ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ಮೊವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಾ, ಭಾವನಾ ಮತ್ತು ಆರ್ವಿನ್ ಬಿ.ಎಸ್.ಇ.ಆರ್.ಟಿ ಯಿಂದ ನಡೆಸಲ್ಪಡುವ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯೋಪಧ್ಯಾಯರು ಮತ್ತು ಶಿಕ್ಷಕರು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ಧಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೆಸ್ಕಾಂ ನಲ್ಲಿ ಲೈನ್ ಮ್ಯಾನ್ ಆಗಿ ಸುಮಾರು ೩೮ ವರುಷ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀನಾಗ ಪೂಜಾರಿ ಅವರನ್ನು ಕುಂದಾಪುರದ ಮೆಸ್ಕಾಂ ಕಛೇರಿಯಲ್ಲಿ ಬೀಳ್ಕೋಡಲಾಯಿತು. ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಪುಟ್ಟಸ್ವಾಮಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಅಶೋಕ್ ಪೂಜಾರಿ, ರಾಘವೇಂದ್ರ, ಅಶೋಕ್ ಅಂಕೋಲ್ದೇಕರ್, ಕೃಷ್ಣಮೂರ್ತಿ ಹಾಗೂ ನೌಕರರ ಸಂಘದ ಬಾಬಣ್ಣ ಪೂಜಾರಿ, ಮಲ್ಲಿಕಾರ್ಜುನ. ಎಸ್ ಉಳ್ಳಾಗಡ್ಡಿ, ಉಪಸ್ಧಿತರಿದ್ದರು. ಶ್ರೀನಾಗ ಪೂಜಾರಿ ಅವರು ರೋಟರಿ ಕುಂದಾಪುರ ವತಿಯಿಂದ ಬೆಸ್ಟ್ ಲೈನಮ್ಯಾನ್ ಪ್ರಶಸ್ತಿಯನ್ನು. ಹಾಗೆಯೇ ಇಂಜಿನಿಯರಿಂಗ್ ಅಸೋಸಿಯೇಷನ್ ವತಿಯಿಂದ ಬೆಸ್ಟ್ ಕಂಪನಿ ಲೈನಮಾನ್ ಪ್ರಶಸ್ತಿಯನ್ನು ಹಾಗೂ ಮೆಸ್ಕಾಂ ಮಟ್ಟದಲ್ಲಿ ಉತ್ತಮ ಮಾರ್ಗದಾಳು ಪ್ರಶಸ್ತಿಯನ್ನು ಪಡೆದಿದ್ದು ಕುಂದಾಪುರದ ಶಾಖೆಯಲ್ಲಿ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶಿಕ್ಷಣ ಸಂಸ್ಥೆಯೊಂದು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ. ಶಿಕ್ಷಕರ ಬೋಧನೆಯ ಮೇಲೆ ವಿದ್ಯಾರ್ಥಿಗಳ ಕಲಿಕೆ ನಿರ್ಧಾರವಾಗುವುದರಿಂದ ಶಿಕ್ಷಕರಿಗೆ ಪುನರ್ಚೈತನ್ಯ ನೀಡುವುದು ಅಗತ್ಯವಾಗಿರುತ್ತದೆ. ಈ ಉದ್ದೇಶದಿಂದ ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ಶಿಕ್ಷಕರಿಗೆ ಮೂರು ದಿನಗಳ ಪುನರ್ಚೈತನ್ಯ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ವಿವಾ ಪಬ್ಲಿಕೇಷನ್ರವರು ಆಯೋಜಿಸಿದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ದಯಾ ಎಸ್. ಉನ್ನಿ ಹಾಗೂ ಆಪ್ತಸಮಾಲೋಚನಾ ಮನಃಶಾಸ್ತ್ರಜ್ಞೆ ದೀಕ್ಷಾ ಎಸ್. ಉನ್ನಿ ಇವರುಗಳು ಶಿಕ್ಷಕರಿಗೆ ನಾಯಕತ್ವ ಕೌಶಲ, ತಂಡ ರಚನೆ, ತರಗತಿ ಕೋಣೆಯ ನಿರ್ವಹಣೆ, ಪಾಠಯೋಜನೆಯ ಹಂತಗಳಂತಹ ಉಪಯುಕ್ತ ಅಂಶಗಳ ಬಗ್ಗೆ ವಿವಿಧ ಚಟುವಟಿಕೆಗಳ ಮೂಲಕ ಮಾಹಿತಿ ಒದಗಿಸಿಕೊಡುವುದರ ಮೂಲಕ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಇವರು ಶಿಕ್ಷಕರನ್ನು ಉದ್ದೇಶಿಸಿ ಶಿಕ್ಷಕರು ಇಂತಹ ಪುನರ್ಚೈತನ್ಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಸಂಸ್ಥೆಗೆ ಉತ್ತಮ ಸೇವೆಯನ್ನು ನೀಡುವುದರ ಜೊತೆಗೆ ಸಮಾಜಕ್ಕೆ ಪ್ರಜೆಗಳನ್ನು ನೀಡಲು ಸಾಧ್ಯವಾಗುತ್ತದೆ. ಹಾಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಮೀನು ಮಾರುಕಟ್ಟೆ ಕಟ್ಟಡಕ್ಕೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮಂಜೂರಾದ ಸುಮಾರು 2ಕೋಟಿ ರೂ.ಗಳನ್ನು 20 ಪ್ರದೇಶಗಳಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲು ಖರ್ಚು ಮಾಡಲಾಗಿದೆ. ಮೀನುಗಾರಿಕೆಗೆ ಪ್ರಸಿದ್ಧವಾಗಿರುವ ಗಂಗೊಳ್ಳಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇಲ್ಲದಿರುವುದರಿಂದ ಗಂಗೊಳ್ಳಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಸುಸಜ್ಜಿತವಾದ ಮೀನು ಮಾರುಕಟ್ಟೆ ಕಟ್ಟಡ ನಿರ್ಮಿಸಿ ಮೀನುಗಾರರಿಗೆ ಮೀನು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ನಿಗಮದ ಜನರಲ್ ಮ್ಯಾನೇಜರ್ ಮುದ್ದಣ್ಣ, ಗಂಗೊಳ್ಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶ್ರೀ ಶಂಕರ ವಾಹಿನಿಯವರು ನಾಟ್ಯರತ್ನ ಜ್ಯೂನಿಯರ್ ಭರತನಾಟ್ಯ ರಿಯಾಲಿಟಿ ಶೋಗಾಗಿ ದೇಶದ್ಯಾಂತ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮ 20ರ ಹಂತಕ್ಕೆ ನಿಯತಿ ಎಚ್. ಕೆ. ಆಯ್ಕೆಯಾಗಿದ್ದಾರೆ. ಈಕೆ ಹೂವಯ್ಯ ಖಾರ್ವಿ ಮತ್ತು ಅಮೃತಾ ಬಾನಾವಳಿಕರ್ ಅವರ ಪುತ್ರಿಯಾಗಿದ್ದು, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದ್ಯಾರ್ಥಿಯಾಗಿ ವಿದುಷಿ ಪ್ರವಿತಾ ಅಶೋಕ ಅವರ ಶಿಷ್ಯೆಯಾಗಿ ತರಬೇತಿ ಪಡೆಯುತ್ತಿದ್ದಾರೆ. ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಒದುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ, ಮೇ5: ತಾಲೂಕಿನ ಕುಂದಬಾರಂದಾಡಿಯಲ್ಲಿನ ಬಾರ್ ಸಮೀಪ ಇರುವ ಆವರಣವಿಲ್ಲದ ಬಾವಿಗೆ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದ್ದು, ಮೃತರನ್ನು ಹಕ್ಲಾಡಿ ಮೇಲ್ಬೆಟ್ಟು ನಿವಾಸಿ ಕುಷ್ಠ ಪೂಜಾರಿ (48) ಎಂದು ಗುರುತಿಸಲಾಗಿದೆ. ಕುಡಿದು ಬಿದ್ದಿರಬಹುದೇ? ಕುಂದಬಾರಂದಾಡಿಯ ಬಾರ್ ಗೆ ತೆರಳಿದ್ದ ಕುಷ್ಠ ಪೂಜಾರಿ ಅಲ್ಲಿಯೇ ಸಮೀಪದಲ್ಲಿದ್ದ ಅಂಗಡಿಗೆ ಬಂದಿದ್ದರೆನ್ನಲಾಗಿದೆ.ಬಳಿಕ ಅಂಗಡಿಯ ಬಳಿಯೇ ಇದ್ದ ಆವರಣವಿಲ್ಲದ ಬಾವಿಗೆ ಸಮೀಪ ತೆರಳಿದ್ದ ಅವರು ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸಮೀಪದ ಮನೆಯವರಿಗೆ ಸೇರಿದ ಬಾವಿಯಲ್ಲಿ ನೀರಿಲ್ಲದೇ ಇದ್ದುದರಿಂದ ಯಾರೊಬ್ಬರೂ ಅದರತ್ತ ತೆರಳಿರಲಿಲ್ಲ. ಮಳೆಗಾಲ ಆರಂಭಗೊಂಡದ್ದರಿಂದ ಮಳೆ ನೀರಿನೊಂದಿಗೆ ಮಣ್ಣು ಬಾವಿಗೆ ಬೀಳುತ್ತದೆಂಬ ಕಾರಣಕ್ಕೆ ದಂಡೆ ಕಟ್ಟಲು ತೆರಳಿದ್ದ ಮನೆಯ ಹೆಂಗಸೊಬ್ಬರು ಬಾವಿ ಇಣುಕಿ ನೋಡಿದಾಗ ವ್ಯಕ್ತಿಯೋರ್ವರು ಬಿದ್ದಿರುವುದು ಪತ್ತೆಯಾಗಿತ್ತು. ಮೃತ ದೇಹವನ್ನು ಮೇಲಕ್ಕೆತ್ತಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ. ಮೃತದೇಹದಿಂದ ವಾಸನೆ ಬರುತ್ತಿರುವುದರಿಂದ ಒಂದು ದಿನದ ಹಿಂದೆಯೇ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/. ಪ್ರಕರಣದ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ನಾಗೂರಿನ ಬಸ್ ನಿಲ್ದಾಣ ಬಳಿ ಮಧ್ಯಾಹ್ನ ನಡೆದ ಅಪಘಾತದಲ್ಲಿ ಬಸ್ಸು, ಮಾರುತಿ ಕಾರು, ಇನೋವಾ ಹಾಗೂ ಟೆಂಪೋ ಟ್ರಾವೆಲ್ಲ್ರ್ ಒಂದಕ್ಕೊಂದು ಡಿಕ್ಕಿಯಾಗಿ ಜಖಂಗೊಂಡ ಘಟನೆ ವರದಿಯಾಗಿದ್ದು, ವಾಹನದಲ್ಲಿದ್ದ ಪ್ರಯಾಣಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಂದೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಾಗೂರಿನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದಾಗ ಹಿಂಬದಿಯಿದ್ದ ಮಾರುತಿ ಕಾರು ಬಸ್ಸಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದಿತ್ತು. ಕಾರಿನ ಹಿಂಭಾಗದಲ್ಲೇ ಇದ್ದ ಇನೋವಾ ಕಾರು ಮಾರುತಿ ಕಾರಿಗೆ ಡಿಕ್ಕಿ ಹೊಡೆದರೇ, ಟ್ರಾವೆಲ್ಲ್ರ್ ವಾಹನ ಇನೋವಾ ಗುದ್ದಿ ಜಖಂಗೊಂಡಿದ್ದವು. ವಾಹನದಲ್ಲಿದ್ದ ಚಾಲಕ ಪ್ರಯಾಣಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/ ಸಹಾಯಕ್ಕೆ ಬಂದವನಿಗೆ ಹಲ್ಲೆಗೆ ಮುಂದಾದ ಇನೋವಾ ಚಾಲಕ: ಘಟನಾ ಸ್ಥಳದಲ್ಲಿದ್ದ ಸ್ಥಳೀಯರೋರ್ವರು ಸಹಾಯ ಮಾಡಲು ಬಂದಾಗ ಇನೋವಾ ಕಾರಿನ ಚಾಲಕ ಹಲ್ಲೆಗೆ ಮಾಡಲು ಮುಂದಾದ ಘಟನೆ ನಡೆಯಿತು. ಕೆಲಕಾಲ ಉದ್ವೀಗ್ನ ವಾತಾವರಣ ಉಂಟಾಗಿ ವಾಹನಗಳ ಸಂಚಾರ ವ್ಯತ್ಯಯವಾಯಿತು. ಬೈಂದೂರು ಪೊಲೀಸ್ ಸಿಬ್ಬಂಧಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ದಕ್ಷಿಣ ಭಾರತದ ಖ್ಯಾತ ಪಂಚಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕುಟುಂಬಿಕರು ಹಾಗೂ ಮಹರ್ಷಿ ಆನಂದ ಗುರೂಜಿ ಕೊಲ್ಲೂರಿಗೆ ಭೇಟಿ ನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪತ್ನಿ, ಪುತ್ರ ಹಾಗೂ ಸೊಸೆ ಕ್ಷೇತ್ರದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮರಳಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಗೌರವಿಸಿದರು.
ಕುಂದಾಪ್ರ ಡಾಟ್ ಕಾಂ ವರದಿ. ಮೂಡುಬಿದಿರೆ: ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ಉದ್ಯೋಗದ ಅವಕಾಶಗಳನ್ನು ತೆರೆದಿಟ್ಟು, ಬದುಕು ಭದ್ರಪಡಿಸಿಕೊಳ್ಳುವ ಮಹತ್ತರ ಘಟ್ಟಕ್ಕೆ ಸುಲಭ ಮುನ್ನುಡಿ ಬರೆದಿದ್ದ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ ಯಶಸ್ವಿಯಾಗಿ ಒಂಬತ್ತನೇ ವರ್ಷವೂ ಆಯೋಜನೆಗೊಂಡಿದ್ದು, ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಜುಲೈ 2 ಹಾಗೂ 3ರಂದು ನಡೆಯಲಿದೆ. ಉದ್ಯೋಗ ಮೇಳದಲ್ಲಿ ಪ್ರತಿವರ್ಷದಂತೆ ನೂರಾರು ಕಂಪೆನಿಗಳು ಭಾಗವಹಿಸಲಿದ್ದು, ಸಾವಿರಾರು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಕಳೆದ ಎಂಟು ವರ್ಷದ ಹಿಂದೆ ಗ್ರಾಮೀಣ ಪ್ರದೇಶದ ಯುವಜನತೆಗೆ ಸೂಕ್ತ ಉದ್ಯೋಗವಕಾಶವನ್ನು ಒದಗಿಸುವ ಉದ್ದೇಶದೊಂದಿಗೆ ಆರಂಭಗೊಂಡ ಆಳ್ವಾಸ್ ಪ್ರಗತಿ, ಇಂದು ಉದ್ಯೋಗಾಕಾಂಕ್ಷಿಗಳಿಗೆ ಪರಿಪಕ್ವ ವೇದಿಕೆಯನ್ನು ನಿರ್ಮಿಸಿರುವುದಲ್ಲದೇ, ಕಂಪನಿಗಳಿಗೂ ಸೂಕ್ತ ಅಭ್ಯರ್ಥಿಗಳನ್ನು ಒದಗಿಸುವಲ್ಲಿ ಯಶಕಂಡಿದೆ. ಎಂಟು ವರ್ಷದ ಹಿಂದೆ, 38 ಕಂಪನಿಗಳೊಂದಿಗೆ ಆರಂಭವಾಗಿರುವ ಆಳ್ವಾಸ್ ಪ್ರಗತಿಯಲ್ಲಿ ಕಳೆದ ವರ್ಷ 272 ಕಂಪನಿಗಳು ಭಾಗವಹಿಸಿದ್ದವು. 18,000 ಸಾವಿರ ಉದ್ಯೋಗಾಕಾಂಕ್ಷಿಗಳಲ್ಲಿ 5,525 ಜನರಿಗೆ ಉದ್ಯೋಗ ದೊರಕಿದೆ. 2015-16ರ ಶೈಕ್ಷಣಿಕ ವರ್ಷದಲ್ಲಿ 106 ಕಂಪನಿಗಳು ಈಗಾಗಲೇ 1042 ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆ ಮಾಡಿವೆ. ಕುಂದಾಪ್ರ ಡಾಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಂಬೆಳಿಗ್ಗೆ ರಸ್ತೆ ಅಪಘಾತ ಸಂಭವಿಸಿದ್ದು, ಹಂಗಾರಕಟ್ಟೆ ಮೂಲದ ವ್ಯಕ್ತಿಯೋರ್ವರು ಮೃತರಾಗಿದ್ದಾರೆ. ಸಾಸ್ತಾನ ಕಡೆಯಿಂದ ಸಾಲಿಗ್ರಾಮದ ಕಡೆಗೆ ಸೈಕಲ್ನಲ್ಲಿ ಸಾಗುತ್ತಿದ್ದ ಕೃಷ್ಣ (45) ಅವರಿಗೆ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ, ಸೈಕಲ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪದ್ಮನಾಭ ಹಾಗೂ ಕೃಷ್ಣ ಎಂಬುವವರೊಂದಿಗೆ ಹಂಗಾರಕಟ್ಟೆಯಿಂದ ಪಾರಂಪಳ್ಳಿಗೆ ಮೀನು ಹಿಡಿಯುವ ಉದ್ದೇಶಕ್ಕೆ ಶನಿವಾರ ಮುಂಜಾನೆ ೬ರ ಸುಮಾರಿಗೆ ಸೈಕಲಿನಲ್ಲಿ ಹೋಗುತ್ತಿದ್ದಾಗ, ವಿಶ್ವಕರ್ಮ ಸಭಾಭವನದ ಎದುರುಗಡೆ ಏಕಮುಖ ಸಂಚಾರದ ರಾಪ್ಟ್ರೀಯ ಹೆದ್ದಾರಿ ೬೬ ರ ಪಶ್ಚಿಮ ಬದಿಯ ರಸ್ತೆಯಲ್ಲಿ ಉಡುಪಿ ಕಡೆಯಿಂದ ಅತೀ ವೇಗದಿಂದ ಬಂದ ಶೆರ್ವಲೆ ಬೀಟ್ ಕಾರು, ರಸ್ತೆಯ ಎಡಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸುವ ಬಂದು ಕೃಷ್ಣ ಎನ್ನುವವರ ಸೈಕಲ್ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ಅವರು ಸೈಕಲ್ ಸಮೇತ ಡಾಂಬರು ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸೈಕಲ್ಗೆ ಢಿಕ್ಕಿ…
