ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ೪ಜಿ ನೆಟ್ವರ್ಕ್ ಸೇವೆ ಕಲ್ಪಿಸಿದ ಖ್ಯಾತಿ ಹೊಂದಿರುವ ಐಡಿಯಾ ನೆಟ್ವರ್ಕ್, ತಮ್ಮ ಸೇವೆಗಾಗಿ ಕುಂದಾಪುರದ ಮುಖ್ಯರಸ್ತೆಯ ಪಾರಿಜಾತ ಸರ್ಕಲ್ ಬಳಿ ಸಿಎಸ್ಐ ಕಾಂಪ್ಲೆಕ್ಸ್ನಲ್ಲಿ ಶುಬಾರಂಭಗೊಂಡಿದೆ. ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್ ಐಡಿಯಾ ಪಾಯಿಂಟ್ ಉದ್ಘಾಟಿಸಿ ಮಾತನಾಡಿ ಸಂಸ್ಥೆಯ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಸಮಾಜ ಸೇವಕ ಅಬು ಮಹಮ್ಮದ್ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಕೀಲ ರಾಮದಾಸ್, ಐಡಿಯಾ ಸಂಸ್ಥೆಯ ಎ.ಎಸ್.ಎಮ್ ವಿನಯ್ ಶ್ರಿರಂಗ್, ಸೇಲ್ಸ್ ಮೆನೆಜರ್ ರೊಯ್ಸನ್ ಡಿಸೋಜಾ, ಐಡಿಯಾ ಪಾಯಿಂಟ್ ಮಾಲಕ ಮುಸ್ತಾಫ್ ಹಾಗೂ ಮೊಬೈಲ್ ಎಕ್ಸ್, ಮೊಬೈಲ್ ಎಕ್ಸ್ ಪ್ಯಾಲೇಸ್ ಮತ್ತು ಪೂಟ್ ಎಕ್ಸ್ನ ಎಲ್ಲಾ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು. ಐಡಿಯಾ ಸಂಸ್ಥೆಯ ಟ್ರೈನರ್ ಗಂಗಾಧರ್ ಕಾಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಎಸ್. ಮದನ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಶಾಸಕ ಕೆ. ಗೋಪಾಲ ಪೂಜಾರಿ ಶಿಫಾರಸಿನಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ಆದೇಶ ಪತ್ರವನ್ನು ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ಜಿಎಸ್ಬಿ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದ ವೇ.ಮೂ. ವೇದವ್ಯಾಸ ಆಚಾರ್ಯ ಹೇಳಿದರು. ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಡೆದ ಕೊಲ್ಲೂರು ವಲಯ ಜಿಎಸ್ಬಿ ಸೇವಾ ಸಮಿತಿಯ ಮೂರನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು. ಮಕ್ಕಳಿಗೆ ದೇವರು, ಧರ್ಮ, ಗುರು-ಹಿರಿಯರ ಬಗ್ಗೆ ಮನವರಿಕೆ ಮಾಡಬೇಕೆಂದ ಅವರು ನಮ್ಮ ಮಕ್ಕಳು ಶಾಲೆಯ ಶಿಕ್ಷಣದ ಜತೆಗೆ ಆಧ್ಯಾತ್ಮಿಕ, ನೈತಿಕ ಹಾಗೂ ಭೌತಿಕ ಶಿಕ್ಷಣವನ್ನು ಪಡೆಯಬೇಕು. ಸಂಜೆ ಧಾರಾವಾಹಿಗಳನ್ನು ನೋಡುವುದರ ಬದಲು ನಮ್ಮ ಹಿರಿಯರು ನಡೆಸಿಕೊಂಡು ಬಂದಂತೆ ಪ್ರತೀ ಮನೆಗಳಲ್ಲಿಯೂ ಸಂಧ್ಯಾಕಾಲದ ಭಜನೆ ಮಾಡಬೇಕು. ಮಕ್ಕಳಿಗೆ ಟೀವಿ, ಮೊಬೈಲ್ ಸಹವಾಸದಿಂದ ದೂರವಿಟ್ಟು ವ್ಯವಹಾರಿಕಾ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಕುರಿತಾದ ಅರಿವು ಮೂಡಿಸಬೇಕು ಎಂದರು. ಕೊಲ್ಲೂರು ಜಿಎಸ್ಬಿ ವಲಯಾಧ್ಯಕ್ಷ ಜಿ. ವೆಂಕಟೇಶ್ ನಾಯಕ್ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಧಕರನ್ನು ಗೌರವಿಸಲಾಯಿತು. ದೇವಳದ ಆಡಳಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ.ಮಾ.ಹಿ.ಪ್ರಾ. ಶಾಲೆ ಕುಂದಾಪುರ(ಗರ್ಲ್ಸ್ ಶಾಲೆ)ಯಲ್ಲಿ ೧೬ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಡಿ. ಲಿಂಗಪ್ಪ ದಂಪತಿಗಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ತಿ ಸಂಘದ ವತಿಯಿಂದ ಸನ್ಮಾನಿಸಿ, ಬೀಳ್ಕೂಡುಗೆ ಸಲ್ಲಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಎಸ್. ಶೆಟ್ಟಿ ನಿವೃತ್ತರನ್ನು ಸನ್ಮಾನಿಸಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಕುಸುಮ ಚರಣ ಶಾನುಭಾಗ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ್, ಸದಸ್ಯರಾದ ರವಿರಾಜ ಖಾರ್ವಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ರವಿ ಟಿ. ನಾಯ್ಕ್, ಹಾಗೂ ಕಾರ್ಯಕ್ರಮ ಸಂಘಟಕರಾಗಿ ಹಳೆ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ದಿನಕರ ಪಟೇಲ್ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಸುಮನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಮಿತಿ ಸದಸ್ಯ ಕಿಶೋರ್ ಪ್ರಾಸ್ತಾವಿಕ ಮಾತುಗಳನ್ನಾಡಿದ್ದು, ಶಿಕ್ಷಕಿ ವಿನಯ ಸನ್ಮಾನಿತರ ಪರಿಚಯ ಮಾಡಿದರು. ದೈ.ಶಿ. ಶಿಕ್ಷಕ ಸುನಿಲ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಠೇವಣಿ ನೀಡಿದವರಿಗೆ ಆತಂಕ, ಠೇವಣಿ ಇಟ್ಟ ಏಜಂಟರಿಗೆ ಸಂಕಟ. ಮೂರಂಕಿಯಿಂದ ಹಿಡಿದು ಆರಂಕಿಯನ್ನು ಮೀರಿದ ಠೇವಣಿಗಳು ಕುಂದಾಪುರ ಶಾಖೆಯೊಂದರಲ್ಲಿಯೇ ಸಂಗ್ರಹವಾಗಿತ್ತು. ಸಾವಿರಾರು ಮಂದಿ ವ್ಯವಹಾರ ನಡೆಸುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣತೊಡಗಿಸಿ ಅದರಿಂದ ಬರುವ ಲಾಭವನ್ನು ಹೆಚ್ಚಿನ ಬಡ್ಡಿಯೊಂದಿಗೆ ಠೇವಣಿದಾರರಿಗೆ ನೀಡುತ್ತೇವೆಂಬ ಕಂಪೆನಿಯ ಆಮಿಷಕ್ಕೆ ಕಟ್ಟುಬಿದ್ದ ಜನ ಇಂದು ಮುಚ್ಚಿದ ಕಂಪೆನಿಯ ಬಾಗಿಲಿನ ಎದುರು ನಿಂತು ಹಿಡಿಶಾಪ ಹಾಕುತ್ತಿದ್ದಾರೆ. ಇಂದು ಅಗ್ರಿಗೋಲ್ಡ್ ಎಂಬ ಸಂಸ್ಥೆಯಲ್ಲಿ ಠೇವಣಿ ಇಟ್ಟವರು ಹಾಗೂ ಏಜೆಂಟರುಗಳ ಅತಂತ್ರರಾಗಿ ಹೋಗಿದ್ದಾರೆ. ಎಂಟು ವರ್ಷಗಳ ಹಿಂದೆ ಹೆಚ್ಚಿನ ಕಮೀಷನ್ ಆಧಾರದ ಮೇಲೆ ಸ್ಥಳೀಯರೆ ಆದ ಹಲವಾರು ಏಜಂಟರುಗಳನ್ನು ನೇಮಿಸಿಕೊಂಡು ಕಛೇರಿಯ ವ್ಯವಸ್ಥಾಪಕ, ಸಿಂಬಂದಿ ಗಳನ್ನು ಹೊಂದಿದ್ದ ಅಗ್ರ್ರಿಗೋಲ್ಡ್ ಆ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿಗಳನ್ನು ದಿನಂಪ್ರತಿಯೆಂಬಂತೆ ಸಂಗ್ರಹಿಸುತ್ತಿತ್ತು. ಗೃಹ ಬಳಕೆಯ ಉತ್ಪನ್ನಗಳನ್ನು ಸಹಾ ತನ್ನ ಹೆಸರಿನ ಲೇಬಲ್ ನಲ್ಲಿ ಗ್ರಾಹಕರಿಗೆ ವಿತರಿಸುವ ಮೂಲಕವೂ ಸಾವಿರಾರು ರೂಪಾಯಿಗಳ ವ್ಯವಹಾರವನ್ನು ನಡೆಸುತಿತ್ತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಅತ್ಯುನ್ನತ ಶಿಕ್ಷಣ ಇಂದಿನ ಜೀವನದ ಪ್ರಮುಖ ಘಟ್ಟವಾಗಿದೆ. ಉತ್ತಮ ಶಿಕ್ಷಣವು ಉತ್ತಮ ಉದ್ಯೋಗವನ್ನು ನೀಡುವುದಲ್ಲದೆ ಸಮಾಜದಲ್ಲಿ ಗೌರವವನ್ನು ತಂದು ಕೊಡುತ್ತದೆ. ಗೌಡ ಸಾರಸ್ವತ ಸಮಾಜಕ್ಕೆ ಸರಕಾರದಿಂದ ಯಾವುದೇ ಮೀಸಲಾತಿ, ಸರಕಾರಿ ಸೌಲಭ್ಯಗಳು ದೊರೆಯದಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಉತ್ತಮ ಅಂಕಗಳಿಸುವತ್ತ ಗಮನಹರಿಸಬೇಕು. ಇಂದು ನೀಡಿದ ಸಹಾಯವನ್ನು ಎಂದಿಗೂ ಮರೆಯದೆ, ಇದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಶ್ರೀ ಅಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾನಿಧಿ ಸಂಸ್ಥೆಯಿಂದ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಎಸ್ಬಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ದಾನಿಗಳಾದ ವೈ.ರತ್ನಾ ಉಮಾಕಾಂತ ಶೆಣೈ ಅವರು, ಸಮಾಜದ ಯಾವುದೇ ವಿದ್ಯಾರ್ಥಿ ಹಣದ ಅಡಚಣೆಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಮಾಜಮುಖಿ ಚಟುವಟಿಕೆಗಳು…
ಜಿ. ಸುರೇಶ್ ಪೇತ್ರಿ | ಕುಂದಾಪ್ರ ಡಾಟ್ ಕಾಂ ಲೇಖನ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಮುಂತಾದ ಲೋಹಗಳಿಂದ ಮೂರ್ತಿ, ದಾರಂದ, ದ್ವಾರ ಬಾಗಿಲು, ಪಲ್ಲಕ್ಕಿ ಮುಂತಾದವುಗಳನ್ನು ತಯಾರಿಸುವ ಮೂಲಕ ಶಿಲ್ಪಕಲಾಲೋಕಕ್ಕೆ ವಿಶೇಷ ಮೆರಗು ನೀಡಿದ ಕಲಾಶಿಲ್ಪಿ ಕೋಟ ಗಣೇಶ ಆಚಾರ್ಯ. ಒಂದು ಕಲೆ ಸಿದ್ಧಿಯಾಗಬೇಕಾದರೆ ಒಂದೋ ವಂಶಪಾರಂಪರ್ಯವಾಗಿ ಬಂದಿರಬೇಕು ಅಥವಾ ತನ್ನ ಸ್ವ ಪ್ರಯತ್ನದಿಂದಾಗಿ ಕಲೆಯನ್ನು ಸಿದ್ಧಿಸಿ ಮುಂದುವರಿಸಿಕೊಂಡು ಬಂದಾಗ ಆ ಕಲೆಯ ಸತ್ವವನ್ನು ಹೀರಿಕೊಳ್ಳಲು ಸಾಧ್ಯ. ಗಣೇಶ ಆಚಾರ್ಯ ರಿಗೆ ಈ ಕಲೆ ವಂಶಪಾರಂಪರ್ಯವಾಗಿ ಬಂದಿದೆ. ಉಡುಪಿ ತಾಲೂಕಿನ ಕೋಟತಟ್ಟುವಿನ ಶಂಕರ ಆಚಾರ್ಯ ಹಾಗೂ ಗಿರಿಜಾ ಆಚಾರ್ಯರ ಮೂರು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ ಗಣೇಶ ಆಚಾರ್ಯರು ತಂದೆಯ ರಕ್ತಗತವಾದ ಕಲೆಯನ್ನು ಮುಂದುವರಿಸಿಕೊಂಡು ಬಂದ ಕಲಾಕಾರ. ಕಲಾ ಕ್ಷೇತ್ರದಲ್ಲಿ ಸದ್ದಿಲ್ಲದೇ ಸುದ್ದಿ ಆಗುವವರು ಒಂದು ವರ್ಗವಾದರೆ ಇನ್ನೋಂದು ಸದ್ದು ಮಾಡಿ ಸುದ್ದಿ ಆಗುವವರು ಇನ್ನೊಂದು ವರ್ಗ. ಅದರಲ್ಲಿ ಗಣೇಶ ಆಚಾರ್ಯರು ಸದ್ದಿಲ್ಲದ ಸುದ್ದಿ ಆದವರ ಸಾಲಿನಲ್ಲಿ ಸೇರುತ್ತಾರೆ. ಅರ್ಥಾತ್ ಪ್ರಚಾರಕ್ಕೆ ಕಟ್ಟುಬೀಳದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಬಸ್ಸು ನಿಲ್ದಾಣ ಸಮೀಪ ವ್ಯಕ್ತಿಯೋರ್ವ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಯಿಂದ ಬಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ. ಮೃತರನ್ನು ಗೋಪಾಲ ಮೊಗವೀರ ಹಳವಳ್ಳಿ ಎಂದು ಗುರುತಿಸಲಾಗಿದೆ. ಕೋಟೇಶ್ವರದಲ್ಲಿ ತನ್ನ ಕ್ಯಾಂಟಿನ್ ಕೆಲಸ ಮುಗಿಸಿಕೊಂಡು ಕೋಟದಲ್ಲಿರುವ ಹೆಂಡತಿ ಮನೆಗೆ ತೆರಳುತ್ತಿದ್ದ ಗೋಪಾಲ, ರಸ್ತೆ ದಾಟುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಡಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಹಿಂದೂ ಸಂಘಟನೆಯ ಮುಖಂಡ ಅರವಿಂದ ಕೋಟೇಶ್ವರ ಕಾರನ್ನು ಹಿಂಬಾಲಿಸಿ ಕೋಟೇಶ್ವರ ಪೆಟ್ರೋಲ್ ಬಂಕ್ ಬಳಿ ಅಡ್ಡಗಟ್ಟಿದ್ದಾರೆ. ಮೃತ ಗೋಪಾಲ ಮೊಗವೀರ ಪತ್ನಿ, ತಂದೆ ತಾಯಿ ಅಗಲಿದ್ದಾರೆ.
ಕುಂದಾಪುರದಲ್ಲಿ ತಿರಂಗ ಯಾತ್ರೆ ಬೈಕ್ ರ್ಯಾಲಿ ಸಮಾರೋಪ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಅಖಂಡತೆಗೆ ಧಕ್ಕೆ ತರುವ ಯಾವ ಕೆಲಸವನ್ನು ಸಹಿಸಲಾಗದು. ರಾಷ್ಟ್ರ ಉಳಿದರೆ ಮಾತ್ರ ನಾವು, ನೀವು ಸಂಸ್ಕೃತಿ ಉಳಿವು ಸಾಧ್ಯವಿದೆ. ದೇಶದಲ್ಲಿದ್ದುಕೊಂಡೇ ದೇಶವಿರೋಧಿ ಘೋಷಣೆಗಳನ್ನು ಕೂಗುವವರನ್ನು ಹಾಗೂ ರಾಷ್ಟ್ರವಿರೋಧ ಕೃತ್ಯದಲ್ಲಿ ಭಾಗಿಯಾಗುವವರಿಗೆ ಬೆಂಬಲ ನೀಡುವುದನ್ನು ಖಂಡಿಸಬೇಕಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಕುಂದಾಪುರ ಬಿಜೆಪಿ ಆಶ್ರಯದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ನಡೆದ ತಿರಂಗ ಯಾತ್ರೆ ಬೈಕ್ ರ್ಯಾಲಿ ಸಮಾರೋಪದಲ್ಲಿ ಅವರು ಮಾತನಾಡಿ, ದೇಶ ಕಾಯುವ ವೀರ ಯೋಧರ ಹಾಗೂ ದೇಶದ ವಿರುದ್ಧವೇ ಘೋಷಣೆ ಕೂಗುವುದನ್ನು ಎಂದಿಗೂ ಸಹಿಸಲಾಗದು. ಬೆಂಗಳೂರಿನಲ್ಲಿ ದೇಶದ ವಿರುದ್ಧ ಘೋಷಣೆ ಕೂಗಿದವರ ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು. ದೇಶದಲ್ಲಿ ಭಯೋತ್ಪಾದನೆ, ನಕ್ಸಲ್ ವಾದ, ಮಾಪಿಯಾ ಅಫಿಮು, ಸಂಸ್ಕೃತಿ ಹೆಚ್ಚುತ್ತಿದ್ದು, ಅದರ ವಿರುದ್ಧ ಯುವ ಜನಾಂಗ ಜಾಗೃತಿ ಮೂಡಿಸಬೇಕು. ಅಖಂಡ ಭಾರತ ಹಿರಿಯರ ಕನಸಾಗಿದ್ದು, ಅದನ್ನು ಸಾಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಕಲ್ಪನೆಯ ಜನಪ್ರಿಯ ಯೋಜನೆಯಾದ ಮದ್ಯವರ್ಜನ ಶಿಬಿರದಿಂದ ಸಮಾಜದ ಹಲವು ಮದ್ಯ ವ್ಯಸನಿಗಳನ್ನು ಪಾನಮುಕ್ತಗೊಳಿಸಿ ಅವರಿಗೆ ನವಜೀವನ ನಿರ್ಮಾಣಮಾಡಿದೆ ಎಂದು 929ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ನಾಗೂರು ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ-ಕುಂದಾಪುರ ಹಾಗೂ ವಿವಿಧ ಸಹಕಾರಿ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ 929ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರದ ಯಶಸ್ಸಿಗೆ ಆರ್ಥಿಕವಾಗಿ ಸಹಕರಿಸಿದ ಪರಿಸರದ ಸಹಕಾರಿ ಸಂಘಗಳಿಗೆ, ಅರ್ಪಣಾ ಭಾವದಿಂದ ಶ್ರಮವಹಿಸಿ ನಿಸ್ವಾರ್ಥದಿಂದ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮತ್ತು ಯೋಗಗುರು ಸುಬ್ಬಯ್ಯ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ…
