ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶ ಶಾಂತಿ ಸೌಹಾರ್ದತೆಯ ನೆಲೆಯಾಗಬೇಕು. ನಮ್ಮ ದೇಶದ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ನೆರೆಕೆರೆಯವರೊಡನೆ ಭ್ರಾತೃತ್ವ, ಕಷ್ಟ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಕಾರ ಜೀವನ ಆದರ್ಶಪ್ರಾಯವಾಗಿತ್ತು. ಇಂದಿನ ಆಧುನಿಕ ಜಗತ್ತಿನಲ್ಲಿ ಈ ಸಂಸ್ಕಾರಗಳನ್ನು, ಆದರ್ಶಗಳನ್ನು ಮುಡಿಪಾಗಿಟ್ಟುಕೊಂಡು,ಇನ್ನೂ ಹೆಚ್ಚು ಭಾಂದವ್ಯದ ಜೀವನಕ್ಕೆ ನಾವು ಅಣಿಯಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವ| ಜೆರಾಲ್ಡ್ ಐಸಾಕ್ ಲೋಬೋ ರವರು ಹೇಳಿದರು. ಅವರು ಗಂಗೊಳ್ಳಿಯ ಕ್ರೈಸ್ತಧರ್ಮ ಕೇಂದ್ರದ ಸರ್ವಧರ್ಮೀಯ ಸಂವಾದ ಸಮಿತಿಯ ನೇತೃತ್ವದ ಸ್ಥಳೀಯ ಸೌಹಾರ್ದ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮನೆಯಲ್ಲಿ ಅನೇಕ ಕೊಠಡಿಗಳಿದ್ದಾಗ್ಯೂ ಮನೆ ಒಂದೇ, ಬಣ್ಣಬಣ್ಣದ ಹೂಗಳಿರುವ ಹೂಗುಚ್ಛ ಒಂದೇ, ಬೇರೆ ಬೇರೆ ಕವಲು ದಾರಿಗಳಿದ್ದಾಗ್ಯೂ ಹತ್ತುವ ಬೆಟ್ಟ ಒಂದೇ ಎಂಬ ಉಲ್ಲೇಖಗಳನ್ನು ನೀಡಿ, ಬೇರೆ ಬೇರೆ ಧರ್ಮಪಂಥಗಳ ಮೂಲಕ ನಾವೆಲ್ಲರೂ ಸೇರುವ ದೇವನೊಬ್ಬನೇ. ಧರ್ಮ ನಮ್ಮ ಆಯ್ಕೆಯಲ್ಲ, ಅದು ದೈವೆಚ್ಚೆ. ಹಾಗಾಗಿ ನಾವೆಲ್ಲಾ ಧರ್ಮದವರು ಸರ್ವರೊಡನೆ ಪ್ರೀತಿ, ಶಾಂತಿ, ಸಹಬಾಳ್ವೆ, ಐಕ್ಯತೆ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸುರಭಿ ಇದರ ಆಶ್ರಯದಲ್ಲಿ ಭಾನುವಾರ ರೋಟರಿ ಸಮುದಾಯ ಭವನದಲ್ಲಿ ೨ ದಿನಗಳ ಕಾಲ ನಡೆಯುವ ಕರ್ನಾಟಕ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಲಿಕೆಯ ನಾದ ಸುರಭಿ ಶಿಬಿರವನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರೊಫೆಸರ್ ಡಾ. ಶ್ರೀಕಾಂತ್ ರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗಿನ ಆಧುನಿಕ ಪ್ರಪಂಚದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಪ್ರಮಾಣ ಹೆಚ್ಚಾಗಿದ್ದು, ಜನ್ಮನೀಡಿದ ತಾಯಿ-ತಂದೆ, ವಿದ್ಯೆ ಕಲಿಸಿದ ಗುರುಗಳ ಮೇಲೆ ಹಲ್ಲೆ ಮಾಡುವಂತ ಮಟ್ಟಿಗೆ ಮಕ್ಕಳು ಬೆಳೆದಿರುವುದು ಬೇಸರತರಿಸುವ ವಿಚಾರವಾಗಿದೆ ಎಂದರು. ಹಿಂದೆ ಗ್ರಾಮೀಣ ಭಾಗದಲ್ಲಿ ಹುಟ್ಟುವುದು ಒಂದು ಶಾಪ ಎಂದು ಅಂದುಕೊಂಡಿದ್ದೆವು. ಆಗ ನಮಗೆ ಯಕ್ಷಗಾನ ಬಿಟ್ಟರೆ ಬೇರಾವ ಮನರಂಜನೆಯಿರಲಿಲ್ಲ. ಈಗಿನ ತಾಂತ್ರಿಕತೆಯಿಂದ ಎಲ್ಲವೂ ಬದಲಾವಣೆಯಾಗಿದೆ. ನಾವು ಇಂಟರ್‌ನೆಟ್ ಯುಗದಲ್ಲಿ ಬಹಳ ವೇಗ ಮತ್ತು ಒತ್ತಡಗಳ ಬದುಕು ಸಾಗಿಸುತ್ತಿದ್ದೇವೆ. ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯದ ಕಡೆ ಗಮನ ಹರಿಸಲು ಬಿಡುವಿಲ್ಲದೇ ದುಡಿಯುತ್ತಿದ್ದೇವೆ. ಹಣವಿದ್ದರೂ ನೆಮ್ಮದಿ ಇಲ್ಲದ ಜೀವನ ನಡೆಸುವಂತಾಗಿದೆ.…
ಅಪಾರ ಉಜಿರೆ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮೆಲುಕು ಹಾಕುವ ಹಂಪಿ ಉತ್ಸವವು ಇದೇ ನವೆಂಬರ್ ತಿಂಗಳ ೩, ೪ ಮತ್ತು ೫ರಂದು ಹಂಪಿಯಲ್ಲಿ ನಡೆಯಲಿದ್ದು, ಉತ್ಸವಕ್ಕೆ ಪೂರ್ವಬಾವಿಯಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಪಾರಂಪರಿಕ ನಡಿಗೆಯು ೨೦೧೬ರ ಹಂಪಿ ಉತ್ಸವದ ವಿಶೇಷ ಆಕರ್ಷಣೆ. ಹಂಪಿ ಸ್ಮಾರಕಗಳನ್ನು ಪರಿಚಯಿಸುವ ಪಾರಂಪರಿಕ ನಡಿಗೆಯನ್ನು ನ೩೦ರಂದು ಬೆಳಗ್ಗೆ ವೀರೂಪಾಕ್ಷ ದೇವಳದ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಡಾ. ವಿ. ರಾಮಪ್ರಸಾರ್ ಮನೋಹರ್ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು ಪಾರಂಪರಿಕ ನಡಿಗೆಯಲ್ಲಿ ಹಂಪಿಯ ಮಾರ್ಗದರ್ಶಕರ ನೇತೃತ್ವದಲ್ಲಿ ವೀರೂಪಾಕ್ಷ ದೇವಸ್ಥಾನ, ಬಜಾರ್, ಅಚ್ಚ್ಯುತ ದೇಗುಲ ಬಜಾರ್, ಪುಷ್ಕರಣಿ, ಚಕ್ರತೀರ್ಥ, ವರ್ಷ ದಏವಸ್ಥಾನ, ನರಸಿಂಹ ದೇವಸ್ಥಾನ, ಎರಡು ಅಂತಸ್ಥಿನ ಮಂಟಪ, ಸುಗ್ರೀವ ಕಾಲ್ವೆ, ಪುರಾತನ ಸೇತುವೆ, ಪುರಂದರ ಮಂಟಪ, ವಿಜಯವಿಠಲ ದೇವಸ್ಥಾನ, ಕಲ್ಲಿನ ರಥ, ಸಂಗೀತ ಮಂಟಪ ಮೊದಲಾದ ಸ್ಥಳಗಳಿಗೆ ಭೇಟಿ ನೀಡಲಾಯಿತು. ಪಾರಂಪರಿಕ ನಡಿಗೆಯಲ್ಲಿ ಕನ್ನಡ ವಿವಿ ಹಂಪಿ, ಹೋಟೆಲ್ ಮಾಲೀಕರ ಸಂಘ, ವ್ಯಾಪಾರಸ್ಥರ ಸಂಘ, ಸ್ಥಳೀಯ ಶಾಲಾ ಕಾಲೇಜುಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪಟಾಕಿಮುಕ್ತ ದೀಪಾವಳಿ ಆಚರಿಸುವ ಉದ್ದೇಶದಿಂದ ಗಂಗೊಳ್ಳಿಯ ಉದ್ಯಮಿ ಭಾಸ್ಕರ ವಿಠಲ ಶೆಣೈ ಅವರ ಕುಟುಂಬದ ಸದಸ್ಯರು ಗಂಗೊಳ್ಳಿಯ ಸುಮಾರು ಹತ್ತಕ್ಕೂ ಮಿಕ್ಕಿ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಗಂಗೊಳ್ಳಿಯಲ್ಲಿರುವ ಅನೇಕ ಬಡ ಕುಟುಂಬಗಳು ಇತರರಂತೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಬೇಕು. ನಮ್ಮಂತೆ ಇತರರು ಸಂತೋಷದಿಂದ ಹಬ್ಬದ ಸವಿಯನ್ನು ಸವಿಯುವಂತಾಗಬೇಕು ಎಂಬ ಕಳಕಳಿಯೊಂದಿಗೆ ಭಾನುವಾರ ಗಂಗೊಳ್ಳಿಯ ವಿವಿಧೆಡೆ ತೆರಳಿದ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಅವರು ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿ ಮತ್ತು ಸಿಹಿತಿಂಡಿಯನ್ನು ವಿತರಿಸಿ ದೀಪಾವಳಿ ಹಬ್ಬದ ಶುಭ ಕೋರಿದರು. ಪಟಾಕಿ ಕೊಳ್ಳುವುದರಿಂದ ಹಣ ಪೋಲು, ಪಟಾಕಿ ಸುಡುವುದರಿಂದ ಆರೋಗ್ಯವೂ ಹಾಳು. ದೀಪಾವಳಿ ಬೆಳಕಿನ ಹಬ್ಬವೇ ಹೊರತು ಪಟಾಕಿಗಳ ಹೆಸರಿನಲ್ಲಿ ಹಣವನ್ನು ಪೋಲು ಮಾಡುವ ಹಬ್ಬವಲ್ಲ. ಪಟಾಕಿ ಕೊಳ್ಳುವ ಬದಲು ಆ ಹಣವನ್ನು ಅನೇಕ ಬಡ ಕುಟುಂಬಗಳ ಅಗತ್ಯತೆಗಳಿಗೆ ನೀಡುವ ಮೂಲಕ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸುವಲ್ಲಿ ಮುಂದಿನ ಪೀಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿನ ಇತಿಹಾಸ ವಿಭಾಗದ ವತಿಯಿಂದ ‘ಸ್ವಾತಂತ್ರ್ಯದ ನೆನಪುಗಳು’ ಎಂಬ ವಿಚಾರದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಾವುಂದ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಗಣೇಶ್ ಉಪನ್ಯಾಸ ನೀಡಿದರು. ಪ್ರಾಂಶುಪಾಲರಾದ ಪ್ರೊ.ಬಿ.ಎ ಮೇಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಉಮೇಶ್ ಮಯ್ಯ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕರಾದ ಕುಮಾರಿ ಶರಾವತಿ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕರಾದ ವಿಘ್ನೇಶ್ವರ ವಂದಿಸಿದರು. ವಿದ್ಯಾರ್ಥಿನಿ ಪಿ.ಜಿ ಚೈತನ್ಯ ತೃತೀಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ಕಾರಂತರ ಬೈಲು ರಸ್ತೆ, 10 ಲಕ್ಷ ರೂ. ವೆಚ್ಚದಲ್ಲಿ ಸುಲ್ತಾನ್ ಮೊಹಲ್ಲಾ ರಸ್ತೆ, 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ಸುಗ್ಗಿಬೈಲು ಹೋಗುವ ರಸ್ತೆಗೆ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ, ರಾಜು ದೇವಾಡಿಗ, ಗಂಗೊಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ರಾಜ್‌ಕುಮಾರ್, ಗ್ರಾಪಂ ಸದಸ್ಯರಾದ ರೇಷ್ಮಾ ಖಾರ್ವಿ, ಸುಶೀಲ ಶೇರುಗಾರ್, ಸರೋಜಿನಿ, ಕಮಲ, ಯೂನಿಸ್ ಸಾಹೇಬ್, ಅಬ್ದುಲ್ ಹಾದಿ, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದುರ್ಗರಾಜ್ ಪೂಜಾರಿ, ಸ್ಥಳೀಯರಾದ ದಿನೇಶ ಪೂಜಾರಿ, ಇಂದಿರಾ ಪೂಜಾರಿ, ನಾಗರಾಜ್ ಶೇರುಗಾರ್, ವಾಸುದೇವ ಶೇರುಗಾರ್, ಪ್ರಕಾಶ ಕಾರಂತ್, ಗುತ್ತಿಗೆದಾರ ಚಂದ್ರ ಖಾರ್ವಿ, ನಿವೃತ್ತ ಮುಖ್ಯೋಪಾಧ್ಯಾಯ ಜಿ.ಮಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಆರಕ್ಷಕ ಠಾಣೆಯಲ್ಲಿ ಬೆಳಿಗ್ಗೆ ದೀಪಾವಳಿಯ ಪ್ರಯುಕ್ತ ವಿಶೇಷ ಲಕ್ಷ್ಮೀಪೂಜೆ ಹಾಗೂ ಆಯುಧಪೂಜೆ ವಿಜೃಭಣೆಯಿಂದ ನಡೆಯಿತು. ವೃತ್ತ ನಿರೀಕ್ಷಕ ರಾಘವ ಪಡೀಲ್, ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ, ಸಿಬ್ಬಂದಿಗಳು ಹಾಗೂ ಇವರೆಲ್ಲರ ಕುಟುಂಬ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಂಬಯಿ: ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ 2016-18 ರ ಅವಧಿಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಬಿಲ್ಲವ ಶಿರೂರು ಆಯ್ಕೆಯಾಗಿದ್ದಾರೆ. ಸುರೇಶ ಎಸ್. ಪೂಜಾರಿ (ಗೌರವಾಧ್ಯಕ್ಷರು), ಎನ್. ಜಿ. ಪೂಜಾರಿ (ಉಪಾಧ್ಯಕ್ಷರು), ನರಸಿಂಹ ಎಮ್. ಬಿಲ್ಲವ (ಉಪಾಧ್ಯಕ್ಷರು), ಸೂರ್ಯ ಎಸ್. ಪೂಜಾರಿ (ಗೌರವ ಪ್ರಧಾನ ಕಾರ್ಯದರ್ಶಿ), ಸೀಮಾ ಲೊಕೇಶ್ ಪೂಜಾರಿ (ಜತೆ ಕಾರ್ಯದರ್ಶಿ), ಉದಯ ಕೆ. ಪೂಜಾರಿ (ಜತೆ ಕಾರ್ಯದರ್ಶಿ), ಅಶೋಕ ಎನ್. ಪೂಜಾರಿ (ಗೌರವ ಕೋಶಾಧಿಕಾರಿ), ಜಗನ್ನಾಥ ಆರ್. ಪೂಜಾರಿ (ಜತೆ ಕೋಶಾಧಿಕಾರಿ), ಶ್ರೀಧರ ವಿ. ಪೂಜಾರಿ (ಜತೆ ಕೋಶಾಧಿಕಾರಿ) ಹಾಗೂ ಕುಂದಾಪುರದ ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಗೆ ಸಂಘದ ಪ್ರತಿನಿಧಿಯಾಗಿ ಪ್ರಭಾಕರ ಆರ್. ಪೂಜಾರಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ವ್ಯಾಪ್ತಿಯ ಗ್ರಾಮಗಳ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಭೂಮಿ ಹಕ್ಕುಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ವರ್ಷ ಐದು ಕಳೆದರೂ ಇಲ್ಲಿಯ ತನಕ ತುಂಡು ಭೂಮಿಯನ್ನು ನಿವೇಶನ ರಹಿತರಿಗೆ ನೀಡಲು ಸಾಧ್ಯವಾಗಲಿಲ್ಲ. ಶಾಸಕರ, ಸಂಸದರ ಸಂಬಳ ಏರಿಕೆಯಾಗುತ್ತಲೇ ಇದೆ. ಆದರೆ ಸರಕಾರಕ್ಕೆ ಮಾತ್ರ ಬಡ ಕೃಷಿ ಕೂಲಿಕಾರರ ಬಗ್ಗೆ ಕಾಳಜಿ ಇದ್ದಂತಿಲ್ಲ ಎಂದು ಕರ್ನಾಟಕ ಪ್ರಾಂತ್ಯ ಕೃಷಿ, ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾಸ್ ಭಂಡಾರಿ ವ್ಯಂಗವಾಡಿದರು. ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಿವೇಶನ ರಹಿತರು ಭೂಮಿ ಹಕ್ಕುಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಜನಸಾಮಾನ್ಯರು ಬೆವರು ಸುರಿಸಿ ದುಡಿದು ತೆರಿಗೆ ಕಟ್ಟಿದ ಹಣದಲ್ಲಿ ಜನಪ್ರತಿನಿಧಿಗಳು ಮೆರೆಯುತ್ತಿದ್ದು, ರಿಯಲ್ ಎಸ್ಟೇಟ್, ಗುತ್ತಿಗೆ ಕಾಮಗಾರಿ, ಅಕ್ರಮ ವ್ಯವಹಾರಗಳ ಮೂಲಕ ಬಡವರನ್ನು ಲೂಟಿ ಮಾಡುತ್ತಿದ್ದಾರೆ. ಸರಕಾರವೂ ಕೂಡಾ ಈ ವ್ಯವಸ್ಥೆಯಲ್ಲಿ ಶಾಮೀಲಾಗಿದ್ದು, ಸರ್ಕಾರಿ ಭೂಮಿಯನ್ನು ಬಡನಿವೇಶನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಆವಿಷ್ಕಾರದೊಂದಿಗೆ ಹೊಸ ಉದ್ದಿಮೆಯನ್ನು ಪ್ರಾರಂಭಿಸುವ ಬಗ್ಗೆ (ಸ್ಟಾರ್ಟಪ್) ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಮಾಂಟೆಕ್ಶರ್ ಮತ್ತು ಉದ್ಮಾ ಟೆಕ್ನಾಲಜೀಸ್ ಇದರ ಐಟಿ ವಿಭಾಗದ ಮುಖ್ಯಸ್ಥರಾದ ಶಿವ ಪ್ರಸಾದ ಕೆ. ತರಬೇತಿ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ್ ಮಯ್ಯ ಕಾರ್ಯಕ್ರಮ ಸಂಘಟಿಸಿದರು.
