Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇಲಾಖೆ ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿದೆ. ಈ ನೆಲೆಯಲ್ಲಿ ಇದು ಕೇವಲ ಭಾಷಣಕ್ಕೆ ಸೀಮಿತವಾದ ವೇದಿಕೆಯಾಗದೇ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುವಲ್ಲಿ ಪರಿಪೂರ್ಣತೆ ಕಾಣಬೇಕು ಎಂದು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹೇಳಿದರು. ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಸಿಗದೇ ಅವರ ಪ್ರತಿಭೆ ಕಮರಿ ಹೋಗುತ್ತಿತ್ತು, ಆದರೆ ಈಗ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಅವಕಾಶಗಳು ದೊರಕುತ್ತಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಪಂ ಸದಸ್ಯ ಶಂಕರ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಶಾಸಕ ಕೆ. ಗೋಪಾಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪರಿಶುದ್ಧವಾದ ನಮ್ಮ ಭರತಭೂಮಿಯಲ್ಲಿ ವೇದಗಳ ಆಧಾರದ ಮೇಲೆ ಹಿಂದೂಧರ್ಮ ಕಟ್ಟಲ್ಪಟ್ಟಿದೆ. ಈ ಧರ್ಮದಲ್ಲಿ ಹಲವಾರು ದೇವರು-ದೈವ ಹಾಗೂ ಸನ್ನಿಧಿಯನ್ನು ಗುರುತಿಸುವುದರಿಂದ ಯಾವುದೇ ಬಿಗುವಾದ ಕಟ್ಟುಪಾಡುಗಳಿಲ್ಲ. ಅಲ್ಲದೇ ಧಾರ್ಮಿಕ ವಿಷಯದಲ್ಲಿ ಎಲ್ಲರಿಗೂ ವಿಶೇಷ ಸ್ವಾತಂತ್ರ್ಯ ಕೊಟ್ಟ ಧರ್ಮ ನಮ್ಮದು ಎಂದು ನಿವೃತ್ತ ಉಪನ್ಯಾಸಕ ಪಡುವರಿ ಶೇಷಪ್ಪಯ್ಯ ಹೇಳಿದರು. ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕಸಭೆಯಲ್ಲಿ ಉಪನ್ಯಾಸ ನೀಡಿದರು. ಧರ್ಮದಿಂದ ಮಾನವನಿಗೆ ಸಹಬಾಳ್ವೆ, ನೆಮ್ಮದಿ ಹಾಗೂ ಸಂತೋಷ ದೊರೆಯುತ್ತದೆ. ಇದರಲ್ಲಿ ಭಕ್ತರ ಪಾಲುದಾರಿಕೆಯೂ ಮುಖ್ಯವಾಗಿರುತ್ತದೆ. ಹಾಗೆಯೇ ಹಿಂದೆ ಸಾರ್ವಜನಿಕ ಗಣೇಶೋತ್ಸವಗಳು ಸ್ವಾತಂತ್ರ ಸಂಗ್ರಾಮ, ದೇಶಭಕ್ತಿಯ ನವಚೇತನ ಉದ್ದೀಪನಗೊಳಿಸುವ ಸಲುವಾಗಿ ಪ್ರಾರಂಭಿಸಲಾಯಿತು ಎಂಬ ಕುರಿತು ವಿವರಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಶ್ರೀ ಸೇನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೆ. ಸೀತಾರಾಮ ಅಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉತ್ಸವದ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೇಡಿಯೋ ಸಿಟಿ ಎಫ್.ಎಂ ಬೆಂಗಳೂರಿನ ‘ಲವಿಟ್’ ಸಂಸ್ಥೆಯ ಸಹಯೋಗದೊಂದಿಗೆ ನಡೆಸಿದ  ‘ರೇಡಿಯೋ ಸಿಟಿ ಸೂಪರ್ ಸಿಂಗಿಂಗ್ ಸೀಸನ್ – 8’ ಸ್ಪರ್ಧೆಯಲ್ಲಿ ತಾಲೂಕಿನ ಕಂಬದಕೋಣೆ ಗಣೇಶ ಕಾರಂತ ವಿಜೇತರಾಗಿದ್ದಾರೆ. ರಾಷ್ಟ್ರದ ಪ್ರಮುಖ 15 ನಗರಗಳಲ್ಲಿ ಸ್ಪರ್ಧೆ ನಡೆದಿದ್ದು, ಒಟ್ಟು 1.70 ಲಕ್ಷ ಯುವ ಗಾಯಕರು ಭಾಗವಹಿಸಿದ್ದರು. ಬೆಂಗಳೂರು ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ 24,500 ಮಂದಿ ಪಾಲ್ಗೊಂಡಿದ್ದರು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ 6 ಪ್ರತಿಭಾನ್ವಿತರಲ್ಲಿ ಗಣೇಶ್ ಕಾರಂತ ಅವರು ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಎಂಬ ಗೀತೆಯನ್ನು ಹಾಡಿ 1ಲಕ್ಷ ರು. ನಗದು ಪುರಸ್ಕಾರದೊಂದಿಗೆ ವಿಜೇತರಾದರು. ಅಲ್ಲದೇ ಖ್ಯಾತ ಚಲನಚಿತ್ರ ನಟ-ನಿರ್ದೇಶಕ ರಮೇಶ್ ಅರವಿಂದ ಅವರ 100ನೇ ಚಲನಚಿತ್ರ ‘ಪುಷ್ಪಕ ವಿಮಾನ’ದಲ್ಲಿ ಹಾಡುವ ಅವಕಾಶವನ್ನೂ ಪಡೆದುಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಗಣೇಶ್ ಕಾರಂತ್ ಬಿಎಸ್‌ಎನ್‌ಎಲ್ ಮಂಗಳೂರು ಜಿಲ್ಲಾ ಉಪಮಹಾಪ್ರಬಂಧಕ ಕೆ.ಶಿವರಾಮ ಕಾರಂತ ಹಾಗೂ ಯಶೋದ ಅವರ ಪುತ್ರರಾಗಿದ್ದು, ‘ಎಮ್‌ಪಸಿಸ್’ ಸಾಪ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕತಾರ್‌ನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಕೆ. ಆರ್. ಗಿರೀಶ್ ಕುಮಾರ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಗಿರೀಶ್ ಅವರ ತಾಯಿ, ಪತ್ನಿ ಇಂಧೂ ಗಿರೀಶ್, ಮಕ್ಕಳಾದ ಆದಿತ್ಯ ಕೃಷ್ಣ ಗಿರೀಶ್, ಆದರ್ಶ ಕೃಷ್ಣ ಗಿರೀಶ್ ಅವರೊಂದಿಗೆ ದೇವಳಕ್ಕೆ ಭೇಟಿ ನೀಡಿದ್ದ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭೇಟಿಯ ಸಂದರ್ಭದಲ್ಲಿ ದೇವಳದ ಆರ್.ಎನ್.ಎಸ್ ವಸತಿಗೃಹಕ್ಕೆ ಭಕ್ತಾದಿಗಳ ಅನುಕೂಲಕ್ಕಾಗಿ ವಾಟರ್ ಪ್ಯೂರಿಪೈಯರ್ ಹಾಗೂ ಸಿಸಿ ಕ್ಯಾಮರಾಗಳನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ವಸತಿಗೃಹದ ಸಿಬ್ಬಂಧಿ ನಾಗರಾಜ ಖಾರ್ವಿ, ದೇವಳದ ಸಿಬ್ಬಂಧಿ ಸೀತಾರಾಮ, ಶಬರೀಶ್ ಮೊದಲಾದವರು ಉಪಸ್ಥಿತರಿದ್ದರು. ಕತಾರ್‌ನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಕೆ. ಆರ್. ಗಿರೀಶ್ ಕುಮಾರ್ ವೃತ್ತಿಯಲ್ಲಿ ಇಂಜಿನಿಯರ್. ಕಳೆದ 24ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದು, 10 ವರ್ಷಗಳಿಂದ ಕತಾರ್‌ನ ಪ್ರಸಿದ್ಧ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಇದರೊಂದಿಗೆ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರೇ, ಕೋ ಕೋ ವಿದ್ಯಾರ್ಥಿನಿಯ ವಿಭಾಗದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿಸ್ಕಸ್ ತ್ರೋ ವಿಭಾಗದಲ್ಲಿ ತೃತೀಯ ಬಿ.ಎ. ವಿದ್ಯಾರ್ಥಿ ಜಯಂತ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮಣಿಕಂಠ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರಳಿನ ಅಭಾವದಿಂದ ಕರಾವಳಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ನಿರ್ಮಾಣ ಕಾರ್ಯಗಳಿಗೂ ಮರಳಿಲ್ಲದೆ ಮಂದಗತಿಯಲ್ಲಿ ಸಾಗುತ್ತಿದೆ. ಕಾನೂನು ತೊಡಕಿರುವುದರಿಂದ ಸ್ಪಷ್ಟವಾದ ಮರಳು ನೀತಿಯನ್ನು ರೂಪಿಸಲು ಸಾಧ್ಯವಾಗಿಲ್ಲ ಎಂದು ಯುವಜನ, ಕ್ರೀಡೆ, ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಇಲ್ಲಿನ ಆರ್.ಎನ್. ಶೆಟ್ಟಿ ಮಿನಿ ಹಾಲ್‌ನಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಸರಕಾರ ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ರೂಪಿಸಲು ಬದ್ಧವಾಗಿದ್ದು, ಶೀಘ್ರದಲ್ಲಿಯೇ ಕಾನೂನು ಸಚಿವರೊಡಗೂಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಕರ್ನಾಟಕದಲ್ಲಿ ದೇವರಾಜು ಅರಸು ಅವರ ಬಳಿಕ ಹಿಂದುಳಿದವರ ಪರ ಕಾರ್ಯಕ್ರಮಗಳನ್ನು ರೂಪಿಸಿದ ಏಕೈಕ ಮುಖ್ಯಮಂತ್ರಿಯಿದ್ದರೆ ಅದು ಸಿದ್ಧರಾಮಯ್ಯ ಮಾತ್ರ. ಕಳೆದ ಮೂರು ವರ್ಷಗಳಲ್ಲಿ ಅವರು ಜಾರಿಗೆ ತಂದ ಹತ್ತಾರು ಜನಪರ ಯೋಜನೆಗಳು ಬಡವರ ಬದುಕಿಗೆ ಆಶಾಕಿರಣವಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ ಪ್ರಥಮ ಭಾರಿಗೆ ಶಾಸಕರಾಗಿ ಮಂತ್ರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘ 2015-16ನೇ ಸಾಲಿನಲ್ಲಿ ಸಂಘದ ಇತಿಹಾಸದಲ್ಲಿ ಗಮನಾರ್ಹ ಸಾಧನೆ ಮಾಡಿರುವುದನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರಕುಮಾರ್ ಅವರು ಸಹಕಾರಿ ಅಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ ಯಡ್ತರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಹಕಾರಿ ಸಂಘವು 2015-16ನೇ ಸಾಲಿನಲ್ಲಿ ಎಲ್ಲಾ ವ್ಯವಹಾರದಲ್ಲಿರೂ ಗುರಿ ಮೀರಿದ ಸಾಧನೆಗೈದಿದ್ದು, ಗ್ರಾಮಾಭಿವೃದ್ಧಿಗೆ ಆದ್ಯತೆ ನೀಡಿ ಪ್ರಗತಿ ಸಾಧಿಸಿರುವುದಲ್ಲದೇ ೫೭.೭೭ಲಕ್ಷ ಲಾಭ ಗಳಿಸಿದೆ. ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ನಿರ್ದೇಶಕರಾದ ರಾಜು ಪೂಜಾರಿ, ರಘುರಾಮ ಶೆಟ್ಟಿ, ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿಯ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ನಿರ್ದೇಶಕ ಚಂದ್ರ ಬಳೆಗಾರ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಟ್ಟಿಯಂಗಡಿ : 1008ತೆಂಗಿನ ಕಾಯಿ ಮಹಾಗಣಪತಿ ಹವನ, 108 ಶ್ರೀ ಸತ್ಯಗಣಪತಿ ವ್ರತ ಸಂಪನ್ನ ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನೆರವೇರಿತು. ಸೆ.5ರಂದು ಶ್ರೀ ಮಹಾಗಣಪತಿ ಹೋಮ ಸಂಕಲ್ಪ, ೧೦೦೮ ತೆಂಗಿನ ಕಾಯಿ ಮಹಾಗಣಪತಿ ಹವನದ ಪೂರ್ಣಾಹುತಿ, ಮಹಾ ಪೂಜೆ ವಿದ್ಯುಕ್ತವಾಗಿ ಋತ್ವಿಜರ ವೇದ ಮಂತ್ರಘೋಷಗಳೊಂದಿಗೆ ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ರಾತ್ರಿ ರಂಗಪೂಜಾದಿ ಸೇವೆಗಳು ಜರುಗಿತು. ಸತ್ಯಗಣಪತಿ ವ್ರತ : ಸೆ. 6ರಂದು 108 ಶ್ರೀ ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರ ಅನುಕೂಲಕ್ಕಾಗಿ ಆಡಳಿತ ಮಂಡಳಿ ಉತ್ತಮ ವ್ಯವಸ್ಥೆಯನ್ನು ರೂಪಿಸಿತ್ತು. ನೂಕುನುಗ್ಗಲುಗಳಿಲ್ಲದೆ ಭಕ್ತರು ಸಾಂಗವಾಗಿ ಶ್ರೀ ದೇವರ ದರ್ಶನ ಪಡೆದರು. ಸಂಜೆ ನೃತ್ಯ ವಸಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಣೇಶ ಚತುರ್ಥಿಯ ಅಂಗವಾಗಿ ತಾಲೂಕಿನ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಆನೆಗುಡ್ಡೆ ಶ್ರಿ ವಿನಾಯಕ ದೇವಳದಲ್ಲಿ ಹಬ್ಬದ ಅಂಗವಾಗಿ ಗಣಯಾಗ, ವಿಶೇಷ ಪೂಜೆ ನಡೆಯಿತು. ಸಹಸ್ರಾರು ಭಕ್ತರು ವಿಶೇಷ ದಿನದಂದು ದೇವಶ ದರ್ಶನ ಪಡೆದು ಪುನೀತರಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ:  ಸಹಕಾರಿ ಸಂಘವು ಆರಂಭವಾಗಿ ಕೇವಲ ಮೂರು ವರ್ಷದಲ್ಲಿ 9ಕೋಟಿಗೂ ಅಧಿಕ ವಹಿವಾಟುಗಳನ್ನು ನಡೆಸಿ ಸದಸ್ಯರ, ನಿರ್ದೇಶಕರ ಸಹಕಾರದಿಂದ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಆದುದರಿಂದ ಪ್ರಸಕ್ತ ಸಾಲಿನಲ್ಲಿ ಉತ್ತಮ ಆದಾಯ ಗಳಿಸಿದ ಹಿನ್ನೆಲೆಯಲ್ಲಿ ಶೇ.15 ಡಿವಿಡೆಂಟ್‌ನ್ನು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷರಾದ ರಾಜೇಂದ್ರ ಹೆಗ್ಡೆ ಹೇಳಿದರು. ಇತ್ತಿಚಿಗೆ ಸಂಘದ ಕಛೇರಿಯಲ್ಲಿ ಜರುಗಿದ ಹಂಗಳೂರಿನ ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕಳೆದ ವರ್ಷದ ಆಯವ್ಯಯವನ್ನು ಮಂಡಿಸಿ 2016-17ನೇ ಸಾಲಿನ ಅಂದಾಜು ಆಯವ್ಯಯವನ್ನು ಸಭೆಯ ಗಮನಕ್ಕೆ ತರಲಾಯಿತು. ಆಡಳಿತ ಮಂಡಳಿಯ ಉಪಾಧ್ಯಕ್ಷ ವಿ. ದಿನೇಶ್ ದೇವಾಡಿಗ, ನಿರ್ದೇಶಕರಾದ ರತ್ನಾಕರ ಕೊಟೇಕಾರ್, ಸಂಜೀವ ದೇವಾಡಿಗ, ಕೃಷ್ಣ ದೇವಾಡಿಗ, ಪ್ರವೀಣಕುಮಾರ್ ಕೆ.ಬಿ., ಎ. ಜಯರಾಮ ಶೆಟ್ಟಿ, ಹರೀಶ್ ಬಿಲ್ಲವ, ಉದಯ ಮೆಂಡನ್, ಸಂತೋಷ ಕೋಣಿ, ಪ್ರಶಾಂತ ಕೊಲ್ಲೂರು, ಆಶಾ ಚಂದ್ರಶೇಖರ್, ವಿಜಯಲಕ್ಷ್ಮೀ ಗಣೇಶ್, ರವೀಂದ್ರ ಹೆಗ್ಡೆ, ಜಾರ್ಜ್ ಕರ್ವೆಲ್ಲೊ ಇನ್ನಿತರರು…

Read More