ಗಂಗೊಳ್ಳಿ: ಸರ್ವಧರ್ಮೀಯ ಸೌಹಾರ್ದ ಸಂವಾದ ಸಮಿತಿ ಸಭೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶ ಶಾಂತಿ ಸೌಹಾರ್ದತೆಯ ನೆಲೆಯಾಗಬೇಕು. ನಮ್ಮ ದೇಶದ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ನೆರೆಕೆರೆಯವರೊಡನೆ ಭ್ರಾತೃತ್ವ, ಕಷ್ಟ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಕಾರ ಜೀವನ ಆದರ್ಶಪ್ರಾಯವಾಗಿತ್ತು. ಇಂದಿನ ಆಧುನಿಕ ಜಗತ್ತಿನಲ್ಲಿ ಈ ಸಂಸ್ಕಾರಗಳನ್ನು, ಆದರ್ಶಗಳನ್ನು ಮುಡಿಪಾಗಿಟ್ಟುಕೊಂಡು,ಇನ್ನೂ ಹೆಚ್ಚು ಭಾಂದವ್ಯದ ಜೀವನಕ್ಕೆ ನಾವು ಅಣಿಯಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವ| ಜೆರಾಲ್ಡ್ ಐಸಾಕ್ ಲೋಬೋ ರವರು ಹೇಳಿದರು.

Call us

Click Here

ಅವರು ಗಂಗೊಳ್ಳಿಯ ಕ್ರೈಸ್ತಧರ್ಮ ಕೇಂದ್ರದ ಸರ್ವಧರ್ಮೀಯ ಸಂವಾದ ಸಮಿತಿಯ ನೇತೃತ್ವದ ಸ್ಥಳೀಯ ಸೌಹಾರ್ದ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮನೆಯಲ್ಲಿ ಅನೇಕ ಕೊಠಡಿಗಳಿದ್ದಾಗ್ಯೂ ಮನೆ ಒಂದೇ, ಬಣ್ಣಬಣ್ಣದ ಹೂಗಳಿರುವ ಹೂಗುಚ್ಛ ಒಂದೇ, ಬೇರೆ ಬೇರೆ ಕವಲು ದಾರಿಗಳಿದ್ದಾಗ್ಯೂ ಹತ್ತುವ ಬೆಟ್ಟ ಒಂದೇ ಎಂಬ ಉಲ್ಲೇಖಗಳನ್ನು ನೀಡಿ, ಬೇರೆ ಬೇರೆ ಧರ್ಮಪಂಥಗಳ ಮೂಲಕ ನಾವೆಲ್ಲರೂ ಸೇರುವ ದೇವನೊಬ್ಬನೇ. ಧರ್ಮ ನಮ್ಮ ಆಯ್ಕೆಯಲ್ಲ, ಅದು ದೈವೆಚ್ಚೆ. ಹಾಗಾಗಿ ನಾವೆಲ್ಲಾ ಧರ್ಮದವರು ಸರ್ವರೊಡನೆ ಪ್ರೀತಿ, ಶಾಂತಿ, ಸಹಬಾಳ್ವೆ, ಐಕ್ಯತೆ, ಸಾಮರಸ್ಯಯುತ ಜೀವನದ ದ್ಯೋತಕವಾಗಬೇಕು. ಎಲ್ಲರೂ ಒಗ್ಗೂಡಿ ಹಬ್ಬಹರಿದಿನಗಳನ್ನು ಆಚರಿಸಿಕೊಂಡಾಗ ಎಲ್ಲಾ ಧರ್ಮಗಳ ಉದ್ದೇಶ ಅರಿತುಕೊಳ್ಳಲು, ಒಗ್ಗಟ್ಟು ವೃದ್ಧಿಗೊಳಿಸಲು ಸಹಕಾರಿಯಾಗುತ್ತದೆ. ಅಂತಹ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು, ಗಂಗೊಳ್ಳಿ ಸರ್ವಧರ್ಮೀಯರ ಸಾಮರಸ್ಯಕ್ಕೆ ಆದರ್ಶಪ್ರಾಯವಾಗಲಿ ಎಂದು ಹಾರೈಸಿದರು.

ಹಿಂದೂ ಭಾಂದವರ ಪರವಾಗಿ ಸದಾನಂದ ಶೆಣೈ, ಮುಸ್ಲಿಂ ಭಾಂದವರ ಪರವಾಗಿ ಯೂನಸ್ ಸಾಹೇಬ್ ಧರ್ಮಕೇಂದ್ರದ ಪಾಲನಾಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಕ್ರಾಸ್ತಾ ಇನ್ನಿತರರು ಉಪಸ್ಥಿತರಿದ್ದರು. ಧರ್ಮಕೇಂದ್ರದ ಧರ್ಮಗುರು ವಂದನೀಯ ಗುರು ಆಲ್ಬರ್ಟ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸಮಿತಿಯ ಸಂಚಾಲಕಿ ಶ್ರೀಮತಿ ಹೆಲೆನ್ ರೆಬೆರೊ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply