Author: ನ್ಯೂಸ್ ಬ್ಯೂರೋ

ಕುಂದಾಪುರ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿ ಅಕ್ಷಯ ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಟ್ಯೂಷನ್‌ಗೆ ತೆರಳಿಲ್ಲ. ಓದಲು ಟೈಮ್ ಟೇಬಲ್ ಕೂಡ ಹಾಕಿಕೊಂಡಿಲ್ಲ. ಆದರೇನಂತೆ ನಿಷ್ಠೆಯಿಂದಲೇ ಓದಿ ಶೇ.98.83 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾನೆ ಕುಂದಾಪುರ ಎಜುಕೇಶ್‌ನ ಟ್ರಸ್ಟ್ ಆಡಳಿತಕ್ಕೊಳಪಟ್ಟ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಕ್ಷಯ ಜಿ. ರಾವ್ ಸಿದ್ದಾಪುರ ಜನ್ಸಾಲೆಯ ವಕೀಲಿ ವೃತ್ತಿಯಲ್ಲಿರುವ ಗುರುಮೂರ್ತಿ ರಾವ್ ಹಾಗೂ ಗೀತಾ ದಂಪತಿಗಳ ದ್ವಿತೀಯ ಪುತ್ರನಾದ ಅಕ್ಷಯ ಜಿ. ರಾವ್, 593 ಅಂಕ ಗಳಿಸಿ ರಾಜ್ಯಕ್ಕೇ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾನೆ. ಆಕ್ಷಯ್ ಅವರ ಸಹೋದರಿ ಆಶ್ರೀತಾ ರಾವ್, ಆರ್.ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಂದಲೂ ಓದಿನಲ್ಲಿ ನಿಪುಣನಾಗರುವ ಅಕ್ಷಯ ಎಸ್.ಎಸ್‌ಎಲ್.ಸಿಯಲ್ಲಿಯೂ 96% ಅಂಕಗಳಿದ್ದನು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿಯೂ 96% ಅಂಕಗಳಿಸಿ ಉತ್ತಮ ಸಾಧನೆಗೈಯುವ ಭರವಸೆ ಹುಟ್ಟುಹಾಕಿದ್ದ. ಇದೀಗ ದ್ವಿತೀಯ ಪಿಯುಸಿಯಲ್ಲಿ ಟ್ಯೂಷನ್ ಪಡೆಯದೇ, ಸ್ವಂತ ಪರಿಶ್ರಮದಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕುಂದಾಪುರ ಆರ್.ಎನ್. ಶೆಟ್ಟಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ವಿವೇಕ್ ಎಚ್. 85% ಅಂಕಗಳಿಸುವ ಮೂಲಕ ಪ್ರದಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿವೇಕ್ ಹೆಚ್. ಅಂಚೆ ಇಲಾಖೆಯ ನೌಕರ ಹೊಸನಗರದ ಹಿರಿಯಣ್ಣ ಹಾಗೂ ಸುವರ್ಣ ದಂಪತಿಗಳ ಪುತ್ರ. ವಿವೇಕ ಅವರನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಕುಟುಂಬಿಕರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: 2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಎಂಜಿಎಂ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಭಿಲಾಷ ಎ. 95.12% ಅಂಕಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಭಿಲಾಷ್ ಬೈಂದೂರು ತಗ್ಗರ್ಸೆ ನಿವಾಸಿ ಮಹಾಬಲೇಶ್ವರ ಹಾಗೂ ದಿ. ಜಯುಶ್ರೀ ಅವರ ಪುತ್ರ. ಉಡುಪಿಯ ಎಐಟಿ ಕಾಲೇಜಿನ ಪ್ರಾಧ್ಯಾಪಕ ಡಾ. ಕರುಣಾಕರ್ ಅವರ ಅಳಿಯ. ಅಭಿಲಾಷ್ ಅವರ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಕುಟುಂಬಿಕರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಬಿಲ್ಲವ ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.93.33 ಅಂಕಗಳಿಸಿ ಸಾಧನೆಗೈದಿದ್ದಾರೆ. ವಿಜ್ಞಾನ ವಿಭಾಗದ ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 96, ಕನ್ನಡ 92 ಹಾಗೂ ಇಂಗ್ಲಿಷ್‌ನಲ್ಲಿ 75 ಅಂಕಗಳಿಸಿದ್ದಾನೆ. ಇವರು ಯಡ್ತರೆ ಹೊಳ್ಳರಹಿತ್ಲು ಶಂಕರ ಬಿಲ್ಲವ ಮ್ತು ಯಶೋಧ ದಂಪತಿಗಳ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ‘ನೈಕಂಬ್ಳಿಯ ಜನ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ. ಅಲ್ಲಿನ ಶಾಲೆಗೆ ತೆರಳುವ ಮಕ್ಕಳೂ ಕೂಡ ಕಿರು ನದಿಗೆ ಅಡ್ಡಲಾಗಿ ಹಾಕಲಾದ ಕಾಲುಸಂಕವನ್ನೇ ದಾಟಿ ನಡೆಯಬೇಕಾದ ದುಸ್ಥಿತಿ’. ಹೀಗೆಂದು ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೈಕಂಬ್ಳಿಯ ಹಳೆಯಮ್ಮ ದೇವಸ್ಥಾನದ ಬಳಿ ಇರುವ ಹಾಗೂ ಆ ಊರಿನ ಇನ್ನಿತರ ಕಾಲುಸಂಕಗಳ ಅಪಾಯದ ಬಗ್ಗೆ ಕುಂದಾಪ್ರ ಡಾಟ್ ಕಾಂ ಜುಲೈ ತಿಂಗಳಿನಲ್ಲಿ ವಿಸ್ಕೃತ ವರದಿಯೊಂದನ್ನು ಪ್ರಕಟಿಸಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆಯ ಯುವಕರುಗಳಿಂದ ಪಂಚಾಯತ್ ಮತದಾನದ ಬಹಿಷ್ಕಾರದ ಎಚ್ಚರಿಕೆ ನೀಡಲಾಗಿತ್ತು. ಇದೆಲ್ಲದರ ಪರಿಣಾಮ ನೈಕಂಬ್ಳಿಯ ಹಳೆಯಮ್ಮ ದೇವಸ್ಥಾನ ಬಳಿಯ ಉಂಬಳ್ಳಿ ಕಿರು ಹೊಳೆಗೆ ಕಿರು ಸೇತುವೆಯೊಂದನ್ನು ನಿರ್ಮಿಸಲಾಗಿದ್ದು, ಸಂಚಾರನ್ನು ಮುಕ್ತವಾಗಿದೆ. ಹಿಂದಿನ ಅವಧಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಇಂದಿರಾ ಶೆಟ್ಟಿ ಅವರ 5ಲಕ್ಷ ರೂ. ಜಿಪಂ ಅನುದಾನದಲ್ಲಿ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ. ಇದೇ ಹಾದಿಯನ್ನು ನೆಚ್ಚಿಕೊಂಡಿದ್ದ ನೈಕಂಬ್ಳಿಯ ಕಿರಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿದ್ಯಾರ್ಥಿಗಳು ಕಲಿಕೆಯಲ್ಲಿ ಯಶಸ್ಸು ಸಾಧಿಸಲು ನಿರಂತರ ಓದು ಮತ್ತು ಅಧ್ಯಯನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸುದ್ದಿ ಹಾಗೂ ದೃಶ್ಯಮಾಧ್ಯಮಗಳು ಜ್ಞಾನದ ವಿವಿಧ ಮಗ್ಗುಲುಗಳನ್ನು ಜನರಿಗೆ ಪರಿಚಯಿಸುವುದಲ್ಲದೇ, ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ಒದಗಿಸುವುದರಿಂದ ಮಾಧ್ಯಮಗಳು ವಿದ್ಯಾರ್ಥಿಗಳಿಗೆ ಪಾಲಿಗೆ ಜ್ಞಾನ ಸಂಗ್ರಹದ ಮೂಲ ಭಂಡಾರದಂತಿವೆ. ಸಕಾರಾತ್ಮಕ ಓದು ಹಾಗೂ ಒಳ್ಳೆಯ ಅಭಿರುಚಿಯ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಅವರ ಶೈಕ್ಷಣಿಕ ಮುನ್ನಡೆಗೆ ಸಹಕಾರಿಯಾಗುತ್ತದೆ ಎಂದು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಹೇಳಿದರು. ಗೋಳಿಹೊಳೆ ದೀಕ್ಷಾ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ದೀಕ್ಷಾ ಡಾನ್ಸ್ ಅಕಾಡೆಮಿ ಆರಂಭದ ಪ್ರಯುಕ್ತ ಇಲ್ಲಿನ ಕೊಡಿಯಾಲ್‌ಕೇರಿ ಪರಿಸರದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬೇಸಿಗೆ ವಿಶೇಷ ಶಿಬಿರದ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶೈಕ್ಷಣಿಕ ಮುನ್ನಡೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ತಾವು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನಗರದ ಮುಖ್ಯರಸ್ತೆಯಲ್ಲಿರುವ ಸಾಯಿ ಸೆಂಟರ್‌ನ ಮೂರನೇ ಮಹಡಿಯಲ್ಲಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆರಿಯರ‍್ಸ್ ಕೋಚಿಂಗ್ ಸಂಸ್ಥೆ ಸಿಎ ಕೋರ್ಸ್ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಸಿಎ-ಸಿಪಿಟಿ, ಸಿಎ-ಐಪಿಸಿಸಿ ಹಾಗೂ ಸಿಎ-ಐಪಿಸಿಸಿ ಅಂತಿಮ ವರ್ಷದ ಕೋರ್ಸುಗಳ ತರಬೇತಿಗೆ ಅತ್ಯಾಧುನಿಕ ಮಾದರಿಯನ್ನು ಸಂಸ್ಥೆ ಅಳವಡಿಸಿಕೊಂಡಿದ್ದು, ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರರಾದ ಚಾರ್ಟೆಡ್ ಅಕೌಂಟೆಂಟ್ ರಾಜೇಶ್ ಶೆಟ್ಟಿ ಮತ್ತು ಪ್ರತಾಪ್‌ಚಂದ್ರ ಶೆಟ್ಟಿ ತಲ್ಲೂರು ಅವರು ತಿಳಿಸಿದ್ದಾರೆ. ಸಿಎ-ಸಿಪಿಟಿ ಕೋರ್ಸ್‌ನ ತರಬೇತಿ ಕ್ಲಾಸುಗಳು ಮೇ 25ರಂದು ಬೆಳಿಗ್ಗೆ ಆರಂಭಗೊಳ್ಳಲಿದ್ದು, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತದೆ. ವೆಕೇಶನಲ್ ಕೋರ್ಸ್‌ಗಳು ಅಕ್ಟೋಬರ್, ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯುತ್ತವೆ. ಐಪಿಸಿಸಿ ಕೋರ್ಸ್‌ಗೆ ತರಬೇತಿ ಜೂನ್ ೧೫ರಿಂದ ಆರಂಭಗೊಳ್ಳುವುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರೆಗ್ಯುಲರ್ ತರಬೇತಿ ಕ್ಲಾಸುಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ. ಕೋಚಿಂಗ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಅಂಕದಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ 66ರಲ್ಲಿ ಮುಂಜಾನೆ ನಡೆದ ಅಫಘಾತದಲ್ಲಿ ಕುಂದೇಶ್ವರ ದೇವಳದ ಅರ್ಚಕ ಕೋಟೇಶ್ವರದ ಉಮೇಶ್ ಮಂಜ (54) ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಉಡುಪಿಯಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಕೇರಳ ನೊಂದಣಿಯ ಇನೋವಾ ಕಾರೊಂದು ಅದೇ ಮಾರ್ಗವಾಗಿ ಮುಂಜಾನೆಯ ವೇಳೆಗೆ ಕೋಟೇಶ್ವರದಿಂದ ಕುಂದಾಪುರ ದೇವಸ್ಥಾನಕ್ಕೆ ನಡೆದು ಬರುತ್ತಿದ್ದ ಅರ್ಚಕ ಉಮೇಶ್ ಮಂಜ ಅವರಿಗೆ ಅಂಕದಕಟ್ಟೆ ಹೆದ್ದಾರಿಯ ಬದಿಯಲ್ಲಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಅರ್ಚಕರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇನ್ನೋವಾ ಕಾರು ಸಮೇತರಾಗಿ ಚಾಲಕ ಅಲ್ಲಿಂದ ತೆರಳಿ ಹೆಮ್ಮಾಡಿಯ ಗ್ಯಾರೇಜ್‌ವೊಂದರಲ್ಲಿ ರಿಪೇರಿಗೆ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಫಘಾತದ ಸಂದರ್ಭದಲ್ಲಿ ಬಿದ್ದಿದ್ದ ಇನೋವಾ ಕಾರಿನ ತುಣುಕಿನ ಆಧಾರದಲ್ಲಿ ವಾಹನವನ್ನು ಪತ್ತೆಹಚ್ಚಲಾಗಿಯಿತು. ಕುಂದೇಶ್ವರ ದೇವಳದಲ್ಲಿ ಅರ್ಚಕ ಹಾಗೂ ಜ್ಯೋಷಿತಿಯಾಗಿದ್ದ ಉಮೇಶ್ ಮಂಜ ಅವರು ಪತ್ನಿ ಹಾಗೂ ಈರ್ವ ಮಕ್ಕಳನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಟಿ.ಟ. ರಸ್ತೆಯ ಶಿವಾಜಿ ಕ್ರಿಕೆಟರ‍್ಸ್ ಆಶ್ರಯದಲ್ಲಿ ಬಡ ರೋಗಿಗಳ ಸಹಾಯಾರ್ಥವಾಗಿ ಶಿವಾಜಿ ಟ್ರೋಫಿ ಕ್ರಿಕೆಟ ಪಂದ್ಯಾಟ ಗಾಂಧಿ ಮೈದಾನದಲ್ಲಿ ನಡೆಯಿತು. ಕುಂದಾಪುರದ ಚಾಲೆಂಜ್ ಕ್ರಿಕೆಟರ‍್ಸ್ ಅಂತಿಮ ಪಂದ್ಯದಲ್ಲಿ ಜಾನ್ಸನ್ ತಂಡವನ್ನು ಸೋಲಿಸಿ ಪಶಸ್ತಿ ತನ್ನದಾಗಿಸಿಕೊಂಡಿತ್ತು. ಚಾಲೆಂಜ್ ತಂಡದ ನವೀನ ಉತ್ತಮ ಬ್ಯಾಟ್ಸiನ, ದಿನೇಶ ಮದ್ದುಗುಡ್ಡೆ ಉತ್ತಮ ಎಸೆತಗಾರ, ದಯಾನಂದ ಉತ್ತಮ ಗೂಟರಕ್ಷಕ ಹಾಗೂ ಜಾನ್ಸನ ತಂಡದ ಅನಿಲ್ ಸರಣಿ ಶೇಷ್ಟರಾಗಿ ಮೂಡಿಬಂದರು. ಯೋಗಗುರು ರಘುವೀರ ನಗರಕರ, ಸಂಚಾರಿ ಠಾಣೆಯ ಠಾಣಾಧಿಕಾರಿ ಕೆ.ಜಯ, ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್ ನಾಯ್ಕ, ಉದ್ಯಮಿ ಧರ್ಮಪ್ರಕಾಶ, ಪತ್ರಕರ್ತರಾದ ನಾಗರಾಜ್ ರಾಯಪ್ಪನಮಠ, ಸಂಸ್ಥೆಯ ಗೌರವಾದ್ಯಕ್ಷರಾದ ರಾಜು ಪೂಜಾರಿ ಕೈಪಾಡಿ, ಅದ್ಯಕ್ಷರಾದ ರಾಜು ದೇವಾಡಿಗ ಬಹುಮಾನ ವಿತರಿಸಿದರು. ರಾಘವೇಂದ್ರ ದೇವಾಡಿಗ ಆನಗಳ್ಳಿ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿ ಶ್ರೀ ಕಾಶೀ ಮಠದಲ್ಲಿ ಶ್ರೀ ಮಹಾ ವಿಷ್ಣು ಯಾಗದ ಪೂರ್ಣಾಹುತಿ ಕಾಶೀ ಮಠಾಧೀಶ ಶ್ರೀ ಶ್ರೀ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಿತು. ಈ ಸಂದರ್ಭದಲ್ಲಿ ಮಠದ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.

Read More