Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಜುಲೈ 2, 3ಕ್ಕೆ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ
    ವಿಶೇಷ ವರದಿ

    ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಜುಲೈ 2, 3ಕ್ಕೆ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

    Updated:05/06/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಮೂಡುಬಿದಿರೆ: ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ಉದ್ಯೋಗದ ಅವಕಾಶಗಳನ್ನು ತೆರೆದಿಟ್ಟು, ಬದುಕು ಭದ್ರಪಡಿಸಿಕೊಳ್ಳುವ ಮಹತ್ತರ ಘಟ್ಟಕ್ಕೆ ಸುಲಭ ಮುನ್ನುಡಿ ಬರೆದಿದ್ದ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ ಯಶಸ್ವಿಯಾಗಿ ಒಂಬತ್ತನೇ ವರ್ಷವೂ ಆಯೋಜನೆಗೊಂಡಿದ್ದು, ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಜುಲೈ 2 ಹಾಗೂ 3ರಂದು ನಡೆಯಲಿದೆ. ಉದ್ಯೋಗ ಮೇಳದಲ್ಲಿ ಪ್ರತಿವರ್ಷದಂತೆ ನೂರಾರು ಕಂಪೆನಿಗಳು ಭಾಗವಹಿಸಲಿದ್ದು, ಸಾವಿರಾರು ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ.

    Click Here

    Call us

    Click Here

    ಕಳೆದ ಎಂಟು ವರ್ಷದ ಹಿಂದೆ ಗ್ರಾಮೀಣ ಪ್ರದೇಶದ ಯುವಜನತೆಗೆ ಸೂಕ್ತ ಉದ್ಯೋಗವಕಾಶವನ್ನು ಒದಗಿಸುವ ಉದ್ದೇಶದೊಂದಿಗೆ ಆರಂಭಗೊಂಡ ಆಳ್ವಾಸ್ ಪ್ರಗತಿ, ಇಂದು ಉದ್ಯೋಗಾಕಾಂಕ್ಷಿಗಳಿಗೆ ಪರಿಪಕ್ವ ವೇದಿಕೆಯನ್ನು ನಿರ್ಮಿಸಿರುವುದಲ್ಲದೇ, ಕಂಪನಿಗಳಿಗೂ ಸೂಕ್ತ ಅಭ್ಯರ್ಥಿಗಳನ್ನು ಒದಗಿಸುವಲ್ಲಿ ಯಶಕಂಡಿದೆ. ಎಂಟು ವರ್ಷದ ಹಿಂದೆ, 38 ಕಂಪನಿಗಳೊಂದಿಗೆ ಆರಂಭವಾಗಿರುವ ಆಳ್ವಾಸ್ ಪ್ರಗತಿಯಲ್ಲಿ ಕಳೆದ ವರ್ಷ 272 ಕಂಪನಿಗಳು ಭಾಗವಹಿಸಿದ್ದವು. 18,000 ಸಾವಿರ ಉದ್ಯೋಗಾಕಾಂಕ್ಷಿಗಳಲ್ಲಿ 5,525 ಜನರಿಗೆ ಉದ್ಯೋಗ ದೊರಕಿದೆ. 2015-16ರ ಶೈಕ್ಷಣಿಕ ವರ್ಷದಲ್ಲಿ 106 ಕಂಪನಿಗಳು ಈಗಾಗಲೇ 1042 ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆ ಮಾಡಿವೆ. ಕುಂದಾಪ್ರ ಡಾಟ್ ಕಾಂ ವರದಿ.

    ಕಂಪನಿಗಳ ಆತಿಥ್ಯ ಹಾಗೂ ವ್ಯವಸ್ಥೆಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಹಿಸುತ್ತದೆ. ಈ ಉದ್ಯೋಗ ಮೇಳ ಆಳ್ವಾಸ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ದೇಶದೆಲ್ಲಡೆಯ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೂ ಇದು ಉದ್ಯೋಗ ಪಡೆಯುವ ಮುಕ್ತ ವೇದಿಕೆಯಾಗಿದೆ. ಕಳೆದ ಭಾರಿ ಒರಾಕಲ್, ಅರ‍್ನ್‌ಸ್ಟ್ ಎಂಡ್ ಯಂಗ್, ಐ.ಬಿ.ಎಮ್, ಟಿ.ಸಿ.ಎಸ್, ಆಮೆಜಾನ್, ಬಯೋಕಾನ್, ಆದಾನಿ ಗ್ರೂಪ್ ,ಟೆಕ್ ಮಹೇಂದ್ರ, ಗೋದ್ರೆಜ್, ಟೈಟಾನ್, ಐ.ಟಿ.ಸಿ, ತಾಜ್ ಗ್ರೂಪ್ ,ಐ.ಸಿ.ಐ.ಸಿ.ಐ ಬ್ಯಾಂಕ್, ವಿಪ್ರೋ,ಟಿ.ವಿ.ಎಸ್, ಆಲ್‌ಕಾಗ್ರೂ, ಎಂಪಸಿಸ್, ಸ್ಟಾಂಡರ್ಡ್ ಚಾಟರ್ಡ್ ಬ್ಯಾಂಕ್,ಆಕ್ಸಿಸ್ ಬ್ಯಾಂಕ್,ಎಮ್.ಆರ್.ಜಿ,ಕಿರ್ಲೊಸ್ಕರ್ ಎಲೆಕ್ಟ್ರಿಕ್, ಐಡಿಯಾ ಮುಂತಾದ ಕಂಪೆನಿಗಳು ಭಾಗವಹಿಸಿದ್ದವು. ಕುಂದಾಪ್ರ ಡಾಟ್ ಕಾಂ ವರದಿ.

    ಜೂಲೈ 2ಕ್ಕೆ ಆಳ್ವಾಸ್ ಪ್ರಗತಿ 2016:
    ಆಳ್ವಾಸ್ ಪ್ರಗತಿ 2016 ಉದ್ಯೋಗ ಮೇಳದ ಉದ್ಘಾಟನೆಯನ್ನು ಎನ್.ಎಮ್.ಸಿ ಮತ್ತು ಯು.ಎ.ಇ ಎಕ್ಸ್‌ಚೆಂಜ್‌ನ ಸಿ.ಇ.ಓ, ಡಾ.ಬಿ.ಆರ್. ಶೆಟ್ಟಿ ಜುಲೈ 2 ರಂದು ನೆರವೇರಿಸಲಿದ್ದಾರೆ. ಈ ಭಾರಿ 400ಕ್ಕೂ ಅಧಿಕ ಕಂಪನಿಗಳು ಈ ಬಾರಿ ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ 150 ಕಂಪನಿಗಳು ನೋಂದಾಯಿಸಿವೆ.

    ಉದ್ಯೋಗ ಮೇಳದಲ್ಲಿ ಎಲ್ಲ ವಿಭಾಗದ ಕಂಪನಿಗಳು ಭಾಗವಹಿಸಲಿದ್ದು ಅವುಗಳಲ್ಲಿ ಮುಖ್ಯವಾಗಿ, ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಟೆಲಿಕಾಂ, ಐಟಿಇಎಸ್, ಬಿಎಪ್‌ಎಸ್‌ಐ, ಮಾರಾಟ ಮತ್ತು ರಿಟೇಲ್, ಫಾರ್ಮಾ, ಆತಿಥ್ಯ, ಹೆಲ್ತ್ ಕೇರ್, ಶಿಕ್ಷಣ, ಎನ್.ಜಿ.ಓ, ಮತ್ತು ರಕ್ಷಣಾ ಕ್ಷೇತ್ರಗಳನ್ನು ಒಳಗೊಂಡಿದೆ.

    Click here

    Click here

    Click here

    Call us

    Call us

    ಆಳ್ವಾಸ್ ಪ್ರಗತಿ: ನೊಂದಣಿ ಏನು ಹೇಗೆ?

    • ಆಳ್ವಾಸ್ ಪ್ರಗತಿಯಲ್ಲಿ ಕಂಪೆನಿ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉಚಿತ ನೊಂದಣೆ ವ್ಯವಸ್ಧೆ ಏರ್ಪಡಿಸಿದ್ದು. ಆಸಕ್ತರು www.alvaspragati.com ನಲ್ಲಿ ನೊಂದಾಯಿಸಬಹುದು.
    • ಆಂಡ್ರಾಡ್ ಮತ್ತು ಐಓಸ್ ಮೊಬೈಲ್ ಹೊಂದಿರುವವರು, ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಿ ಮಾಹಿತಿಯನ್ನು ಪಡೆದು ನೊಂದಾಯಿಸಬಹುದು.
    • ಆಂಡ್ರಾಡ್ ಹೊಂದಿರುವವರು-ಗೂಗಲ್ ಆಪ್ ಸ್ಟೋರ್‌ನಲ್ಲಿ ಮತ್ತು ಐಓಎಸ್ ಹೊಂದಿರುವವರು ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಬಹುದು.
    • ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಸ್ಥಾಪಿಸಿದ್ದು ಜುಲೈ 2 ಮತ್ತು 3 ರಂದು ನುರಿತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ನಿಮಿಷ ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿಯನ್ನು ಒದಗಿಸಿ ಮಾರ್ಗದರ್ಶನ ನೀಡಲಿದ್ದಾರೆ.
    • ಭಾಗವಹಿಸುವ ಉದ್ಯೋಗಾಕಾಂಕ್ಷಿಗಳು ಜುಲೈ 2 ಮತ್ತು 3 ರಂದು ಬೆಳಿಗ್ಗೆ 8:30 ಕ್ಕೆ ಹಾಜರಿರಬೇಕು.
    • ದೂರದಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಧೆಯನ್ನು ಒದಗಿಸಲಾಗುವುದು.
    • ಐ.ಟಿ.ಐ ಅಭ್ಯರ್ಥಿಗಳಿಗೆ ತಮ್ಮ ತಮ್ಮ ಐ.ಟಿ.ಐ ಕೇಂದ್ರಗಳಿಂದ ಬಸ್ಸಿನ ವ್ಯವಸ್ಧೆಯನ್ನು ಏರ್ಪಡಿಸಲಾಗಿದೆ. //ಕುಂದಾಪ್ರ ಡಾಟ್ ಕಾಂ ವರದಿ//

    ಭಾಗವಹಿಸುವವರು ಏನು ಕೊಂಡೊಯ್ಯಬೇಕು?

    1. 5-10 ಇತ್ತೀಚಿನ ಭಾವ ಚಿತ್ರ (ಪಾಸ್ ಪೋರ್ಟ್ ಸೈಜ್)
    2. ಎಲ್ಲ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳ (ಜೆರಾಕ್ಸ್ ಪ್ರತಿ)
    3. ಸ್ವ ವಿವರವಿರುವ ಬಯೋಡೆಟಾ
    4. ಆನ್‌ಲೈನ್ ನೋಂದಣಿ ಸಂಖ್ಯೆ

     ಮಾಹಿತಿ, ಸಲಹೆಗಾಗಿ ಸಂಪರ್ಕಿಸಿ

    • 9611686148
    •  8494934852
    •  08258262716.

    ಇಮೇಲ್ – placement.alvas@gmail.com

    [quote font_size=”16″ bgcolor=”#ffffff”]

    ಕುಂದಾಪ್ರ ಡಾಟ್ ಕಾಂ ವರದಿ – ಮಂಗಳೂರು: ಆಳ್ವಾಸ್ ಪ್ರಗತಿ ಉದ್ಯೋಗ ಮೇಳದ ಕುರಿತಾಗಿ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆಯಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಠಿ ವಿವೇಕ್ ಆಳ್ವ, ಉದ್ಯೋಗ ಮೇಳ ಮುಖ್ಯಸ್ಥೆ ಜಯಶ್ರೀ ಸುಧಾಕರ್, ಉದ್ಯೋಗ ಮೇಳ ಪ್ರಮುಖರಾದ ರವೀಂದ್ರ ಶೆಣೈ, ಸುಶಾಂತ್ ಅನಿಲ್ ಲೋಬೊ, ಆಳ್ವಾಸ್ ಪ್ರಗತಿ 2016ರ ಮಾಧ್ಯಮ ಸಂಯೋಜಕಿ ದೇವಿಶ್ರೀ ಉಪಸ್ಥಿತರಿದ್ದರು.

    Alvas-Pragati--2016-press-mAlvas-Pragati--2016-press-1[/quote] Alvas-pragati-companies

    Like this:

    Like Loading...

    Related

    Alvas nudisiri Alvas Pragati 2016 Dr M Mohan Alva Vivek Alva - Trustee Alvas education foundation
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಆಳ್ವಾಸ್ ತಾಂತ್ರಿಕ ಕಾಲೇಜಿನ ಕೃಷಿ ಇಂಜಿನಿಯರಿಂಗ್ ವಿಭಾಗಕ್ಕೆ 4 ರ‍್ಯಾಂಕ್‌

    04/07/2025

    ಆಳ್ವಾಸ್: ವಿದ್ಯಾಗಿರಿ ಆವರಣದಲ್ಲಿ ’ಸ್ಪೆಕ್ಟಾಕಲ್ʼ ವೇದಿಕೆಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

    03/07/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d