ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮಾಜದಲ್ಲಿ ಬ್ರಾಹ್ಮಣರನ್ನು ಹೀಗೆಳೆಯುವವರಿಗೆ ಸಂಘಟನೆ ಮೂಲಕ ಉತ್ತರ ನೀಡಬೇಕಿದ್ದು, ಸಂಘಟನೆ ಸಶಕ್ತವಾಗಿದ್ದರೆ ಮಾತ್ರ ಸಾಧ್ಯ. ಬ್ರಾಹ್ಮಣರು ಜಾಗೃತರಾಗಿ ಸಂಘಟನೆ ಮಹತ್ವ ಅರ್ಥಮಾಡಿಕೊಳ್ಳಬೇಕು ಎಂದು ಉಡುಪಿ ಬ್ರಾಹ್ಮಣ ಪರಿಷತ್ ಉಪಾಧ್ಯಕ್ಷ ಮಂಜುನಾಥ ಉಪಾಧ್ಯಾಯ ಹೇಳಿದ್ದಾರೆ. ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್, ಮಹಿಳಾ ವೇದಿಕೆ ಮತ್ತು ಕುಂದಾಪುರ ವಲಯ ಆಶ್ರಯದಲ್ಲಿ ಹಂಗಳೂರು ಶ್ರೀ ಅನಂತಪದ್ಮನಾಭ ಸಭಾಂಗಣದಲ್ಲಿ ನಡೆದ ತಾಲೂಕ್ ವಿಪ್ರ ಮಹಿಳಾ ಸಮಾವೇಶ ಸಮಾರೋಪದಲ್ಲಿ ಮಾತನಾಡಿದರು. ಬ್ರಾಹ್ಮಣತ್ವ ಹಿಂದೂ ಸಂಸ್ಕೃತಿ ಪ್ರತೀಕವಾಗಿದ್ದು, ಬ್ರಾಹ್ಮಣ್ಯ ಅಳಿದರೆ ಹಿಂದೂ ಸಂಸ್ಕೃತಿಯೂ ಅಳಿಯುತ್ತದೆ. ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಕಳ, ಕುಂದಾಪುರ ಮತ್ತು ಉಡುಪಿ ತಾಲೂಕಿನ ಬ್ರಾಹ್ಮಣ ಮಕ್ಕಳ ಸಮಾವೇಶ ನಡೆಸಿ, ಸಾಂಸ್ಕಾರ ಉಳಿಸುವ ಸಂಸ್ಕೃತಿ ಕಲಿಸಲಾಗುತ್ತದೆ. ಹಾಗೆ ಜಿಲ್ಲೆಯಲ್ಲಿ ಮೂರು ತಾಲೂಕ್ ಸೇರಿಸಿಕೊಂಡು ಬ್ರಹತ್ ವಿಪ್ರ ಸಮಾವೇಶ ನಡೆಸಲಾಗುತ್ತದೆ ಎಂದು ಹೇಳಿದರು. ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಬ್ರಾಹ್ಮಣ ಪರಿಷತ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ವಂ| ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಅಧಿಕೃತವಾಗಿ ಕುಂದಾಪುರ ಹೋಲಿ ರೋಜರಿ ಚರ್ಚ್ಗೆ ಭೇಟಿ ನೀಡಿದರು. ಪ್ರಾರ್ಥನ ವಿಧಿ ನೆರವೇರಿಸಿ ಮಾತನಾಡಿದ ಅವರು, ದೇವರು ನಮ್ಮನ್ನು ಸೃಷ್ಟಿಸಿದ್ದು ಇಲ್ಲಿ ನೀತಿವಂತರಾಗಿ ಬಾಳುವಂತೆ. ಪ್ರಾಪಂಚಿಕವಾದ ಹಣ ಆಸ್ತಿ, ಚಿನ್ನಾಭರಣಗಳನ್ನು ಕೂಡಿಟ್ಟರೆ ಸಾಲದು, ಸತ್ಯ ನೀತಿಯಿಂದ ಜೀವಿಸುತ್ತಾ, ದಯಾಪರ ಕೆಲಸಗಳನ್ನು ಮಾಡುತ್ತ ಪುಣ್ಯವನ್ನು ಸಂಪಾದಿಸಿಕೊಳ್ಳಬೇಕಿದೆ. ಅದುವೇ ನಿಮ್ಮನ್ನು ಸ್ವರ್ಗರಾಜ್ಯಕ್ಕೆ ಕೊಂಡಯುವುದು ಎಂದು ಅವರು ಸಂದೇಶ ನೀಡಿದರು ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಬಿಶಪರಿಗೆ ಬೆಳಗಿಸದ ಮುಂಬತ್ತಿ ಹಾಗೂ ಶಿಲುಬೆಯನ್ನು ನೀಡಿ ಗೌರವಿಸಿದರು. ಬಳಿಕ ಹಲವಾರು ಪ್ರಾರ್ಥನ ವಿಧಿಗಳನ್ನು ನೆಡಸಲಾಯಿತು. ಕೊನೆಗೆ ಬಿಶಪರು ಧರ್ಮಕೇಂದ್ರದ ಸಮಾಧಿಗೆ ಭೇಟಿ ಮಾಡಿ ಅಲ್ಲಿ ಸಮಾಧಿ ಮಾಡಿದವರಿಗೆ ಮುಕ್ತಿ ದೊರಕಲು ಪವಿತ್ರ ಜಲವನ್ನು ಪ್ರೋಕ್ಷಿಸಿ, ವಿಶೇಷವಾದ ಪ್ರಾರ್ಥನೆಯನ್ನು ಸಲ್ಲಿಸಿ ಅಶಿರ್ವದಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ| ಜೆರಾಲ್ಡ್ ಸಂದೀಪ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಅಮ್ರತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಬಿಜೂರು ರಾ.ಹೆ-66ರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ಖಾಸಗಿ ಬಸ್ಸು, ಮಾರುತಿ ಸುಜುಕಿ, ಟಾಟಾ ಇಂಡಿಕಾ ಕಾರು ಹಾಗೂ ಬೊಲೆರೋ ವಾಹನ ಒಂದಕ್ಕೊಂದು ಢಿಕ್ಕಿ ಹೊಡೆದಿರುವುದಲ್ಲದೇ ಮೂರು ವಾಹನಗಳು ಜಖಂಗೊಂಡ ಘಟನೆ ನಡೆದಿದೆ. ಬಸ್ ಹಾಗೂ ಎಲ್ಲಾ ವಾಹನದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಂದೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಬಿಜೂರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದಾಗ ಬಸ್ಸಿನ ಹಿಂದೆಯೇ ಇದ್ದ ಬಳ್ಳಾಪುರದಿಂದ ಬರುತ್ತಿದ್ದ ಮಾರುತಿ ಸುಜುಕಿ ಕಾರಿನ ಚಾಲಕ ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಇದರ ಹಿಂದೆಯೇ ಇದ್ದ ಟಾಟಾ ಇಂಡಿಕಾ ಮುಂದಿನ ಕಾರಿಗೆ ಡಿಕ್ಕಿ ಹೊಡೆಯಿತು ಪರಿಣಾಮ ಮಾರುತಿ ಸುಜುಕಿ ಕಾರು ಕೂಡಾ ನಿಂತಿದ್ದ ಬಸ್ಸಿಗೆ ಡಿಕ್ಕಿಹೊಡೆದಿತ್ತು., ಇದೇ ವೇಳೆ ಇಂಡಿಯಾ ಕಾರಿನ ಹಿಂದಿದ್ದ ಬುಲೇರೋ ವಾಹನವೂ ಡಿಕ್ಕಿ ಹೊಡೆದು ಮೂರು ವಾಹನಗಳು ಜಖಂಗೊಂಡಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ಸು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ೩ ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್ ಹಾಗೂ ಕೆಸಿ ರಾಮಮೂರ್ತಿ ಗೆಲುವು ಸಾಧಿಸಿದ್ದರೇ ಬಿಜೆಪಿಯ ನಿರ್ಮಲಾ ಸೀತಾರಾಮನ್ ಗೆಲುವು ಸಾಧಿಸಿದ್ದಾರೆ. ಆಸ್ಕರ್ ಗೆಲುವು, ಕರಾವಳಿ ನಾಯಕರುಗಳಿಂದ ಅಭಿನಂದನೆ: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕೀಯ ಮುತ್ಸದ್ಧಿ ಆಸ್ಕರ್ ಫೆರ್ನಾಂಡಿಸ್ ಸತತ ನಾಲ್ಕನೇ ಭಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವುದಕ್ಕೆ ಕರಾವಳಿಯ ಕಾಂಗ್ರೆಸ್ ಪಕ್ಷದ ನಾಯಕರು ಅಭಿನಂದಿಸಿದ್ದಾರೆ. ಸಚಿವ ವಿನಯಕುಮಾರ್ ಸೊರಕೆ, ರಮಾನಾಥ ರೈ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಜಿ.ಪಂ ಅಧ್ಯಕ್ಷ ರಾಜು ಪೂಜಾರಿ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಅಭಿನಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಶಿರೂರು ಗ್ರಾಪಂ ವ್ಯಾಪ್ತಿಯ ಮುಸ್ಲಿಂ ಕೇರಿಯ ಮನೆಯೊಂದರಲ್ಲಿ ಹಾಡುಗಲೇ ಕಳ್ಳತನಗೈದ ಘಟನೆ ಬೆಳಕಿಗೆ ಬಂದಿದೆ. ಮುಸ್ಲಿಂ ಕೇರಿಯ ಮುಲ್ಲಾ ದಸ್ತಗಿರಿ ಕುಟುಂಬದವರಿಗೆ ಸೇರಿದ ಮನೆಯಾಗಿದ್ದು, ಯಜಮಾನ ಸೇರಿದಂತೆ ಕುಟುಂಬದ ಸದಸ್ಯರು ವಿದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿ ಬೇರೊಬ್ಬರು ಮನೆಯನ್ನು ನೋಡಿಕೊಳ್ಳುತ್ತಿದ್ದು, ಅವರು ಬೀಗ ಹಾಕಿ ತೆರಳಿದ್ದಾಗ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಎರಡು ಬೀರುವಿನ ಬಾಗಿಲು ಮುರಿದು ಚಿನ್ನ ಇಲ್ಲವೇ ಹಣಕ್ಕಾಗಿ ತಡಕಾಡಿರಬಹುದು ಎಂದು ಶಂಕಿಸಲಾಗಿದೆ. ಕೋಣೆಯ ತುಂಬಿಲ್ಲಾ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಳವಾದ ವಸ್ತು ಹಾಗೂ ಮೌಲ್ಯದ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಆನಗಳ್ಳಿಯ ಪ್ರಕಾಶ್ ಕೆ.ಆನಗಳ್ಳಿ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಮಾರ್ಕೆಟಿಂಗ್ ಮತ್ತು ಕಾಂಟ್ರ್ಯಾಕ್ಟಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸಾಧನೆಗೆ ಅಂತಾರಾಷ್ಟ್ರೀಯ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆಂಡ್ ಎಕನಾಮಿಕ್ ರಿಫಾರ್ಮ್ಸ್ ಸಂಸ್ಥೆ ಕೊಡಮಾಡುವ ಎಂ.ವಿಶ್ವೇಶ್ವರಯ್ಯ ಬೆಸ್ಟ್ ಎಂಜಿನಿಯರಿಂಗ್ ನ್ಯಾಷನಲ್ ಆವಾರ್ಡ್ ಲಭಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ.ಸಾಂಗ್ಲಿಯಾನ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ|ಎಚ್.ವಿ ಶಿವಪ್ಪ, ಕಾರ್ಯದರ್ಶಿ ಜಿ.ಎಸ್. ದೇಸಾಯಿ, ವಿಧಾನ ಪರಿಷತ್ ಸದಸ್ಯ ಚೌಡಾ ರೆಡ್ಡಿ, ಚಿತ್ರ ನಿರ್ದೇಶಕ ರಾಧಾಕೃಷ್ಣ, ಮೈಸೂರು ಕನ್ಸ್ಟ್ರಕ್ಷನ್ ಕಂಪನಿಯ ಮ್ಯಾನೇಜರ್ ಪುಟ್ಟ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಹಿಂದಿನ ಕಾಲದಲ್ಲಿ ಹಿರಿಯರು, ಕುಟುಂಬದ ಏಳಿಗೆಗಾಗಿ ಕುಲದೇವರ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕವೇ ಹೋಗಬೇಕಾದ ರಿವಾಜು ಹಾಗೂ ಅನಿವಾರ್ಯತೆ ಇತ್ತು. ಆದರೆ ಇಂದು ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಹಿರಿಯರ ಕಟ್ಟಿಕೊಂಡು ಸಂಪ್ರದಾಯವನ್ನು ಮುಂದುವರಿಸಿಕೊಂಡು ಊರಿನ ಸಂಕಷ್ಟಗಳು ದೂರವಾಗಿಲಿ ಎಂಬ ಸದಾಶಯದೊಂದಿಗೆ ಹಿರಿಯರು ಕಿರಿಯರೆನ್ನದೇ ಹರಿಖಂಡಿಗೆಯ ಕಾಪಾಡಿಯ ಮೂಲಸ್ಥಾನದಿಂದ ಗೋವಾ ಶ್ರೀ ಮಹಾಲಸಾ ನಾರಾಯಣಿ ದೇವಿ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುತ್ತಿದ್ದಾರೆ ಕಾಪಾಡಿಯ ಜಿಎಸ್ಬಿ ಸಮುದಾಯದ ಶೆಣೈ ಮುತ್ತು ನಾಯಕ್ ಕುಟುಂಬಿಕರು. ಪಾದಯಾತ್ರೆಯ ನಡುವೆ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಾಲಯದಲ್ಲಿ ತಂಗಿದ್ದ ಯಾತ್ರಾರ್ಥಿಗಳು ಮಾತಿಗೆ ಸಿಕ್ಕರು. ಉಡುಪಿ ಜಿಲ್ಲೆಯ ಪೂರ್ವ ದಿಕ್ಕಿನಲ್ಲಿ ಪೆರ್ಡೂರು ಸಮೀಪದಲ್ಲಿರುವ ಊರು ಹರಿಖಂಡಿಗೆ. ಅಲ್ಲಿಯೇ ಹತ್ತಿರದಲ್ಲಿ ಎರಡು ಕಿ.ಮೀ ದೂರದಲ್ಲಿ ಇರುವ ಪುಟ್ಟ ಗ್ರಾಮವೇ ಕಾಪಾಡಿ. ಹರಿಖಂಡಿಗೆಯ ಊರಿನ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಹಾಗೂ ಕಾಪಾಡಿಯಲ್ಲಿರುವ ಪುರಾತನ ಬ್ರಹ್ಮ ಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಗೋವಾದಲ್ಲಿ ಪೋರ್ಚುಗೀಸರ ಮತಾಂತರ ನೀತಿಯನ್ನು ಸಹಿಸದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಲಯಕ್ಕೆ ಸಂಬಂಧಿಸಿದ ಸಂತ ಅಂತೋನಿಗೆ ಸಮರ್ಪಿಸಲ್ಪಟ್ಟ, ಕಂಡ್ಲೂರಿನ ನೂತನ ಧರ್ಮಕೇಂದ್ರಕ್ಕೆ ಅದಿಕೃತ ನೂತನ ಧರ್ಮಗುರುಗಳಾಗಿ ವ|ವಿಕ್ಟರ್ ಡಿಸೋಜಾ ಇವರ ಆಗಮನವಾಗಿದೆ. ಈ ಮೊದಲು ಬಸ್ರೂರು ಧರ್ಮಕೇಂದ್ರದ ಅಧಿನದಲ್ಲಿದ್ದ ಈ ಧರ್ಮಕೇಂದ್ರದ ಧರ್ಮಗುರುಗಳಾದ ವ|ವಿಶಾಲ್ ಲೋಬೊ ಮತ್ತು ಕುಂದಾಪುರ ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ಮತ್ತು ಭಕ್ತರು ನೂತನ ಧರ್ಮಗುರುಗಳನ್ನು ಬರಮಾಡಿಕೊಂಡರು. ಧರ್ಮಗುರುಗಳಾದ ವಿಶಾಲ್ ಲೋಬೊ ಹಾಗೂ ಅನಿಲ್ ಡಿಸೋಜಾ ಅವರು ಧರ್ಮಗುರು ವಿಕ್ಟರ್ ಡಿಸೋಜಾ ಇವರಿಗೆ ವಿದ್ಯುಕ್ತವಾಗಿ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯ ಮತ್ತು ಪೂಜಾ ವಿಧಿ ವಿಧಾನಗಳನ್ನು ನೆಡೆಸಿಕೊಟ್ಟರು. ಮಕಮಾರ್ ಧರ್ಮಕೇಂದ್ರದಿಂದ ವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕಾರ ಮಾಡಿದ ಧರ್ಮಗುರು ವಿಕ್ಟರ್ ಡಿಸೋಜಾ ’ನಾನು ಇಲ್ಲಿ ಏಸುವಿನ ಸೇವಕನಾಗಿ, ನಿಸ್ವಾರ್ಥ ಸೇವೆ ಮಾಡಲು ಬಂದಿದ್ದೆನೆ ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ, ಉಡುಪಿಯ ಧರ್ಮ ಪ್ರಾಂತ್ಯದ ಬಿಶಪ್ ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರಿಗೆ ವಂದನೆಗಳನ್ನು ಅರ್ಪಿಸುತ್ತೆನೆ ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ಬಸ್ರೂರು ಧರ್ಮಕೇಂದ್ರದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವತಿಯೋರ್ವಳು ಯಾಮಾರಿಸಿ ಅವಳ ಗೆಳೆಯನೇ ತೆಗೆದ ನಗ್ನ ವಿಡಿಯೋ ಇಟ್ಟುಕೊಂಡು ತಮ್ಮೊಡನೆ ಲೈಂಗಿಕವಾಗಿ ಸಹಕರಿಸಬೇಕು, ಇಲ್ಲದಿದ್ದರೆ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುವುದಾಗಿ ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಪೋಲಿಸರು ವಶಕ್ಕೆ ಪಡೆದುಕೊಂಡರೆ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ. ಸೆರೆಯಾದ ಆರೋಪಿ ಸಂತೋಷ ಪೂಜಾರಿ, ನಾಪತ್ತೆಯಾದ ಆರೋಪಿ ಸುದರ್ಶನ ಶೆಟ್ಟಿ. ಘಟನೆಯ ವಿವರ: ಮೂರು ವರ್ಷಗಳ ಹಿಂದೆ ಇದೀಗ ಪ್ರಕರಣದ ಕಿಂಗ್ ಪಿನ್ ಆಗಿರುವ ಸುದರ್ಶನ ಶೆಟ್ಟಿ ಎಂಬಾತ ತನ್ನ ಹಾಲಾಡಿ ಪರಿಸರದ ತನ್ನ ಗೆಳತಿಯನ್ನು ಕರೆದುಕೊಂಡು ಕೊಲ್ಲೂರಿಗೆ ಜಾಲಿ ಟೂರ್ ಹೋಗಿದ್ದ. ಆಕಸ್ಮಿಕವೋ, ಕರಾರುವಾಕ್ಕೋ ಎಂಬಂತೆ ಮಾರ್ಗಮಧ್ಯದಲ್ಲಿ ಆಕೆಗೆ ಋತುಸ್ರಾವ ಆದ ಕಾರಣದಡಿ ಇಬ್ಬರೂ ಕೊಲ್ಲೂರಿನ ಲಾಡ್ಜ್ ಒಂದರಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆಯುತ್ತಾರೆ. ಇದೀಗ ಯುವತಿ ದೂರಿನಲ್ಲಿ ಹೇಳಿದಂತೆ ಅಂದು ಲಾಡ್ಜಿನ ಬಾತ್ ರೂಮಿನಲ್ಲಿ ಆಕೆ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ಆಕೆಗೆ ತಿಳಿಯದಂತೆ ಸುದರ್ಶನ ಶೆಟ್ಟಿ ವಿಡಿಯೊ ಮಾಡಿಕೊಂಡಿದ್ದಂತೆ.…
ರೋಹಿತ್ | ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಕುಂದಾಪುರ ದೇವಾಡಿಗ ಮಿತ್ರ ದುಬೈ (ಕದಂ) ಸಂಘಟನೆಯು ಪವಿತ್ರ ರಂಜಾನ್ ತಿಂಗಳ ಅಂಗವಾಗಿ ದುಬೈ ಲತೀಫ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ದುಬೈ ಕುಂದಾಪುರ ದೇವಾಡಿಗ ಮಿತ್ರ ಸಂಘಟನೆಯ ಅಧ್ಯಕ್ಷ ದಿನೇಶ್ ಸಿ.ಡಿ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು. ಸುಮಾರು 85ಕ್ಕೂ ಅಧಿಕ ರಕ್ತದಾನಿಗಳು ಶಿಬಿರದಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ದುಬೈ ಯುಎಇಯಲ್ಲಿ ನೆಲೆಸಿರುವ ಕುಂದಾಪುರ ಮೂಲದ ದೇವಾಡಿಗ ಸಮುದಾಯದವರು ಕಟ್ಟಿಕೊಂಡ ಕದಂ ಸಂಘಟನೆ ವರ್ಷಂಪ್ರತಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ.
