ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಹಕಾರಿ ಸಂಘಗಳು ಸಮಾಜದ ಆಸ್ತಿಯಾಗಿದ್ದು, ಗ್ರಾಮೀಣ ಭಾಗದ ಜನರಲ್ಲಿ ಉಳಿತಾಯದ ಮನೋಭಾವ ಮೂಡಿಸುವುದಲ್ಲದೇ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅವರ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತಿದೆ. ಇಲ್ಲಿನ ವ್ಯವಹಾರದ ಎಲ್ಲಾ ಲಾಭಗಳು ಒಂದಿಲ್ಲೊಂದು ರೀತಿಯಲ್ಲಿ ಸಮಾಜಕ್ಕೆ ವಿನಿಯೋಗವಾಗುತ್ತಿದೆ ಎಂದು ಮಾಜಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಮರವಂತೆಯಲ್ಲಿ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆರನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಎಸ್. ರಾಜು ಪೂಜಾರಿ ಹಿರಿಯ ಸಹಕಾರಿಯಾಗಿದ್ದಾರೆ. ಅವರ ಅಧ್ಯಕ್ಷತೆಯ ಈ ಸಂಸ್ಥೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರಸ್ತುತ ಮರವಂತೆಯಲ್ಲಿ 6ನೇ ನೂತನ ಶಾಖೆಯನ್ನು ಆರಂಭಿಸಿದ್ದು, ಇದರಿಂದ ಗ್ರಾಮೀಣ ಭಾಗಕ್ಕೆ ಇನ್ನಷ್ಟು ಆರ್ಥಿಕ ಸಹಕಾರ ದೊರೆಯುವಂತಾಗಲಿ ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಗ್ರಾಹಕರ ವಿಶ್ವಾಸ ಮತ್ತು ಗುಣಮಟ್ಟದ ಸೇವೆ ಮೂಲಕ ಸಂಸ್ಥೆಯು ಪ್ರಗತಿ ಕಂಡಿದೆ. ಗ್ರಾಹಕರ ವಿಶ್ವಾಸದ ಜೊತೆಗೆ ಸಂಸ್ಥೆ ಇನ್ನಷ್ಟು ಹೊಸತನದೊಂದಿಗೆ ಉತ್ಕ್ರಷ್ಟ ಸೇವೆ ನೀಡಲು ಸದಾ ಆದ್ಯತೆ ನೀಡಲಾಗುವುದು ಎಂದರು.
ಭಟ್ಕಳ ಮಾಜಿ ಶಾಸಕ ಜೆ. ಡಿ. ನಾಯ್ಕ, ಬಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ, ಖ.ರೈ.ಸೇ.ಸ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ಮಂಜುನಾಥ ಎಸ್. ಕೆ., ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಜಿಲ್ಲಾ ಸೌಹಾರ್ದ ಸಂಯಕ್ತ ಸಹಕಾರಿ ಒಕ್ಕೂಟದ ಅಭಿವೃದ್ದಿ ಅಧಿಕಾರಿ ವಿಜಯ್ ಬಿ. ಎಸ್., ಸಹಕಾರ ಸಂಘಗಳ ನಿವೃತ್ತ ಅಧಿಕಾರಿ ಅರುಣಕುಮಾರ್ ಎಸ್. ಎ., ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ಮಲ್ಯಾಡಿ ಶಿವರಾಮ ಶೆಟ್ಟಿ, ವಾಸುದೇವ ಯಡಿಯಾಳ್, ವತ್ತಿನೆಣೆ ಗುರುರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಗ್ರಾ.ಪಂ ಅಧ್ಯಕ್ಷ ನಾಗರಾಜ ಖಾರ್ವಿ, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮಾಜಿ ಸದಸ್ಯ ಕೊಲ್ಲೂರು ರಮೇಶ ಗಾಣಿಗ, ರಘುರಾಮ ಶೆಟ್ಟಿ ಮೊದಲಾದವರು ಇದ್ದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.










