Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿಯಲ್ಲಿನ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಲಿಟರರಿ ಕ್ಲಬ್ ನ ಉದ್ಘಾಟನೆ ಹಾಗೂ ವಾರ್ತಾಸಂಪದ ಲರ್ನಿಂಗ್ ಲೈವ್‌ಲಿ ಪತ್ರಿಕೆಯ ಬಿಡುಗಡೆ ಮಾಡಲಾಯಿತು. ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಭಂಡಾರ್ಕಾಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ. ಹಯವದನ ಉಪಾದ್ಯಾ ಮಾತನಾಡಿ ಮಕ್ಕಳಲ್ಲಿ ಭಾಷಾಭಿಮಾನ ಹಾಗೂ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳುವ ಬಗೆಯನ್ನು ವಿವರಿಸಿದರು. ಕವಿ ಅಥವಾ ಸಾಹಿತಿಯಾಗಬೇಕಾದರೆ ನಾವು ಇನ್ನೊಬ್ಬರ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಅವರಂತೆ ಆಲೋಚಿಸುವ ಅನುಭವಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಪಾತ್ರಗಳನ್ನು ಸೃಷ್ಠಿಸಿ ನಾಟಕ, ಕತೆ, ಕಾದಂಬರಿಗಳನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿದರು. ಬಾಂಡ್ಯಾ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಕಾರ‍್ಯನಿರ್ವಹಣಾಧಿಕಾರಿ ಅನುಪಮ ಎಸ್ ಶೆಟ್ಟಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಶಾಯಿಜು ನಾಯರ್, ಉಪಪ್ರಾಂಶುಪಾಲೆ ಸುನಂದಾ ಪಾಟೀಲ್ ಹಾಗೂ ಶಾಲೆಯ ಶೈಕ್ಷಣಿಕ ಸಂಘಟಕರಾದ ಎಮ್.ಎನ್.ವಿ.ಪಿ ನಾಯ್ಡು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಧ್ಯಾ ಸ್ಮಿತಾರವರು ಲಿಟರರಿ ಕ್ಲಬ್ ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಕೋ ಕ್ಲಬ್‌ನ ಸಹಯೋಗದೊಂದಿಗೆ ವಿವಿಧ ಸಂಘಗಳನ್ನು ಖಂಬದಕೋಣೆ ವಲಯ ಶಿಕ್ಷಣ ಸಂಯೋಜಕ ವೆಂಕಪ್ಪ ಉದ್ಘಾಟಿಸಿದರು. ಶಾಲೆಯೆಂದರೆ ಚಟುವಟಿಕೆಗಳ ಒಂದು ಮಹಾನದಿ ಇದ್ದಂತೆ. ಇಲ್ಲಿ ಕೊಡುವ ಪ್ರತಿಯೊಂದು ಆಧ್ಯತೆಗಳು, ವಿಷಯಗಳು ಹನಿ ಹನಿಯಾಗಿ ಜೊತೆಗೂಡಿ ಜ್ಞಾನ ಸಾಗರವನ್ನು ಸೇರುತ್ತದೆ. ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳನ್ನು ವಿವಿಧ ಸಂಘಗಳು ಮುಖ್ಯವಾಗಿರುತ್ತದೆ ಎಂದರು. ಸಾಂಸ್ಕ್ರತಿಕ, ಸಾಹಿತ್ಯಿಕ, ಕ್ರೀಡಾ, ಭಾಷಾ , ಕಲೆ ಮತ್ತು ಲಲಿತ ಕಲೆಗಳ ಸಂಘಗಳನ್ನು ಅನಾವರಣಗೊಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಶಿಕ್ಷಕಿ ಮಮತಾ ಪೂಜಾರಿ ವಹಿಸಿಕೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ ಸಂಘದ ಸಲಹಾಗಾರರಾಗಿ, ಸಂಯೋಜಕರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಸಂಸ್ಥಾಪಕರಾದ ಡಾ.ಎನ್.ಕೆ.ಬಿಲ್ಲವ ರವರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಾರಂಭಗೊಂಡ ಉದ್ಘಾಟಿತ ಸಂಘಗಳ ಪ್ರತಿನಿಧಿಯಾಗಿ ಒಬ್ಬೊಬ್ಬ ವಿದ್ಯಾರ್ಥಿಯನ್ನು ಆಯ್ಕೆಮಾಡಲಾಯಿತು. ಶಿಕ್ಷಕಿ ವಂದನ ರವರು ನಿರ್ವಹಿಸಿದರು. ಶಿಕ್ಷಕಿ ಸಂಗೀತಾ ಬಿಲ್ಲವ ಸ್ವಾಗತಿಸಿ ಶಿಕ್ಷಕ ಶಂಶುದ್ಧೀನ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜನರ ಸೇವೆಗೆಂದೇ ಇರುವುದು. ಜನರ ನೀಡಿದ ತೆರಿಗೆ ಹಣದಿಂದಲೇ ನಮ್ಮ ಈ ವ್ಯವಸ್ಥೆಗೆ ಸಂಬಳ ಬರುತ್ತಿದೆ ಎನ್ನುವುದನ್ನು ನಾವು ಮರೆಯಬಾರದು, ಇಲ್ಲಿ ಪ್ರಜೆಗಳೆ ಪ್ರಭುಗಳು. ಕಾಲಮಿತಿಯ ಒಳಗೆ ತಕ್ಷಣ ಜನರ ಸಮಸ್ಯೆಗಳಿಗೆ ನಾವು ಅಧಿಕಾರಿಗಳು ಸ್ಪಂದಿಸಬೇಕಾದ ಅಗತ್ಯತೆ ಇದೆ. ನಮ್ಮೀ ಜಿಲ್ಲೆಯಲ್ಲಿ ಭೃಷ್ಟಾಚಾರ ರಹಿತ ಆಡಳಿತವನ್ನು ನಡೆಸಿ, ರಾಜ್ಯದಲ್ಲಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಸಾಲಿಗ್ರಾಮ ಗಿರಿಜಾ ಕಲ್ಯಾಣಮಂಟಪದಲ್ಲಿ ನಡೆದ ಕೋಟ ಹೋಬಳಿ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕಳೆದ ೩ವರ್ಷಗಳಲ್ಲಿ ಅನೇಕ ಜನಹಿತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.ಉಡುಪಿ ಜಿಲ್ಲೆಯಲ್ಲಿ ೬೪ಸಾವಿರ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗಿದೆ. ಉಚಿತ ಅಕ್ಕಿ, ಹೈನುಗಾರರಿಗೆ ಸಬ್ಸಿಡಿ, ಕ್ಷೀರಭಾಗ್ಯ, ಶೂ ಭಾಗ್ಯ, ಮನಸ್ವಿನಿ ಯೋಜನೆ, ಇತ್ತೀಚೆಗೆ ಬಂದ ಬಾಪೂಜಿ ಸೇವಾ ಯೋಜನೆಯಂತಹ ಅನೇಕ ಜನಪರ ಕಾರ್ಯಕ್ರಮಗಳು ಜನರನ್ನು ತಲುಪಿವೆ ಎಂದರು. ೯೪ಸಿ ಯಡಿಯಲ್ಲಿ ಇನ್ನೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವದ ಅಂಗವಾಗಿ ಶ್ರೀ ದೇವರಿಗೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ಲಕ್ಷ ದೂರ್ವಾರ್ಚನೆ, ಸಿಂದೂರಾರ್ಚನೆ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುರತ್ಕಲ್‌ನ ಜೆ. ಡಿ. ವೀರಪ್ಪ ಅವರಿಂದ ದೇವಳಕ್ಕೆ ಪುಸ್ಷಲಂಕಾರ ಸೇವೆ ನಡೆಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ದೇಶದ ಸಂಸ್ಕೃತಿ ಹಾಗೂ ಪರಂಪರೆಗೆ ವಿಶ್ವದಲ್ಲಿ ವಿಶೇಷ ಸ್ಥಾನವಿದೆ. ವಿದ್ಯಾರ್ಥಿಗಳು ದೇಶದ ಈ ಎಲ್ಲಾ ಹಿರಿಮೆಗಳನ್ನು ಅರಿತು ಬಾಳಿದರೆ ಭಾರತವು ಇನ್ನಷ್ಟು ಸುಂದರವಾಗಲಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ನಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯು ೭೦ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ’ರಾಷ್ಟ್ರೀಯತೆ ಮತ್ತು ಯುವಜನಾಂಗ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ, ಕಾಲೇಜಿನ ವಿಶ್ವಸ್ಥರಾದ ಶಾಂತಾರಾಮ ಪ್ರಭು, ಪ್ರಜ್ನೇಶ್ ಪ್ರಭು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಅರುಣ ಎ.ಎಸ್ ಹಾಗೂ ರಾಮಚಂದ್ರ ಆಚಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿ ಶ್ರೀಲತಾ ಸ್ವಾಗತಿಸಿದರು. ವಿದ್ಯಾರ್ಥಿ ಸಚಿನ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಕುಂದಾಪುರ ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಗಂಗೊಳ್ಳಿ ಇವರ ಪ್ರಾಯೋಜಕತ್ವದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ಜರಗಿದ ಕುಂದಾಪುರ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲಾ ತಂಡ ಪ್ರಶಸ್ತಿ ಗಳಿಸಿದೆ. ಬಾಲಕಿಯರ ವಿಭಾಗದಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲಾ ತಂಡವು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜು ತಂಡವನ್ನು ಸೋಲಿಸಿದರೆ, ಬಾಲಕರ ವಿಭಾಗದಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲಾ ತಂಡವು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ತಂಡವನ್ನು ಸೋಲಿಸಿ ಬಹುಮಾನ ಪಡೆದುಕೊಂಡಿದೆ. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಬೈಂದೂರು ಘಟಕದ ಆಶ್ರಯದಲ್ಲಿ ಬೈಂದೂರಿನ ರಾಜರಾಜೇಶ್ವರಿ ಸಭಾಭವನದಲ್ಲಿ ಜರುಗಿದ ವಿದಾರ್ಥಿ ಸಮಾವೇಶ ಹಾಗೂ ವಿದ್ಯಾರ್ಥಿ ಸಾಂಸ್ಕೃತಿಕ ವೈಭವ -2016ರ ಕುಂದಾಪುರ ತಾಲೂಕಿನ ಕಾಲೇಜುಗಳ ಸಾಂಸ್ಕೃತಿಕ ಪ್ರತಿಭಾ ಸ್ವರ್ಧೆಯಲ್ಲಿ ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ವಿಧ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕ್ರಮವಾಗಿ ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೂ ಪಡೆದುಕೊಂಡಿದ್ದಾರೆ. ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿ ಅತ್ಯುತ್ತಮ ನಿರೂಪಣೆಗಾಗಿ, ರಿಚರ್ಡ್ ಅಲ್ಮೆಡಾ ಕಾಲೇಜಿನ ವಿದ್ಯಾರ್ಥಿನಿ ಅತ್ಯುತ್ತಮ ಯೋಗ ಪ್ರತಿಭೆಗಾಗಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಿಜೇತರಿಗೆ ಫಲಕ ಹಾಗೂ ನಗದು ಬಹುಮಾನವನ್ನು ಹಸ್ತಾಂತರಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರುಗಳಾದ ಗ್ರೀಷ್ಮಾ ಬೀಡೆ, ಜಗದೀಶ ಹಕ್ಕಾಡಿ, ವಾಸದೇವ ಪೈ, ಕೆಪಿಸಿಸಿ ಸದಸ್ಯ ರಘುರಾಮ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಶ್ರೀ ರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ.ನ ಉಪಾಧ್ಯಕ್ಷರಾಗಿ ಉದ್ಯಮಿ ಸತೀಶ್ ಎನ್. ಶೇರೆಗಾರ್ ಆಯ್ಕೆಯಾಗಿದ್ದಾರೆ. ಶ್ರೀ ರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ.ನ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಸುನಿಲ್ ಕುಮಾರ್ ಅವರು ಮುಂದಿನ ಅವಧಿಗೆ ಉಪಾಧ್ಯಕ್ಷರನ್ನಾಗಿ ಸತೀಶ್ ಎನ್. ಶೇರೆಗಾರ್ ಅವರು ಅವಿರೋಧ ಆಯ್ಕೆಯಾಗಿರುವುದನ್ನು ಘೋಷಿಸಿದರು. ಸತೀಶ್ ಎನ್. ಶೇರೆಗಾರ್ ಅವರು ರೋಟರಿ ವಲಯ ೧ರ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಆಗಿ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಪೂರ್ವಾಧ್ಯಕ್ಷರಾಗಿ ಹಾಗೂ ಕುಂದಾಪುರ ತಾಲೂಕು ಐಸ್ ಪ್ಲ್ಯಾಂಟ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಶ್ರೀ ರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿ.ಯ ಅಧ್ಯಕ್ಷ ಕೆ. ನಾಗರಾಜ್, ಕಾರ್ಯನಿರ್ವಹಣಾಧಿಕಾರಿ ನಾಗರಾಜ ನಾಯ್ಕ್, ನಿರ್ದೇಶಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿವರ್ತನ ಪುನರ್ ವಸತಿ ಕೇಂದ್ರ , ಮನಸ್ಮಿತಾ ಫೌಂಡೇಶನ್ ,ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ 11ನೇ ಉಚಿತ ಮಾನಸಿಕ ಆರೋಗ್ಯ ತಪಾಸಣಿ ಮತ್ತು ಔಷಧ ವಿತರಣೆ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಸಾಸ್ತಾನದ ಭಾರ್ಗವಿ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ನಂದಿನಿ ರಾಜೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಈ ಪರಿಸರದ ಜನರು ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಹಾರೈಸಿದರು. ಪರಿವರ್ತನ ಕೇಂದ್ರದ ವೈದ್ಯಕೀಯ ನಿದೇರ್ಶಕ ಡಾ. ಪ್ರಕಾಶ ಸಿ. ತೋಳರ್ ರವರು ಮಾತನಾಡಿ, ಈ ಶಿಬಿರವನ್ನು ಪ್ರತಿ ತಿಂಗಳು ಆಯೋಜಿಸಲಾಗುತ್ತಿದೆ. ಬಡ ರೋಗಿಗಳು ಔಷಧ ಮುಂದುವರಿಸಲು ಮತ್ತು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಮದರು. ಪರಿವರ್ತನ ಕೇಂದ್ರದ ನಿರ್ದೇಶಕ ಡಾ. ಸತೀಶ ಪೂಜಾರಿ ಅವರು ಪ್ರಾಸ್ತಾವಿಕವಾಕವಾಗಿ ಮಾತನಾಡಿದರು. ಮನಸ್ಮಿತ ಫೌಂಡೇಶನ್‌ನ ನಿರ್ದೇಶಕರಾದ ಸವಿತಾ. ಪಿ ತೋಳಾರ್, ನೇಹಾ ಎಸ್ ಪೂಜಾರಿ ಉಪಸ್ಥಿತರಿದ್ದರು. ಆಪ್ತ ಸಮಾಲೋಚಕರಾದ ವಿಧಾಯಕ ಸ್ವಾಗತಿಸಿದರು. ಅನುಷಾ ಶೆಟ್ಟ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಾತಿ, ಧರ್ಮ, ಲಿಂಗ ಭೇಧಗಳಿಲ್ಲದೇ ಎಲ್ಲರೂ ಸಮಾನರು ಎಂಬ ನೆಲೆಯಲ್ಲಿ ಸಂವಿಧಾನದ ಆಶಯದಂತೆ ನಡೆಯುತ್ತಿರುವ ಸಂಘಟನೆಗಳಲ್ಲಿ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಅಗ್ರಸ್ಥಾನದಲ್ಲಿದೆ ಎಂದು ಮೀನುಗಾರಿಕಾ, ಯುವಜನ ಸೇವೆ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಇಲ್ಲಿನ ರಾಜರಾಜೇಶ್ವರಿ ಸಭಾಭವನದಲ್ಲಿ ಬೈಂದೂರು ಎನ್‌ಎಸ್‌ಯುಐ ಘಟಕದ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿ ಸಮಾವೇಶ ಹಾಗೂ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಮಾತನಾಡಿ ಜಾತಿ, ಧರ್ಮ, ಭಾಷೆ ಎಂಬ ಹೆಸರಿನಲ್ಲಿ ಕೆಲವು ಸಂಘಟನೆಗಳು ದೇಶ ವಿಭಜಿಸುತ್ತಿರುವುದಲ್ಲದೇ ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಆದರೆ ಎನ್‌ಎಸ್‌ಯುಐ ಐಕ್ಯತೆಯಿಂದ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರನ್ನಾಗಿಸುತ್ತಿದೆ ಎಂದರು. ರಾಜ್ಯ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಚೇತನ್ ಕೆ. ಅಧ್ಯಕ್ಷತೆವಹಿಸಿದ್ದರು. ಶಾಸಕ ಕೆ. ಗೋಪಾಲ ಪೂಜಾರಿ ಸಂಘಟನೆಯ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಬೈಂದೂರು ಬ್ಲಾಕ್ ಅಧ್ಯಕ್ಷ ಎಸ್. ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಸಂಪೀಗೇಡಿ ಸಂಜೀವ ಶೆಟ್ಟಿ, ಜಿಪಂ ಸದಸ್ಯೆ ಗೌರಿ ದೇವಾಡಿಗ,…

Read More