ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಣೇಶ ಚತುರ್ಥಿಯ ಅಂಗವಾಗಿ ತಾಲೂಕಿನ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು.
ಆನೆಗುಡ್ಡೆ ಶ್ರಿ ವಿನಾಯಕ ದೇವಳದಲ್ಲಿ ಹಬ್ಬದ ಅಂಗವಾಗಿ ಗಣಯಾಗ, ವಿಶೇಷ ಪೂಜೆ ನಡೆಯಿತು. ಸಹಸ್ರಾರು ಭಕ್ತರು ವಿಶೇಷ ದಿನದಂದು ದೇವಶ ದರ್ಶನ ಪಡೆದು ಪುನೀತರಾದರು.