್ತುಗಳು ಹಾಗೂ ಕೈತಯಾರಿಕೆಯ ಉತ್ಪನ್ನಗಳನ್ನು ತಯಾರಿಸುವ ಕುರಿತು ವಿವರಿಸಿದರು. ಪರಿಸರ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಮಹಿಳಾ ಶಕ್ತಿಯನ್ನು ಪರಿಸರ ಸಂರಕ್ಷಣೆ ಮತ್ತು ಸಣ್ಣ ಉದ್ಯಮಗಳೊಂದಿಗೆ ಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ವಿವಿಧ ಗಣೇಶೋತ್ಸವ ಸಮಿತಿಗಳು ಕೈಗೊಂಡ ಪರಿಸರ ಸ್ನೇಹಿ ಕ್ರಮಗಳನ್ನೂ ಸಭೆಯಲ್ಲಿ ಹಂಚಿಕೊಳ್ಳಲಾಯಿತು.

    ಸಮೀಕ್ಷೆ, ಜಾಗೃತಿ, ಕಾರ್ಯಾಚರಣೆ: ಮುಂದಿನ ಹಂತ:
    ಕಾರ್ಯಕ್ರಮದಲ್ಲಿ ‘ಹಸಿರು ಸಂವಾದ’ದ ಮುಂದಿನ ಹಂತದ ಕಾರ್ಯಯೋಜನೆ ಕುರಿತು ಚರ್ಚಿಸಲಾಯಿತು. ಪ್ರತಿಯೊಂದು ಗ್ರಾಮದಲ್ಲೂ ಮೊದಲು ಸಮೀಕ್ಷೆ ನಡೆಸಿ, ತ್ಯಾಜ್ಯ ನಿರ್ವಹಣೆ, ನೀರು, ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಸ್ಥಳೀಯ ಪರಿಸರ ಸಮಸ್ಯೆಗಳನ್ನು ಗುರುತಿಸಬೇಕು. ಬಳಿಕ ಜನಜಾಗೃತಿ ಮೂಡಿಸಿ, ಸಮಸ್ಯೆಗಳಿಗೆ ಸ್ಥಳೀಯವಾಗಿ ಅನುಸರಿಸಬಹುದಾದ ಪರಿಹಾರಗಳನ್ನು ರೂಪಿಸಬೇಕು ಎಂದು ತೀರ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಹಸಿರು ಸಂವಾದದ ವೆಬ್‌ಸೈಟ್ ಅನಾವರಣಗೊಳಿಸಲಾಯಿತು. ಯುವಜನರಲ್ಲಿ ಹೊಸ ಪರಿಸರ ಪರಿಹಾರಗಳನ್ನು ರೂಪಿಸುವ ಉದ್ದೇಶದಿಂದ ಐಡಿಯಾಥಾನ್ ಆಯೋಜಿಸಲು ನಿರ್ಧರಿಸಲಾಯಿತು.

    ಅಕ್ಟೋಬರ್ 15ರೊಳಗೆ ಸಮೀಕ್ಷೆ ಪೂರ್ಣ:
    ಹಸಿರು ಸಂವಾದ ತಂಡದ ಸದಸ್ಯ ಡಾ ಕುರಿಯನ್ ಮಾತನಾಡಿ, ಗ್ರಾಮಮಟ್ಟದ ಸಮೀಕ್ಷೆಯನ್ನು ಅಕ್ಟೋಬರ್ 15ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಸಮೀಕ್ಷೆಯ ಆಧಾರದ ಮೇಲೆ ಜನಜಾಗೃತಿ ಮತ್ತು ಸ್ವಚ್ಛತಾ ಚಟುವಟಿಕೆಗಳನ್ನು ನಡೆಸಿ, ಸ್ವಚ್ಛ ಗ್ರಾಮ ಪ್ರಶಸ್ತಿಗೆ ಅಗತ್ಯವಾದ ಕಾರ್ಯಯೋಜನೆಯನ್ನು ರೂಪಿಸುವಂತೆ ತಿಳಿಸಿದರು.

    ಅಕ್ಟೋಬರ್ 30ರೊಳಗೆ ಐಡಿಯಾಥಾನ್, ನವೆಂಬರ್ 30ರೊಳಗೆ ಜಾಗೃತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವುದು ಹಾಗೂ ಪ್ರತಿ ಗ್ರಾಮದಲ್ಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾರಂಭಿಸುವ ಕುರಿತು  ತಿಳಿಸಿದರು. ಅಪ್ಲೈಡ್ ಸಿಸ್ಟಮ್ಸ್ನ ಉತ್ಪನ್ನ ವಿತರಣೆ ಮತ್ತು ಸೇವೆಗಳ ಉಪಾಧ್ಯಕ್ಷ ವೆಂಕಟೇಶ್ ಸಂಗನಾಳ್, ಜಯರಾಮ್, ಮೂಡುಬಿದಿರೆ ಪುರಸಭೆಯ ಪರಿಸರ ಅಧಿಕಾರಿ ಶಿಲ್ಪ, ರಾಜೇಂದ್ರ ಕಾರ್ಕಳ,  ಪರ್ಯಾವರಣ ಸಂರಕ್ಷಣಾ ತಂಡದ ಕೇಶವ ಹಸಿರು ಸಂವಾದ ತಂಡದ ವಿವಿಧ ಗ್ರಾಮಗಳ ಮುಖಂಡರು, ಪ್ರಮುಖರು ಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು. ಹಸಿರು ಸಂವಾದ ತಂಡದ ಚಂದ್ರಹಾಸ ನಿರೂಪಿಸಿ ವಂದಿಸಿದರು.  

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ಷಕ – ಶಿಕ್ಷಕರ ಸಂಘದ ಸಭೆ

    03/10/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜು: ದಿ ಆರ್ಟ್‌ ಆಫ್‌ ಆಂಕರಿಂಗ್‌ ಮಾಹಿತಿ ಕಾರ್ಯಾಗಾರ

    03/10/2026

    ಕ್ರಿಯೇಟಿವ್ ಕಾಲೇಜಿನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಸಂಭ್ರಮ

    03/10/2026
    Leave A Reply Cancel Reply

    four × 1 =

    Call us

    Click Here

    Call us

    Call us

    Call us
    Highest Viewed Recently
    • ತ್ಯಾಜ್ಯ ಕಡಿತವೇ ಮೊದಲ ಹೆಜ್ಜೆ; ಪ್ರತಿ ಗ್ರಾಮವೂ ಸ್ವಚ್ಛತೆಯ ಮಾದರಿಯಾಗಬೇಕು: ವಿವೇಕ ಆಳ್ವ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ಷಕ – ಶಿಕ್ಷಕರ ಸಂಘದ ಸಭೆ
    • ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ವತಿಯಿಂದ ದಸರಾ ಶಿಬಿರ ಉದ್ಘಾಟನೆ
    • ತೊಡಕುಗಳನ್ನು ಎದುರಿಸಿ ಸಾಗುವುದರಲ್ಲಿಯೇ ಬದುಕಿನ ಯಶಸ್ಸು ಅಡಗಿದೆ: ಎಸ್. ಪ್ರಕಾಶ್ಚಂದ್ರ ಶೆಟ್ಟಿ
    • ಕುಂದಾಪುರ: ಸ್ವಚ್ಛತಾ ಹೀ ಸೇವಾ ಹಾಗೂ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.